ಗಿಡದಲ್ಲಿ ಡೀಸೆಲ್ ಭಾರತದ ಗಿಡಕ್ಕೆ ಅಮೇರಿಕಾದಲ್ಲಿ ಸಖತ್ ಡಿಮ್ಯಾಂಡ್…ಇದು ಶುರುವಾದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ
ಗಿಡದಲ್ಲಿ ಡೀಸೆಲ್ ಭಾರತದ ಗಿಡಕ್ಕೆ ಅಮೆರಿಕದಲ್ಲಿ ಸಕ್ಕತ್ ಡಿಮ್ಯಾಂಡ್…. ಆ ಗಿಡದ ಪರಿಚಯ ಬಹುತೇಕ ಭಾರತೀಯರೆಲ್ಲರಿಗೂ ಇದೆ ಅದರ ಎಣ್ಣೆಯನ್ನು ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲಿಯೂ ಇಟ್ಟಿರುತ್ತಾ ಇದ್ದರು ದೀಪಗಳನ್ನು ಬೆಳಕುವುದಕ್ಕೆ ಆ ಎಣ್ಣೆ ಶ್ರೇಷ್ಠ ಎಂದು ಹೇಳಲಾಗುತ್ತ ಇತ್ತು.
ದೊಡ್ಡ ದೊಡ್ಡ ಪಂಜುಗಳನ್ನ ಬಳಸುವುದಕ್ಕೆ ಅದೇ ಗಿಡದ ಎಣ್ಣೆಯನ್ನು ಬಳಸಲಾಗುತ್ತಾ ಇತ್ತು ಕರೆಂಟ್ ಬರುವ ಮೊದಲು ಬೀದಿ ದೀಪಗಳನ್ನು ಕೂಡ ಅದರಲ್ಲಿಯೇ ಬೆಳಗಿಸಲಾಗುತ್ತಿತ್ತು ಹೊಲಗಳಲ್ಲಿ ಊರಿನ ಹೊರಗಿನ ಖಾಲಿ ಸೈಟ್ ಗಳಲ್ಲಿ ಆ ಮರಗಳನ್ನು ಸಮೃದ್ಧವಾಗಿ ಬಳಸಲಾಗುತ್ತಿತ್ತು ಆದರೆ ನಾವು ಆಧುನಿಕತೆ ಕಡೆಗೆ.

ದೊಡ್ಡ ದೊಡ್ಡ ಹೆಜ್ಜೆಗಳನ್ನ ಹಾಕುತ್ತಾ ಇದ್ದೇವೆ ಅಂದುಕೊಂಡು ಆ ಎಣ್ಣೆಯ ಬಳಕೆಯನ್ನು ನಿಲ್ಲಿಸುತ್ತಾ ಹೋದವು ಆ ಎಣ್ಣೆಯನ್ನು ಗಿಡವನ್ನು ವೇಸ್ಟ್ ಎಂದು ಅಂದುಕೊಂಡವೋ ಇದ್ದ ಮರ ಗಳನ್ನೆಲ್ಲ ಕಳೆದು ಹಾಕಿದವು ಇಷ್ಟೆಲ್ಲಾ ಆದರೂ ಕೂಡ ಅವುಗಳ ಸಂತತಿ ಭಾರತದಲ್ಲಿ ಹಾಗೆ ಉಳಿದುಕೊಂಡಿದೆ ಹಚ್ಚ ಹಸಿರಿನ ಆ ಮರದ ಕೆಳಗಡೆ.
ಎಂತಹ ಬಿರು ಬೇಸಿಗೆಯಲ್ಲಿ ಮಲಗಿದರೂ ತಣ್ಣನೆಯ ನೆರಳು ಸಿಗುವುದರಲ್ಲಿ ಅನುಮಾನವಿಲ್ಲ ಆದರೆ ಎಲೆಗಳಿಗಿಂತ ಅದ್ಭುತವಾದ ಸಾವಯವ ಹಸಿರಿನ ಎಲೆ ಗೊಬ್ಬರ ಮತ್ತೊಂದು ಇಲ್ಲ ಅದರ ಎಣ್ಣೆ ಅತ್ಯದ್ಭುತ ಇಂಧನ ವಷ್ಟೇ ಅಲ್ಲ ಅದು ಬ್ಯಾಕ್ಟಿರಿಯ ಹಾಗೂ ವೈರಾಣುಗಳನ್ನ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.
ಅಂತಹ ಮಹತ್ವವನ್ನ ಭಾರತೀಯರಾದ ನಾವು ಮರೆತು ಹೋದವು ಪಶ್ಚಿಮ ದವರು ಬಳಸಿ ಬಿಸಾಡಿದೆಲ್ಲವನ್ನು ನಾವು ಮಹಾಪ್ರಸಾದ ಎಂದು ತಲೆ ಮೇಲೆ ಇಟ್ಟುಕೊಳ್ಳುತ್ತಾ ಹೋಗುತ್ತಾ ಇದ್ದರೆ ಈಗ ಅಮೆರಿಕ ನಾವು ನಿರ್ಲಕ್ಷ್ಯ ಮಾಡಿದ ಆ ಗಿಡದ ಮಹತ್ವವನ್ನು ಅರ್ಥ ಮಾಡಿಕೊಂಡ ಹಾಗೆ ಇದೆ ನಿಂಬೆ ಜಾತಿಯ ಹಣ್ಣುಗಳನ್ನು ಬೆಳೆಯುತ್ತಾ ಇದ್ದ ತೋಟಗಳಲ್ಲಿ ಈಗ ಭಾರತೀಯರು ಮರೆತ ಆ ತೈಲದ ಗಿಡಗಳನ್ನು ಈಗ ಅಮೆರಿಕ ನೆಡುತ್ತಾ ಇದೆ.
ಮುಂದಿನ ಪೀಳಿಗೆಗೆ ಸ್ವಾವಲಂಬನೆಯನ್ನು ಕಲಿಸುವುದಕ್ಕೆ ಅಮೆರಿಕನನ್ನರು ಪ್ರಯತ್ನ ಪಡುತ್ತಾ ಇದ್ದಾರೆ ಹಾಗಾದರೆ ಅಮರ ಯಾವುದು? ಅದರ ಹೆಸರು ಏನು ಎನ್ನುತ್ತೀರಾ ಅದರ ಹೆಸರು ಪೊಂಗಾಮಿಯ ಪಿನ್ನಾಟ ಇದು ಯಾವುದು ಪೊಂಗಾಮಿಯ ಪಿನ್ಟಾಂ ಇದು ನಮ್ಮ ಹೊಂಗೆ ಮರ ಇದ್ದಹಾಗೆ ಇದೆಯಲ್ಲವೇ ಎಂದೇನಾದರೂ ನೀವು ಅಂದುಕೊಳ್ಳುತ್ತಿದ್ದರೆ ನಿಮಗೆ ಇನ್ನೂ ಈ ಗಿಡದ ನೆನಪು ಇದೆ ಎಂದು ಅರ್ಥ.
ಪೊಂಗಮಿಯ ಪಿನ್ನಾಟ ಎನ್ನುವುದು ಹೊಂಗೆ ಮರಕ್ಕೆ ಇರುವ ವೈಜ್ಞಾನಿಕ ಹೆಸರು ಅದು ನಮ್ಮ ಹೊಂಗೆ ಮರಾನೇ ಈ ಹೊಂಗೆ ಮರವನ್ನು ತೆಗೆದುಕೊಂಡು ಅಮೆರಿಕಾದವರು ಏನು ಮಾಡುತ್ತಾರೆ ಎಂದು ಅಂದುಕೊಳ್ಳುತ್ತಾ ಇದ್ದೀರಾ ಇನ್ನು ಮುಂದೆ ಈ ಮರ ಅಮೆರಿಕಾ ಪಾಲಿನ ಆಪದ್ಬಾಂಧವ ಆಗುತ್ತದೆ ಏಕೆಂದರೆ ಅಮೆರಿಕ ಬಯೋಪಿಯೊಲ್ ಕಡೆಗೆ ಹೆಜ್ಜೆ ಹಾಕುತ್ತಾ ಇದೆ.
ಅದರ ಉತ್ಪಾದನೆಗಾಗಿ ಈ ಪೊಂಗಮಿಯ ಪಿನ್ನಾಟ ಗಿಡವನ್ನು ಅಮೆರಿಕದಾದ್ಯಂತ ನೆಡುತ್ತಾ ಇದ್ದಾರೆ ಅದು ಯಾವ ಪ್ರಮಾಣದಲ್ಲಿ ಎಂದರೆ ಯಾವೆಲ್ಲ ಜಾಗಗಳಲ್ಲಿ ಪೆಟ್ರೋಸ್ ಹಣ್ಣುಗಳನ್ನ ಬೆಳೆಯುತ್ತಾ ಇದ್ದರು ಅಲ್ಲೆಲ್ಲಾ ಹಣ್ಣಿನ ಗಿಡಗಳನ್ನು ತೆಗೆದು ಈ ಹೊಂಗೆ ಮರವನ್ನ ನೆಡುವುದಕ್ಕೆ ಅಮೆರಿಕನ್ನರು ಶುರು ಮಾಡಿದ್ದಾರೆ ಇದನ್ನು ಕಮರ್ಷಿಯಲ್ ಕ್ರಾಪ್ ರೀತಿ ಬೆಳೆಯಲಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.