ಗುರುಚಂಡಾಲ ಯೋಗದಲ್ಲಿ ಈ ಅಪವಾದ ಬರುವುದು ಪಕ್ಕ ಈಗಲೇ ಪರಿಹಾರವನ್ನು ಮಾಡಿಕೊಳ್ಳಿ. ಗುರುಚಂಡಾಲದೋಷವಿದ್ದರೆ ಅಪವಾದ ಕಟ್ಟಿಟ್ಟ ಬುತ್ತಿ ಈಗಲೇ ಪರಿಹಾರವನ್ನು ಮಾಡಿಕೊಂಡರೆ ಹೇಗೆ ಅನ್ನೋ ಕುತೂಹಲಕರವಾದ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ. ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಗುಣ ಇನ್ನೊಬರಿಗೆ ಇರೋದಿಲ್ಲ. ಒಬ್ಬ ಮನುಷ್ಯನ ಸ್ಥಿತಿಗತಿ ಇನ್ನೊಬ್ಬನಿಗೆ ಇರೋದಿಲ್ಲ. ಒಬ್ಬನಿಗೆ ಒಳ್ಳೆಯ ಕಾಲ ನಡೆಯುತ್ತಿದ್ದರೆ ಇನ್ನೊಬ್ಬನ ಕಾಲ ಕೆಟ್ಟದಾಗಿರುತ್ತದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅನ್ನೋದನ್ನು ಸುಮ್ನೆ ಹೇಳೋದಿಲ್ಲ. ಆ ಕಾಲ ಕೂಡಿ ಬರೋದು ಗ್ರಹಗತಿಗಳ ಚಲನೆಯಿಂದ ಅಂತ ಪ್ರತಿಪಾದಿಸುತ್ತೆ ವೈದಿಕ ಜ್ಯೋತಿಷ್ಯ. ಗ್ರಹಗಳು ನಿಮ್ಮ ರಾಶಿಯಿಂದ ಯಾವ ಮನೆಯಲ್ಲಿವೆ ಅದರಿಂದ ನಿಮಗಾಗುವ ಒಳಿತು ಕೆಡಕುಗಳು ನಿರ್ಧಾರವಾಗುತ್ತೆ.

ನಿಮ್ಮ ಜಾತಕದಲ್ಲಿ ಗ್ರಹಗತಿಗಳು ಹೇಗಿವೆ ಅನ್ನೋದನ್ನ ನೋಡಿ, ನಿಮ್ಮ ಭವಿಷ್ಯ ಹೇಳಲು ಸಾಧ್ಯ. ಜಾತಕ ಹೇಗಿದೆ ಅನ್ನೋದನ್ನ ಪಂಡಿತರು ಗ್ರಹಗತಿಗಳನ್ನು ಲೆಕ್ಕ ಹಾಕಿ ಅದನ್ನು ವಿಮರ್ಶೆ ಮಾಡಿ ನೋಡಿ ಯಾವ ಗ್ರಹದಿಂದ ಯಾವ ರೀತಿಯ ಪರಿಣಾಮ ಬೀರುತ್ತೆ ಹೇಳ್ತಾರೆ. ಯಾವಾಗ ಶುಭಕಾಲ ಮನವರಿಕೆ ಮಾಡುತ್ತಾರೆ. ಗ್ರಹಗತಿಗಳ ಚಲನೆಯ ಕೆಲವರಿಗೆ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ. ಇವುಗಳಿಂದಾಗಿ ಮನುಷ್ಯನ ಜೀವನದ ದಿಕ್ಕೆ ಬದಲಾಗುತ್ತದೆ. ಮನುಷ್ಯನ ಬದುಕಿನ ಸಾಕಷ್ಟು ಕ್ಷೇತ್ರಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಇಂತಹ ದೋಷಗಳಲ್ಲಿ ಚಾಂಡಾಲ ದೋಷವು ಒಂದು ಇದಕ್ಕೆ ಗುರು ಚಾಂಡಾಲದ ಶಾಂತ ಹೇಳುತ್ತಾರೆ ಇದನ್ನು ಅತಿ ಕ್ರೂರ ದೋಷ ಅಂತಾನೂ ಹೇಳ್ತಾರೆ. ಅದರಿಂದ ಮುಕ್ತಿ ಪಡೆಯುವುದಕ್ಕೆ ಪರಿಹಾರಗಳೇನು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ದೋಷವನ್ನು ತಿಳಿದುಕೊಳ್ಳುವುದಕ್ಕೆ ಅಥವಾ ದೋಷ ಪರಿಹಾರದ ಮಾರ್ಗಗಳೇನು ಅಂತ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಗುರು ಹಾಗೂ ರಾಹು ಎರಡು ಗ್ರಹಗಳು ಒಂದೇ ರಾಶಿ ಚಕ್ರವನ್ನು ಪ್ರವೇಶಿಸಿದಾಗ ಚಾಂಡಾಲದ ದೋಷವು ಉತ್ಪತ್ತಿಯಾಗುತ್ತೆ. ದೋಷ ಸೃಷ್ಟಿಯಾಗುತ್ತೆ ಇದನ್ನ ಗುರು ಚಾಂಡಾಲ ಯೋಗ ಅಂತ ಕರೆಯುತ್ತಾರೆ.

ಈ ಯೋಗವನ ಅತ್ಯಂತ ಮಾರಕ ಮತ್ತು ಅತ್ಯಂತ ಅಶುಭ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ಮನುಷ್ಯನ ವಿದ್ಯೆ ಬುದ್ಧಿ ಮತ್ತು ಜ್ಞಾನದ ಗ್ರಹ ಎಂದು ಪರಿಗಣಿಸಲಾಗುತ್ತದೆ ಆದರೆ ರಾಹುಗ್ರಹದ ಮಧ್ಯಪ್ರವೇಶದಿಂದ ಗುರು ಗ್ರಹ ಋಣಾತ್ಮಕ ಶಕ್ತಿಯಾಗಿ ಬದಲಾಗುತ್ತದೆ. ಇದರಿಂದ ಗುರು ಚಾಂಡಾಲ ಯೋಗ ಸೃಷ್ಟಿಯಾಗುತ್ತದೆ . ಈ ಸಮಯದಲ್ಲಿ ಏನೇ ಮಾಡಿದರೂ ಗುರುಬಲ ಒಲಿಯೋದೆ ಇಲ್ಲ. ರಾಹು ತನ್ನ ವಕ್ರ ದೃಷ್ಟಿ ಬೀರಿ ಗುರುವನ್ನ ಕಡಿಮೆ ಮಾಡುತ್ತಾನೆ. ಮೊದಲೇ ಹೇಳಿದಂತೆ ಚಾಂಡಾಲ ದೋಷವನ್ನು ಅತಿ ಕ್ರೂರ ದೋಷ ಅಂತ ಹೇಳಲಾಗುತ್ತದೆ. ಈ ದೋಷದಲ್ಲಿರುವ ವ್ಯಕ್ತಿಯು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲನಾಗುತ್ತಾನೆ. ಜಾತಕದಲ್ಲಿ ಶುಭ ಫಲಗಳು ಕೂಡಿಬಂದಿದ್ರು ನಿಮ್ಮ ಲಗ್ನದಲ್ಲಿ ಕುಗ್ರಹಗಳ ಬಲವನ್ನ ಚಾಂಡಾಲ ದೋಷವು ಹಿಮ್ಮಟ್ಟಿಸಿ ದುರದೃಷ್ಟ ಹಿಂಬಾಲಿಸುವಂತೆ ಮಾಡುತ್ತದೆ

ಗುರುಚಂಡಾಲ ದೋಷವು ವ್ಯಕ್ತಿಯ ಕೆಲಸದಲ್ಲಿ ಪದೇ ಪದೇ ತೊಂದ್ರೆ ಮಾಡುತ್ತೆ. ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ಪೂರ್ಣಗೊಳಿಸಲು ಈ ದೋಷವು ಬಿಡುವುದಿಲ್ಲ. ಈ ದೋಷದಲ್ಲಿರುವ ವ್ಯಕ್ತಿಯು ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಆತ ಯಾವುದೇ ನಿರ್ಧಾರ ತೆಗೆದುಕೊಂಡರು ಅದು ತಪ್ಪಾಗಿರುತ್ತೆ. ಒಳ್ಳೆಯ ಗ್ರಹಗಳು ಧನಾತ್ಮಕ ಶಕ್ತಿಯನ್ನು ನೀಡಿದರು ಚಾಂಡಾಲ ದೋಷವು ಋಣಾತ್ಮಕವಾಗಿ ಮಧ್ಯಪ್ರವೇಶಿಸಿ ಮತ್ತೆ ಗ್ರಹ ಬಲವನ್ನ ಕಡಿಮೆ ಮಾಡುತ್ತದೆ. ಮತ್ತೆ ಇದರ ಪರಿಣಾಮವಾಗಿ ವ್ಯಕ್ತಿಯು ನಷ್ಟವನ್ನು ಹೊಂದುತ್ತಾನೆ. ಕೆಲವು ಕಾನೂನಿನ ರಾಜ್ಯಗಳಲ್ಲಿ ಸಿಕ್ಕಿಕೊಂಡು ಕೋರ್ಟ್ ಕಚೇರಿ ಅಲೆಯ ಬೇಕಾದಂತಹ ಪರಿಸ್ಥಿತಿ ಎದುರಾಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god