ಜನರನ್ನು ಬಕ್ರ ಮಾಡಿದ ವಿಷಯಗಳು ನಂಬಲಾಗದ ಆವಿಷ್ಕಾರಗಳು……ಪುರಾತತ್ವ ವಿಜ್ಞಾನಿಗಳು ಪ್ರಪಂಚದಾದ್ಯಂತ ಪ್ರತಿನಿತ್ಯ ಸಾವಿರಾರು ವರ್ಷ ಹಳೆಯ ವಸ್ತುಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ. ಇದರ ಬಗ್ಗೆ ನಮ್ಮೆಲ್ಲರಿಗೂ ಗೊತ್ತು ಆದರೆ ಕೆಲವರು ಈ ಪುರಾತನ ವಸ್ತುಗಳನ್ನ ಮೋಡಿಫೈ ಮಾಡಿ ಇವು ನಂಬಲಾರದ ಡಿಸ್ಕವರಿಸ್ ಎಂದು ಅದ್ಭುತ ಡಿಸ್ಕವರಿಸ್ ಎಂದು ಏಲಿಯನ್ಸ್ ಇದ್ದಾರೆ ಎಂದು ನಂಬುವ ಡಿಸ್ಕವರಿ ಅಂತ ಪುಕಾರುಗಳನ್ನು ಹುಟ್ಟಿಸುತ್ತಾರೆ. ಇದನ್ನೇ ನಮ್ಮ ಜನರು ನಂಬಿ ಎಲ್ಲರಿಗೂ ಶೇರ್ ಕೂಡ ಮಾಡುತ್ತಾರೆ. ಈ ರೀತಿ ನಾವು ನಿಜ ಎಂದು ನಂಬಿದ ಕೆಲವು ಸುಳ್ಳು ವಿಷಯಗಳ ಬಗ್ಗೆ ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ.ಅದೇ ರೀತಿ ಈ ವಿಡಿಯೋದ ಕೊನೆಯಲ್ಲಿ ನಮ್ಮ ಭಾರತ ದೇಶದ ಇತಿಹಾಸಕ್ಕೆ ಸಂಬಂಧಪಟ್ಟ ಒಂದು ಸತ್ಯವನ್ನು ಕೂಡ ಹೇಳುತ್ತೇವೆ ಆದ್ದರಿಂದ ಈ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. 2ಸಾವಿರ ವರ್ಷದ ಹಳೆಯ ಸೈಕಲ್ ತಮಿಳುನಾಡಿನಲ್ಲಿ 700 ಏಡಿಗೆ ಸೇರಿದ ಒಂದು ದೇವಸ್ಥಾನವಿದೆ ಅಂದರೆ 2000 ವರ್ಷಗಳ ಹಳೆಯ ದೇವಸ್ಥಾನ ಇದೆ ಈ ದೇವಸ್ಥಾನದಲ್ಲಿ ಇರುವ ಒಂದು ಕಂಬದಲ್ಲಿ ಒಬ್ಬ ಹುಡುಗ ಸೈಕಲ್ ತುಳಿಯುತ್ತಿರುವ ಹಾಗೆ ಒಂದು ಶಿಲೆ ಇದೆ.

ಇದನ್ನು ನೋಡಿದ ತುಂಬಾ ಜನ 2000 ವರ್ಷಗಳ ಹಿಂದೆಯೇ ಕಂಡುಹಿಡಿದ ಸೈಕಲ್ ಎಂದು ಹೇಳಲು ಪ್ರಾರಂಭಿಸುತ್ತಾರೆ ಆದರೆ ಈ ಸೈಕಲ್ ಮೊದಲು 1817ರಲ್ಲಿ ಕಂಡು ಹಿಡಿಯುತ್ತಾರೆ,ಇದರಿಂದ ಆ ದೇವಸ್ಥಾನದ ಕಂಬದಲ್ಲಿರುವ ಈ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಇದು 2 ಸಾವಿರ ವರ್ಷಗಳ ಹಳೆಯ ಸೈಕಲ್ ಎಂದು ಪುಕಾರನ್ನು ಹುಟ್ಟಿಸುತ್ತಾರೆ ಆದರೆ ಇದರ ಬಗ್ಗೆ ರಿಸರ್ಚ್ ಮಾಡಿ ಇದರ ಹಿಂದೆ ಇರುವ ರಹಸ್ಯ ಬಯಲಾಗುತ್ತದೆ. ಅದು ಏನು ಎಂದರೆ 1920 ರಲ್ಲಿ ಒಂದು ಬಾರಿ ಈ ದೇವಸ್ಥಾನವನ್ನು ರಿಪೇರಿ ಮಾಡುವಾಗ ಈ ಕೆತ್ತನೆಯನ್ನ ಮಾಡಿದ್ದಾರೆ ಇದರಿಂದ ಇದು 2000 ವರ್ಷಗಳ ಹಳೆಯ ಸೈಕಲ್ ಅಲ್ಲ ನೂರು ವರ್ಷಗಳ ಹಿಂದೆ ಕೆತ್ತಲ್ಪಟ್ಟ ಸೈಕಲ್ ಎಂದು ಗೊತ್ತಾಗುತ್ತದೆ. ಇದೇ ರೀತಿ ಸ್ಪೈನ್ನಲ್ಲಿ 1513ರಲ್ಲಿ ಕಟ್ಟಲ್ಪಟ್ಟ ಒಂದು ಕಟ್ಟಡದಲ್ಲಿ ತುಂಬಾ ವಿಚಿತ್ರವಾದ ಶಿಲೆಗಳ ಮಧ್ಯದಲ್ಲಿ ಒಂದು ಅಸ್ತ್ರೋನೈಟ್ ಶಿಲೆಯು ಕೂಡ ಇದೆ ಆದರೆ ಆ ಕಾಲದಲ್ಲಿ ಜೀವಿಸಿದ ಮನುಷ್ಯರಿಗೆ ಅಂತರಿಕ್ಷಕ್ಕೆ ಹೋಗುವುದರ ಬಗ್ಗೆ ಗೊತ್ತೇ ಇರಲಿಲ್ಲ ಹಾಗೆ ಟೆಕ್ನಾಲಜಿ ಬಗ್ಗೆ ಕೂಡ ಗೊತ್ತಿರಲಿಲ್ಲ.

WhatsApp Group Join Now
Telegram Group Join Now

ಇದರಿಂದ ತುಂಬಾ ಜನ ಆ ಕಾಲದಲ್ಲಿ ಇದ್ದ ಜನ ಏಲಿಯನ್ಸ್ ಭೂಮಿಗೆ ಬಂದಿರುವುದನ್ನು ನೋಡಿ ಈ ಶಿಲೆಯನ್ನು ಕೆತ್ತಿದ್ದಾರೆ ಎಂದು ಒಂದು ಪುಕಾರನ್ನು ಹುಟ್ಟಿಸುತ್ತಾರೆ.ಇಲ್ಲಿ ನಿಜ ಏನು ಎಂದರೆ ಇದು 500 ವರ್ಷಗಳ ಅಳೆಯ ಶಿಲೆ ಅಲ್ಲ ಇದು ಕೇವಲ 30 ವರ್ಷಗಳ ಹಳೆಯ ಶಿಲೆ ಮಾತ್ರ ಅದು ಹೇಗೆ ಎಂದರೆ 1992 ರಲ್ಲಿ ಈ ಕಟ್ಟಡವನ್ನು ರಿಪೇರಿ ಮಾಡುವಾಗ ಒಂದು ಶಿಲೆ ಶಿಥಿಲವಾಗಿರುವುದನ್ನು ನೋಡಿ ಅದೇ ಜಾಗದಲ್ಲಿ ಆಸ್ಟ್ರೋ ನೆಟ್ ಶಿಲೆಯನ್ನು ಇಟ್ಟಿದ್ದಾರೆ ಅಷ್ಟೇ. ಏಲಿಯನ್ ಮೊಬೈಲ್ ಫೋನ್ ಬ್ರಹ್ಮಾಂಡದ ಯಾವುದೋ ಒಂದು ಗ್ರಹದಲ್ಲಿ ಏಲಿಯನ್ಸ್ ಇದ್ದಾರೆ ಅನ್ನೋದು ಮಾತ್ರ ಸತ್ಯ ಅವರು ನಮಗಿಂತ ಸೂಪರ್ ಅಡ್ವಾನ್ಸ್ ಟೆಕ್ನಾಲಜಿಯನ್ನು ಬಳಸುತ್ತಿರಬಹುದು ಎನ್ನುವುದು ಸತ್ಯವಾಗಿರಬಹುದು ಆದರೆ ನಮ್ಮವರು ಏಲಿಯನ್ ಇದ್ದಾರ ಇಲ್ಲವಾ ಅನ್ನುವುದನ್ನು ಇನ್ನೂ ಕೂಡ ಕಂಡು ಹಿಡಿಯಲಿಲ್ಲ ಆದರೆ ಕೆಲವರು ಅವರು ಬಳಸಿದ ಫೋನನ್ನು ಮಾತ್ರ ಕಂಡುಹಿಡಿದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.