ಜೀವಂತ ಮಗಳ ಅಂಗಾಂಗ ದಾನ ಏಳನೇ ತರಗತಿ ಹುಡುಗಿ ಬದುಕಿನಲ್ಲಿ ಏನಾಯ್ತು..ನೋಡಿ ಈ ವಿಡಿಯೋ

WhatsApp Group Join Now
Telegram Group Join Now

ದೃಶ್ಯ ಒಂದನ್ನ ಗಮನಿಸುತ್ತಾ ಇದ್ದೀರಿ! ಸುತ್ತಮುತ್ತ ವೈದ್ಯರು ನಿಂತುಕೊಂಡಿದ್ದಾರೆ ಅಥವಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ನಿಂತುಕೊಂಡಿದ್ದಾರೆ. ಮಧ್ಯದಲ್ಲಿ ಓರ್ವ ಬಾಲಕಿಯ ದೇಹವನ್ನು ತೆಗೆದುಕೊಂಡು ಬರಲಾಗುತ್ತಿದೆ.

ಆ ಬಾಲಕಿಯ ದೇಹವನ್ನು ತೆಗೆದುಕೊಂಡು ಬರುವಾಗ ಎಲ್ಲರೂ ಕೂಡ ಚಪ್ಪಾಳೆ ತಟ್ಟುತ್ತಿದ್ದಾರೆ. ಸಹಜವಾಗಿ ನಮ್ಮೆಲ್ಲರಿಗೂ ಕೂಡ ಅನ್ಸುತ್ತೆ ಮೃತದೇಹವನ್ನು ತರುವಂತಹ ಸಂದರ್ಭದಲ್ಲಿ ಯಾಕೆ ಚಪ್ಪಾಳೆಯನ್ನು ತಟ್ಟುತ್ತಿದ್ದಾರೆ ಅಂತ. ಅಲ್ಲೇ ಇರೋದು ವಿಚಾರ; ಬಂಧುಗಳೇ ಇದು ಎಂಥವರ ಮನ ಕಲುಕುವಂತಹ ಕಣ್ಣೀರು ತರಿಸುವಂತಹ ಸ್ಟೋರಿ.

ಹೆಚ್ಚು ಕಡಿಮೆ 12 ರಿಂದ 13 ವಯಸ್ಸಿನ ಆ ಹೆಣ್ಣುಮಗಳು ಏಳನೇ ಕ್ಲಾಸ್ ಓದ್ತಾ ಇದ್ಲು ಭವಿಷ್ಯದ ಬಗ್ಗೆ ಅದು ಎಷ್ಟು ಕನಸನ್ನು ಕಂಡಿದ್ಲು ಏನೋ ಗೊತ್ತಿಲ್ಲ. ಆದರೆ ಒಂದು ಲಾರಿ ಆಕೆಯ ಭವಿಷ್ಯ ನುಚ್ಚುನೂರು ಮಾಡಿಬಿಡುತ್ತೆ.

ಅದಾದ ಬಳಿಕ ಮಗಳನ್ನು ಕಳೆದುಕೊಳ್ಳುತ್ತಿರುವಂತಹ ಆ ನೋವಿನಲ್ಲೂ ಆ ಸಂಕಟದಲ್ಲೂ ಪೋಷಕರು ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದೇನಪ್ಪಾ ಅಂದ್ರೆ ಮಗಳ ಅಂಗಾಂಗವನ್ನ ದಾನ ಮಾಡುವಂತಹ ನಿರ್ಧಾರ.

ಇವತ್ತು ಅವರು ಮಗಳ ಅಂಗಾಂಗವನ್ನು ದಾನ ಮಾಡಿದಂತಹ ಕಾರಣಕ್ಕಾಗಿ ಹೆಚ್ಚು ಕಡಿಮೆ ಆರು ಮಕ್ಕಳಿಗೆ ಆ ಅಂಗಾಂಗಗಳನ್ನ ಯಶಸ್ವಿಯಾಗಿ ಜೋಡಿಸಲಾಗಿದೆ. ಮಗಳನ್ನು ಕಳೆದುಕೊಂಡರು ಕೂಡ ಆ ಅಂಗಾಂಗಗಳ ಮೂಲಕ ಅವರ ಮಗಳು ಜೀವಂತವಾಗಿದ್ದಾಳೆ.

ಬಂಧುಗಳೇ ಎಲ್ಲಿ ಏನಿದು ವಿವರ ಅದನ್ನ ಸಂಪೂರ್ಣವಾಗಿ ಗಮನಿಸುತ್ತಾ ಹೋಗೋಣ. ಬಂಧುಗಳೇ ಘಟನೆ ನಡೆದಿದ್ದು ತಿಪಟೂರು ಭಾಗದಲ್ಲಿ ಆ ಹೆಣ್ಣುಮಗಳ ಹೆಸರು ಚಂದನ ಅಂತ 12 ರಿಂದ 13 ವಯಸ್ಸಿನ ಆಸುಪಾಸು.

ಆಕೆಯ ಅಪ್ಪ ವಸಂತ್ ಕುಮಾರ್, ತಾಯಿ ದಿವ್ಯ ತಿಪಟೂರಿನ ಹಳೆಪಾಳ್ಯದ ನಿವಾಸಿ. ಅಂದ್ರೆ ಹಳೆಪಾಳ್ಯದಲ್ಲಿ ಅವರು ನೆಲೆ ನಿಂತಿದ್ದು ಹಾಗೆ ಆ ಹೆಣ್ಣುಮಗಳು ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯಲ್ಲಿ ಏಳನೇ ತರಗತಿಯನ್ನು ಓದ್ತಾ ಇದ್ಲು.

ಬಹಳ ಚುರುಕಾಗಿದ್ದಂತಹ ವಿದ್ಯಾರ್ಥಿನಿಯಂತೆ ಆಕೆಯ ಸುತ್ತಮುತ್ತ ಇರುವಂತವರು ಆಕೆಯ ಶಿಕ್ಷಕರು ಎಲ್ಲರೂ ಕೂಡ ಅದೇ ಮಾತನ್ನು ಹೇಳ್ತಿದ್ದಾರೆ. ಆಕೆ ಭವಿಷ್ಯದಲ್ಲಿ ಹಾಗಾಗಬೇಕು ಹೀಗಾಗಬೇಕು ಅಂತ ಸಾಕಷ್ಟು ಕನಸನ್ನ ಕಂಡಂತಹ ಹೆಣ್ಣುಮಗಳು.

23ನೇ ತಾರೀಕು ಜುಲೈ 23ನೇ ತಾರೀಕು ಎಂದಿನಂತೆ ಆಕೆ ಶಾಲೆಗೆ ಹೋಗಿರುತ್ತಾಳೆ. ಇತ್ತ ಮನೆಯಲ್ಲಿ ಮಗಳು ಬರ್ತಾಳೆ ಅಂತ ಬಹಳ ಖುಷಿ ಖುಷಿಯಿಂದ ಕಾಯುತ್ತಿರುತ್ತಾರೆ ಆದರೆ ನಡೆಯಬಾರದಂತಹ ಘಟನೆಯೊಂದು ನಡೆದು ಹೋಗಿಬಿಡುತ್ತೆ.

ಆ ಹೆಣ್ಣುಮಗಳು ರಸ್ತೆಯನ್ನು ದಾಟುವಂತಹ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಲಾರಿಯೊಂದು ಬಂದು ಆಕೆಗೆ ಡಿಕ್ಕಿ ಹೊಡೆದುಬಿಡುತ್ತೆ. ಆಕೆ ಅಲ್ಲೇ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗುತ್ತೆ.

ಆ ಡಿಕ್ಕಿ ಹೊಡೆದಂತಹ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲೊಂದು ಬಾರ್ ಇದೆಯಂತೆ ಬಾರ್ ಮುಂದೆ ಸಾಕಷ್ಟು ವಾಹನಗಳನ್ನ ನಿಲ್ಲಿಸಿರುತ್ತಾರಂತೆ ಇಕ್ಕಟ್ಟಾದಂತಹ ರಸ್ತೆಯ ಆ ವಾತಾವರಣವನ್ನು ನಿರ್ಮಾಣ ಮಾಡಿಬಿಡುತ್ತಾರೆ. ಹೀಗಾಗಿ ವಾಹನಗಳು‌ ಮುಂದೆ ಸಾಗುವ ಸಂದರ್ಭದಲ್ಲಿ ತುಂಬಾ ಸಮಸ್ಯೆ ಆಗುತ್ತೆ.

ಆಕ್ಸಿಡೆಂಟ್ ಗಳೆಲ್ಲವೂ ಕೂಡ ಆಗ್ಬಿಡುತ್ತಂತೆ ಒಟ್ಟಾರೆಯಾಗಿ ಆ ಬಾರಿಂದನೋ ಅಥವಾ ನಿಲ್ಲಿಸಿದಂತಹ ವಾಹನಗಳ ಕಾರಣಕ್ಕಾಗಿಯೂ ಆ ಹೆಣ್ಣುಮಗಳು ಅದಾದ ಬಳಿಕ ಸಾವು ಬದುಕಿನ ನಡುವೆ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ.

12 ರಿಂದ 13 ವಯಸ್ಸಿನ ಆ ಹೆಣ್ಣುಮಗಳನ್ನ ಸೀದಾ ಆಸ್ಪತ್ರೆಗೆ ದಾಖಲಿಸಲಾಗುತ್ತೆ. ನಿರಂತರವಾಗಿ ಚಿಕಿತ್ಸೆಯನ್ನ ಕೊಡಲಾಗುತ್ತೆ. ಹೆಚ್ಚು ಕಡಿಮೆ ಏಳು ದಿನಗಳ ಕಾಲದ ಚಿಕಿತ್ಸೆ ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.

ಕೊನೆಯದಾಗಿ ಆ ಹೆಣ್ಣುಮಗಳ ಮೆದುಳು ನಿಷ್ಕ್ರಿಯಗೊಳ್ಳುತ್ತೆ. ಆಗ ಪೋಷಕರು ತೆಗೆದುಕೊಂಡಂತಹ ಆ ಗಟ್ಟಿ ನಿರ್ಧಾರ ಇದೆಯಲ್ಲ ನಾವು ಈ ಸಂದರ್ಭದಲ್ಲಿ ಊಹೆ ಮಾಡಿಕೊಳ್ಳೋಕು ಸಾಧ್ಯ ಆಗದಂತಹ ನಿರ್ಧಾರ ಮೆದುಳು ನಿಷ್ಕ್ರಿಯಗೊಂಡಿದೆ. ಆದರೆ ಮಗಳು ಜೀವಂತವಾಗಿದ್ದಾಳೆ ಆಗ ವೈದ್ಯರು ಬಂದು ಹೇಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god