ಜೂನ್ ಆರು ಅಮಾವಾಸ್ಯೆ ದಿನ ಪಂಚಾಗ್ರಹ ಕೂಟ ಸಿಂಹ ರಾಶಿಯವರಿಗೆ ವಿಶೇಷ ಪರಿಹಾರ… ಇದು ಸಿಂಹ ರಾಶಿಯವರಿಗೆ ಒಂದು ಪ್ರಮುಖವಾದ ವಿಚಾರ ಜೂನ್ 6ನೇ ತಾರೀಕು ಇದು ಬರುವ ಕಾಲ 6ನೇ ತಾರೀಖಿನ ಗ್ರಹ ಸಿಟಿಗಳನ್ನು ಹಾಕಿಕೊಂಡು ನೋಡಿದರೆ ಬಹಳ ಅದ್ಭುತವಾಗಿ ಇದೆ ಪಂಚಗ್ರಹ ಕೂಟ 5 ರಾಶಿಗಳು ಒಂದೇ ರಾಶಿಯಲ್ಲಿರಲಿದೆ ಅದು ವೃಷಭ ರಾಶಿ,
ವೃಷಭ ರಾಶಿಯಲ್ಲಿ 5 ಗ್ರಹಗಳು ಸೇರುತ್ತದೆ ಆ ದಿವಸ ಯಾವುದು ನಿಮ್ಮ ರಾಶಿಯ ಅಧಿಪತಿ ಆದಂತಹ ರವಿ ಗ್ರಹ ನಿಮ್ಮ ವಯ್ಯಾಧಿಪತಿ ಆದಂತಹ ಚಂದ್ರ ಗ್ರಹ ನಿಮ್ಮ ಕರ್ಮಾಧಿಪತಿಯಾದಂತಹ ಶುಕ್ರ ಗ್ರಹ ನಿಮ್ಮ ಲಾಭಧಿಪತಿಯಾದ ಬುಧ ಗ್ರಹ ನಿಮ್ಮ ಅಸ್ತಮಾ ಪಂಚಮ ಅಧಿಪತಿ ಆದಂತಹ ಗುರು ಗ್ರಹ ಐದು ಗ್ರಹಗಳು ಒಂದೇ ರಾಶಿ ನಿಮ್ಮ ಕರ್ಮಸ್ಥಾನ 10ನೇ ಮನೆಯಲ್ಲಿ ಪಂಚಗ್ರಹ ಯೋಗ.
ಸಿಂಹ ರಾಶಿಯವರಿಗೆ ಅದ್ಭುತವಾದಂತಹ ಅವಕಾಶಗಳು ನಿಮಗೆ ಕಲ್ಪಿಸಿ ಕೊಡುವಂತದ್ದು, ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನಿಮ್ಮ ಉದ್ಯೋಗ ಸಮಸ್ಯೆ ಆರೋಗ್ಯ ಸಮಸ್ಯೆ ಸಂತಾನ ಸಮಸ್ಯೆ ವ್ಯಾಪಾರ ವ್ಯವಹಾರ ಸಮಸ್ಯೆ ಕೌಟುಂಬಿಕ ಕಲಹಗಳು ಇರಬಹುದು ನಿಮ್ಮ ಆರ್ಥಿಕ ಸಮಸ್ಯೆ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅವತ್ತಿನ ದಿವಸ ಅದ್ಭುತವಾದ ದಿವಸ.
ಅವತ್ತಿನ ದಿವಸ ನೀವೇನಾದರೂ ಏನೇ ಪರಿಹಾರಕ್ಕೆ ಪ್ರಯತ್ನ ಮಾಡಿದರು ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಆ ಪರಿಹಾರ ಮಾಡಿದೆ ತುಂಬಾ ಒಳ್ಳೆಯದಾಯಿತು ಅನುಕೂಲವಾಯಿತು ಆದ್ದರಿಂದ ನಿಮಗೆ ಅದ್ಭುತವಾದಂತಹ ಪರಿಹಾರಗಳನ್ನು ನೀಡುತ್ತೇನೆ ಎರಡು ಮೂರು ಪರಿಹಾರಗಳನ್ನು ಹೇಳುತ್ತೇನೆ.
ಮೊದಲನೆಯದಾಗಿ ನಿಮಗೆ ಪಂಚಧಾನ್ಯ ಕಳಸ ಪೂಜೆ ಇದು ತುಂಬಾನೇ ಅದ್ಭುತವಾದಂತಹ ಪರಿಹಾರ ಹಿಂದಿನ ದಿವಸ ತಂದುಕೊಂಡು ಇಟ್ಟುಕೊಳ್ಳಿ ನೀವು ಏನು ಮಾಡಬೇಕು ಎಂದರೆ ಆರನೇ ತಾರೀಕಿ ಇರುವುದರಿಂದ ಐದನೇ ತಾರೀಖಿನ ದಿವಸವೇ ನೀವು ಒಂದು ತಾಮ್ರದ ಕಳಸವನ್ನು ಮತ್ತು 5 ಧಾನ್ಯಗಳನ್ನು 100 ಗ್ರಾಂನಷ್ಟು ತೆಗೆದುಕೊಂಡು ಬಂದು ಇಟ್ಟುಕೊಳ್ಳಿ ಅದು ಒಂದು ಮುಷ್ಟಿಯಷ್ಟು ಇದ್ದರೆ ಸಾಕು.
ಏನು ಎಂದರೆ ಗೋಧಿ, ಭತ್ತ,ಕಡಲೆ ಕಾಳು, ಹೆಸರು ಕಾಳು ಮತ್ತು ಅವರೇ ಕಾಳು ಈ ಐದನ್ನು ಸಹ ಇಟ್ಟುಕೊಂಡು ಆರನೇ ತಾರೀಕು ಬೆಳಗ್ಗೆ ಎದ್ದು ಸ್ನಾನ ಮುಗಿಸಿ ದೇವರ ಮನೆಯನ್ನು ಶುಚಿ ಮಾಡಿಕೊಂಡು ಅಲ್ಲಿ ಒಂದು ರಂಗೋಲಿಯನ್ನು ಹಾಕಿ ಅದರ ಮೇಲೆ ಬಾಳೆ ಎಲೆ ಅಥವಾ ಒಂದು ಪ್ಲೇಟ್ ಸ್ಟೀಲ್ ಪ್ಲೇಟ್ ಆಗಿರಬಹುದು ತಾಮ್ರದ ಪ್ಲೇಟಾಗಿರಬಹುದು ಒಟ್ಟಾರೆಯಾಗಿ ಒಂದು ಪ್ಲೇಟ್ ಅನ್ನು ತೆಗೆದುಕೊಳ್ಳಿ.
ಆದರೆ ಪ್ಲಾಸ್ಟಿಕ್ ಬೇಡ ಆ ಪ್ಲೇಟ್ ನ ತುಂಬಾ ಅಕ್ಕಿ ಅಕ್ಕಿಯ ಮೇಲೆ ಕಳಸವನ್ನು ಇಡಿ ಆನಂತರ ಆ ಧಾನ್ಯಗಳನ್ನೆಲ್ಲ ತುಂಬಿ ಗೋಧಿ ಭತ್ತ ಅದಾದ ನಂತರ ಹೆಸರು ಕಾಳು ಆಮೇಲೆ ಕಡಲೆಕಾಳು ಆನಂತರ ಕೊನೆಯಲ್ಲಿ ಅವರೆಕಾಳನ್ನು ಹಾಕಿ ಅದು ತುಂಬಿಕೊಳ್ಳುತ್ತದೆ ಆನಂತರ ವೀಳ್ಯದೆಲೆಯನ್ನು ಅದರ ಮೇಲೆ ಇಟ್ಟು ಪೂಜೆಯನ್ನು ಮಾಡಬೇಕು.
ವಿಶೇಷವಾಗಿ ಸಿಂಹ ರಾಶಿಯವರು ಅದರ ಮೇಲೆ ಒಂದು ತೆಂಗಿನಕಾಯಿಯನ್ನು ಕೂಡ ಇಡಬಹುದು ಇಟ್ಟು ಪೂಜೆಯನ್ನು ಮಾಡಬೇಕು, ಏನು ಪೂಜೆಯನ್ನು ಮಾಡಬೇಕು ಎಂದರೆ ಅದಕ್ಕೆ ಒಂದು ಅಷ್ಟೋತ್ತರವನ್ನು ಮಾಡಬೇಕು ಬಹಳ ಮುಖ್ಯ ಈ ಪಂಚಗ್ರಹಗಳ ಅಷ್ಟೋತ್ತರ ರವಿಯ ಅಷ್ಟೋತ್ತರ ಚಂದ್ರ ಅಷ್ಟೋತ್ತರ ಬುಧ ಅಷ್ಟೋತ್ತರ ಗುರು ಅಷ್ಟೋತ್ತರ ಈ ಐದು ಗ್ರಹಗಳ ಅಷ್ಟೋತ್ತರವನ್ನು ಪಟನೆ ಮಾಡಿ ಊದುಗಡ್ಡಿ ಹಚ್ಚಿ ಪೂಜೆ ಮಾಡಿ ಮಂಗಳಾರತಿ ಬೆಳಗಿ ನೈವೇದ್ಯಕ್ಕೆ ಏನಾದರೂ ಒಂದನ್ನು ಮಾಡಿ ಇಡಿ.
ಆ ಕೆಲಸ ಅವತ್ತು ಪೂರ್ತಿ ಹಾಗೆಯೇ ಇರಲಿ ಏಳನೇ ತಾರೀಕು ಬೆಳಿಗ್ಗೆ ಎದ್ದು ಆ ಕಳಸವನ್ನು ಹಾಗೆ ಹಿಡಿದುಕೊಂಡು ಮನೆಯ ಬಳಿ ಯಾವುದಾದರೂ ಒಂದು ಅರಳಿಕಟ್ಟೆ ಇದ್ದೇ ಇರುತ್ತದೆ ಅಲ್ಲಿಗೆ ಹೋಗಿ ಅದನ್ನು ಸಮರ್ಪಣೆ ಮಾಡಿ ಪ್ರದಕ್ಷಣೆ ಹಾಕಿ ಮನೆಗೆ ಹಿಂತಿರುಗಿ ಬನ್ನಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.