ತಂದೆ ತಾಯಿ ಕೂಲಿ ಮಾಡಿ ಸಾಕಿದ್ರು ಅವರಿಗಾಗಿ ಒಂದು ದಿನ ಬ್ಯಾನರ್ ಕಟ್ಟದೆ ಇವರಿಗೆ ಈ ಹುಚ್ಚು ಅಭಿಮಾನ ಯಾಕೆ… ನೆನ್ನೆ ಅಂದರೆ ಜನವರಿ 8 ನೇ ತಾರೀಖಿನಂದು ಸೋಮವಾರದ ದಿನ ನಟ ಯಶ್ ರವರ ಪಾಲಿಗೆ ಒಂದು ಕರಾಳ ದಿನವಾಗಿ ಪರಿಣಮಿಸಿದೆ ಈ ಸಲದ ಜನ್ಮದಿನದ ಅವರ ಪಾಲಿಗೆ ಸಿಹಿಯಾಗಿ ಉಳಿಯಲಿಲ್ಲ ಅವರ ಜನ್ಮದಿನದ ಪ್ರಯುಕ್ತ ಅವರ ಹಾಗೂ.

WhatsApp Group Join Now
Telegram Group Join Now

ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಇರುವ ಕಟ್ ಔಟ್ ಒಂದನ್ನು ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ನ ಸ್ಪರ್ಶದಿಂದ ಗದಗ್ನ ಸೂರಜ್ ಎನ್ನುವಲ್ಲಿ ಮೂರು ಅಪ್ಪಟ ಯಶ್ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು ನಿನ್ನೆ ಬೆಳಗ್ಗೆಯಿಂದ ಎಲ್ಲಾ ವಾಹಿನಿಗಳಲ್ಲಿಯೂ ಕೂಡ ಸುದ್ದಿಯಾಗಿತ್ತು, ಈ ದುರ್ಘಟನೆ ಜರುಗಿದ್ದು ಭಾನುವಾರ ಅಂದರೆ ಜನವರಿ 7ನೇ.

ತಾರೀಕು ರಾತ್ರಿ ಯಶ್ ಅವರ ಜನ್ಮದಿನದ ಪ್ರಯುಕ್ತ ಅದರ ಹಿಂದಿನ ತಡರಾತ್ರಿ ಅವರ ಹಾಗೂ ಪುನೀತ್ ರಾಜಕುಮಾರ್ ಅವರ ಇರುವಂತಹ ಕಟೌಟ್ ಅನ್ನು ರೆಡಿ ಮಾಡಿಸಿದ್ದ ಯಶ್ ಅಭಿಮಾನಿಗಳು ಅದನ್ನು ನಿಲ್ಲಿಸುವುದಕ್ಕೆ ಹೋಗುವಾಗ ವಿದ್ಯುತ್ ಕಂಬಕ್ಕೆ ತಗೂಲಿಯವರು ಸಾವನ್ನಪ್ಪಿದ್ದರು ಅದು 21 ವರ್ಷದ ಹನುಮಂತ ಹರಿಜನ 20 ವರ್ಷದ ಮುರಳಿ ಹಾಗೂ 19 ವರ್ಷದ.

ನವೀನ್ ಎಂಬುವವರು ಮೃತದುರ್ದೈವಿಗಳು ಇದಲ್ಲದೆ ಇನ್ನೂ ಇತರ ಮೂವರಿಗೂ ಕೂಡ ವಿದ್ಯುತ್ ಸ್ಪರ್ಶವಾಗಿದ್ದು ಸ್ಥಳೀಯ ಆಸ್ಪತ್ರೆಗೆ ಅವರನ್ನು ಸೇರಿಸಿ ಚಿಕಿತ್ಸೆಯನ್ನು ಕೊಡಲಾಗುತ್ತದೆ ಈ ಒಂದು ವಿಷಯ ಗೊತ್ತಾಗುತ್ತಿದ್ದ ಹಾಗೆ ನಟ ಎಸ್ ಸಂಜೆ ಗದಗ್ ಬರುವಂತೆ ಭರವಸೆಯನ್ನ ಕೊಟ್ಟಿದ್ದರು ತನ್ನ ಬರ್ತಡೇ ಯ ದಿನ ವೈಯಕ್ತಿಕ ಕಾರಣಗಳಿಂದಾಗಿ ಸಿಗುವುದಕ್ಕೆ ಸಾಧ್ಯವೇ ಇಲ್ಲ.

ಎಂದು ಕೆಲವು ದಿನಗಳ ಹಿಂದೆ ಅಷ್ಟೇ ತನ್ನ ಸೋಶಿಯಲ್ ಮೀಡಿಯಾದ ಖಾತೆಯೊಂದರಲ್ಲಿ ಹಂಚಿಕೊಂಡಿದ್ದರು ಆದರೆ ನೆನ್ನೆ ಈ ಒಂದು ದುರ್ಘಟನೆಯ ಬಗ್ಗೆ ಗೊತ್ತಾದ ತಕ್ಷಣ ಸುರಣ ಎಂಬ ಊರಿಗೆ ಬಂದ ಮೃತರ ಕುಟುಂಬದವರ ಮನೆಗೆ ನೇರ ಬೇಟಿ ಕೊಟ್ಟು ಅವರಿಗೆ ಆಪ್ತವಾಗಿ ಸಾಂತ್ವನವನ್ನು ಮಾಡಿ ಧೈರ್ಯವನ್ನು ತುಂಬಿದರು ಅವರನ್ನು ಹಿಂತಿರುಗಿ ತರುವುದಕ್ಕೆ.

ನನಗೆ ಸಾಧ್ಯವಿಲ್ಲ ನನ್ನನ್ನೇ ನಿಮ್ಮ ಮಗ ಎಂದು ಅಂದುಕೊಳ್ಳಿ ಎಂದು ಅವರು ಮೃತರ ಪೋಷಕರಿಗೆ ಹೇಳಿದರು ಯಾರು ಎಷ್ಟೇ ದೊಡ್ಡ ಸೆಲೆಬ್ರಿಟಿ ಆದರೂ ಕೂಡ ಅಭಿಮಾನಿಗಳೇ ಇಂತಹ ಉಚ್ಚಾಟ ಮನಸ್ಸಿಗೆ ಖಂಡಿತ ನೋವನ್ನು ಉಂಟುಮಾಡುತ್ತದೆ ನೆನ್ನೆ ಯಶ್ ಅಷ್ಟೆಲ್ಲ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಕೂಡ ಸಮಯವನ್ನು ತೆಗೆದುಕೊಂಡು ಮೃತರ ಕುಟುಂಬದವರ ಮನೆಗೆ.

ಬಂದಿದ್ದು ಅವರ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಇನ್ನು ಈ ಒಂದು ಅಭಿಮಾನಿಗಳು ಈ ವಿಷಯದಲ್ಲಿ ಬಹುತೇಕ ಬದಲಾಗಿಲ್ಲ ಕಾಲ ಎಷ್ಟೇ ಅಪ್ಡೇಟ್ ಆಗಿದ್ದರೂ ಕೂಡ ಇಂದಿಗೂ ನಟರ ಹೆಸರನ್ನು ಜಪ ಮಾಡುವಂತಹ ಕ್ರೆಸ್ ಮಾತ್ರ ಕಡಿಮೆಯಾಗಿಲ್ಲ ನಟರ ಸಿನಿಮಾಗಳು ಬಿಡುಗಡೆಯಾದರೆ ಕೋಳಿ ಕುರಿ ಕುಯ್ದು ಅವರ ಕಟೌಟ್ ಗಳಿಗೆ ಅಭಿಷೇಕವನ್ನು.

ಮಾಡುವುದು ಅವರ ಕಟೌಟ್ ಗೆ ಡ್ರಮ್ ಕಟ್ಟಲೆ ಹಾಲನ್ನು ಸುರಿದು ವ್ಯರ್ಥ ಮಾಡುವುದು ಮೈಗೆಲ್ಲಾ ಅವರ ಹೆಸರು ಹಾಗೂ ಚಿತ್ರಗಳ ಅಚ್ಚೆಯನ್ನ ಹಾಕಿಸಿಕೊಳ್ಳುವುದು ಥೇಟರ್ ಒಳಗಡೆ ತೆಂಗಿನಕಾಯಿ ಕುಂಬಳಕಾಯಿ ಒಡೆದು ಆರತಿ ಎತ್ತುವುದು ಇಂತಹ ಅತಿರೇಕದ ವರ್ತನೆಗೆ ಕಡಿಮೆ ಏನು ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god