ಹೀಗೆ ಮಾಡಿದರೆ ನಿಮಿಷಗಳಲ್ಲಿ ತಲೆಯಲ್ಲಿರುವ ಹೇನುಗಳು ಮಾಯವಾಗುತ್ತವೆ.. ಇದು ಮಹಿಳೆಯರಿಂದ ಪುರುಷರಿಗೆ ಮಕ್ಕಳಿಗೆ ಎಲ್ಲರಿಗೂ ಸಹ ತಲೆಯಲ್ಲಿರುವ ಹೇನಿನ ಸಮಸ್ಯೆ ಅಂತೂ ಕಾಡುತ್ತಿರುತ್ತದೆ ಮುಖ್ಯವಾಗಿ ಇದು ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಹರಡುತ್ತಾ ಬರುತ್ತೆ ಆದರೆ ನಾವು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನ ಬಳಸಿ ಈ ಹೇನಿನ ಸಮಸ್ಯೆಯನ್ನ ಸಂಪೂರ್ಣವಾಗಿ ಹೋಗಲಾಡಿಸಬಹುದು ಮತ್ತೆ ಆ ಮದ್ದು ಏನು ಎಂದು ನಾವು ಪೂರ್ತಿಯಾಗಿ ಹೇಳುತ್ತೇವೆ. ಒಂದು ಚಿಕ್ಕ ಬೌಲನ್ನ ತೆಗೆದುಕೊಂಡೆ ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಕರ್ಪೂರ ನಾನಿಲ್ಲಿ ಒಂದು ನಾಲ್ಕು ಕರ್ಪೂರವನ್ನು ತೆಗೆದುಕೊಂಡಿದ್ದೇನೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕರ್ಪೂರ ಇದ್ದೇ ಇರುತ್ತದೆ ಇದನ್ನು ಚೆನ್ನಾಗಿ ನುಣ್ಣಗಾಗುವ ರೀತಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನೀವು ಕೈಯಿಂದಲೇ ಇದನ್ನು ಪುಡಿ ಮಾಡಬೇಕು. ಕರ್ಪೂರದ ವಾಸನೆಯಂತೂ ತುಂಬಾನೇ ಚೆನ್ನಾಗಿರುತ್ತೆ ಆದರೆ ಹೇನುಗಳಿಗೆ ಕರ್ಪೂರದ ವಾಸನೆ ಅಂದರೆ ಆಗುವುದಿಲ್ಲ ಹಾಗಾಗಿ ಈ ಕರ್ಪೂರದ ವಾಸನೆ ಹೇನುಗಳಿಗೆ ಹಾಗುವುದಿಲ್ಲ ಹಾಗಾಗಿ ಇದರ ವಾಸನೆಯನ್ನು ಹೇನುಗಳು ತಗೆದುಕೊಂಡಾಗ ಉಸಿರುಗಟ್ಟಿ ಅಲ್ಲೇ ಸತ್ತು ಹೋಗುತ್ತದೆ.
ಏಕೆಂದರೆ ಇದರಲ್ಲೇ ಆಂಟಿ ಇನ್ಫ್ಲಾಮೇಟರಿ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಫಂಗಲ್ ಲಕ್ಷಣಗಳು ಇರುವುದರಿಂದ ಇದು ಹೇನುಗಳನ್ನು ಕಡಿಮೆ ಮಾಡಲು ತುಂಬಾನೇ ಚೆನ್ನಾಗಿ ಸಹಾಯಮಾಡುತ್ತದೆ. ನಂತರ ಇದಕ್ಕೆ ನಿಂಬೆರಸವನ್ನ ಹಾಕಿಕೊಳ್ಳೋಣ ನಿಂಬೆ ರಸವನ್ನು ನೀವು ಅರ್ಧ ಟೀಸ್ಪೂನ್ನಷ್ಟು ನಿಂಬೆ ರಸ ಹಾಕಿಕೊಂಡರೇ ಸಾಕಾಗುತ್ತದೆ. ನಿಂಬೆ ರಸವು ಕೂಡ ಅಷ್ಟೇ ಹೇನುಗಳನ ಕಡಿಮೆ ಮಾಡಲು ತುಂಬಾನೇ ಸಹಾಯಮಾಡುತ್ತದೆ. ಮುಖ್ಯವಾಗಿ ಹೇನಿನ ಮೊಟ್ಟೆಗಳನ್ನು ಕಡಿಮೆ ಮಾಡಲಿಕ್ಕೆ ನಿಂಬೆರಸ ತುಂಬಾ ಚೆನ್ನಾಗಿ ಸಹಾಯಮಾಡುತ್ತದೆ. ಇನ್ನು ಕೊನೆಯದಾಗಿ ಕೊಬ್ಬರಿ ಎಣ್ಣೆ ನೀವು ಮನೆಯಲ್ಲಿ ದಿನಾಲು ಹಚ್ಚುವಂತಹ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಎರಡು ಸ್ಪೂನ್ನಷ್ಟು ಹಾಕಿಕೊಳ್ಳಬೇಕು. ಈಗ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಕರ್ಪೂರ ಚೆನ್ನಾಗಿ ಕರಗಬೇಕು ಇನ್ನು ಕೊಬ್ಬರಿ ಎಣ್ಣೆ ಕೂಡ ಅಷ್ಟೇ ಏನುಗಳಿಗೆ ಉಸಿರಾಡದ ರೀತಿ ಮಾಡಿಬಿಟ್ಟು ನಮ್ಮ ಕೂದಲುಗಳಿಗೆ ಒಂದು ಒಳ್ಳೆಯ ಲೇಯರ್ ತರ ಕೆಲಸ ಮಾಡುತ್ತದೆ. ಇವೆಲ್ಲವೂ ಕೂಡ ಚೆನ್ನಾಗಿ ಮಿಶ್ರಣವಾಗಬೇಕು ಅಂದರೆ ಈ ಕರ್ಪೂರ ಈ ಎಣ್ಣೆಯಲ್ಲಿ ಚೆನ್ನಾಗಿ ಮಿಶ್ರಣವಾಗಿ ಕರಗಬೇಕು.
ಕರಗಿದ ಮೇಲೆ ಒಂದು ಐದು ನಿಮಿಷ ಪಕ್ಕಕ್ಕೆ ತೆಗೆದು ಇಡಿ, ಈಗ ಇದು 5 ನಿಮಿಷ ಆಗಿದೆ ನೋಡಿ ಇದರಲ್ಲಿ ತುಂಬಾ ಚೆನ್ನಾಗಿ ಮಿಶ್ರಣವಾಗಿದೆ ನಾನು ಈಗ ಇದನ್ನು ಹೇಗೆ ಎಂಬುದನ್ನು ತಿಳಿಸುತ್ತೇನೆ. ನೀವು ಇದನ್ನು ಯಾವ ಸಮಯದಲ್ಲಿ ಹಚ್ಚಿಕೊಳ್ಳಬೇಕು ಎಂದರೆ ಇನ್ನೇನು ನೀವು ಸ್ಥಾನಕ್ಕೆ ಹೊರಟಿರುವ ಅರ್ಧ ಗಂಟೆಯ ಮುಂಚೆ ಹಚ್ಚಿಕೊಳ್ಳಬೇಕು. ಮೊದಲು ನೀವು ನಿಮ್ಮ ಕೂದಲ ಬುಡದಿಂದ ಹಚ್ಚಿಕೊಳ್ಳುತ್ತಾ ಬರಬೇಕು. ನೀವು ಈ ಎಣ್ಣೆಯನ್ನು ಒಂದು ಅತ್ತೆಯ ಸಹಾಯದಿಂದ ಕೂಡ ಹಚ್ಚಿಕೊಳ್ಳಬಹುದು ಅಥವಾ ನಾನು ಹಚ್ಚಿಕೊಳ್ಳುತ್ತಿರುವ ರೀತಿಯಲ್ಲಿ ಹಚ್ಚಿಕೊಳ್ಳಬಹುದು. ಇದನ್ನು ಮಕ್ಕಳು ಹುಡುಗಿಯರು ಹಾಗೂ ಹುಡುಗರು ಸಹ ಹಚ್ಚಿಕೊಳ್ಳಬಹುದು ಇದರಿಂದ ಒಳ್ಳೆಯ ರೀತಿಯ ಫಲಿತಾಂಶ ಕೊಡುತ್ತದೆ. ಇದನ್ನು ಹಚ್ಚಿಕೊಂಡ ನಂತರ 20 ರಿಂದ 30 ನಿಮಿಷಗಳ ಕಾಲ ಇಟ್ಟುಕೊಳ್ಳಬಾರದು ಆ ಸಮಯಕ್ಕೂ ಮುಂಚೆನೇ ತೊಳೆದು ಬಿಡಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.