ತಿಂಗಳಿಗೆ ಆರು ಲಕ್ಷ ಜೀವನಾಂಶ ಕೇಳಿದ ಪತ್ನಿ..ಗಂಡ ಬೇಡ ಅವನ ದುಡ್ಡು ಮಾತ್ರ ಬೇಕಾ‌…ವಿಡಿಯೋ ವೈರಲ್..

WhatsApp Group Join Now
Telegram Group Join Now

600000 ಜೀವನ ಅಂಶ ಕೇಳಿದ ಮಹಿಳೆಗೆ ಜಡ್ಜ್ ಹಿಗ್ಗ ಮುಗ್ಗ ತರಾಟೆ… ಎರಡು ದಿನದ ಹಿಂದೆ ಅಂದರೆ ಆಗಸ್ಟ್ 20ನೇ ತಾರೀಕು ಕರ್ನಾಟಕದ ಹೈಕೋರ್ಟ್ ನಲ್ಲಿ ಒಂದು ಪ್ರಕರಣ ಸಂಬಂಧಪಟ್ಟ ಹಾಗೆ ವಾದ ಪ್ರತಿವಾದಗಳು ನಡೆಯುತ್ತದೆ ವಾದ ಪ್ರತಿವಾದ ಅದಾದ ಬಳಿಕ ನ್ಯಾಯಾಧೀಶರ ಮಾತು ಇದೆಲ್ಲವೂ ಕೂಡ ಇದೀಗ ನಮ್ಮ ದೇಶ ಮಾತ್ರವಲ್ಲ ಇಡೀ ದೇಶದ ಗಮನವನ್ನು ಸೆಳೆಯುತ್ತಾ ಇದೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತದೆ ವೈರಲ್ ಕೂಡ ಆಗುತ್ತದೆ ನಮಗೆ ಆರಂಭದಲ್ಲಿ ಇದನ್ನು ನೋಡಿದಾಗ ಒಂದು ರೀತಿ ತಮಾಷೆ ರೀತಿ ಕಾಡುತ್ತದೆ ಆದರೆ ತೀರ ಗಂಭೀರವಾದಂತಹ ವಿಚಾರ ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ನಮ್ಮಲ್ಲಿ ಸಾಕಷ್ಟು ಕಾನೂನು ಇದೆ.

ವಿಶೇಷವಾಗಿ ಮಹಿಳೆಯರಿಗೆ ಅಥವಾ ಶೋಷಿಕರಿಗೆ ಅಥವಾ ಬೇರೆ ಬೇರೆ ಒಂದಷ್ಟು ವರ್ಗದವರಿಗೆ ಅನ್ಯಾಯ ಆಗಬಾರದು ಅವರ ಮೇಲೆ ದೌರ್ಜನ್ಯ ನಡೆಯಬಾರದು ಅವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗಲಿ ಎನ್ನುವಂತಹ ಕಾರಣಕ್ಕಾಗಿ ಒಂದಷ್ಟು ವಿಶೇಷವಾದಂತಹ ಕಾನೂನನ್ನು ರೂಪಿಸಲಾಗಿದೆ.

ಮಹಿಳೆಯರ ಬಗ್ಗೆನೇ ಮಾತನಾಡುವುದಾದರೆ ಮಹಿಳೆಯರ ಮೇಲೆ ದೌರ್ಜನ್ಯ ಅವರಿಗಾಗುತ್ತಿರುವಂತಹ ಅನ್ಯಾಯ ನಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ ಹೀಗಾಗಿ ಒಂದಷ್ಟು ವಿಶೇಷವಾಗಿ ಕಾನೂನಿನಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ ಆ ಕಾನೂನು ನೂರಕ್ಕೆ ನೂರರಷ್ಟು ಬೇಕೇ ಬೇಕು ಇಲ್ಲವಾದರೆ ಮಹಿಳೆಯರ ಮೇಲಿನ ದೌರ್ಜನ್ಯ ಅನ್ಯಾಯ ಎಲ್ಲವೂ ಕೂಡ ಜಾಸ್ತಿಯಾಗುತ್ತಾ ಹೋಗಿಬಿಡುತ್ತದೆ.

ಆದರೆ ಸಮಸ್ಯೆ ಏನಾಗಿದೆ ಎಂದರೆ ಒಂದಷ್ಟು ಮಹಿಳೆಯರು ಅಂತಹ ವಿಶೇಷವಾದ ಕಾನೂನಿನ ಅವಕಾಶವನ್ನೇ ತಪ್ಪಾಗಿ ಉಪಯೋಗಿಸಿಕೊಳ್ಳುವುದಕ್ಕೆ ಶುರು ಮಾಡಿಕೊಂಡಿದ್ದಾರೆ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ ಇತ್ತೀಚಿಗಂತೂ ಇದೆಲ್ಲವೂ ಕೂಡ ಜಾಸ್ತಿ ಆಗುತ್ತಾ ಇದೆ.

ಯಾಕೆ ಇಷ್ಟು ಸುಧೀರ್ಘವಾದಂತ ಪೀಠಿಕೆಯನ್ನು ಹಾಕಿದೆ ಎಂದರೆ ಮೊನ್ನೆ ಕರ್ನಾಟಕದ ಹೈಕೋರ್ಟ್ ನಲ್ಲಿ ನಡೆದಂತಹ ಆ ಒಂದು ವಾದ ಪ್ರತಿವಾದ ನ್ಯಾಯಾಧೀಶರ ಮಾತು ಇದೆಲ್ಲವನ್ನು ಕೂಡ ಗಮನಿಸಿದಾಗ ನಮಗೆ ಹಾಗೆ ಅನಿಸುತ್ತದೆ ಅಲ್ಲಿ ಏನಾಗಿದೆ ಎಂದರೆ ಒಬ್ಬ ಮಹಿಳೆ ಜೀವನ ಅಂಶವನ್ನು ಕೇಳಿ ಕೋರ್ಟ್ ಮೆಟ್ಟಿಲನ್ನು ಹತ್ತಿದರು.

ಆದರೆ ಆ ಜೀವನ ಅಂಶವನ್ನು ಕೇಳಿದರೆ ನೀವೆಲ್ಲರೂ ಕೂಡ ಶಾಕ್ ಆಗಿ ಬಿಡುತ್ತೀರಿ ಕೇವಲ ಆ ಮಹಿಳೆಗೆ ಅಂದರೆ ಕೇವಲ ಮಹಿಳೆಯ ಮೇಕಪ್ ಡ್ರೆಸ್ ಊಟ ಮತ್ತು ಯಾವುದೋ ಚಿಕಿತ್ಸೆಯಂತೆ ಅದೆಲ್ಲಾದಕ್ಕೂ ಕೂಡ ಸೇರಿ ಗಂಡನಿಂದ ಬರೋಬ್ಬರಿ 6,16,300 ತಿಂಗಳಿಗೆ ನನಗೆ ಜೀವನಾಂಶ ಬೇಕು ಎಂದು ಕೋರ್ಟ್ ಮೆಟ್ಟಿಲನ್ನು ಹತ್ತಿದ್ದಾರೆ.

ತಿಂಗಳಿಗೆ 6 ಲಕ್ಷ ಎಂದರೆ ವರ್ಷಕ್ಕೆ ಎಷ್ಟಾಗುತ್ತದೆ ಎಂದು ನೀವೇ ಲೆಕ್ಕ ಹಾಕಿ ಇದನ್ನು ಕೇಳಿ ಸ್ವತಹ ಜಡ್ಜೆ ಶಾಕ್ ಆಗುತ್ತದೆ, ಶಾಕ್ ಆಗುವುದು ಮಾತ್ರವಲ್ಲ ಆ ಮಹಿಳೆಯನ್ನ ಇಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೇರವಾಗಿ ಆ ಮಹಿಳೆಯನ್ನಲ್ಲ ಮಹಿಳೆಯ ಪರವಾಗಿ ಯಾವ ವಕೀಲರು ಕೋರ್ಟಿಗೆ ಬಂದಿದ್ದರು ಆಗಿದ್ದರು ಅವರನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಾರೆ.

ಏನು ನಿಮ್ಮ ಕ್ಲೈಂಟ್ ಈ ರೀತಿಯಾಗಿ ಬಾಯಿಗೆ ಬಂದ ಹಾಗೆ ಜೀವನಾಂಶವನ್ನು ಕೇಳುವುದು ಹಾಗೇನಾದರೂ 6,7 ಲಕ್ಷ ಬೇಕು ಎಂದರೆ ಗಂಡನ ಮೇಲೆ ಯಾಕೆ ಅವಲಂಬಿತವಾಗಬೇಕು ಅಥವಾ ಗಂಡನಿಂದ ಯಾಕೆ ಕೇಳಬೇಕು ಅವರೇ ಸ್ವತಹ ದುಡಿಯಲಿ ಎನ್ನುವ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god