ಅಪ್ಪಿ ತಪ್ಪಿಯು ತೆಂಗಿನಕಾಯಿ ಚಿಪ್ಪನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ…ನಾನು ಇವತ್ತು ಈ ವಿಡಿಯೋದಲ್ಲಿ ಸೂಪರ್ ಆಗಿರುವಂತಹ ಅಡುಗೆ ಮನೆಯ ಟಿಪ್ಸನ್ನು ತಿಳಿಸುತ್ತಿದ್ದೇನೆ ಕಾಯಿಚಪ್ಪನ್ನು ಬಿಸಾಕುವ ಮೊದಲು ಈ ಸೂಪರ್ ಆದ ಟಿಪ್ಸ್ ಅನ್ನು ತಿಳಿದುಕೊಳ್ಳಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕಾಯಿ ಇದ್ದೇ ಇರುತ್ತದೆ.
ಅಡಿಗೆ ಮತ್ತು ಪಲ್ಯಗಳಿಗೆ ಸಾಮಾನ್ಯವಾಗಿ ಕಾಯಿ ಇರಬೇಕು ನಮಗೆ ಕಾಯಿತುರಿದ ಮೇಲೆ ಚಿಪ್ಪನ್ನು ನಾವು ಬೇಡವೆಂದು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ ಆದರೆ ಕಾಯಿ ಚಿಪ್ಪಿನಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ ನಿಮಗೆ ಇದನ್ನು ತಿಳಿದುಕೊಂಡರೆ ನೀವು ಯಾವುದೇ ಕಾರಣಕ್ಕೂ ಕೂಡ ಕಾಯಿಚಿಪ್ಪನ್ನು ಎಸೆಯುವುದಿಲ್ಲ.
ಹಾಗಾದರೆ ಆ ಉಪಯೋಗ ಯಾವುದು ಗೊತ್ತಾ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ನೋಡಿಕೊಂಡು ಬರೋಣ. ಮೊದಲನೆಯದಾಗಿ ನಾವು ಕಾಯಿ ಚಿಪ್ಪನ್ನ ಮೇಣದಬತ್ತಿಯನ್ನು ಹಚ್ಚಿ ಇಡುವುದಕ್ಕೆ ಬಳಸಿಕೊಳ್ಳಬಹುದು ಇಲ್ಲವೆಂದರೆ ಮೇಣದಬತ್ತಿಯನ್ನು ನಾವು ಬಟ್ಟಲಿನಲ್ಲಿ ಹಾಕಿ ಇಟ್ಟಿರುತ್ತೇವೆ ಇಲ್ಲವೆಂದರೆ ಹಾಗೆ ಕೆಳಗಡೆ ಹಚ್ಚಿ ಇಟ್ಟಿರುತ್ತೇವೆ.
ಹಾಗೆ ಅಚ್ಚಿಟ್ಟಾಗ ಏನಾಗುತ್ತದೆ ಎಂದರೆ ಮೇಣದಬತ್ತಿ ಕರಗಿ ಕರಗಿ ಎಲ್ಲಾ ಅಲ್ಲೇ ಸೋರಿ ಹೋಗುತ್ತದೆ ಇಲ್ಲವೆಂದರೆ ನೆಲದ ಮೇಲೆ ಸೋರುತ್ತದೆ ಹೀಗೆ ಸೋರಿದಾಗ ನೆಲವೆಲ್ಲ ಗಲೀಜಾಗುತ್ತದೆ ಇಲ್ಲವೆಂದರೆ ಬಟ್ಟಲಿನಲ್ಲಿ ಸೋರಿದಾಗ ಬಟ್ಟಲನ್ನು ಶುಚಿ ಮಾಡುವುದು ತುಂಬಾನೇ ಕಷ್ಟ ಅಂತಹ ಸಮಯದಲ್ಲಿ ಬೇಡವೆಂದು ಬಿಸಾಕುವ ಕಾಯಿ ಚಿಪ್ಪಿನಲ್ಲಿ ನಾವು.
ಮೇಣದಬತ್ತಿಯನ್ನು ಹಚ್ಚಿ ಇಡುವುದರಿಂದ ಮೇಣದಬತ್ತಿ ಕರಗಿದರೂ ಕೂಡ ಅದರಲ್ಲೇ ಕರಗುವುದರಿಂದ ಯಾವುದೇ ರೀತಿಯ ಗಲೀಜು ಆಗುವುದಿಲ್ಲ ಕಾಯಿ ಚಿಪ್ಪನ್ನು ನಾವು ಈ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು. ಎಣ್ಣೆ ಪ್ಯಾಕೆಟ್ ಅನ್ನು ನಾವು ಓಪನ್ ಮಾಡಿ ಬಾಟಲಿಗೆ ಹಾಕುತ್ತಿರುವಾಗ ಬಾಟಲಿನ ಬಾಯಿ ತುಂಬಾ ಚಿಕ್ಕದಿದ್ದಾಗ ಎಲ್ಲಾ ಕಡೆಯಲ್ಲೂ.
ಸೋರಿ ಹೋಗುತ್ತದೆ ಆಗ ಅದು ವ್ಯರ್ಥವಾಗುವ ಬದಲು ಈ ಚಿಪ್ಪಿರುತ್ತದೆ ಅಲ್ಲವಾ ಅದರಲ್ಲಿ ಹಿಂದೆ ಒಂದೇ ಒಂದು ತೂತನ್ನು ಮಾಡಿಕೊಂಡು ಈ ರೀತಿಯಾಗಿ ಇಟ್ಟು ಎಣ್ಣೆಯನ್ನು ಹಾಕುವುದರಿಂದ ಎಣ್ಣೆ ಯಾವುದೇ ಕಾರಣಕ್ಕೂ ಕೆಳಗೆ ಚೆಲ್ಲುವುದಿಲ್ಲ ನೀಟಾಗಿ ಬಾಟಲಿನ ಒಳಗಡೆ ಎಣ್ಣೆಯನ್ನು ಹಾಕಿಕೊಳ್ಳಬಹುದು ನೋಡಿ ಕಷ್ಟವನ್ನು ಪಡುವುದೇ ಬೇಡ.
ಎಷ್ಟು ನೀಟಾಗಿ ಬಾಟಲಿನ ಒಳಗೆ ಹಾಕಬಹುದು ಎಂದು. ಕಾಯಿಚಿಪ್ಪನ್ನು ಚೆನ್ನಾಗಿ ಸುಟ್ಟುಕೊಂಡು ಅದನ್ನು ಕಡಿಮೆ ಉರಿಯಲ್ಲಿ ಇಟ್ಟು ಕಪ್ಪಾಗಿ ಸುಟ್ಟಿಕೊಳ್ಳಿ ನೋಡಿ ನಾನು ತೋರಿಸುತ್ತಿದ್ದೆನೆ. ಈ ರೀತಿಯಾಗಿ ಚಿಪ್ಪು ಕಪ್ಪಗಾಗಬೇಕು ಈ ರೀತಿ ಕಪ್ಪಾದಂತಹ ಚಿಪ್ಪನ್ನ ಒಂದು ಪೀಸ್ ತೆಗೆದುಕೊಂಡು ನಾವು ಒಂದು ಬಾಕ್ಸ್ ನಲ್ಲಿ ಹೂವನ್ನು ಹಾಕಿ ಇಟ್ಟಿರುತ್ತೀವಿ.
ಅಲ್ಲವಾ, ಆ ಬಾಕ್ಸ್ ನ ಒಳಗೆ ಈ ಒಂದು ಚಿಪ್ಪನ್ನ ಹಾಕಿ ಇಡುವುದರಿಂದ ಹೂವು ತುಂಬಾ ದಿನದವರೆಗೆ ಚೆನ್ನಾಗಿ ಇರುತ್ತದೆ ಬೇಗ ಬಾಡುವುದಿಲ್ಲ ಹೂವಿನಲ್ಲಿರುವಂತಹ ಹೆಚ್ಚಿನ ನೀರಿನ ಅಂಶವನ್ನು ಇದು ಹೀರಿಕೊಳ್ಳುವುದರಿಂದ ಹೂವು ತುಂಬ ದಿನಗಳವರೆಗೆ ಚೆನ್ನಾಗಿರುತ್ತದೆ ಹಾಗೆ ಫ್ರಿಜ್ಜನ್ನು ಎಷ್ಟೇ ಶುಚಿ ಮಾಡಿದರು ಕೆಲವೊಂದು ವಾಸನೆ ಇದ್ದೇ ಇರುತ್ತದೆ.
ಮಾಂಸ ಮೀನು ಇವೆಲ್ಲವನ್ನೂ ಇಟ್ಟಾಗ ಆವಾಸನೆ ಬಂದೇ ಬರುತ್ತದೆ ಅಲ್ಲವಾ ಎಷ್ಟೇ ಸೃಷ್ಟಿ ಮಾಡಿಕೊಂಡರು ಫ್ರಿಜ್ನಲ್ಲಿ ವಾಸನೆ ಇದ್ದೇ ಇರುತ್ತದೆ ಅಂತಹ ಸಮಯದಲ್ಲಿ ಈ ಚಿಪ್ಪನ್ನ ಸುಟ್ಟಿರುತ್ತೀವಿ ಅಲ್ಲವಾ ಅದರ ಒಂದು ಪೀಸ್ ಅನ್ನು ಫ್ರಿಜ್ ನಲ್ಲಿ ಇಡುವುದರಿಂದ ಈ ರೀತಿಯ ಕೆಟ್ಟ ವಾಸನೆಗಳನ್ನು ನಿಯಂತ್ರಿಸಬಹುದು.
ಈ ರೀತಿಯಾಗಿ ಫ್ರಿಡ್ಜ್ ನಲ್ಲಿ ಬರುವಂತಹ ವಾಸನೆಗಳನ್ನು ನಾವು ಕಡಿಮೆ ಮಾಡಬಹುದು ಹಾಗೆ ಹಲ್ಲು ನೋವಿಗೆ ಇದು ಹಳೆ ಕಾಲದ ಮನೆಮದ್ದು ಎಂದು ಹೇಳಬಹುದು ಹಿಂದಿನ ಕಾಲದಲ್ಲಿ ನಾವು ಇದೇ ರೀತಿ ಮಾಡುತ್ತಿದ್ದೆವು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ