ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ನಮ್ಮ ನಂಬಿಕೆಗೆ ಸ್ವಾಗತ ಸುಸ್ವಾಗತ ಸ್ನೇಹಿತರೆ ದತ್ತಾತ್ರೇಯರನ್ನ ಹಿಂದೂ ಸಂಸ್ಕೃತಿಯಲ್ಲಿ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರ ಅವತಾರವೆಂದೇ ಪರಿಗಣಿಸಲಾಗಿದೆ.

ದತ್ತ ಅಂದ್ರೆ ಕೊಟ್ಟಿದ್ದು ಎಂದಾಗುತ್ತೆ ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನುಸೂಯೆಯವರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾರೆ.

ಅತ್ರೆಯ ಪುತ್ರರಾದ್ದರಿಂದ ಆತ್ರೆಯನೆಂಬ ಹೆಸರಿದೆ ದತ್ತಾತ್ರೇಯರು ಸ್ವಾರೋಶಿಷ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು ದುರ್ವಾಸ ಮುನಿಗಳು ಇವರ ಸಹೋದರ ನಿಮಿ ಋಷಿ ಇವರ ಮಗ ಏಳನೇ ದಿವಸದಲ್ಲಿಯೇ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದ್ದಾರೆ ಎಂದು ಕಥೆ ಇದೆ.

ಪುರಾಣ ಇತಿಹಾಸಗಳನ್ನು ಕೆದಕಿದರೆ ಇವರ ಬಗ್ಗೆ ನಾನಾ ದಂತ ಕಥೆಗಳು ಸೃಷ್ಟಿಯಾಗಿರೋದು ಇವರ ಶಕ್ತಿ ಹಾಗೂ ಇರುವಿಕೆಯ ಗುರು ಆಗಿ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ.

ಬನ್ನಿ ಹಾಗಿದ್ರೆ ಗುರು ದತ್ತಾತ್ರೇಯರ ಕುರಿತಾದ ಮಾಹಿತಿಯನ್ನ ಇವತ್ತಿನ ಎಪಿಸೋಡ್ ನಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ ಗುರುಗಳ ಆಶೀರ್ವಾದ ಕೇಳುಗರ ಮೇಲಿರಲಿ ನಿಮ್ಮ ಬೆಂಬಲ ನಮ್ಮ ನಂಬಿಕೆಗೆ ಹೀಗೆ ಇರಲಿ ಸ್ನೇಹಿತರೆ ದತ್ತಾತ್ರೇಯನ ಜನನ ವೃತ್ತಾಂತವನ್ನು ಗಮನಿಸಿದರೆ.

ದತ್ತಾತ್ರೇಯ ಎಂದಾಗ ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರು ಎಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ ದತ್ತ ಮತ್ತು ಆತ್ರೆಯ ಎರಡು ಪದಗಳು ಸೇರಿದ ದತ್ತಾತ್ರೇಯ ಆಗಿದೆ ಅಂದರೆ ದತ್ತನು ಅತ್ರಿಯ ಮಗ ಅತ್ರೆಯ ದತ್ತ ಎಂದರೆ ಕೊಡುವುದು ಎಂದರ್ಥ.

ಇಲ್ಲಿ ದತ್ತನು ತನ್ನನ್ನು ತಾನೇ ಅತ್ರಿ ಅನುಸೂಯೆಯರಿಗೆ ಕೊಟ್ಟುಕೊಂಡು ದತ್ತನಾದ ಅತ್ರಿ ಒಬ್ಬ ಋಷಿ ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದನು.

ಈತನ ಹೆಂಡತಿ ಅನುಸೂಯೆ ಮಹಾ ಪತಿವ್ರತೆ ಪ್ರತಿಷ್ಠಾನ ಈಗಿನ ಪೈಠಣ ಮಹಾರಾಷ್ಟ್ರದಲ್ಲಿದೆ ಇಂಥದ್ದೇ ಇನ್ನೊಬ್ಬ ಪತಿವ್ರತೆ ಇದ್ದಳು ಅವಳ ಹೆಸರು ಸುಮತಿ ಅವಳ ಗಂಡ ಕೌಶಿಕ ಅವನು ತಪ್ಪು ದಾರಿ ಹಿಡಿದು ಸುಮತಿಯನ್ನು ಬಿಟ್ಟು ಹೊರಟು ಹೋಗುತ್ತಾನೆ .

ಹಾಗಿರಲು ಒಮ್ಮೆ ವಿಪರೀತ ಕಾಯಿಲೆ ಬಂದು ಮೈಯೆಲ್ಲ ಹುಣ್ಣಾಗುತ್ತದೆ ಮತ್ತೆ ಸುಮತಿಯ ಬಳಿಗೆ ಬರುತ್ತಾನೆ ಅವಳು ತುಂಬಾ ಒಳ್ಳೆಯವಳು ಕ್ಷಮಾಶೀಲೆ ಅವನ ಹಣ್ಣುಗಳನ್ನು ತೊಳೆದು ಔಷಧಿ ಹಾಕಿ ಒಳ್ಳೆಯ ಆಹಾರ ಕೊಡುತ್ತಾಳೆ.

ಅವನಿಗೆ ನಡೆಯಲು ಆಗದಿದ್ದಾಗ ಒಂದು ಸಂಜೆ ಸುಮತಿ ಅವನನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಡುತ್ತಾಳೆ ಇದೇ ಸಮಯದಲ್ಲಿ ಆ ಊರಿನಲ್ಲಿ ಘಟನೆಯೊಂದು ನಡೆದಿತ್ತು.

ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದರು ಆದರೆ ಆ ಅಪರಾಧಿ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ ಅಪರಾಧಿಯಂತೆ ಕಂಡ ಇನ್ನೊಬ್ಬನನ್ನ ರಾಜಭಟ್ಟರು ಕರೆತಂದು ರಾಜನ ಎದುರು ನಿಲ್ಲಿಸಿದಾಗ.

ಹಿಂದು ಮುಂದು ಆಲೋಚಿಸದೆ ರಾಜ ಅವನನ್ನ ಶೂಲಕ್ಕೆ ಏರಿಸುವಂತೆ ಅಪ್ಪಣೆ ಮಾಡುತ್ತಾನೆ ರಾಜಾಗಾಜ್ಞೆಯಂತೆ ಆತನನ್ನ ಶೂಲಕ್ಕೆ ಏರಿಸಲಾಗುತ್ತೆ ಆದರೆ ಆತ ನಿಜವಾದ ಅಪರಾಧಿಯೇ ಅಲ್ಲ.

ಆತ ಮಾಂಡವ್ಯನೆಂಬ ಋಷಿ ಆತನ ಯೋಗಬಲದಿಂದ ಶೂಲದ ಮೇಲೆ ಸಾಯದೆ ನೇತಾಡುತ್ತಿರುತ್ತಾನೆ ಅದೇ ಮಾರ್ಗವಾಗಿ ಪತಿಯನ್ನ ಹೊತ್ತು ಸುಮತಿ ಬರುವಾಗ ಕತ್ತಲೆಯಲ್ಲಿ ಕೌಶಿಕನ ಕಾಲು ಶೂಲಕ್ಕೆ ತಾಗುತ್ತದೆ.

ಇದರಿಂದ ಕುಪಿತಗೊಂಡ ಋಷಿ ಈ ಶೂಲಕ್ಕೆ ಕಾಲು ತಾಗಿಸಿಕೊಂಡವನು ಸೂರ್ಯ ಹುಟ್ಟಿದೊಡನೆ ಸಾಯಲಿ ಎಂದು ಶಪಿಸುತ್ತಾನೆ ಇದನ್ನು ಕೇಳಿಸಿಕೊಂಡ ಸುಮತಿ ಪತಿಯೇ ಸರ್ವಸ್ವ ಎಂದು ನಂಬಿದ ಆಕೆ.

ಎಲೆ ಸೂರ್ಯನೇ ನೀನು ಉದಯಿಸಬೇಡ ನನ್ನ ಮಾತು ಮೀರಿದರೆ ನೀನು ಸುಟ್ಟು ಬೀಳುವೆ ಎನ್ನುತ್ತಾಳೆ ಪತಿವ್ರತೆಯ ಶಕ್ತಿ ಮಹತ್ತಾದದ್ದು ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ.

ಜಗತ್ತೆಲ್ಲ ಕತ್ತಲಾಯಿತು ಗಿಡ ಮರ ಬಳ್ಳಿಗಳು ಬೆಳೆಯುವುದು ನಿಂತು ಹೋಯಿತು ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋದವು ಜನರ ಸಂಕಷ್ಟ ನೋಡಿ ದೇವತೆಗಳಿಗೆ ಮರುಕ ಹುಟ್ಟಿತು.

ಅವರು ಈ ಕಷ್ಟವನ್ನು ನಿವಾರಿಸುವಂತೆ ಬ್ರಹ್ಮನಲ್ಲಿ ಮೊರೆ ಹೋದರು ಅದಕ್ಕೆ ಬ್ರಹ್ಮ ಪತಿವ್ರತೆಯು ಶಾಪವಿದ್ದಿದ್ದರಿಂದ ಆಕೆಯ ಬಳಿಗೆ ಹೋಗೋಣ ಎನ್ನುತ್ತಾನೆ.

ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನ ನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮದ ಬಳಿ ಬರುತ್ತಾರೆ ಅನುಸೂಯ ದೇವಿಯನ್ನು ಕಂಡು ವಂದಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god