ನಮಸ್ಕಾರ ಸ್ನೇಹಿತರೆ ದಿನಕ್ಕೆ 24 ಗಂಟೆ ಸಾಕಾಗಲ್ಲ ಅನ್ನೋವರಿಗೆ ಅಮೆರಿಕದ ವಿಜ್ಞಾನಿಗಳು ಒಳ್ಳೆಯ ಸುದ್ದಿ ಕೊಟ್ಟಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿಯವರು ಕೆಲಸ ಮಾಡೋಕೆ ಹೆಚ್ಚು ಸಮಯ ಬೇಕು ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ದೇಶ ಉದ್ದಾರ ಆಗ್ಬೇಕು ಅಂದ್ರೆ ಅಂತ ಹೇಳಿದ್ರು.
ಈ ಮಾತನ್ನ ಚಂದ್ರ ಕೇಳಿಸಿಕೊಂಡ ಅಂತ ಕಾಣುತ್ತೆ, ಯಾಕಂದ್ರೆ ಚಂದ್ರ ಪ್ರತಿವರ್ಷ ಚೂರ್ ಚೂರೆ ಭೂಮಿಯಿಂದ ದೂರ ದೂರ ಹೋಗ್ತಾ ಇದ್ದಾನೆ. ಇದರ ಪರಿಣಾಮ ಭೂಮಿ ನಿಧಾನ ನಿಧಾನವಾಗಿ ಈಗ ದಿನಕ್ಕೆ 24 ಗಂಟೆ ಇರೋದು ಮುಂದೆ 25 ಗಂಟೆಗೆ ವಿಸ್ತರಿಸಿ ಆಗುತ್ತೆ ಅಂತ ವಿಜ್ಞಾನಿಗಳು ಹೇಳ್ತಾ ಇದ್ದಾರೆ.
ಹಾಗಿದ್ರೆ ಏನಿದು ವಿಜ್ಞಾನಿಗಳ ಲೆಕ್ಕಾಚಾರ ಚಂದ್ರ ಯಾಕೆ ದೂರಕ್ಕೆ ಹೋಗ್ತಾ ಇರೋದು ಆತ ದೂರಕ್ಕೆ ಹೋದ್ರೆ ಭೂಮಿ ಯಾಕೆ ನಿಧಾನ ಆಗ್ಬೇಕು ವಿಜ್ಞಾನಿಗಳು ಗಡಿಯಾರದಲ್ಲಿ ಒಂದು ಎರಡನೆಯದನ್ನು ಅಳಿಸಿ ಮಾಡಬೇಕು ಅಂತಿರೋದು.
ಯಾಕೆ ಎಲ್ಲವನ್ನ ತ್ವರಿತ ಆಗಿ ನೋಡ್ತಾ ಹೋಗೋಣ. ಈ ವಿಜ್ಞಾನದ ಆಶ್ಚರ್ಯ ವರದಿಯನ್ನ ಕಡೆ ತನಕ ತಪ್ಪದೆ ನೋಡಿ, ಅಮೆರಿಕದ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ವಿಜ್ಞಾನಿಗಳು ಮಾಡಿರೋ ಅಧ್ಯಯನದಿಂದ ಈ ರೋಚಕ ವಿಚಾರ ಹೊರಗೆ ಬಂದಿದೆ.
ಚಂದ್ರ ಪ್ರತಿವರ್ಷ ಭೂಮಿಯಿಂದ ಸುಮಾರು 3.8 cm ಗಳಷ್ಟು ದೂರ ಹೋಗ್ತಿದ್ದಾನೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಅಲ್ದೆ ಈ ಸ್ಟಡಿಯಲ್ಲಿ ಈ ಹಿಂದೆ ಚಂದ್ರ ಭೂಮಿಗೆ ಇನ್ನು ಹತ್ತಿರದಲ್ಲಿದ್ದ ಒಂದು ಕಾಲದಲ್ಲಿ ಭೂಮಿಯಲ್ಲಿ ದಿನಕ್ಕೆ ಕೇವಲ 18 ಗಂಟೆ ಮಾತ್ರ ಇತ್ತು ಭೂಮಿ ಹಾಗೂ ಚಂದ್ರನ ಮಧ್ಯೆ ಅಂತರ ಜಾಸ್ತಿ ಆಗ್ತಾ ಆಗ್ತಾ ಅವಧಿ ಜಾಸ್ತಿ ಆಗ್ತಾ ಇದೆ ಅಂತ ಹೇಳಿದ್ದಾರೆ.
ಇದಕ್ಕೆ ಕಾರಣ ಏನು ಅಂತ ಹುಡುಕ್ತಾ ಹೋದಾಗ ಚಂದ್ರನಿಂದ ಮೊದಲಾಗಿ ಭೂಮಿ ಮೇಲಿನ ಸಮುದ್ರಗಳಲ್ಲಿ ಉಬ್ಬರ ವೆಳಿತ ಅಥವಾ ಟೈಡ್ಸ್ ಸೃಷ್ಟಿಯಾಗುತ್ತವೆ. ಈ ಟೈಡ್ಸ್ ಮತ್ತೆ ಚಂದ್ರನ ಮೇಲೆನೇ ಇನ್ಫ್ಲುಯೆನ್ಸ್ ಮಾಡಿ ಅವನನ್ನ ದೂರಕ್ಕೆ ತಳ್ತಾ ಇವೆ.
ಚಂದ್ರ ಪ್ರತಿವರ್ಷ ಮೇಲಿನ ಆರ್ಬಿಟ್ ಗೆ ಶಿಫ್ಟ್ ಆಗ್ತಿದ್ದಾನೆ ಅಂತ ಗೊತ್ತಾಗಿದೆ. ಅಲ್ದೆ ಭೂಮಿ ಸ್ಲೋ ಆಗ್ತಿರೋದ್ರಿಂದ ಸಂಘಟಿತ ಸಾರ್ವತ್ರಿಕ ಸಮಯ ಅಥವಾ ಯು ಟಿಸಿ ಇಂದ ಒಂದು ಲೀಪ್ ಸೆಕೆಂಡ್ ಅಳಿಸಬೇಕು ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ.
ಈ ಲೀಪ್ ಸೆಕೆಂಡ್ ಅಂದ್ರೆ ಏನು ಅಂತ ನಾವು ಮುಂದೆ ಅರ್ಥ ಮಾಡ್ಕೊಳ್ತಾ ಹೋಗೋಣ. ಒಂದೇ ಸಮಯದಲ್ಲಿ ಭೂಮಿಗೆ ಹಲವು ಸಂಕಟಗಳು ಇತ್ತೀಚಿಗೆ ಭೂಮಿಯೊಳಗಿರೋ ಕೋರ್ ತಿರುಗು ದಿಕ್ಕು ಬದಲಾಗಿದೆ.
ಅದರಿಂದ ಭೂಮಿ ವೇಗ ಜಾಸ್ತಿ ಆಗಬಹುದು ಅಂತ ಒಂದು ವರದಿಯನ್ನ ಮಾಡಿದ್ವಿ ಇದು ಒಂದು ವಿಚಾರ ಆದ್ರೆ ಇನ್ನೊಂದು ಕಡೆ ಹವಮಾನ ಬದಲಾವಣೆಯಿಂದ ಧ್ರುವ ಪ್ರದೇಶಗಳ ನೀರ್ಗಲ್ಲುಗಳು ಕರಗಿ ಸಮುದ್ರ ಮಟ್ಟ ಜಾಸ್ತಿಯಾಗಿ ಅದರ ಭಾರಕ್ಕೆ ಭೂಮಿ ತಿರುಗುವ ವೇಗನು ಕಮ್ಮಿ ಆಗುತ್ತೆ ಆಗ್ತಿದೆ ಅಂತ ಗೊತ್ತಾಗಿದೆ.
ಈ ಎರಡು ಕೇಸುಗಳು ಉಲ್ಟಾ ಇರೋದ್ರಿಂದ ಸಮತೋಲನ ಆಗುತ್ತೆ ಅನ್ನುವಷ್ಟರಲ್ಲೇ ಈಗ ಚಂದ್ರನಿಂದ ಭೂಮಿ ನಿಧಾನ ಆಗ್ತಿರೋ ವಿಚಾರವು ಹೊರಬಂದಿದೆ. ಭೂಮಿ ವೇಗವಾಗಿ ಸುತ್ತಬೇಕು ಅಂದ್ರೆ ಚಂದ್ರ ಹತ್ತಿರಕ್ಕೆ ಇರಬೇಕು ಆದರೆ ಅದು ದೂರ ಆಗ್ತಿರೋದ್ರಿಂದ ಆತಂಕಕಾರಿ ಮಟ್ಟದಲ್ಲಿ ಭೂಮಿ ನಿಧಾನ ಆಗ್ತಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.
ಒಂದೊಂದು ದಿನ ಒಂದೊಂದು ವೇಗದಲ್ಲಿ ತಿರುಗುತ್ತಾ ಇದೆ ಭೂಮಿ ಆಶ್ಚರ್ಯ ಆಗಬಹುದು ಆದರೆ ಸತ್ಯ ಇದು ನಾವು ಮಿಲಿ ಸೆಕೆಂಡ್ ಲೆವೆಲ್ ಗೆ ಹೋಗಿ ನೋಡಿದ್ರೆ ವರ್ಷದ 365 ದಿನವೂ 365 ರೀತಿ ಭೂಮಿ ತಿರುಗುತ್ತಿರುವುದು ಗೊತ್ತಾಗುತ್ತೆ.
ದಿನಕ್ಕೆ 24 ಗಂಟೆ ಇದೆ 86400 ಸೆಕೆಂಡ್ಸ್ ಇದೆ ಅನ್ನೋದು ಒಂದು ಸರಾಸರಿ ಲೆಕ್ಕ ನಮ್ಮ ಗಡಿಯಾರಕ್ಕೆ ದಿನಕ್ಕೆ 24 ಗಂಟೆ ತೋರಿಸುತ್ತೆ. ಆದರೆ ಭೂಮಿ ಬ್ಯಾಟರಿಯಿಂದ ತಿರುಗೋ ಯಂತ್ರ ಅಲ್ವಲ್ಲ.
ಯಾವುದೇ ಮೋಟಾರ್ ಕೂಡ ಇಲ್ಲ ವಾಹನಗಳಲ್ಲಿ ಏರ್ ಕಮ್ಮಿ ಆದ್ರೆನೇ ವೇಗವಾಗಿ ಹೋಗೋಕೆ ಆಗಲ್ಲ ಅಂತದ್ರಲ್ಲಿ ಭೂಮಿ ಮೇಲೆ ಪ್ರತಿದಿನ ಭೂಕಂಪಗಳಾಗುತ್ತವೆ. ಜ್ವಾಲಾಮುಖಿ ಉಕ್ಕುತ್ತೆ ಟರ್ನೆಡ್ ಸೃಷ್ಟಿ ಆಗ್ತಾವೆ ದಿನ ಎಲ್ಲಾದರೂ ಮಳೆ ಆಗ್ತಿರುತ್ತೆ. ಹೆಚ್ಚಿನ ಮಾಹಿತಿಯನ್ನ ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣವಾಗಿ ವಿಕ್ಷೀಸಿ.