ಬಾದಾಮಿ ಪೋಷಕಾಂಶಗಳ ಅಗರ ಇದನ್ನು ಇಂಗ್ಲೀಷ್ ನಲ್ಲಿ ಸುಪರ್ ನಟ್ಸ್ ಅಂತಾನೆ ಕರೀತಾರೆ ಈ ಬಾದಾಮಿನ ದಿನಾಲು ನೀರಿನಲ್ಲಿ ನೆನಸಿ ತಿನ್ನೊದರಿಂದ ಎನೆಲ್ಲಾ ಉಪಯೋಗ ಆಗುತ್ತೆ ಅಂತ ಗೊತ್ತ...ಬಾದಾಮಿಯನ್ನ ಬೇರೆ ಬೇರೆ ರೂಪದಲ್ಲಿ ತಿನ್ನಬಹುದು ನಾವು ಆದರೆ ಬಾದಾಮಿನ ನೆನಸಿ ತಿನ್ನೊದರಿಂದ ಅದರಲ್ಲಿರುವ ಪೋಷಕಾಂಶಗಳು ಚೆನ್ನಾಗಿ ಬಿಡುಗಡೆ ಆಗುತ್ತದೆ.ಹಾಗೂ ಜೀರ್ಣ ಕ್ರಿಯೆಗೆ ಸಹ ತುಂಬಾ ಉಪಯೋಗ ಆಗುತ್ತದೆ.ಬಾದಾಮಿಯ ಅತಿಮುಖ್ಯ ಉಪಯೋಗ ಅಂದರೆ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ನಮ್ಮ ಮೆದುಳಿನ ಆರೋಗ್ಯಕ್ಕೂ ತಂಬಾ ಅಂದರೆ ತುಂಬಾ ಒಳ್ಳೇದು ಈ ಬಾದಾಮಿ ಇದರಲ್ಲಿರುವ ಬಿ ಕಾಂಪ್ಲೆಕ್ಸ್ ವಿಟಮಿನ್ ಇ ಮಕ್ಕಳಲ್ಲಿ ನೆನಪಿನ ಶಕ್ತಿ ಹಾಗೂ ಅವರ ಕಾನ್ಸನ್ ಟ್ರೇಶನ್ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.
ಇನ್ನೂ ಬಾದಾಮಿಯನ್ನ ಹೇಗೆ ತಿನ್ನಬಹುದು ಅಂತ ನೋಡೊದಾದರೆ ರಾತ್ರಿ ಮಲಗುವ ಮೊದಲು ಒಂದು ಬೌಲ್ ಅಲ್ಲಿ ಬಾದಾಮಿಯನ್ನ ನೆನಸಿ ಇಡಿ ರಾತ್ರಿಯಿಡಿ ನೆನಸಿ ನೀವು ಗಡಿಬಿಡಿ ಅಲ್ಲಿ ಇದ್ದರೆ ಬಿಸಿ ನೀರಲ್ಲಿ ನೆನಸಿ ಈ ರೀತಿ ನೆನಸಿರುವಂತಹ ಬಾದಾಮಿಯನ್ನ ಸಿಪ್ಪೆ ಸಹ ಬಿಡಸಿ ತಿನ್ನಬೇಕು ಆಯುರ್ವೇದದಲ್ಲಿ ಹೇಳತಾರೆ ಈ ಬಾದಾಮಿ ಸಿಪ್ಪೆ ಸರಿಯಾಗಿ ಜೀರ್ಣ ಆಗಲ್ಲ ಅಂತ ಜೊತೆಗೆ ನಮ್ಮ ದೇಹದಲ್ಲಿ ಪಿತ್ತದ ಅಂಶ ಜಾಸ್ತಿ ಆಗುತ್ತೆ ಆಗಾಗಿ ಈ ರೀತಿ ಸಿಪ್ಪೆ ತೆಗೆದು ಬಾದಾಮಿನ ತಿಂದರೆ ಉತ್ತಮ .
ಬಾದಾಮಿಯಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದೆ ಪ್ರೋಟೀನ್ ಜಾಸ್ತಿ ಇದೆ .ತೂಕ ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ.ಬಾದಾಮಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳ ವಾಗಿದೆ ಇದು ನಮ್ಮ ದೇಹದಲ್ಲಿ ಹಾನಿಗೆ ಒಳಗಾದಂತಹ ಜೀವಕೋಶ ಇದ್ದರೆ ಅದನ್ನು ಸರಿಮಾಡೋದಕ್ಕೆ ಚರ್ಮದ ಸುಕ್ಕು ನೆರಿಗೆನ ಕಡಿಮೆ ಮಾಡಿ ಚರ್ಮದ ಕಾಂತಿ ಹೆಚ್ಚಿಸೊದಕ್ಕೊನು ಸಹಾಯ ಮಾಡುತ್ತದೆ. ಇನ್ನೂ ಬಾದಾಮಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೇದು ,ಕ್ಯಾನ್ಸರ್ ಪೆಶೆಂಟ್ಸ್ ಜೊತೆಗೆ ಹಳೆ ಕಾಲದಲ್ಲಿ ನೆನಪಿನ ಶಕ್ತಿ ಹೊಗವರಿಗೆ ಇ್ಉ ತುಂಬಾನೆ ಒಳ್ಳೆಯದು ಬಾದಾಮಿ ಕೆಟ್ಟ ಕೊಲೆಸ್ಟರಾಲ್ ಅನ್ನ ಕಡಿಮೆ ಮಾಡುತ್ತೆ ಹಾಗೂ ಇದರಲ್ಲಿರುವ ಮೆಗ್ನೀಸಿಯಂ ಬ್ಲಾಡ್ ಪ್ರೆಶರ್ ಬಿಪಿನ ಕಡಿಮೆ ಮಾಡೊದಕ್ಕು ಸಹಾಯ ಮಾಡುತ್ತದೆ.ಹಾಗೆ ಈ ಆಲ್ ಮಾಂಡ್ ಇದಿಯಲ್ಲ ಇದು ಸಕ್ಕರೆ ಕಾಯಿಲೆ ಇರುವವರಿಗೆ ಊಟ ಮಾಡಿದ ಕೂಡಲೆ ಸಕ್ಕರೆ ಅಂಶ ಜಾಸ್ತಿ ಅಗುತ್ತದಲ್ಲ ರಕ್ತ ಸಂಚಾರನ ಅತೋಟಿಯಲ್ಲಿ ಇಡೊದಕ್ಕು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಒಳ್ಳೆಯ ಕೊಬ್ಬು ಪೈಬರ್ ಪ್ರೋಟೀನ್ ಇವೆಲ್ಲಾ ಹೇರಳವಾಗಿದೆ.ಎಷ್ಟು ತಿನ್ನಬೇಕು ಅಂದರೆ ಒಂದು ದಿನಕ್ಕೆ ಐದರಿಂದ ಇಪ್ಪತ್ತು ಬಾದಾಮಿ ವರೆಗೆ ಒಬ್ಬ ಮನುಷ್ಯ ತಿನ್ನಬಹುದು.ಬೆಳಿಗ್ಗೆ ತಿಂದರೆ ಒಳ್ಳೆಯದು ಅಲ್ಲದೇ ಬೇರೆ ಸಮಯದಲ್ಲಿ ಮಕ್ಕಳ ಲಂಚ್ ಬಾಕ್ಸ್ ಅಲ್ಲಿ ಸಹ ನೀವು ಇದನ್ನು ಕೊಡಬಹುದು. ನೋಡಿದರಲ್ಲ ಬಾದಾಮಿಯಲ್ಲಿ ಎಷ್ಟೆಲ್ಲಾ ಉಪಯೋಗಗಳು ಇದೆ ಅಂತ .