ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಕೆಲವೊಂದು ಟಿಪ್ಸ್ ಗಳು… ಪರಸ್ತ್ರಿ ಸಂಗ ಕೂಡದು. ದುಷ್ಕರ್ಮಗಳಲ್ಲಿ ತೊಡಗಬಾರದು, ಇದು ಆಯುರ್ವೇದದ ಸಂದೇಶ ಪರಸ್ತ್ರೀ ಸಂಗ ಕೂಡದು ಎಂದರೆ ಸ್ವಸ್ತಿಯಲ್ಲಿ ಮನ ಬಂದಂತೆ ರಮಿಸು ಎಂದರ್ಥವಲ್ಲ ಇದರ ವಿಚಾರದಲ್ಲಿ ಬ್ರಹ್ಮಚಾರ್ಯದಲ್ಲಿ ಹಿಂದೆಯೇ ಬರೆದಿರುತ್ತದೆ ಇದನ್ನೇ ಯೋಗದಲ್ಲಿ ತಪಸ್ಸು.

WhatsApp Group Join Now
Telegram Group Join Now

ಎಲ್ಲಿದ್ದಾರೆ ತಪಸ್ಸು ಎಂದರೆ ಕಣ್ಮುಚ್ಚಿ ಕುಳಿತುಕೊಳ್ಳುವುದು ಎಂದರ್ಥವಲ್ಲ ತಪ್ಪ ಎಂದರೆ ಸುಡುವುದು ತಪ್ಪಿಸುವುದು ಎಂದರ್ಥ ಏನನ್ನು ಎಂದರೆ ತನ್ನಲಿರುವ ಇಂದ್ರಿಯ ನಶೆಯನ್ನು ದುಷ್ಟ ವೃತ್ತಿಯನ್ನು ವಿಷಯ ಶಕ್ತಿಯನ್ನು ವಿರಕ್ತಿ ವೈರಾಗ್ಯಗಳಿಂದ ವಿವೇಚನಯುತವಾದ ಜ್ಞಾನಶಕ್ತಿಯಿಂದ ಸುಡಬೇಕು ಎಂದರ್ಥ ಆಗ ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕೂಡ ಮಾನವನ.


ಉತ್ತರವಾಗುತ್ತದೆ ಎನ್ನುತ್ತದೆ ಆಯುರ್ವೇದ ಮನಸ್ಸಿನಲ್ಲಿ ಕುವಿಚಾರಗಳನ್ನು ಯೋಚಿಸಬಾರದು ಗೆಲ್ಲುತ್ತದೆ ಆಯುರ್ವೇದ ಅದಕ್ಕಾಗಿ ಒಳ್ಳೆಯ ಕೆಲಸಗಳಲ್ಲಿ ಯಾವಾಗಲೂ ಮನಸ್ಸನ್ನು ತೊಡಗಿಸಬೇಕು ಸದ್ ಗ್ರಂಥಗಳನ್ನು ಪಠಣ ಮಾಡಬೇಕು ಎನ್ನುತ್ತದೆ ಯೋಗ ಇದೇ ಸ್ವಾದ್ಯಾಯ ದೇವರನ್ನು ಗೋವನ್ನು ಸಾಧು ಸತ್ಪುರುಷರನ್ನು ಹಿರಿಯರನ್ನು ಪೂಜಿಸಬೇಕು ಎಂದು.

ಆಯುರ್ವೇದದಲ್ಲಿ ಹೇಳಿದೆ ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ಧ್ಯಾನಿಸಬೇಕು ಎನ್ನುತ್ತದೆ ಯೋಗ ಇದೇ ಈಶ್ವರ ಪ್ರಣಿಧಾನ ಹೀಗೆ ಆಯುರ್ವೇದ ಶಾಸ್ತ್ರವನ್ನು ಯೋಗಶಾಸ್ತ್ರವನ್ನು ತುಲಾನಾತ್ಮಕ ದೃಷ್ಟಿಯಿಂದ ನೋಡುವಾಗ ಎರಡರ ಗುರಿಯು ಒಂದೇ ಆರೋಗ್ಯಯುಕ್ತವಾದ ಶರೀರದ ಇಹಪರಾಗಳೆರಡರ ಗುರಿಯ ಸಾಧನೆ ಇದು ಯಾರಿಗೆ ಬೇಡ ಅದನ್ನು.

ಹೊಂದುವುದಕ್ಕಾಗಿಯೇ ಎಲ್ಲಾ ನೀತಿ ನಿಯಮಗಳ ಉಪದೇಶ, ಯೋಗ ಚಿಕಿತ್ಸೆಗಳ ಅನುಷ್ಠಾನ ಇರಲಿ ಈಗ ಸದ್ ಗ್ರಂಥದಲ್ಲಿಯ ಉಪದೇಶಗಳನ್ನು ನೋಡೋಣ. ರಭಸದಿಂದ ಹರಿಯುತ್ತಿರುವ ನದಿಗಳಲ್ಲಿ ಸ್ನಾನವನ್ನು ಮಾಡಬಾರದು ಯಾವ ಕೆಲಸವನ್ನು ಮಾಡಬೇಕಾದರೂ ಚೆನ್ನಾಗಿ ಯೋಚಿಸಿ ಮಾಡಬೇಕು. ಅಪರಿಚಿತವಾದ ಸ್ಥಳದಲ್ಲಿ ರಾತ್ರಿ ಸಂಚರಿಸಬಾರದು ಮೂಗಿನಲ್ಲಿ.

ಮೇಲಿಂದ ಮೇಲೆ ಕೈ ಬೆರಳುಗಳನ್ನು ಹಾಕಿ ತಿರುಗುತ್ತಿರಬಾರದು. ಇತರರ ಎಂಜಲನ್ನು ಎಂದು ತಿನ್ನಬಾರದು, ಇತರರ ಬಟ್ಟೆ ಬರೆಗಳನ್ನು ಪಾದರಕ್ಷೆಗಳನ್ನು ನಾವು ತೊಡಬಾರದು ನಮ್ಮದನ್ನು ಅವರಿಗೂ ಕೊಡಬಾರದು ನೀರನ್ನು ಬಟ್ಟೆಯಿಂದ ಶೋಧಿಸಿ ಕುಡಿಯಬೇಕು ಶರೀರಕ್ಕೂ ಮನಸ್ಸಿಗೂ ವ್ಯಥೆಯನ್ನುಂಟು ಮಾಡುವ ಕಾರ್ಯವನ್ನು ಮಾಡಬಾರದು ಬರಿಯ ನೆಲದ.

ಮೇಲೆ ಕುಳಿತುಕೊಳ್ಳುವುದಾಗಲಿ ಮಲಗುವುದಾಗಲಿ ಆರೋಗ್ಯಕ್ಕೆ ಹಿತಕರವಲ್ಲ. ಊಟ ಮಾಡಿದ ಕೂಡಲೇ ಅಥವಾ ಹೊಟ್ಟೆ ತುಂಬಿರುವಾಗ ಎಂದು ಶ್ರಮದ ಕೆಲಸವನ್ನಾಗಿ ಮಾಡಬಾರದು ಹಾಗೆಯೇ ತೀರ ಹಸಿದಿರುವಾಗಲು ಶ್ರಮದ ಕೆಲಸವನ್ನು ಮಾಡಕೂಡದು ಯಾವ ಕಾರ್ಯವನ್ನು ಮಾಡಬೇಕಾದರೂ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತು ಕೆಲಸವನ್ನು ಮಾಡಬೇಕು.

ಅದಕ್ಕಿಂತ ಹೆಚ್ಚಿಗೆ ದುಡಿಯುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಲ ಮೂತ್ರಗಳ ವೇಗವನ್ನೆಂದು ತಡೆಯಬಾರದು ಇಷ್ಟೇ ಅಲ್ಲ ಶರೀರದ ಒಳಗಿನಿಂದ ಪ್ರಾಣ ಮುಂತಾದ 5 ವಾಯುಗಳ ಕ್ರಿಯೆಗಳ ಫಲವಾಗಿ ಹೊರಗೆ ತಳ್ಳಲ್ಪಡುವ ವಸ್ತುಗಳನ್ನು ಮತ್ತು ಆ ವಸ್ತುಗಳು ಹೊರಗೆ ಹೊರಟಾಗ ಅವುಗಳ ವೇಗವನ್ನು ತಡೆಯಬಾರದು ಆ ವಸ್ತುಗಳು.

ಹೀಗೆ ಇವೆ. ಪುರುಷರ ಲಿಂಗದಿಂದ ವೀರ್ಯ (ಶುಕ್ರ ) ಸ್ತ್ರೀಯರ ಯೋನಿಯಿಂದ ಆತರ್ವ( ಋತುಸ್ರಾವ ಮುಟ್ಟು ) ಕಣ್ಣಿನಿಂದ ದುಃಖವಾದಾಗ ಬರುವ ಬಿಸಿನೀರು ಮತ್ತು ಸುಖವಾದಾಗ ಬರುವ ತಣ್ಣನೆಯ ನೀರು, ಮೂಗಿನಿಂದ ಸಿಂಬಳ ಶೀನು ನೀರು ಇತ್ಯಾದಿ, ಬಾಯಿಯಿಂದ ತೇಗು ಆಕಳಿಕೆ ಕೆಮ್ಮು ಒಮ್ಮೊಮ್ಮೆ ವಾಂತಿ.

ಇತ್ಯಾದಿ ಬಿಕ್ಕಳಿಕೆ, ಗುದದಿಂದ ಗಾಳಿ ಹೀಗೆ ಈ ವಸ್ತುಗಳನ್ನು ತಡೆದರೆ ಅಥವಾ ಅವು ವರ ಬೀಳುವ ವೇಗವನ್ನು ತಡೆದರೆ ಆಯಾ ಅಂಗಗಳು ದುರ್ಬಲಗೊಂಡು ವಿಕಾರ ಹೊಂದಿ ರೋಗಗಳಿಗೆ ಗುರಿಯಾಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god