ನಾಲ್ಕು ಜನರೊಂದಿಗೆ ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನ… •ಗೊತ್ತಿಲ್ಲದ ವಿಷಯ ಬಗ್ಗೆ ಮಾತನಾಡಬಾರದು. •ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು.
• ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು. • ನಿಮ್ಮ ಮಾತಿನ ಅಗತ್ಯ, ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು. • ಕೊನೆ ಪಕ್ಷ ನಿಮ್ಮ ಮಾತಿಗೆಯಲ್ಲಿ ಗೌರವ ಇರಬೇಕು. • ಆಡುವ ಮಾತು ಬೇರೆಯವರನ್ನು ನೋಯಿಸದಂತೆ ಇರಬೇಕು.
• ಮಾತನಾಡುವಾಗ ಸಮಯ ಪ್ರಜ್ಞಾವಶ್ಯಕ. • ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕು. • ಅನಾವಶ್ಯಕ ಮಾತುಗಳು ಬೇಡ. • ಮಾತು ಸ್ಪಷ್ಟವಾಗಿರಬೇಕು.• ಮಾತನಾಡುವಾಗ ಉಳಿದವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಗಮನಿಸಬೇಕು.
• ಮುಖ ಗಂಟು ಹಾಕಿ ಮಾತನಾಡಬಾರದು. • ಮಾತು ವಾದ ಮಾಡುವಂತಿರಬಾರದು, • ಮಾತಿನಲ್ಲಿ ಅಹಂ ಇರಬಾರದು. • ಮಾತನಾಡುವಾಗ ಸಂಕುಚಿತ ಮನೋಭಾವ ಬಿಟ್ಟು ಹೃದಯ ಶ್ರೀಮಂತಿಕೆ ತೋರಿಸಬೇಕು.
•ಮಾತು ತಿಳಿ ಹಾಸ್ಯದಿಂದ ಕೂಡಿದ್ದು ಸ್ನೇಹಪೂರ್ವಕವಾಗಿರಬೇಕು. • ಆಡುವ ಪ್ರತಿ ಮಾತಿನಲ್ಲೂ ಆತ್ಮವಿಶ್ವಾಸವಿರಬೇಕು.ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ.
ಎಂತಹವರ ಸ್ನೇಹ ಬೇಕಾದರೂ ಸಂಪಾದಿಸಬಹುದು,ಅಲ್ಲದೆ ಒಳ್ಳೆಯ ಮಾತುಗಾರರು ಆಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.