ನಿಮ್ಮಿಂದ ನನ್ನ ಬದುಕೆ ಹಾಳಾಯಿತು ಎಂದು ಕಣ್ಣೀರಿಟ್ಟ ಮಹಿಳಾ ಯೂಟ್ಯೂಬರ್………!!
ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮಹಿಳೆಯ ಹೆಸರು ಶ್ರೀದೇವಿ ಹಿರೇಮಠ ಎಂದು. ಕೆಲವಂದಷ್ಟು ಜನ ಇವರನ್ನು ಸೋಶಿಯಲ್ ಮೀಡಿಯಾದಲ್ಲಿ ಗಮನಿಸಿರಬಹುದು. ಫೇಸ್ಬುಕ್ ಯುಟ್ಯೂಬ್ ಗಳಲ್ಲಿ ಕೆಲವೊಂದಷ್ಟು ವ್ಲಾಗ್ ಗಳನ್ನು ಮಾಡುತ್ತಾ ಇದ್ದರು ಆದರೆ ಈಗ ಈ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ.
ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಈ ಮಹಿಳೆಯ ವೀಡಿಯೋಸ್ ಗಳಿಗೆ ಹೆಚ್ಚಿನ ದಿನಗಳಿಂದಲೂ ಕೂಡ ನೆಗೆಟಿವ್ ಕಮೆಂಟ್ಸ್ ಗಳು ಬರುತ್ತಿದ್ದವಂತೆ. ಅದರಲ್ಲೂ ಯಾವುದೇ ಒಬ್ಬ ವ್ಯಕ್ತಿಗೆ ನೀವು ಯೂಟ್ಯೂಬ್ ಅಥವಾ ಫೇಸ್ಬುಕ್ ಗಳಲ್ಲಿ ಹಾಕುತ್ತಿರುವಂತಹ ವಿಡಿಯೋ ಚೆನ್ನಾಗಿಲ್ಲ ಅಥವಾ ಒಳ್ಳೆಯ ಕಂಟೆಂಟ್ ಕೊಡಿ ನೀವು ಹೇಳಿದ ಮಾಹಿತಿ ತಪ್ಪು ಅಥವಾ ಸರಿ ಈ ರೀತಿಯಾದಂತಹ ಕಮೆಂಟ್ಸ್ ಗಳನ್ನು ಕೊಟ್ಟರೆ.
ಯಾರು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನೀವೆಲ್ಲರೂ ಗಮನಿಸಿರಬಹುದು ಯಾವುದೇ ಒಬ್ಬ ವ್ಯಕ್ತಿ ಅಥವಾ ಮಹಿಳೆ ಯಾವುದೇ ವಿಚಾರವಾಗಿ ವಿಡಿಯೋಸ್ ಗಳನ್ನು ಹಾಕಿದರೆ ಅವಳ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದು ಅಥವಾ ಅವಳು ಹಾಕಿಕೊಳ್ಳುವಂತಹ ಬಟ್ಟೆ ಹೀಗೆ ಅವಳಿಗೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಕಮೆಂಟ್ಸ್ ಗಳನ್ನು ಹಾಕುವುದಕ್ಕೆ ಎಂದೇ ಕೆಲವೊಂದಷ್ಟು ಜನ ಇರುತ್ತಾರೆ.
ಹಾಗೆಯೇ ಆ ಮಹಿಳೆಯ ಕುಟುಂಬದವರ ಬಗ್ಗೆ ಮಾತನಾಡುವುದು ಹೀಗೆ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಗಳನ್ನು ಹಾಕುತ್ತಿರುತ್ತಾರೆ. ಇದರಿಂದ ಅವರಿಗೆ ಎಷ್ಟು ತೊಂದರೆ ಉಂಟಾಗಬಹುದು ಅವರೇನಾದರೂ ಇದರಿಂದ ಬೇಸರಗೊಂಡು ಏನಾದರೂ ಅನಾಹುತ ಮಾಡಿಕೊಳ್ಳುತ್ತಾರೆ ಎನ್ನುವಂತಹ ಯೋಚನೆಗಳನ್ನು ಕೂಡ ಮಾಡುವುದಿಲ್ಲ. ಬಳಸಬಾರ ದಂತಹ ಪದಬಳಕೆಯನ್ನು ಮಾಡಿ ಅವರನ್ನು ಹೀಯಾಳಿಸುತ್ತಿರುತ್ತಾರೆ.
ಅದೇ ರೀತಿಯಾಗಿ ಈ ದಿನ ನಾವು ಮೇಲೆ ಹೇಳಿರುವಂತಹ ವಿಷಯಕ್ಕೆ ಸಂಬಂಧಿಸಿದಂತೆ. ಈ ಮಹಿಳೆಯ ವಿಚಾರದಲ್ಲಿಯೂ ಕೂಡ ಇದೇ ರೀತಿಯಾದಂತಹ ಘಟನೆ ನಡೆದಿದ್ದು. ಇವರನ್ನು ಹಲವಾರು ಬಳಸ ಬಾರದ ಪದಬಳಕೆಯನ್ನು ಮಾಡಿ ಅವರನ್ನು ಹೀಯಾಳಿಸಿದ್ದಾರೆ. ಇದರಿಂದ ಆ ಮಹಿಳೆ ತನ್ನ ಕುಟುಂಬದಿಂದಲೇ ಹಿಂಸೆಯನ್ನು ಅನುಭವಿಸುವ ಪರಿಸ್ಥಿತಿಗೆ ಬಂದಿದೆ. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದಕ್ಕಾಗಿ ಈ ಮಹಿಳೆ ತಮ್ಮ ಅಕೌಂಟ್ ನಲ್ಲಿ ಇದ್ದಂತಹ ಎಲ್ಲ ವಿಡಿಯೋಸ್ ಗಳನ್ನು ಡಿಲೀಟ್ ಮಾಡಿ ನಾನು ಹಾಕಿರುವಂತಹ ಎಲ್ಲ ವೀಡಿಯೋಸ್ ಡಿಲೀಟ್ ಮಾಡಿದ್ದೇನೆ. ನಿಮಗೆ ಇವಾಗ ಸಮಾಧಾನ ಆಯ್ತಾ ಈಗಲಾದರೂ ನನ್ನನ್ನು ಬಿಟ್ಟುಬಿಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಾಕುವುದರ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ನನ್ನ ಬದುಕು ಹಾಳಾಯಿತು ಇನ್ನು ಮುಂದೆ ನಾನು ಯಾವುದೇ ರೀತಿಯ ವಿಡಿಯೋಗಳನ್ನು ಮಾಡುವುದಿಲ್ಲ ಎಂಬ ಮಾತನ್ನು ಈ ಮಹಿಳೆ ದುಃಖದಿಂದ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.