ನಿಮ್ಮ ಫೋನಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ:
1. ಸಾಮಾನ್ಯವಾಗಿ ಜನರು ಅವರ ಹತ್ತಿರ ಇರುವ ಬ್ರಾಂಡ್ ಫೋನ್ಗಳಿಗೆ ಅದರದ್ದೇ ಆದ ಬ್ರಾಂಡ್ ಚಾರ್ಜರ್ಗಳನ್ನು ಹಾಕುವುದು ಉತ್ತಮ ಅದನ್ನು ಹೊರತುಪಡಿಸಿ ಅದಕ್ಕಿಂತ ಹೆಚ್ಚಿನ ವೋಲ್ಟೇಜ್ ಇರುವ ಚಾರ್ಜರ್ ಪಿನ್ ಅನ್ನು ಹಾಕಿ ಚಾರ್ಜ್ ಮಾಡುವುದರಿಂದ ಅವರ ಫೋನಿನ ಬ್ಯಾಟರಿ ಹಾಳಾಗುವ ಪರಿಸ್ಥಿತಿ ಕೂಡ ಬರುತ್ತದೆ ಮತ್ತು ಫೋನ್ ಹಿಟ್ ಆಗುವ ಅಂಶಗಳನ್ನು ನಾವು ಕಂಡುಕೊಳ್ಳಬಹುದು ಈ ರೀತಿ ಮಾಡುವುದರಿಂದ ಫೋನಿನ ಸ್ಥಿತಿಯು ಹಾಳಾಗುವುದು ಹಾಗಾಗಿ ನಿಮ್ಮ ಹತ್ತಿರ ಯಾವ ಬ್ರಾಂಡಿನ ಫೋನ್ ಇರುವುದು ಅದರದೇ ಆದ ಚಾರ್ಜರ್ ಅನ್ನು ಉಪಯೋಗಿಸುವುದು ಒಳ್ಳೆಯದು.
2. ಫೋನ್ಗಳಲ್ಲಿ ವೈರಸ್ ಕಂಡುಬರುವುದು, ಸಾಮಾನ್ಯವಾಗಿ ಈ ವೈರಸ್ ಹೆಚ್ಚಾಗಿ ಸ್ಮಾರ್ಟ್ಫೋನ್ ಗಳಲ್ಲಿ ಬರುವುದಿಲ್ಲ ಇದು ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳಲ್ಲಿ ಅನೇಕ ರೀತಿಯ ವೈರಸ್ ಗಳು ಉತ್ಪತ್ತಿಯಾಗುತ್ತದೆ ಮತ್ತು ಅದರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಒಂದು ವೇಳೆ ಇದು ಬಂದರೆ ಅದು ನಮ್ಮ ಬೇಜವಾಬ್ದಾರಿ ತರವೇ ಕಾರಣವಾಗಿರುತ್ತದೆ ಏಕೆಂದರೆ ಪ್ಲೇ ಸ್ಟೋರ್ ನಲ್ಲಿ ಸಿಗುವ ಅಪ್ಲಿಕೇಶನ್ಗಳನ್ನು ನಾವು ಉಪಯೋಗಿಸಿದರೆ ಅದರಿಂದ ಯಾವುದೇ ರೀತಿಯ ವೈರಸ್ ಬರುವುದಿಲ್ಲ ಅದನ್ನು ಬಿಟ್ಟು ಬೇರೆ ರೀತಿಯ ವೆಬ್ಸೈಟ್ ಮತ್ತು ಬೇರೆ ರೀತಿಯ ಅಪ್ಲಿಕೇಶನ್ಗಳನ್ನು ಫೋನಿನಲ್ಲಿ ಉಪಯೋಗಿಸುವುದರ ಇಂದ ಈ ರೀತಿ ಅನೇಕ ವೈರಸ್ ಬರಲು ಸಾಧ್ಯವಾಗುತ್ತದೆ.ಏಕೆಂದರೆ ಅದು ನಮ್ಮ ಫೋನಿನ ಕಾಂಟಾಕ್ಟ್ ಮತ್ತು ಕ್ಯಾಮೆರಾ ಮತ್ತು ಅನೇಕ ರೀತಿಯ ವಿಷಯಗಳನ್ನು ಕೇಳುತ್ತದೆ ಹೀಗಾಗಿ ಅದು ಕೇಳಿದ ಪ್ರತಿಯೊಂದು ನಾವು ಓಕೆ ಕೊಡುತ್ತಾ ಹೋದರೆ ಅದು ಪ್ರತಿಯೊಂದು ಸ್ಕ್ಯಾನ್ ಮಾಡಿ ನಮ್ಮ ಫೋನಿನಲ್ಲಿ ಅದಕ್ಕೆ ಬೇಕಾಗಿರುವ ರಾಮ್ ಇದಿಯಾ ಎಂದು ಪರೀಕ್ಷಿಸಿ ಅದಾದ ನಂತರ ಆ ಒಂದು ಅಪ್ಲಿಕೇಶನ್ ಅನ್ನು ಅದು ಹೊರ ಬಿಡಲು ಸಾಧ್ಯವಾಗುತ್ತದೆ.ಈ ರೀತಿ ಸಾಮಾನ್ಯವಾಗಿ ತಪ್ಪಾದ ವೆಬ್ಸೈಟ್ಗಳು ಮತ್ತು ಬೇರೆ ರೀತಿಯ ವೆಬ್ಸೈಟ್ಗಳ ಮೂಲಕ ಕೂಡ ಈ ವೈರಸ್ ಬರಬಹುದು.
3. ಸಾಮಾನ್ಯವಾಗಿ ಫೋನ್ನಲ್ಲಿ ಬರುವ ಕ್ಯಾಮೆರಾ ಈಗಂತೂ ಅನೇಕ ಜನರ ಕೈಯಲ್ಲಿ ಕೂಡ ಫೋನ್ ಇರುತ್ತದೆ ಹಾಗೂ ಅನೇಕರು ಬಯಸುವುದು ತಮ್ಮ ಕ್ಯಾಮರಾ ಉತ್ತಮವಾಗಿದೆ ಎಂದು ಮತ್ತು ಜನರು ಫೋನನ್ನು ತೆಗೆದುಕೊಳ್ಳಲು ಹೋದಾಗ ಮೊದಲಿಗೆ ನೋಡುವುದು ಕ್ಯಾಮೆರಾ ಅದರ ಮೆಗಾ ಪಿಕ್ಸೆಲ್ ಬಗ್ಗೆ ಒಂದಕ್ಕಿಂತ ಒಂದು ವಿಭಿನ್ನವಾಗಿ ಇರುತ್ತದೆ.ಒಂದಕ್ಕಿಂತ ಒಂದು ಅಧಿಕ ರೀತಿಯ ಕ್ಲ್ಯಾರಿಟಿ ಇರುವ ಫೋಟೋಗಳನ್ನು ತೆಗೆಯಲು ಉತ್ತಮವಾಗಿ ರೂಪಿಸಿಕೊಂಡಿರುತ್ತದೆ.ಹೀಗಾಗಿ ಅನೇಕ ಕಂಪನಿಗಳು ಅದರಲ್ಲಿ ವಿಭಿನ್ನ ರೀತಿಯ ಮತ್ತು ಹೊಸ ಹೊಸ ಟೆಕ್ನಾಲಜಿಯನ್ನು ಕಂಡುಹಿಡಿಯುವಲ್ಲಿ ಉತ್ತಮವಾದ ಪರಿಶ್ರಮವನ್ನು ಹಾಕುತ್ತಲೇ ಇದೆ.ನಮಗೆ ಎಷ್ಟು ಬೇಕು ಅಷ್ಟು ಕ್ಲಾರಿಟಿ ಇರುವ ಮತ್ತು ಅದಕ್ಕೆ ಒಂದಿಕ್ಕೆ ಇರುವ ಫೋನಿನ ಬ್ರಾಂಡ್ಗಳನ್ನು ನೋಡಿ ತೆಗೆದುಕೊಳ್ಳಬೇಕು ಮತ್ತು ಅದರಲ್ಲಿ ಬರುವ ಮೆಗಾಪಿಕ್ಸೆಲ್ ಗೆ ಅನುಗುಣವಾಗಿ ಹೋದರೆ ಹೊಂದಿಕೆಯಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ