ನಿಮ್ಮ ಪ್ರೀತಿಯನ್ನು ಮರಳಿ ಪಡೆಯಲು ಕೊರಗಜ್ಜನನ್ನು ಪ್ರಾರ್ಥಿಸಿ:ಸಾಮಾನ್ಯವಾಗಿ ಕಷ್ಟಗಳು ಅನೇಕರಿಗೆ ಇದ್ದೇ ಇರುತ್ತದೆ ಅದು ನಾನಾ ರೂಪದಲ್ಲಿ ಕಂಡು ಬರುತ್ತದೆ ಕೆಲವರಿಗೆ ಹಣದಲ್ಲಿ ಸಮಸ್ಯೆ ಇರುತ್ತದೆ ಹಾಗೂ ಆರೋಗ್ಯದಲ್ಲಿ ಇನ್ನೂ ಕೆಲವರಿಗೆ ನೆಮ್ಮದಿ ಇಲ್ಲದೆ ಇರುತ್ತಾರೆ ಹಾಗೂ ಪ್ರೀತಿಯನ್ನು ಕಳೆದುಕೊಂಡು ಮನಸ್ಥಿತಿ ಸರಿಯಿಲ್ಲದ ರೀತಿ ಇರುತ್ತಾರೆ.ಸಾಮಾನ್ಯವಾಗಿ ಈ ಪ್ರೀತಿ ಎಂದರೆ ಅದು ಎರಡು ಹೃದಯಗಳಲ್ಲಿ ಹುಟ್ಟುವ ಒಂದು ಅಂಶ ಹಾಗಾಗಿ ನೀವು ಕೊರಗಜ್ಜನನ್ನು ತಾವು ಪ್ರೀತಿಸಿದ ಆ ಪ್ರೀತಿಯು ತಮಗೆ ಸಿಗುವಂತೆ ಪ್ರಾರ್ಥಿಸಬಹುದೇ ಅಥವಾ ಇಲ್ಲವೇ ಎಂದು ಆಲೋಚನೆಗಳು ಇರುತ್ತದೆ.ಆದರೆ ಕೊರಗಜ್ಜ ದೈವವು ಪ್ರತಿಯೊಂದನ್ನು ಸಮಾನವಾಗಿಯೇ ನೋಡುತ್ತದೆ ಹಾಗೂ ನೀವು ಒಳ್ಳೆ ಮನಸ್ಸಿನಿಂದ ಅವರನ್ನು ಪ್ರಾರ್ಥಿಸಿದರೆ ಆ ದೈವವೂ ನಿಮ್ಮ ಪ್ರೀತಿಯನ್ನು ನಿಮಗೆ ಸಿಗುವಂತೆ ಮಾಡುತ್ತದೆ ತುಳುವಿನಲ್ಲಿ ಈ ಒಂದು ವಾಕ್ಯವನ್ನು ಕೊರಗಜ್ಜ ದೈವವು ನುಡಿಯುತ್ತಲೇ ಇರುತ್ತದೆ.
ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದ ವಿಷಯವೂ ನಾಲಿಗೆ ಮುಖಾಂತರ ನುಡಿದಾಗ ಮತ್ತೆ ನಿಮ್ಮ ನಾಲಿಗೆ ಒಳಗೆ ಹೋಗುವ ಅಷ್ಟರಲ್ಲಿ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ ಎಂದು ಆಶೀರ್ವದಿಸುತ್ತಾರೆ.
ಒಂದು ವೇಳೆ ನಿಮ್ಮ ಪ್ರೀತಿಯಲ್ಲಿ ಸಮಸ್ಯೆಯಾಗಿ ಅವರು ನಿಮ್ಮಿಂದ ದೂರವಾಗುತ್ತಿದ್ದಾರೆ ಎಂದು ಭಾವಿಸುತ್ತಿದ್ದರೆ ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಪ್ರೀತಿಯು ನಿಮ್ಮಲ್ಲಿಯೇ ಉಳಿಯುತ್ತದೆ ಅದು ಏನೆಂದರೆ ಇದನ್ನು ಸರಿಸುಮಾರು 11 ದಿನಗಳು ಮಾಡಬೇಕು ಹಾಗೂ ಪ್ರತಿದಿನ ಮುಂಜಾನೆ ಸೂರ್ಯನ ಬೆಳಕು ಭೂಮಿ ತಾಯಿಯ ಮೇಲೆ ಬೀಳುವ ಮೊದಲು ಸ್ನಾನವನ್ನು ಮಾಡಿ ಸ್ವಚ್ಛವಾದ ಉಡುಪನ್ನು ಧರಿಸಿ ಹೆಣ್ಣು ಮಕ್ಕಳು ಆದರೆ ಹಣೆಯಲ್ಲಿ ಕುಂಕುಮವನ್ನು ಇಟ್ಟಿರಬೇಕು.ಮೊದಲಿಗೆ ನಿಮ್ಮ ಮನೆ ದೇವರನ್ನು ಪ್ರಾರ್ಥಿಸ ಬಹುದು ಅನಂತರ ತುಳಸಿ ಕಟ್ಟೆಗೆ ಒಂದು ಚೊಂಬು ಶುದ್ಧವಾದ ನೀರನ್ನು ತೆಗೆದುಕೊಂಡು ಹಾಕಬೇಕು ಅದಾದ ನಂತರ ಕೊರಗಜ್ಜನಲ್ಲಿ ನೀವು ನಿಮ್ಮ ಪ್ರೀತಿಯನ್ನು ತನಗೆ ನೀಡುವಂತೆ ಪ್ರಾರ್ಥಿಸಬೇಕು ಮತ್ತು ಅವರ ಹೆಸರು ಹೇಳಿ ನಿಮ್ಮ ಪ್ರೀತಿಯನ್ನು ಕೇಳಿಕೊಳ್ಳಬೇಕು.ಪ್ರತಿದಿನ ಮುಂಜಾನೆ ಮಾಡುತ್ತಾ ಬಂದರೆ ಈ ಸಮಸ್ಯೆಯು ದೂರವಾಗುತ್ತದೆ ಮತ್ತು ಕೊರಗಜ್ಜನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಹಾಗೂ ನೀವು ಇಷ್ಟ ಪಟ್ಟ ನಿಮ್ಮ ಪ್ರೀತಿಯು ನಿಮಗೆ ದೊರಕುತ್ತದೆ ನಿಮ್ಮ ಮನಸ್ಸಿನಲ್ಲಿ ಯಾವುದೇ ನಿಷ್ಕಲ್ಮಶ ರೀತಿಯ ಯೋಚನೆಯನ್ನು ಮಾಡದೆ ಪರಿಶುದ್ಧವಾಗಿ ಕೊರಗಜನಲ್ಲಿ ಬೇಡಿಕೊಂಡರೆ ಅದು ಪ್ರಾಪ್ತಿಯಾಗುತ್ತದೆ.
ನಿಮ್ಮ ಪ್ರೀತಿಯು ನಿಜವಾಗಿ ಇದ್ದೆ ಆದರೆ ಅದು ನಿಮಗೆ ಸಿಕ್ಕೇ ಸಿಗುತ್ತದೆ ಇದನ್ನು ಪ್ರತಿಯೊಬ್ಬ ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಹಾಗೂ ಮದುವೆಯಾದ ಹೆಣ್ಣು ಮಗಳಾಗಿದ್ದರು ಮತ್ತು ಮದುವೆಯಾದ ಗಂಡು ಮಗನಾಗಿದ್ದರು ಸರಿ ಪ್ರತಿಯೊಂದು,ಅಂದರೆ ಆ ದೈವ ಸೃಷ್ಟಿಯಲ್ಲಿ ಸೃಷ್ಟಿಯಾದ ಪ್ರತಿಯೊಂದು ಜೀವಕ್ಕೂ ಮತ್ತೊಂದು ಜೀವದ ಮೇಲೆ ಆಸೆ ಇದ್ದೇ ಇರುತ್ತದೆ ಪರಿಶುದ್ಧವಾದ ಪ್ರೀತಿ ನಿಮ್ಮದಾಗಿದ್ದರೆ ಅದು ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ನಿಮಗೆ ಅದು ಸಿಕ್ಕೇ ಸಿಗುತ್ತದೆ.ಈ ರೀತಿ ಪ್ರೀತಿಯ ನೋವಿನ ವಿಷಯದಲ್ಲಿ ನಾವು ಯಾರನ್ನು ಸಹಾಯ ಕೇಳಲು ಸಾಧ್ಯವಾಗುವುದಿಲ್ಲ ಆ ದೈವ ಒಂದು ಬಿಟ್ಟು ಹಾಗಾಗಿ ಆ ಕೊರಗಜ್ಜನನ್ನು ಪ್ರಾರ್ಥಿಸಿದರೆ ನಿಮ್ಮ ಪ್ರೀತಿ ನಿಮಗೆ ಸಿಗುತ್ತದೆ ಹಾಗೂ ಜೀವನದಲ್ಲಿ ಎಲ್ಲ ರೀತಿಯ ಸಂತೋಷವನ್ನು ನೀವು ಪಡೆಯುವಿರಿ ಅದರಿಂದ ನೀವು ಸಂತೋಷದಿಂದ ನಿಮ್ಮ ಸುಖಕರ ಜೀವನವನ್ನು ಕೊಂಡುಕೊಳ್ಳುವಿರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.