ನಿಮಗೆ ದಿನದಿಂದ ದಿನ ಸಾಲ ಹೆಚ್ಚುತ್ತಲೇ ಇದೆಯೇ ಮನೆಯಲ್ಲಿಯೇ ಪರಿಹಾರ,ಪರಿಹರಿಸಿಕೊಳ್ಳುವಂತಹ ಈ ಕೆಲಸವನ್ನು ಮಾಡಿದರೆ ಅದು ದೂರವಾಗುತ್ತದೆ:
ನಿಮ್ಮ ಮನೆಯಲ್ಲಿ ಒಂದು ಗ್ಲಾಸ್ ಬೌಲ್ ಅನ್ನು ತೆಗೆದು ನಂತರ 11 ರೂಪಾಯಿಗಳ ನಾಣ್ಯವನ್ನು ತೆಗೆದುಕೊಳ್ಳಬೇಕು ಮತ್ತು ಒಂದು ಸಣ್ಣ ಬೌಲ್ನಲ್ಲಿ ಕಲ್ಲುಪ್ಪನ್ನು ತೆಗೆದುಕೊಳ್ಳಬೇಕು, ಕೊನೆಯದಾಗಿ ಚೌಕಕಾರದಲ್ಲಿ ಅರಿದಿರುವಂತ ಒಂದು ಕೆಂಪು ವಸ್ತ್ರ ಇದಿಷ್ಟು ವಸ್ತುಗಳು ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವಂತಹ ವಸ್ತುಗಳು ಸಾಮಾನ್ಯವಾಗಿ ಇವೆಲ್ಲವೂ ಮನೆಯಲ್ಲಿಯೇ ದೊರೆಯುವಂತಹ ವಸ್ತುಗಳು ನಿಮಗೆ ಇದು ಸುಲಭವಾಗುತ್ತದೆ.ಮೊದಲಿಗೆ ಗಾಜಿನ ಬೌಲ್ ನಲ್ಲಿ ಒಂದು ಮುಕ್ಕಾಲು ಭಾಗದಷ್ಟು ಕಲ್ಲುಪ್ಪನ್ನು ಹಾಕಬೇಕು ,ಪೂರ್ತಿಯಾಗಿ ಹಾಕಿದರೆ ನೀವು ಆ ವಸ್ತ್ರ ಮತ್ತು ನಾಣ್ಯಗಳನ್ನು ಇಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಮುಕ್ಕಾಲು ಭಾಗ ಹಾಕುವುದು ಉತ್ತಮ ಅದಾದ ನಂತರ ಆ ಕೆಂಪು ವಸ್ತ್ರವನ್ನು ನಾಲ್ಕು ಭಾಗಗಳಾಗಿ ಮಡಚಿ ಅದರ ಮೇಲೆ ನಿಮ್ಮ ಹತ್ತಿರ ಇರುವ ಒಂದೊಂದು ನಾಣ್ಯವನ್ನು ಸೇರಿಸಿ ಹನ್ನೊಂದು ನಾಣ್ಯವನ್ನು ಆ ವಸ್ತ್ರದ ಒಳಗೆ ಇಟ್ಟು ಆ ಬೌಲ್ ನಲ್ಲಿರುವ ಉಪ್ಪಿನ ಮೇಲೆ ಈ ವಸ್ತ್ರ ಮತ್ತು ಅದರ ಮೇಲಿನ ನಾಣ್ಯಗಳನ್ನು ಇಡಬೇಕು.
ಈ ಕೆಂಪು ವಸ್ತ್ರವನ್ನು ಆರಿಸಿರುವ ಕಾರಣ ಈ ಕೆಂಪು ವಸ್ತ್ರವು ಲಕ್ಷ್ಮಿಯನ್ನು ಹೋಲುತ್ತದೆ, ಈ ರೀತಿ ಶುಕ್ರವಾರ ಅಥವಾ ಹುಣ್ಣಿಮೆಯ ದಿನದಲ್ಲಿ ಮಾಡಿದರೆ ತುಂಬಾ ಶ್ರೇಷ್ಠವಾಗಿ ಕಂಡುಬರುತ್ತದೆ ಮತ್ತು ಈ ರೀತಿ ಮಾಡಿದ ನಂತರ ಅದನ್ನು ನೀವು ಯಾರಿಗೂ ಕಾಣದಂತಹ ಜಾಗದಲ್ಲಿ ಇಡಬೇಕು ಅಂದರೆ ದೇವರ ಮನೆಯಲ್ಲಿ ಅಥವಾ ಮಂಚದ ಕೊನೆಯಲ್ಲಿ ಹೀಗೆ ಮುಂತಾದ ಯಾರಿಗೂ ಕಾಣದಂತಹ ಜಾಗದಲ್ಲಿ ಅದನ್ನು ಇಡಬೇಕು ಮತ್ತು ಅದನ್ನು ವಾರಕ್ಕೆ ಒಮ್ಮೆ ಅಂದರೆ ಈ ಶುಕ್ರವಾರ ಆದರೆ ನೀವು ಮಾಡಿದರೆ ಮುಂದಿನ ಶುಕ್ರವಾರ ಆ ಬೌಲ್ ನಲ್ಲಿ ಇರುವ ಉಪ್ಪನ್ನು ಹೊರತೆಗೆದು ಪುನಃ ಹೊಸ ಉಪ್ಪನ್ನು ಹಾಕಿ ಅದನ್ನು ಶುಚಿಯಾಗಿ ಇಡಬೇಕು ಹಾಗೆ ತೆಗೆದು ಹಳೆ ಉಪ್ಪನ್ನು ನೀವು ನೀರಲ್ಲಿ ಬೆರೆಸಿ ಹತ್ತಿರದಲ್ಲಿರುವ ತೆಂಗಿನ ಮರಕ್ಕೆ ಹಾಕಬಹುದು ಅದು ಸಾಧ್ಯವಾಗದಿದ್ದರೆ ನಿಮ್ಮ ಮನೆಯ ಹತ್ತಿರವೇರುವ ಯಾವುದಾದರೂ ಗಿಡಕ್ಕೆ ಹಾಕಬಹುದು ಅದನ್ನು ಬದಲಾಯಿಸಿದ ನಂತರ ಹನ್ನೊಂದು ನಾಣ್ಯಗಳಲ್ಲಿ ಒಂದು ರೂಪಾಯಿಯನ್ನು ತೆಗೆದು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು.
ಏಕೆಂದರೆ ನೀವು ಹೆಚ್ಚಾಗಿ ಹಣವನ್ನು ಇಟ್ಟಿರುವ ಜಾಗದಲ್ಲಿ ಮತ್ತು ಅದನ್ನು ತೆಗೆದು ಉಪಯೋಗಿಸುವ ಜಾಗದಲ್ಲಿ ಇಟ್ಟರೆ ಅಲ್ಲಿ ಹಣ ಇನ್ನು ಹೆಚ್ಚಾಗುತ್ತದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹಣವು ಖರ್ಚು ಆಗುವುದನ್ನು ಕಡಿಮೆ ಮಾಡುತ್ತದೆ. ನಂತರ 10 ರೂಪಾಯಿಯನ್ನು ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಅರಿಶಿಣ ಕುಂಕುಮ ಅರಿಶಿಣದ ಕೊಂಬು ಅಥವಾ ಪೂಜೆಗೆ ಸಂಬಂಧಪಟ್ಟ ಹಾಗೆ ಗಂಧದಕಡ್ಡಿ ಕರ್ಪೂರ ಹೂ ಹೀಗೆ ಮುಂತಾದವುಗಳನ್ನು ತೆಗೆದುಕೊಳ್ಳಬಹುದು ಈ ರೀತಿ ವಸ್ತುಗಳನ್ನು ಖರೀದಿಸಬೇಕು ಬೇರೆ ಯಾವುದಕ್ಕೂ ಹಣವನ್ನು ಉಪಯೋಗಿಸಬಾರದು, ಈ ರೀತಿ ಪ್ರತಿ ಶುಕ್ರವಾರ ನೀವು ಮಾಡುತ್ತಾ ಬಂದರೆ ಅದರ ಪರಿಣಾಮವನ್ನು ನೀವೇ ಸ್ವತಹ ತಿಳಿದುಕೊಳ್ಳುತ್ತೀರಾ ನಿಮ್ಮ ಸಾಲಭಾದೇ ಸ್ವಲ್ಪ ಸ್ವಲ್ಪವಾಗಿ ದೂರವಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.