ಪೂಜೆ ಮಾಡುವಾಗ ಇವುಗಳು ಕಾಣಿಸಿದರೆ ದೇವರು ಒಲಿದಿದ್ದಾನೆ ಎಂದರ್ಥ..ಪೂಜೆಯ ಸಮಯದಲ್ಲಿ ಹೀಗಾದರೆ ?
ಪೂಜೆ ಮಾಡುವಾಗ ಇವುಗಳು ಕಾಣಿಸಿದರೆ ದೇವರು ಒಲಿದಿದ್ದಾನೆ ಎಂದರ್ಥ. ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳ ಆರಾಧನೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ನಿತ್ಯ ಪೂಜೆ ಮಾಡುವವರಿಗೆ ದೇವರು ಸದಾ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಇಂತಹ ಮನೆಗಳಲ್ಲಿ ಸದಾ ಸುಖ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.
ದೇವರು ನಿಮ್ಮ ಪೂಜೆಯಿಂದ ಪ್ರಸನ್ನನಾಗಿದ್ದರೆ ಈ ಎಲ್ಲಾ ಸೂಚನೆಗಳನ್ನು ನೀಡುತ್ತಾರಂತೆ. ಪೂಜೆ ಮಾಡುವಾಗ ನಿಮಗೂ ಈ ಸೂಚನೆಗಳು ಕಾಣಿಸಿಕೊಂಡಿವೆಯೇ ಧಾರ್ಮಿಕ ನಂಬಿಕೆಯ ಪ್ರಕಾರ ಪೂಜೆಯ ಸಮಯದಲ್ಲಿ ವ್ಯಕ್ತಿಯ ಪೂಜೆ ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ನಾವು ಅನೇಕ ಸೂಚನೆಗಳ ಮೂಲಕ ಪಡೆದುಕೊಳ್ಳಬಹುದಾಗಿದೆ.
ಪೂಜೆ ಮಾಡುವಾಗ ದೇವರು ನೀಡುವ ಕೆಲವೊಂದು ಸೂಚನೆಗಳು ಶುಭವನ್ನು ಸೂಚಿಸಿದರೆ. ಇನ್ನು ಕೆಲವೊಂದು ಸೂಚನೆಗಳು ಅಶುಭವನ್ನು ಸೂಚಿಸುತ್ತದೆ. ದೇವರ ಪೂಜೆಯಲ್ಲಿ ನಾವು ಏನನ್ನು ನೋಡಿದರೆ ಅಥವಾ ದೇವರು ಶುಭ ಸೂಚನೆಯನ್ನು ಹೇಗೆ ನೀಡುತ್ತಾನೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.
ಒಂದು ದೇವರಿಗೆ ಪ್ರಿಯವಾದುದ್ದನ್ನು ಅರ್ಪಿಸಿ ಧಾರ್ಮಿಕ ನಂಬಿಕೆಗಳ ಪ್ರಕಾರ ಭಕ್ತರು ನಿಯಮಿತ ಪೂಜೆಯನ್ನು ಮಾಡುತ್ತಾರೆ ಮತ್ತು ದೇವರನ್ನು ಮೆಚ್ಚಿಸಲು ದೇವರ ನೆಚ್ಚಿನ ವಸ್ತುಗಳನ್ನು ಅರ್ಪಿಸುತ್ತಾರೆ.
ಆದ್ದರಿಂದ ದೇವರನ್ನು ಮೆಚ್ಚಿಸುವ ಮೂಲಕ ನಾವು ಆತನ ಆಶೀರ್ವಾದವನ್ನು ಪಡೆಯಬಹುದು ದೇವರು ಪ್ರಸನ್ನನಾಗುತ್ತಾನೆ ಮತ್ತು ಭಕ್ತರಿಗೆ ಅಂತಹ ಅನೇಕ ಚಿನ್ಹೆಗಳನ್ನು ನೀಡುತ್ತಾನೆ.
ಅದನ್ನು ಸಮಯಕ್ಕೆ ಅರ್ಥಮಾಡಿಕೊಂಡರೆ ಭವಿಷ್ಯದಲ್ಲಿ ಮಂಗಳಕರ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು. ಎರಡು ದೇವರ ದೀಪ ಶಾಸ್ತ್ರದ ಪ್ರಕಾರ ಪೂಜೆ ಮಾಡುವಾಗ ದೀಪದ ಬೆಂಕಿಯು ಅನೇಕ ರೀತಿಯ ಚಿನ್ಹೆಗಳನ್ನು ನೀಡುತ್ತದೆ.
ದೀಪದ ಬೆಂಕಿಯು ಮೇಲಕ್ಕೆ ಹೋದರೆ ದೇವರು ನಿಮ್ಮ ಪೂಜೆಯನ್ನು ಒಪ್ಪಿಕೊಂಡಿದ್ದಾನೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎನ್ನುವ ನಂಬಿಕೆ ಇದೆ.
ದೇವರು ನಿಮ್ಮ ಭಕ್ತಿಗೆ ಮೆಚ್ಚಿದ್ದಾನೆ ಮತ್ತು ಶೀಘ್ರದಲ್ಲಿ ಅವನು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುವುದಾಗಿದೆ.
ಮೂರು ದೇವರಿಗೆ ಅರ್ಪಿಸಿದ ಹೂವು ಪೂಜೆಯ ಸಮಯದಲ್ಲಿ ಹೂವುಗಳು ಅಥವಾ ಹೂಮಾಲೆಗಳು ದೇವರ ಚಿತ್ರ ಅಥವಾ ವಿಗ್ರಹದಿಂದ ನಿಮ್ಮ ಬಳಿಗೆ ಬಂದು ಬಿದ್ದರೆ ಅದನ್ನು ಧರ್ಮ ಗ್ರಂಥಗಳಲ್ಲಿ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಈ ಚಿನ್ಹೆಯು ದೇವರ ಆಶೀರ್ವಾದವು ನಿಮ್ಮ ಮೇಲೆ ಬೀಳಲಿದೆ ಮತ್ತು ನಿಮ್ಮ ಪೂಜೆಯಿಂದ ಅವನು ಸಂತೋಷಗೊಂಡಿದ್ದಾನೆ ಎಂಬುದರ ಅರ್ಥವಾಗಿದೆ. ನಿಮ್ಮ ಬಯಕೆ ದೇವರನ್ನು ತಲುಪಿದೆ ಮತ್ತು ಅದು ಶೀಘ್ರದಲ್ಲೇ ಈಡೇರುತ್ತದೆ ಎಂದು ಅರ್ಥಮಾಡಿಕೊಳ್ಳಿ.
ನಾಲಕ್ಕು ಇವರು ಪೂಜೆಯ ವೇಳೆ ಬರುವುದು ಶಾಸ್ತ್ರಗಳ ಪ್ರಕಾರ ನಿಮ್ಮ ಪೂಜೆಯ ಸಮಯದಲ್ಲಿ ತಂದೆ ಗುರು ಬ್ರಾಹ್ಮಣ ಅಥವಾ ಯಾವುದೇ ಹಿರಿಯರು ನಿಮ್ಮ ಮನೆಗೆ ಬಂದರೆ ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಈ ಚಿನ್ಹೆಯು ದೇವತೆಗಳು ಮತ್ತು ದೇವರುಗಳು ನಿಮ್ಮ ಪೂಜೆಯನ್ನು ಒಪ್ಪಿಕೊಂಡಿದ್ದಾರೆ ಎಂದರ್ಥ ಹಾಗೂ ದೇವರು ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೊಡೆದು ಹಾಕಲಿದ್ದಾರೆ ಎಂಬ ಅರ್ಥವಿದೆ.
ಐದು ಕಣ್ಣಿನಲ್ಲಿ ನೀರು ಪೂಜೆ ಮಾಡುವಾಗ ನಿಮ್ಮ ಕಣ್ಣುಗಳಿಂದ ನೀರು ಬಂದರೆ ನಿಮ್ಮ ಪೂಜೆಯನ್ನು ದೇವರುಗಳು ಮತ್ತು ದೇವತೆಗಳು ಒಪ್ಪಿಕೊಂಡಿದ್ದಾರೆ ಎಂದು ಅರ್ಥಮಾಡಿಕೊಳ್ಳಿ ಎಂಬ ಧಾರ್ಮಿಕ ನಂಬಿಕೆ ಇದೆ.
ನೀವು ದೇವರಿಗೆ ಯಾವ ಆಸೆಯನ್ನು ವ್ಯಕ್ತಪಡಿಸಿದರು ಅದು ಶೀಘ್ರದಲ್ಲೇ ಇಡೇರಲಿದೆ ಅಲ್ಲದೆ ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎಂಬುದರ ಅರ್ಥವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.