ಪ್ರಾಣ ಪ್ರತಿಷ್ಠಾಪನೆ ಅಲ್ಲಿ ಏನು ಮಾಡ್ತಾರೆ ಆ ಮುಹೂರ್ತವೇ ಏಕೆ
ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ ಅಲ್ಲೀಗ ಪ್ರಾಣ ಪ್ರತಿಷ್ಠಾಪನೆಯ ಮೊದಲು ಮಾಡಬೇಕಾದ ಎಲ್ಲ ಪ್ರಕ್ರಿಯೆಗಳನ್ನ ಆರಂಭ ಮಾಡಿದ್ದಾರೆ. ಮೈಸೂರಿನ ಅರುಣ್ ಅವರ ಕೆತ್ತನೆಯಲ್ಲಿ ಮೈದಳೆದ ಸುಂದರರಾಮ ಮೂರ್ತಿ ಆಯೋಧ್ಯೆ ಗರ್ಭಗುಡಿಯನ್ನು ಸೇರಿದೆ. ಅದಕ್ಕೆ ದೇಶದ ನಾನಾ ಪವಿತ್ರ ನದಿಗಳ ಜಲದಿಂದ ಅಭಿಷೇಕ ಮೂಲಕ ದ್ರವ್ಯಗಳ ಲೇಪನ ಮತ್ತು ಅಭಿಷೇಕದ ಕೆಲಸಗಳು ನಡೀತಾ ಇವೆ.
ಸೋಮವಾರ ಅಪರಾಹ್ನದ ದಿವ್ಯ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ. ಹಾಗಾದರೆ ಪ್ರಾಣ ಪ್ರತಿಷ್ಠಾಪನಾ ಮುಹೂರ್ತ ಹೇಗಿದೆ? ಮಂದಿರ ಪೂರ್ಣಗೊಳ್ಳುವ ಮೊದಲೇ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಬಹುದು. ಅದಕ್ಕೆ ಜನವರಿ 22 ದಿನವನ್ನೇ ಯಾಕೆ ಆಯ್ಕೆ ಮಾಡಿದ್ದಾರೆ? ಆ ಮುಹೂರ್ತಕ್ಕೂ ರಾಮನಿಗೂ ಇರುವ ಸಂಬಂಧ ಏನು? ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡೋದು ಅಂದ್ರೆ ಏನು? ಒಂದು ದೇವಾಲಯ ನಿರ್ಮಾಣವಾದ ನಂತರ ಅದರ ಗರ್ಭದಲ್ಲಿ ಪ್ರತಿಷ್ಠಾಪನೆ ಹಾಗೂ ವಿಗ್ರಹ ಪೂಜಾ ಸ್ಥಾನವನ್ನ ದೇವಿ ಸ್ಥಾನವನ್ನು ಪಡ್ಕೋದಿಕ್ಕೆ ಏನೆಲ್ಲ ಕ್ರಿಯೆಗಳನ್ನು ಮಾಡ್ತಾರೆ? ಅದರ ಬಗ್ಗೆ ನಮ್ಮ ಆಗಮ ಶಾಸ್ತ್ರಗಳು ಹೇಳೋದೇನು ಬಗ್ಗೆ ಒಂದು. ಮಾಹಿತಿಯನ್ನು ನಾವಿಲ್ಲಿ ನೋಡೋಣ.
ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಅಲ್ಲಿ ಬರಿ ಸಡಗರ ಸಂಭ್ರಮಗಳು ಮಾತ್ರ ಮನೆ ಮಾಡಿದೆ. ಅಯೋಧ್ಯೆಗೆ ಸುಮಾರು ಐದು ಶತಮಾನಗಳ ನಂತರ ಶಾಪವಿಮೋಚನೆ ಆಗ್ತಾ ಇದೆ. ಅಲ್ಲಿನ ಜನ್ಮಭೂಮಿ ಮತ್ತು ಶ್ರೀರಾಮ ಚಂದ್ರ ತನ್ನ ಸಹೋದರ ಸಮೇತ ಬಂದು ವಿರಾಜಮಾನನಾಗಿದ್ದಾನೆ. ಈ ಶುಭ ಸಮಾರಂಭಕ್ಕೆ ಭರ್ಜರಿ ತಯಾರಿಗಳಲ್ಲಿ ನಡೆದಿವೆ. ತಿರುಪತಿಯ ಲಡ್ಡು ತರಾನೇ ಇನ್ನು ಮುಂದೆ ಅಯೋಧ್ಯೆಯ ಹನುಮಾನ್ ಗಡಿಯಲ್ಲಿದ್ದು ಕೂಡಾ ಖ್ಯಾತಿಯನ್ನು ಪಡೆದಿದೆ. ಇನ್ನು ಅಯೋಧ್ಯೆಯಲ್ಲಿ ದೇಶ, ವಿದೇಶಗಳ ಭಕ್ತಾದಿಗಳು ಇರ್ತಾರೆ.
ಅಯೋಧ್ಯೆಯ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ ಅಯೋಧ್ಯೆ, ಉತ್ತರ ಪ್ರದೇಶ ಹಾಗೂ ಭಾರತದ ಖ್ಯಾತಿಯನ್ನು ಹೆಚ್ಚು ಮಾಡುವ ಜೊತೆ ಜೊತೆಗೆ ಭಾರತದ ಟೆಂಪಲ್ ಟೂರಿಸಂ ನನ್ನ ಇನ್ನು ಮುಂದೆ ಹೇಗೆಲ್ಲ ಅಭಿವೃದ್ಧಿ ಪಡಿಸಬಹುದು. ಅದಕ್ಕೆ ಕೂಡ ಒಂದು ಮಾದರಿ ಆಗುತ್ತೆ. ಅಲ್ಲಿ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಬೇಕಾದ ಎಲ್ಲ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮೊನ್ನೆ 16 ನೇ ತಾರೀಕಿನಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಇಲ್ಲೇ ಶ್ರೀರಾಮ ಪಟ್ಟಾಭಿಷೇಕದ ದಿನ ಕೈಕೇಯಿ ಕ್ಯಾತೆ ತೆಗೆದಂತೆ ಹಾಗೆ ಇಲ್ಲಿ ರಾಮ ಮಂದಿರದ ಉದ್ಘಾಟನೆಗೆ ಕೂಡ ಅಡ್ಡಿಗಳು, ಅಪಸ್ವರಗಳು ಒಂದೆರಡಲ್ಲ.
ಮೊದಲಿಗೆ ಮಂದಿರ ಪೂರ್ಣಗೊಳ್ಳುವ ಮೊದಲೇ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗುತ್ತಿದೆ ಅಂತ ಕೆಲವರು ಅಪಸ್ವರ ತೆಗೆದರು, ಅದು ವರ್ಕೌಟ್ ಆಗಲಿಲ್ಲ. ಈಗ ರಾಮ ಜನ್ಮಭೂಮಿ ಅಂದ್ರೆ ಬಾಬ್ರಿ ಮಸೀದಿ ಇದ್ದ ಸ್ಥಳಕ್ಕೂ ಈಗ ಕಟ್ಟಿರೋ ರಾಮಮಂದಿರದ ಸ್ಥಳಕ್ಕೂ ತುಂಬಾನೇ ವ್ಯತ್ಯಾಸ ಇದೆ. ಅದೇ ಬೇರೆ ಇದೇ ಬೇರೆ ರಾಮ ಜನ್ಮಭೂಮಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಿಲ್ಲ. ಬಿಜೆಪಿ ಮಾತು ತಪ್ಪಿದೆ ಅಂತ ಹೊಸ ವರಾತ ಒಂದು ಶುರುವಾಗಿದೆ. ಇಲ್ಲಿ ಮಾತು ತಪ್ಪುವುದಕ್ಕೆ ಮಂದಿರವನ್ನು ಬಿಜೆಪಿ ಕಟ್ಟಾ ಇದ್ಯ ಬಿಜೆಪಿಗೆ ರಾಮಮಂದಿರಕ್ಕೂ ಏನ್ರೀ ಸಂಬಂಧ? ಮಂದಿರ ಕಟ್ಟಲು ಜನರ ದುಡ್ಡಲ್ಲಿ ಅದರ ಉಸ್ತುವಾರಿಯನ್ನು ರಾಮಮಂದಿರ ಟ್ರಸ್ಟ್ ನೋಡಿಕೊಳ್ಳುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂದಿರ ನಿರ್ಮಾಣ ಆಗ್ತಾ ಇದೆ ಮತ್ತು ಈ ಹಿಂದಿನಿಂದಲೂಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅಂತ ಹೇಳ್ತಾ ಬಂದಿದ್ದುತ್ತಾಯ ಮಾಡ್ತಾ ಬಂದು ಬಿಜೆಪಿ ಮಾತ್ರ ಅನ್ನೋದು ಬಿಟ್ರೆ ಈ ಮಂದಿರಕ್ಕೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ. ಅದು ರಾಷ್ಟ್ರ ಮಂದಿರ, ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಸಿಕ್ಕ ಜನ್ಮಭೂಮಿಯಲ್ಲಿ ಭಾರತದ ಮತ್ತು ಹೊರದೇಶಗಳ ಸನಾತನಿಗಳು ರಾಮ ಭಕ್ತರ ನೆರವಿನಿಂದ ರಾಮಮಂದಿರ ಟ್ರಸ್ಟ್ ಈ ದೇವಾಲಯವನ್ನು ನಿರ್ಮಾಣ ಮಾಡುತ್ತಿದೆ. ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋ ಬೇಡಿಕೆಗೆ ಮನ್ನಣೆಯನ್ನೂ ಕೊಟ್ಟಿದ್ದಾರೆ.
ರಾಮಮಂದಿರ ನಿರ್ಮಾಣದ ಶ್ರೇಯಸ್ಸು ಅವರಿಗೂ ಸಲ್ಲಿಕೆ ಆಗ್ತಾ ಇತ್ತು. ಬಿಜೆಪಿಯವರು ಆಂದೋಲನಕ್ಕೆ ಬಂದ್ರು. ಈಗಲೂ ಕೂಡ ಅವರಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾಗಂತ ಇದು ಬಿಜೆಪಿಯ ಮಂದಿರ ಖಂಡಿತ ಅಲ್ಲ. ಇದು ರಾಮಮಂದಿರ ದೇಶದಮಂದಿರ. ಹೀಗಾಗಿ ಅಲ್ಲಿ ಯಾವುದುಗಳನ್ನು ಹೇಳಿಕೊಂಡು ರಾಜಕೀಯ ಪಕ್ಷದ ಹೆಸರನ್ನು ಎಲ್ಕೊಂಡು ಬರಬೇಕಾದ ಅಗತ್ಯ ಖಂಡಿತಾ ಇಲ್ಲ. ಇನ್ನು ಮಂದಿರ ನಿರ್ಮಾಣವಾದ ಸ್ಥಳದ ಬಗ್ಗೆ ವಿವಾದ ಕೂಡ ಅಸಂಗತ. ಅದು ಈ ಹಿಂದೆ ಮಸೀದಿ ಅಂತ ಕರೆಸಿಕೊಳ್ಳುತ್ತಿದ್ದ ಜಾಗ ಏನಿತ್ತು? ಅದೇ ಕಾಂಪ್ಲೆಕ್ಸ್ ನಲ್ಲಿ ನಿರ್ಮಾಣವಾಗಿದೆ ಅಂದ್ರೆ ಈ ಹಿಂದೆ ಅಯೋಧ್ಯೆಯ ಅರಮನೆಯ ಜಾಗದಲ್ಲಿ ಎಲ್ಲಿ ರಾಜ ವಿಕ್ರಮಾದಿತ್ಯ ಮಂದಿರವನ್ನು ಕಟ್ಟಿದ ಅಂತ ಹೇಳಲಾಗ್ತಿತ್ತು ಎಲ್ಲಿ ಅಯೋಧ್ಯೆಯ ಕೋಟೆಯ ಅದೇ ಕಾಂಪ್ಲೆಕ್ಸ್ ನಲ್ಲಿ ಈಗ ನೂತನ ಮಂದಿರ ನಿರ್ಮಾಣವಾಗಿದೆ.
ಹೀಗಾಗಿ ಅಪಸ್ವರಗಳ ಅಗತ್ಯ ಖಂಡಿತ ಅಲ್ಲ. ಇನ್ನು ಇಂಥ ಕೊಂಕುಗಳನ್ನ ಜನ ಸೀರಿಯಸ್ಸಾಗಿ ತಗೊಳ್ಳೋದು ಇಲ್ಲ. ಇನ್ನು ಈಗ ಪ್ರಾಣ ಪ್ರತಿಷ್ಠಾಪನೆ ಆಗ್ತಿರೋ ದಿನಾಂಕ ಹಾಗು ಸಮಯ ಇಲ್ಲೇ 50 ಜನ ಎಷ್ಟೇ ಬುದ್ಧಿವಂತರಾದರೂ ಬುದ್ಧಿಜೀವಿಗಳು ಕರ್ಮ ಧರ್ಮಗಳನ್ನು ನಾಲ್ಕು ಜನರ ಮುಂದೆ ನಿಂತು ವಿರೋಧಿಸಿದರು. ಶಾಸ್ತ್ರ ಸಂಪ್ರದಾಯಗಳ ವಿರುದ್ಧ ಏನೇ ಭಾಷಣಗಳನ್ನು ಮಾಡಿದರು. ಅವರ ಜೊತೆಯಲ್ಲಿರೋರು ಮಾತ್ರ ಸಮಯಗಳಿಗೆ ಅಂತ ಮಾತಾಡೋದು ನಾನು ಕೇಳಿದೆ. ಇನ್ನು ನಮ್ಮಲ್ಲಿ ಕೂಡ ಮೊನ್ನೆ ಕೆಲವರು ಮಹಿಷ ದಸರಾವನ್ನು ಬೆಂಬಲಿಸಿ ಚಾಮುಂಡೇಶ್ವರಿ ತಾಯಿಯನ್ನ ವಿರೋಧಿಸಿ ಮಾತಾಡಿದ್ರಲ್ಲ. ಅವರ ಮನೆಗಳಲ್ಲಿ ಒಂದು ಸರಿ ಹೋಗಿ ನೋಡಿ ಅದೇ ತಾಯಿ ಚಾಮುಂಡಿಯ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಾರೋ ಅಲ್ಲಿ ಎಷ್ಟು ಜನ ಇಲ್ಲ ಅಷ್ಟೇ ಯಾಕೆ ದೇವರುಗಳ ಬಗ್ಗೆ ಹೆಚ್ಚು ಒಲವಿಲ್ಲ ಅಂತ ತೋರಿಸ್ಕೊಳ್ಳೋ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಾರಲ್ಲ? ಅವರ ಪತ್ನಿ ಅಪ್ಪಟ ದೈವಭಕ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.