ಸ್ನೇಹಿತರೆ ಆನೀಮಿಯಾ ಅಂದರೆ ರಕ್ತ ಹೀನತೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಎದುರಿಸುತ್ತಿರುವಂತಹ ಸಮಸ್ಯೆಯಲ್ಲಿ ಇದೂ ಕೂಡ ಒಂದು ಮುಖ್ಯವಾಗಿ ಮಹಿಳೆಯರಲ್ಲಿ ರಕ್ತಹೀನತೆ ಕಂಡುಬರುವ ಸಾದ್ಯತೆ ತುಂಬಾ ಇರುತ್ತದೆ.ಮುಖ್ಯವಾಗಿ ಐವತ್ತು ಪರ್ಸೆಂಟ್ ಹೆಚ್ಚಿನ ಜನರಲ್ಲಿ ಮಹಿಳೆಯರಿಗೆ ಈ ಸಮಸ್ಯೆ ಇದೆ ಎಂದು ಅನೇಕ ರಿಸರ್ಚ್ ಗಳಲ್ಲಿ ಕಂಡುಬಂದಿದೆ.
ತುಂಬಾ ಜನರು ಮಹಿಳೆಯರು ಆರು ಏಳು ಎಂಟು ಶತದಲ್ಲಿ ಅವರ ಹಿಮೋಗ್ಲೋಬಿನ್ ಪರ್ಸೆಟೆಂಜ್ ಅನ್ನೋದು ಇರುತ್ತದೆ. ನಿಜವಾಗಲೂ ಹೇಳಬೇಕು ಅಂದರೆ ಅವರ ಪರ್ಸೆಂಟೇಜ್ ಅನ್ನುವುದು ಹನ್ನೆರಡರಿಂದ ಹದಿನೈದು ಹೊಳಗೆ ಇದ್ದರೇನೆ ಅವರ ಆರೋಗ್ಯಕ್ಕೆ ಒಳ್ಳೆಯದು.
ಮುಖ್ಯವಾಗಿ ಈ ರಕ್ತಹೀನತೆ ಇಂದ ಹೊರಬರಬೇಕು ಅಂದರೆ ಐರನ್ ಅನ್ನುವುದು ನಮ್ಮ ಶರೀರಕ್ಕೆ ಹೆಚ್ಚಾಗಿ ಒದಗುವ ರೀತಿಯಲ್ಲಿ ನೋಡಕೊಬೇಕು.ಏಕೆಂದರೆ ನಮ್ಮಶರೀರಕ್ಕೆ ಬೇಕಾಗಿರುವಂತಹ ಮುಖ್ಯವಾದ ಪೋಷಕಗಳಲ್ಲಿ ಐರನ್ ಕೂಡ ಒಂದು ಏಕೆಂದರೆ ನೀವು ಶರೀರದಲ್ಲಿ ರಕ್ತವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾವ ರೀತಿಯಾಗಿ ಆಹಾರವನ್ನು ತೆಗೆದುಕೊಂಡರು ಕೂಡ ಐರನ್ ಅನ್ನೋದು ನಮ್ಮ ಶರೀರಕ್ಕೆ ಸಿಗಲಿಲ್ಲ ಅಂದರೆ ಹಿಮೋಗ್ಲೋಬಿನ್ ಶಾತ ಅನ್ನೋದು ಕಡಿಮೆ ಆಗುತ್ತದೆ.ಇದರಿಂದಾಗಿ ರಕ್ತಹೀನತೆ ಅನ್ನೋದು ಏರ್ಪಡುತ್ತೆ.ಇದರಿಂದಾಗಿ ನಿಶ್ಯಕ್ತಿ ,ಆಯಾಸ,ತಲೆನೋವು,ಶ್ವಾಸಕೋಶ ತೆಗೆದುಕೊಳ್ಳುವುದು.ಈ ರೀತಿಯಾದ ಸಮಸ್ಯೆ ಅನ್ನೋದು ಬರುತ್ತೆ.
ಈ ಲಕ್ಷಣಗಳು ಕಂಡು ಬಂದಾಗ ನಿಮಗೆ ರಕ್ತಹೀನತೆ ಇದೆ ಎಂದು ಅರ್ಥ ಅದರೆ ರಕ್ತಹೀನತೆಯನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡರೆ ಸಾಕು ಮತ್ತೆ ಆ ಆಹಾರ ಪದಾರ್ಥಗಳು ಯಾವುವು ಎಂದು ನೋಡೋಣ.ನೀವು ಕೂಡ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ .ಅದರಲ್ಲಿ ಮೊದಲನೆಯದಾಗಿ ಮೆಂತ್ಯೆ ಕಾಳು ,ಮೆಂತ್ಯೆಕಾಳಿನ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ.
ಇದನ್ನ ಒಂದು ಔಷಧೀಯ ವಸ್ತುವಾಗಿ ಆಯುರ್ವೇದದಲ್ಲಿ ಕೂಡ ತುಂಬಾ ಹೆಚ್ಚಾಗಿ ಉಪಯೋಗಿಸುತ್ತಾರೆ.ಔದು ಮೆಂತ್ಯೆ ಕಾಳಿನಲ್ಲಿ ಸ್ವಲ್ಪ ಕಹಿ ಅಂಶ ಜಾಸ್ತಿ ಇರಬಹುದು ಅದರೆ ಇದರಲ್ಲಿ ಇರತಕ್ಕಂತಹ ಔಷಧೀಯ ಗುಣಗಳು ತುಂಬಾ ಹೆಚ್ಚಾಗಿ ಇರುತ್ತದೆ.ಮುಖ್ಯವಾಗಿ ಇದು ಮೊಣಕಾಲು ನೋವಿಗೆ ತುಂಬಾ ಅಧ್ಬುತವಾಗಿ ಕೆಲಸಮಾಡುತ್ತದೆ.ಇದಕ್ಕಾಗಿ ನೀವು ರಾತ್ರಿ ಮಲಗುವಾಗ ಒಂದು ಬೌಲ್ ಗೆ ಒಂದೆರಡು ಚಮಚದಷ್ಟು ಮೆಂತ್ಯೆ ಕಾಳನ್ನ ಹಾಕಿ ನೀರನ್ನು ಹಾಕಿ ಇಡೀ ರಾತ್ರಿ ನೆನೆಯುವುದಕ್ಕೆ ಬಿಡಬೇಕು.ಬೆಳಿಗ್ಗೆ ಅಷ್ಟರಲ್ಲಿ ಮೆಂತ್ಯೆ ಕಾಳು ಚೆನ್ನಾಗಿ ನೆನೆದಿರುತ್ತೆ.ಇದನ್ನು ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ತಿನ್ನಬೇಕು.ಇದರಲ್ಲಿ ಬೇಕಾಗಿರುವಷ್ಟು ಪೈಬರ್ ಇರುತ್ತದೆ. ಇದರಲ್ಲಿ ಮುಖ್ಯವಾಗಿ ಹೇಳಬೇಕು ಅಂದರೆ ಐರನ್ ಕಂಟೆಂಟ್ ತುಂಬಾ ಇರುತ್ತದೆ.
ಹಾಗೆ ಪ್ಯೊಟ್ಯಾಶಿಯಂ ಮಿನರಲ್ ಕೂಡ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಶರೀರದಲ್ಲಿ ರಕ್ತ ಸಂಚಲನೆಗೆ ಸಹಾಯ ಮಾಡುತ್ತದೆ. ಹಾಗೆಯೆ ಆನೀಮಿಯಾ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.ಮುಖ್ಯವಾಗಿ ನೀವು ಮೆಂತ್ಯೆಕಾಳನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಂಡರೆ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಅಂತ ಆಯುರ್ವೇದ ಶಾಸ್ತ್ರದಲ್ಲಿ ಕೂಡ ಹೇಳುತ್ತದೆ.ಈ ಮೆಂತ್ಯೆ ಕಾಳು ಅನ್ನುವುದು ನಮ್ಮ ಶರೀರದಲ್ಲಿ ವಾತ,ಪಿತ್ತ,ಕಪದೋಷ ಸಮಸ್ಯೆಯನ್ನು ಸಹ ನಿವಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದನ್ನು ತಿನ್ನುವುದರಿಂದ ಡಯಾಬಿಟಿಸ್ ಕೂಡ ಕಂಟ್ರೋಲ್ ನಲ್ಲಿ ಇರುತ್ತದೆ.ಹಾಗೆ ನೀವು ತೆಗೆದುಕೊಳ್ಳಬೇಕಾಗಿರುವ ಎರಡನೇ ಪದಾರ್ಥ ದಾಳಿಂಬೆ ಕಾಳು ನೀವು ಪ್ರತಿದಿನ ಮೆಂತ್ಯೆ ಕಾಳನ್ನು ತೆಗೆದುಕೊಂಡ ನಂತರ ಈ ದಾಳಿಂಬೆ ಕಾಳನ್ನು ತಿನ್ನಬೇಕು.ಒಂದು ಮಿಡಿಯಮ್ ಸೈಜ್ನಷ್ಟು ಕಪ್ ನಲ್ಲಿ ದಾಳಿಂಬೆ ಕಾಳನ್ನು ತಿನ್ನಬೇಕು ಔದು ರಕ್ತಹೀನತೆಯನ್ನು ಕಡಿಮೆ ಮಾಡಲು ದಾಳಿಂಬೆ ಕಾಳನ್ನು ತಿನ್ನುವುದು ತುಂಬಾ ಮುಖ್ಯವಾಗುತ್ತದೆ.ಮುಖ್ಯವಾಗಿ ಬ್ಲೆಡ್ ಲೆವೆಲ್ಸ್ ಕಡಿಮೆ ಇರುವವರು ದಾಳಿಂಬೆ ಕಾಳನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು.
ಹಾಗೆಯೇ ನಮ್ಮ ಶರೀರದಲ್ಲಿ ಪೇಂಟ್ಲೆಸ್ ಕೌಂಟ್ ಅನ್ನು ಕೂಡ ಹೆಚ್ಚಿಸುತ್ತದೆ.ಇದರಿಂದ ಹಿಮೋಗ್ಲೋಬಿನ್ ಪರ್ಸೆಂಟೇಜ್ ಅನ್ನುವುದು ತುಂಬಾ ಚೆನ್ನಾಗಿ ಹೆಚ್ಚುತ್ತೆ.ನೀವು ಈಗ ತೆಗೆದುಕೊಳ್ಳಬೇಕಾಗಿರುವುದು.ಮೂರನೇ ಪದಾರ್ಥ ಒಣದ್ರಾಕ್ಷಿ ನೀವು ಈ ಒಣದ್ರಾಕ್ಷಿಯನ್ನು ರಾತ್ರಿ ಮಲಗುವಾಗ ಒಂದು ಹದಿನೈದರಿಂದ ಹದಿನಾರು ಒಣದ್ರಾಕ್ಷಿಯನ್ನು ಒಂದು ಬೌಲ್ಗೆ ಹಾಕಬೇಕು ಮುಳಗುವಷ್ಟು ನೀರನ್ನು ಹಾಕಿ ನೆನಸಬೇಕು ಮಾರನೇ ದಿನ ಬೆಳಿಗ್ಗೆ ನೆನೆದು ಇದು ಡಬಲ್ ಸೈಜ್ ಹಾಗಿರುತ್ತದೆ.
ಈ ರೀತಿ ನೆನೆದಿರುವಂತಹ ಒಣದ್ರಾಕ್ಷಿಯನ್ನು ಬೆಳಿಗ್ಗೆ ಎದ್ದಮೇಲೆ ದಾಳಿಂಬೆ ಕಾಳು ತಿಂದಮೇಲೆ ಈ ಒಣದ್ರಾಕ್ಷಿಯನ್ನು ತಿನ್ನಬೇಕು ಒಣಗಿದ ದ್ರಾಕ್ಷಿಯಲ್ಲಿ ಕೂಡ ಐರನ್ ಅನ್ನುವುದು ತುಂಬಾನೆ ಹೆಚ್ಚಾಗಿ ಇರುತ್ತದೆ. ಮುಖ್ಯವಾಗಿ ಇದನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸಮಯದಲ್ಲಿ ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಿಂದ ಶರೀರದಲ್ಲಿ ಅನೇಕ ವಿಧವಾದಂತಹ ಅನಾರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.ಇನ್ನೂ ಮಲಬದ್ದತೆ ಸಮಸ್ಯೆ ಇರುವವರು ರಾತ್ರಿ ನೆನೆಸಿದ ಒಣದ್ರಾಕ್ಷಿಯನ್ನು ತಿನ್ನುವುದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತೆ.