ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು, ಕಷ್ಟ, ಜಾಸ್ತಿ ಆಗುತ್ತ, ಮರು ಮಾಂಗಲ್ಯ ಧಾರಣೆ ಒಳ್ಳೇದಾ…….?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆ ಗೂ ಕೂಡ ಮಾಂಗಲ್ಯ ಎನ್ನುವುದು ಬಹಳ ಅತ್ಯಮೂಲ್ಯವಾದಂತ ಆಭರಣವಾಗಿರುತ್ತದೆ. ಮದುವೆಯ ದಿನ ತನ್ನ ಗಂಡ ಕಟ್ಟಿದಂತಹ ಮಂಗಳಸೂತ್ರವನ್ನು ಯಾವತ್ತಿಗೂ ಸಹ ತೆಗೆಯಬಾರದು ಅದು ಅಶುಭ ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸುತ್ತಾರೆ.
ಆದರೆ ಇತ್ತೀಚಿನ ದಿನದಲ್ಲಿ ಕೆಲವೊಬ್ಬರು ಮದುವೆಯಾಗಿದ್ದರು ಸಹ ಮಂಗಳಸೂತ್ರವನ್ನೇ ಧರಿಸುವುದಿಲ್ಲ. ಆದರೆ ಅದು ಅಶುಭ ಆ ರೀತಿ ಮಾಡುವುದರಿಂದ ಮನೆಯಲ್ಲಿರುವಂತಹ ನಿಮ್ಮ ಪತಿಯ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಹಾಗೆಯೇ ಅವರು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಸಿಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಮಾಂಗಲ್ಯವನ್ನು ಯಾವತ್ತಿಗೂ ಯಾವ ಸಮಯದಲ್ಲಿಯೂ ಸಹ ತೆಗೆಯಬಾರದು.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕಬೇಕಾ ಅಥವಾ ಹಾಕಬಾರದ ಹಾಕುವುದರಿಂದ ಏನಿಲ್ಲ ಸಮಸ್ಯೆ ಉಂಟಾಗುತ್ತದೆ, ಅಥವಾ ಅದರಿಂದ ಎಷ್ಟು ಉಪಯೋಗವಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಹಿಂದಿನ ದಿನದಿಂದಲೂ ಕೂಡ ಈ ಒಂದು ವಿಧಾನವನ್ನು ಅನುಸರಿಸಿಕೊಂಡು ಬಂದಿದ್ದಾರೆ ಏನೆಂದರೆ ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದು ಹೌದು ಮಾಂಗ ಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದರಿಂದ ನಿಮ್ಮ ಗಂಡನ ಆಯಸ್ಸು ಹೆಚ್ಚಾಗುತ್ತದೆ, ಜೊತೆಗೆ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಅವರು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಜಯಶೀಲರಾಗಲಿ ಎನ್ನುವಂತಹ ಉದ್ದೇಶ ಇದಾಗಿರುತ್ತದೆ.
ಜೊತೆಗೆ ಆ ಕರಿಮಣಿಯನ್ನು ಶಿವನಿಗೆ ಹೋಲಿಸುತ್ತಾರೆ ಹಾಗೆಯೇ ತಾಳಿಯನ್ನು ಕಟ್ಟುವಾಗ ಅರಿಶಿನದ ದಾರವನ್ನು ಉಪಯೋಗಿಸುತ್ತಾರೆ ಅದು ಪಾರ್ವತಿಯ ಅರ್ಥ ಎನ್ನುವಂತೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮದುವೆಯ ಸಮಯದಲ್ಲಿ ಇದನ್ನು ಹಾಕಲಾಗುತ್ತದೆ. ಇದನ್ನು ಹಾಕುವುದರಿಂದ ಶಿವ ಪಾರ್ವತಿ ಇವರಿಬ್ಬರ ಆಶೀರ್ವಾದ ಇರುತ್ತದೆ ಜೊತೆಗೆ ಇವರ ವೈವಾಹಿಕ ಜೀವನ ಉತ್ತಮವಾಗಿರಲಿ ಎನ್ನುವಂತಹ ಉದ್ದೇಶದಿಂದಲೂ ಸಹ ಈ ಒಂದು ವಿಧಾನವನ್ನು ಪ್ರತಿಯೊಬ್ಬರೂ ಅನುಸರಿಸುತ್ತಾರೆ.
ಇದರ ಇನ್ನೊಂದು ಅರ್ಥ ನೋಡುವುದಾದರೆ ಕಪ್ಪು ಮಣಿಗಳು ಶನಿ ಗ್ರಹದ ಸಂಕೇತವಾಗಿದೆ, ಹಾಗೆಯೇ ಚಿನ್ನ ಗುರು ತತ್ವವನ್ನು ಹೊಂದಿದೆ, ಈ ಶನಿ ಮತ್ತು ಗುರುವಿನ ಪರಸ್ಪರ ಕ್ರಿಯೆಯು ಸಂತೋಷ ದಾಂಪತ್ಯ ಜೀವನವನ್ನು ಸೂಚಿಸುತ್ತದೆ. ಹಾಲುಣಿಸುವಂತಹ ತಾಯಂದಿರ ಎದೆಯಲ್ಲಿನ ಉಷ್ಣತೆಯನ್ನು ಹೀರಿಕೊಂಡು ಎದೆ ಹಾಲು ಕೆಡದಂತೆ ಮಗುವಿಗೆ ಹಾಲು ಕುಡಿಯಲು ಅನುಕೂಲವಾದ ಸಮ ಉಷ್ಣತೆಯಲ್ಲಿ ಇರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.