ಯಾರು ಈ ಅಪರ್ಣ ಅದ್ಬುತ ಪ್ರತಿಭೆಯಾದರೂ ಸ್ಯಾಂಡಲ್ವುಡ್ ನಲ್ಲಿ ಮಿಂಚಲಿಲ್ಲ ಯಾಕೆ ..ಅಪರ್ಣ ಅವರ ವ್ಯಯಕ್ತಿಕ ಜೀವನ ಇಷ್ಟೊಂದು ನೋವಿದ್ಯಾ
ಯಾರು ಈ ಅಪರ್ಣ ಅದ್ಬುತ ಪ್ರತಿಭೆಯಾದರೂ ಸ್ಯಾಂಡಲ್ವುಡ್ ನಲ್ಲಿ ಮಿಂಚಲಿಲ್ಲ ಯಾಕೆ… ಕನ್ನಡ ಚಿತ್ರರಂಗ ಆಘಾತದ ಮೇಲೆ ಆಘಾತಗಳನ್ನು ಎದುರಿಸುತ್ತಾ ಇದೆ ಈ ಆಘಾತದ ನಡುವೆಯೇ ಬರಸಿಡಿಲು ಬಡೆಯುವಂತಹ ಸುದ್ದಿ ಒಂದು ಕರುನಾಡಿಗೆ ಅಪ್ಪಳಿಸಿದೆ ಅಚ್ಚ ಕನ್ನಡದ ಸ್ವಚ್ಛ ಪುಷ್ಪ ಬಾಡಿಹೋಗಿದೆ.
ಏನು ಅಂತಹ ಸುದ್ದಿ ಅದು ಇನ್ನು ಮುಂದೆ ಜೇನಿನಂತಹ ಧ್ವನಿ ಕೇವಲ ರೆಕಾರ್ಡಿಂಗ್ ನಲ್ಲಿ ಮಾತ್ರ ಕೇಳಿಸುತ್ತದೆ ಎನ್ನುವಂತಹ ಸುದ್ದಿ ಅದು ತುಂಬಾ ಜನರಿಗೆ ಆ ಸುದ್ದಿಯನ್ನು ಅರಗಿಸಿಕೊಳ್ಳುವುದಕ್ಕೆ ಈಗಲೂ ಕೂಡ ಸಾಧ್ಯವಾಗಿಲ್ಲ ಕಾರಣ ಪೂಜ್ಯ ಕನ್ನಡಿಗರು ಹೃದಯದಲ್ಲಿ ಇಟ್ಟುಕೊಂಡು ಪೂಜಿಸಿದ ಸ್ವಚ್ಛ ಮನಸ್ಸಿನ ಕನ್ನಡತಿಯವರು ಅಪರ್ಣ ಎನ್ನುವ ಹೆಸರಿಗ ಕಣ್ಮರೆಯಾಗಿದೆ.
ಲವಲವಿಕೆಯಿಂದ ಕನ್ನಡಾಂಬೆಯ ಸೇವೆ ಮಾಡಿ ದ ಮಾತಿನಮಲ್ಲಿ ತಮ್ಮ ಮಾತನ್ನು ನಿಲ್ಲಿಸಿದ್ದಾರೆ ಇನ್ನು ಕೂಡ ಅದೆಷ್ಟು ಕಾರ್ಯಕ್ರಮಗಳನ್ನ ನಿರೂಪಿಸಬೇಕಿದ್ದ ಕನ್ನಡತಿ ನಿರೂಪಕಿ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ನಿಲ್ಲಿಸಿ ಹೊರಟಿದ್ದಾರೆ ನಟನೆ ನಿರೂಪಣೆ ದ್ವನಿ ಕಲಾವಿದೆ ಎಲ್ಲದಕ್ಕಿಂತ ಹೆಚ್ಚಾಗಿ ಅಚ್ಚ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯವನ್ನು ಗೆದ್ದಿದ್ದ ಅಪರ್ಣ ಬಾಳ ಪಯಣವನ್ನು ಮುಗಿಸಿದ್ದಾರೆ.
ಅಷ್ಟಕ್ಕೂ ಇತ್ತೀಚಿನವರೆಗೂ ನಗುನಗುತಲೆ ಜೀವನ ಸಾಗಿಸುತ್ತಾ ಇದ್ದ ಪರಿಣ ಅವರಿಗೆ ಇದ್ದಕ್ಕಿದ್ದ ಹಾಗೆ ಏನಾಯ್ತು ಅವರು ತಮ್ಮ ಜೀವನದಲ್ಲಿ ಮಾಡಿರುವಂತಹ ಸಾಧನೆ ಎಂತಹದ್ದು ಮೊದಲು ಇಂಗ್ಲಿಷ್ ನಲ್ಲಿ ನಿರೂಪಣೆ ಆರಂಭಿಸಿದಂತಹ ಅಪರ್ಣ ನಂತರ ಕನ್ನಡ ನಿರೂಪಣೆಯಲ್ಲಿ ಅಭಿಮಾನಿ ಸಾಗರವನ್ನು ಸಂಪಾದನೆ ಮಾಡಿದ್ದು ಹೇಗೆ ಎಲ್ಲವನ್ನು ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.
ಅಪರ್ಣ ಈ ಹೆಸರು ಕನ್ನಡಿಗರಿಗೆ ಚಿರಪರಿಚಿತ ಕಾರಣ ಅವರ ನಿರೂಪಣ ಶೈಲಿ ಅವರು ಅಚ್ಚ ಕನ್ನಡದಲ್ಲಿ ಮಾತನಾಡುತ್ತಾ ಇದ್ದ ಆ ಪರಿ ನಿಜ ಹೇಳಬೇಕು ಎಂದರೆ ಕನ್ನಡದ ನಿರೂಪಣೆಗೆ ಬ್ರಾಂಡ್ ವ್ಯಾಲ್ಯೂ ತಂದು ಕೊಟ್ಟಿದ್ದೆ ಅಪರ್ಣ ಅವರು ಅದರಲ್ಲಿಯೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಮಾಡುತ್ತಿದ್ದಂತಹ ನಿರೂಪಣೆ ಎನ್ನು ಮೆಚ್ಚದೇ ಇರುವವರು ಇಲ್ಲವೇ ಇಲ್ಲ ಇವರ ನಿರೂಪಣೆಯನ್ನು ಕೇಳಲು ಎಂದು ಜನ ಸರ್ಕಾರಿ ಕಾರ್ಯಕ್ರಮಗಳನ್ನು ನೋಡುವುದಕ್ಕೆ ಶುರು ಮಾಡಿ ಬಿಟ್ಟಿದ್ದರು.
ಇಂತಹ ಅಪರ್ಣ ಇಂದು ನೆನಪು ಮಾತ್ರ ಕ್ಯಾನ್ಸರ್ ಎನ್ನುವಂತಹ ಮಹಾಮಾರಿ ರೋಗ ಅವರನ್ನು ಇಹಲೋಕ ತ್ಯಜಿಸುವಂತೆ ಮಾಡಿದೆ ನಿರೂಪಣ ಕ್ಷೇತ್ರದಲ್ಲಿ ನಕ್ಷತ್ರದಂತೆ ಮಿಂಚಿದ್ದ ಅಪರಣ ಇನ್ನು ಕೇವಲ ನೆನಪು ಮಾತ್ರ ತುಂಬಾ ಜನಕ್ಕೆ ಅಪರ್ಣ ಅವರು ನಿರೂಪಣೆ ಮಾತ್ರಕ್ಕೆ ಪರಿಚತರು ಇದನ್ನು ಬಿಟ್ಟರೆ ಮಜಾ ಟಾಕೀಸ್ ನಲ್ಲಿ ಅವರು ಮಾಡುತ್ತಾ ಇದ್ದ ವರು ಪಾತ್ರವನ್ನು ತುಂಬಾ ಜನ ನೋಡಿರಬಹುದು.
ಆದರೆ ಅಪರ್ಣ ಅವರು ಒಬ್ಬ ಅಪ್ಪಟ ಕಲಾವಿದ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ.ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಅಪರ್ಣ ಸಿನಿ ರಂಗದಲ್ಲಿ ಬಣ್ಣವನ್ನು ಹಚ್ಚಿದ್ದರು ಅಪರ್ಣ ಅವರ ತಂದೆ ಸಿನಿಪತ್ರ ಕರ್ತರಾಗಿ ಕೆಲಸವನ್ನು ಮಾಡುತ್ತಾ ಇದ್ದರು ಹೀಗಾಗಿ ತನ್ನ ಮಗಳು ಕೂಡ ಸಿನಿಮಾರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಅವರಿಗೆ ಇತ್ತು.
ಇದೇ ಆಸೆಯನ್ನು ನೆರವೇರಿಸಲು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ತಮ್ಮ ಮಗಳಿಗಾಗಿ ಒಂದು ಅವಕಾಶವನ್ನು ಕೊಡಿ ಎಂದು ಬೇಡಿಕೆಯನ್ನು ಇಟ್ಟಿದ್ದರಂತೆ ಈ ಬೇಡಿಕೆ ಅಪರ್ಣ ಅವರಿಗೆ ಮಸಣದ ಹೂವು ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.