ರಥಸಪ್ತಮಿಯನ್ನು ಯಾವಾಗ ಆಚರಿಸಲಾಗುತ್ತದೆ?

WhatsApp Group Join Now
Telegram Group Join Now

ಈ ಲೇಖನದಲ್ಲಿ 2024 ರಲ್ಲಿ ಬರುವ ರಥಸಪ್ತಮಿ ಯಾವಾಗ ಸಪ್ತಮಿ ತಿಥಿ ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ಅಂತ್ಯವಾಗುತ್ತದೆ? ಶುಭ ಮುಹೂರ್ತ ಪೂಜಾ ವಿಧಾನ ಹಾಗೆ ಇದರ ಮಹತ್ವವನ್ನು ಕೂಡ ತಿಳಿಯೋಣ. ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ನಂತರ ಮಾಘ ಮಾಸದ ಶುದ್ಧ ಸಪ್ತಮಿಯಂದು. ರಥ ಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಿಂದ ಸೂರ್ಯನ ರತ ದಕ್ಷಿಣಾಯಣದಿಂದ ಉತ್ತರಾಯಣ ಕಡೆಗೆ ಪ್ರಮಾಣಸುತ್ತದೆ. ಸೂರ್ಯನು ಎಲ್ಲ 12 ರಾಶಿಗಳನ್ನು ಸುತ್ತಲು 1 ವರ್ಷ ತೆಗೆದುಕೊಳ್ಳುತ್ತಾನೆ. ಒಂದು ತಿಂಗಳು ಒಂದು ರಾಶಿಯಲ್ಲಿ ಸಂಚರಿಸುತ್ತಾನೆ. ಅದಿತಿ ಮತ್ತು ಕಶ್ಯಪ ದಂಪತಿಗಳಿಗೆ ಸೂರ್ಯ ಜನಿಸಿದ ದಿನವಾದ ಕಾರಣವಾಗಿ ಈ ದಿನ ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಅಂತಲೂ ಕೂಡ ಕರೆಯಲಾಗುತ್ತದೆ.

ರಥಸಪ್ತಮಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನವನ್ನು ಮಾಡಿ. ಈ ಅದರಲ್ಲೂ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲವನ್ನು ಬೆರೆಸಿ ಪುಣ್ಯ ಸ್ನಾನವನ್ನು ಮಾಡಿರಿ. ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ ಅದರಲ್ಲೂ ಈ ದಿನದಂದು ಪೂಜೆ ಮಾಡುವಾಗ ನೀವು ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ.

ಹಾಗೆ ಸೂರ್ಯನಿಗೆ ಯಾವ ರೀತಿ ಅರ್ಘ್ಯವನ್ನು ಅರ್ಪಿಸಬೇಕು ಎಂದರೆ ಒಂದು ತಾಮ್ರದ ಬಟ್ಟಲಿನ ಅಥವಾ ಚೊಂಬನ್ನು ತೆಗೆದುಕೊಂಡು ಅದರಲ್ಲಿ ಶುದ್ಧವಾದ ನೀರನ್ನು ಹಾಕಿ. ಅದಕ್ಕೆ ಎಳ್ಳು ಮತ್ತು ಎಕ್ಕದ ಎಲೆಯನ್ನು ಸೇರಿಸಿ ಶ್ರೀಗಂಧವನ್ನು ಸೇರಿಸಿ ಬಿಡಿ. ಹೂಗಳನ್ನು ಸೇರಿಸಿ ನಂತರ ಆ ನೀರನ್ನು ಸೂರ್ಯ ದೇವರಿಗೆ ಅರ್ಘ್ಯ ವಾಗಿ ಅರ್ಪಿಸಬೇಕು. ಸೂರ್ಯ ದೇವರಿಗೆ ಅರ್ಗ್ಯವನ್ನು ಅರ್ಪಿಸುವ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು ಪಠಿಸುವ ಮೂಲಕ ಅರ್ಘ್ಯವನ್ನು ಅರ್ಪಿಸಬೇಕು.

ಇದರಿಂದ ಸೂರ್ಯ ದೇವರ ಆಶೀರ್ವಾದವೂ ನಿಮಗೆ ಸಿಗುತ್ತದೆ. ಹಾಗೆ ಈ ದಿನದಂದು ನೀವು ಸ್ನಾನ ಮಾಡುವಾಗ ತಲೆಯ ಮೇಲೆ ಏಳು ಎಕ್ಕದ ಗಿಡದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಿದರೆ ಏಳು ಜನ್ಮಗಳಲ್ಲಿ ಮಾಡಿದ. ಪಾಪಗಳು ಹೋಗುತ್ತವೆ ಎಂಬ ನಂಬಿಕೆ ಇದೆ. ಎಕ್ಕದ ಎಲೆಗಳನ್ನು ಅರ್ಕಪತ್ರ ಎಂದು ಕೂಡ ಕರೆಯುತ್ತಾರೆ. ಸೂರ್ಯನಿಗೆ ಅರ್ಕ ಎಂಬ ಹೆಸರು ಕೂಡ ಇದೆ. ಹಾಗಾಗಿ ಸೂರ್ಯನಿಗೆ ಎಕ್ಕದ ಗಿಡದ ಎಲೆಗಳು ಇಷ್ಟ. ಹಾಗಾದರೆ 2024 ರಲ್ಲಿ ರಥ ಸಪ್ತಮಿ ಹಬ್ಬವು ಯಾವ ದಿನ ಬಂದಿದೆ ಎಂಬುದ ಆದರೆ 2024 ರಲ್ಲಿ ರಥ ಸಪ್ತಮಿ ಹಬ್ಬವನ್ನು ಫೆಬ್ರವರಿ ಹದಿನಾರನೇ ತಾರೀಖು ಶುಕ್ರವಾರದಂದು ಆಚರಿಸಲಾಗುತ್ತದೆ.

ರಥ ಸಪ್ತಮಿ ತಿಥಿ ಪ್ರಾರಂಭವಾಗುವುದು ಫೆಬ್ರವರಿ ಹದಿನೈದನೇ ತಾರೀಖು ಬೆಳಿಗ್ಗೆ 10:12 ನಿಮಿಷಕ್ಕೆ ಪ್ರಾರಂಭವಾಗಿ. ಫೆಬ್ರವರಿ ಹದಿನಾರನೇ ತಾರೀಖು ಬೆಳಿಗ್ಗೆ 8:00 ಐವತ್ತನಾಲ್ಕು ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಸುರ್ಯೋದಯದ ಪ್ರಕಾರ ಈ ರಥ ಸಪ್ತಮಿ ಹಬ್ಬವನ್ನು ಫೆಬ್ರವರಿ ಹದಿನಾರನೇ ತಾರೀಖು ಶುಕ್ರವಾರದಂದು ಆಚರಿಸಲಾಗುತ್ತದೆ. ಸ್ನಾನಕ್ಕೆ ಶುಭ ಮುಹೂರ್ತ ಫೆಬ್ರವರಿ ಹದಿನಾರನೇ ತಾರೀಖು ಶುಕ್ರವಾರ ಬೆಳಗಿನ ಜಾವ 5 ಗಂಟೆ ನಾಲ್ಕು ನಿಮಿಷದಿಂದ ಆರು ಘಂಟೆ 42 ನಿಮಿಷದವರೆಗೂ ಇರುತ್ತದೆ.

ದೇಶದ ಹಲವು ಪ್ರಮುಖ ದೇವಾಲಯಗಳಲ್ಲಿ ರಥ ಸಪ್ತಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ. ರಥಸಪ್ತಮಿಯ ದಿನದಂದು ಉಪವಾಸದ ಮೂಲಕ ಪೂಜೆ ಮಾಡಿದರೆ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ಹಾಗೆ ರಥಸಪ್ತಮಿಯ ದಿನದಂದು ಆದಿತ್ಯ ಹೃದಯ ಪಾರಾಯಣ ಮತ್ತು ಸೂರ್ಯಾಸ್ತವನ್ನು ಓದುವುದರಿಂದ ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ಜೀವನದಲ್ಲಿ ಸಂತೋಷ ಸಮೃದ್ಧಿಯು ಹೆಚ್ಚಾಗುತ್ತದೆ. ಸೂರ್ಯನ ರತ ವಿಶಿಷ್ಟವಾಗಿದೆ. ಸೂರ್ಯನು ಏಳು ಕುದುರೆಗಳ ಮೇಲೆ ಸಂಚಾರ ಮಾಡುತ್ತಲೇ ಇರುತ್ತಾನೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god