ರಮ್ಯಾ ಬಾಯಲ್ಲಿ ಕನ್ನಡ ಬರಲೇ ಇಲ್ಲ,ನಿರಾಸೆ ತಂದ ವೀಕೆಂಡ್ ವಿಥ್ ರಮೇಶ್… ವೀಕೆಂಡ್ ವಿತ್ ರಮೇಶ್ ಕನ್ನಡದ ಅತ್ಯದ್ಭುತವಾದಂತಹ ಕಾರ್ಯಕ್ರಮ ರಮೇಶ್ ಅರವಿಂದ್ ಅವರ ಅಚ್ಚುಕಟ್ಟಾದಂತಹ ನಿರೂಪಣೆ ಅಲ್ಲಿಗೆ ಬರುವಂತಹ ಸಾಧಕರ ಅದ್ಭುತವಾದಂತಹ ಜೀವನ ಅಥವಾ ಜೀವನದ ಸಾಧನೆಯ ಕಥೆ ಸಹಜವಾಗಿ ಜನರ ಗಮನವನ್ನು ಸೆಳೆಯುತ್ತದೆ ಒಬ್ಬರ ಬದುಕಿನ.
ಕಥೆ ಒಂದೊಂದು ರೀತಿಯಲ್ಲಿ ಇರುತ್ತದೆ ಬಹಳ ಕಷ್ಟಪಟ್ಟು ಆ ಅಂತದ ವರೆಗೆ ಬಂದಿರುತ್ತಾರೆ ಹೀಗಾಗಿ ಅದರಲ್ಲಿ ಎಷ್ಟೋ ಜನರ ಬದುಕು ನಮ್ಮೆಲ್ಲರಲ್ಲೂ ಕೂಡ ಸ್ಪೂರ್ತಿ ತುಂಬುತ್ತದೆ ಹೀಗಾಗಿ ಪ್ರತಿ ಗೆಸ್ಟ್ ಗಳು ಬಂದಾಗಲೂ ಕೂಡ ಅಷ್ಟೇ ಕುತೂಹಲದಿಂದ ಅವರ ಬದುಕಿನ ಕಥೆಯನ್ನ ಕೇಳುತ್ತಾರೆ ಇಲ್ಲಿಯವರೆಗೆ ಬರೋಬ್ಬರಿ 84 ಸಾಧಕರು ಆ ಕುರ್ಚಿಯ ಮೇಲೆ ಕೂತಿದ್ದಾರೆ.
ಒಬ್ಬ ಬರೋದು ಒಂದೊಂದು ಕಥೆ ಕಣ್ಣೀರು ಹಾಕಿದ್ದಾರೆ ಅವರ ಬದುಕಿನ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಅಲ್ಲಿಗೆ ಬಂದಂತವರು ಮಗುವಾಗಿ ಇದ್ದಾರೆ ಅಂದರೆ ಎಷ್ಟೇ ಎತ್ತರಕ್ಕೆ ಹೋಗಿದ್ದರು ಕೂಡ ಅಲ್ಲಿ ಮುಗ್ಧವಾಗಿ ಚಿಕ್ಕ ಮಕ್ಕಳ ರೀತಿಯಲ್ಲಿ ಮಾತನಾಡಿದ್ದಾರೆ ಅತ್ತಿದ್ದಾರೆ ಅವರ ಆ ಬದುಕಿನ ಕಥೆಯನ್ನ ನೋಡಿ ನಾವೆಲ್ಲರೂ ಕೂಡ ಖುಷಿಪಟ್ಟಿದ್ದೆವು ಸೀಸನ್ 5.
ಅಂದಾಗ ಸಹಜವಾಗಿಯೇ ಒಂದಷ್ಟು ಕುತೂಹಲ ಇತ್ತು ಅದರಲ್ಲೂ ಕೂಡ ಮೊದಲ ಅತಿಥಿ ಅಂದಾಗ ಮೊದಲ ಅತಿಥಿ ರಮ್ಯಾ ಅಂದಾಗ ನಮ್ಮಲ್ಲಿ ನಿರೀಕ್ಷೆ ದುಪಟ್ಟ ಆಗಿತ್ತು ಕಾರಣ ರಮ್ಯಾ ಅವರು ಇತ್ತೀಚಿಗೆ ಎಲ್ಲೂ ಕೂಡ ಸಂದರ್ಶನವನ್ನ ಕೊಟ್ಟಿರಲಿಲ್ಲ ಅಥವಾ ಅವರ ಬದುಕಿನ ಕಂಪ್ಲೀಟ್ ವಿವರ ಯಾರ ಬಳಿಯೂ ಇರಲಿಲ್ಲ ಯಾರು ಕೂಡ ಅವರ ಖಾಸಗಿ ಬದುಕಿನ.
ಕಥೆಯನ್ನ ಹೇಳಿಕೊಂಡಿರಲಿಲ್ಲ ಅಥವಾ ನಾನು ಯಾವ ರೀತಿಯಾಗಿ ಹಂತ ಹಂತವಾಗಿ ಮೇಲೆ ಬಂದೆ ಎನ್ನುವಂತಹ ವಿಚಾರವನ್ನ ಎಲ್ಲೂ ಕೂಡ ಶೇರ್ ಮಾಡಿಕೊಂಡಿರಲಿಲ್ಲ ಕೇವಲ ಎಲ್ಲರಿಗೂ ಗೊತ್ತಿದ್ದ ವಿಚಾರ ಏನೆಂದರೆ ಡಾಕ್ಟರ್ ರಾಜಕುಮಾರ್ ಕುಟುಂಬದ ಕಡೆಯಿಂದ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಟ್ಟರು ಅಭಿ ಅವರ ಮೊದಲ ಸಿನಿಮಾ ಅದಾದ ನಂತರ.
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿಕೊಂಡು ಹೋದರು ಮೋಹಕ ತರಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆದರು ಎನ್ನುವಂತಹ ವಿಚಾರ ಬಿಟ್ಟರೆ ಅವರ ಬದುಕಿನ ಕಥೆ ಹೆಚ್ಚಾಗಿ ಗೊತ್ತಿರಲಿಲ್ಲ ಹೀಗಾಗಿ ಸಹಜವಾಗಿ ಕುತೂಹಲ ಇತ್ತು ಆದರೆ ಶನಿವಾರದ ಮೊದಲ ಶೋ ಮುಕ್ತಾಯವಾಗುತ್ತಾ ಇದ್ದ ಹಾಗೆ ಅಥವಾ ಮೊದಲ ಎಪಿಸೋಡ್ ಮುಗಿಯುತ್ತ ಇದ್ದ ಹಾಗೆ.
ಜನ ಬ್ರಹ್ಮನೀರಸಗೊಂಡರು ಕಾರಣ ನಾನು ಕೂಡ ಬಹಳ ನಿರೀಕ್ಷೆಯಿಂದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ವೀಕ್ಷಣೆ ಮಾಡಿದೆ ಅದರಲ್ಲಿ ಬಹಳ ಬೇಸರವಾಗಿದ್ದು ಎಂದರೆ ನಟಿ ರಮ್ಯಾ ಎಲ್ಲೂ ಕೂಡ ಮುಕ್ತವಾಗಿ ಮಾತನಾಡಲೇ ಇಲ್ಲ ಅಂದರೆ ಕಂಪ್ಲೀಟ್ ತಮ್ಮ ಬದುಕಿನ ಕಥೆಯನ್ನ ಎಲ್ಲೂ ಕೂಡ ಬಿಚ್ಚಿಡಲಿಲ್ಲ ಬಹುತೇಕ ಸಂದರ್ಭದಲ್ಲಿ ನನಗೆ ಅದು ನೆನಪಿಲ್ಲ ನಾನು ಅದನ್ನು.
ಮರೆತುಬಿಟ್ಟಿದ್ದೇನೆ ಎಂದರು,ನಿಜವಾಗಿಯೂ ಹೇಳಿದರ ಅಥವಾ ಎಲ್ಲವನ್ನು ಹೇಳಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಎಂದು ಗೊತ್ತಿಲ್ಲ ಅದು ಅವರ ವೈಯಕ್ತಿಕ ವಿಚಾರ ಹೇಳಲೇಬೇಕು ಎನ್ನುವಂಥದ್ದು ಎಲ್ಲೂ ಕೂಡ ಇಲ್ಲ ಆದರೆ ಅವರು ಮುಗ್ಧವಾಗಿ ಮಾತನಾಡುವಂತಹ ಕಾರಣಕ್ಕಾಗಿ ಆ ಶೋ ಜನರಿಗೆ ಅಷ್ಟರಮಟ್ಟಿಗೆ ಹಿಡಿಸಲಿಲ್ಲ ಅಥವಾ ಆಪ್ತ ಎಂದು ಅನಿಸಲೇ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.