ಕೆಲವರು ಸಲಿಂಗಕಾಮಿಗಳಾಗುತ್ತಾರೆ ಯಾಕೆ??
ತುಂಬಾ ಜನಕ್ಕೆ ಈ ಪ್ರಶ್ನೆ ತಮ್ಮ ಮನಸ್ಸಿನಲ್ಲಿ ಇರುತ್ತದೆ ಆದರೆ ಈ ಪ್ರಶ್ನೆಯನ್ನು ಯಾರನ್ನಾದರೂ ಕೇಳುವುದಕ್ಕೆ ಹಿಂಜರಿಯುತ್ತಾರೆ ಯಾಕೆಂದರೆ ನಮ್ಮ ಮೇಲೆ ಯಾರಾದರೂ ಏನಾದರೂ ತಪ್ಪು ಭಾವನೆಯಿಂದ ತಿಳಿದುಕೊಳ್ಳುತ್ತಾರೋ ಎಂದು ಆದರೆ ಈ ಹೋಮೋ ಸೆಕ್ಶಿಯಲ್ ಬಗ್ಗೆ
ತಿಳಿದುಕೊಳ್ಳಬೇಕಾಗಿರುವುದು ತುಂಬಾ ಮುಖ್ಯವಾಗಿರುತ್ತದೆ ಯಾಕೆ ಎಂದರೆ ನಾವೆಲ್ಲ ಮನುಷ್ಯರು ನಮ್ಮ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು ಇದರಲ್ಲಿ ನಾಚಿಕೆ ಪಟ್ಟುಕೊಳ್ಳುವoತಹ ವಿಷಯ ಏನೂ ಇಲ್ಲ ಈ ವಿಷಯದ ಬಗ್ಗೆ ಶಾಲೆಗಳಲ್ಲಿ ಹೇಳುವುದಿಲ್ಲ ಮತ್ತು ಕಾಲೇಜುಗಳಲ್ಲಿಯೂ ಕೂಡ ಹೇಳುವುದಿಲ್ಲ ಹಾಗಾಗಿ ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಕೆಲವು ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳುತ್ತಾರೆ ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ವಿಷಯ ಗಳನ್ನು ವಿಚಾರಗಳನ್ನು ಚರ್ಚಿಸುತ್ತಾ ಈ ವಿಷಯವನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಹಾಗೂ ಟ್ರಾನ್ಸ್ ಜೆಂಡರ್ ಎಂದರೆ ಯಾರು ಇವರು ಯಾಕೆ ಹೀಗೆ ಆಗುತ್ತಾರೆ ಮತ್ತು ನಮ್ಮ ಕಾನೂನು ಇದರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದು ಕೊಳ್ಳೋಣ ಈ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಯಾವುದೇ ರೀತಿಯಾದಂತಹ ಮುಜುಗರ ಬೇಡ ಹಾಗಾಗಿ ಈ ವಿಷಯ ಪ್ರತಿಯೊಬ್ಬರಿಗೂ ಕೂಡ ಗೊತ್ತಿರಲೇಬೇಕು ಹಿಂದಿನ ಕಾಲದಲ್ಲಿ ಅಂದರೆ ಮೊದಲು ಲೈಂಗಿಕ ಸಮಾಚಾರಗಳನ್ನು ಬಹಳ ಗುಪ್ತವಾಗಿ ಸಮಾಲೋಚನೆಗಳನ್ನು ಮಾಡುತ್ತಿದ್ದರು ಗಂಡು ಮತ್ತು ಹೆಣ್ಣಿನ ಮಧ್ಯೆ ಮಾತ್ರ ಆಕರ್ಷಣೆ ಏರ್ಪಡುತ್ತಿತ್ತು ಆದರೆ ಈ ಆಧುನಿಕ ಪ್ರಪಂಚದಲ್ಲಿ ಕೇವಲ ಗಂಡು ಹೆಣ್ಣುಗಳ ಮಧ್ಯೆ ಮಾತ್ರವಲ್ಲದೆ ಎಂ ಮತ್ತು ಎಫ್ ನ ಜೊತೆ ಎಲ್ ಜಿ ಬಿ ಟಿ ಐ ಕೂಡ ಇದೆ ಇವು ಏನು ಎಂಬುದನ್ನು ಈ ಕೆಳಗೆ ತಿಳಿಯೋಣ. ಈ ಪ್ರಪಂಚದಲ್ಲಿ ಇರುವುದು ಎರಡೇ ಜಾತಿ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು.
ಹೆಣ್ಣನ್ನು ನೋಡಿದರೆ ಗಂಡಿಗೆ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಗಂಡನ್ನು ನೋಡಿದರೆ ಹೆಣ್ಣಿಗೆ ಆಕರ್ಷಣೆ ಹೆಚ್ಚಾಗುತ್ತದೆ ಇದು ಪ್ರಕೃತಿಯ ನಿಯಮ ಮೊದಲು ಈ ಸೆಕ್ಸ್ ಬಗ್ಗೆ ಮುಕ್ತವಾಗಿ ಚರ್ಚೆಯನ್ನು ಮಾಡುತ್ತಿರಲಿಲ್ಲ ಆದರೆ ಈಗ ಕಾಲ ತುಂಬಾ ಬದಲಾಗಿದೆ ಮೇಲ್ ಮತ್ತು ಫೀಮೇಲ್ ನಲ್ಲಿ ಎರಡು ವಿಧ ಮೊದಲನೆಯದು ಹೆಟಿರೋ ಸೆಕ್ಷಿಯಲ್ ಎರಡನೆಯದು ಹೋಮೋ ಸೆಕ್ಷಿಯಲ್ ಮೊದಲು ನಾವು ಮೊದಲು ಹೆಟಿರೋ ಸೆಕ್ಷಿಯಲ್ ಬಗ್ಗೆ ತಿಳಿದುಕೊಳ್ಳೋಣ ನಮ್ಮ ಭೂಮಿ ಮೇಲೆ ಇರುವಂತಹ ಹೆಚ್ಚಿನ ಜನಸಂಖ್ಯೆ ಈ ಗುಂಪಿಗೆ ಸೇರುತ್ತಾರೆ ಹೆಟಿರೋ ಸೆಕ್ಷಿಯಲ್ ಅಂದರೆ ಗಂಡು ಹೆಣ್ಣಿಗೆ ಆಕರ್ಷಣೆ ಆಗುತ್ತಾನೆ ಮತ್ತು ಹೆಣ್ಣು ಗಂಡಿಗೆ ಆಕರ್ಷಣೆ ಆಗುತ್ತಾಳೆ ಇದು ಪ್ರಾಕೃತಿಕವಾಗಿ ಪೂರ್ವ ಕಾಲದಿಂದಲೂ ಕೂಡ ಬಂದಿರುವಂಥದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.