ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಅಗತ್ಯವಿರುವ ವಸ್ತುಗಳು ಮಾತ್ರ ತಪ್ಪದೇ ತಗೋಳಿ…
ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಅಗತ್ಯವಿರುವ ವಸ್ತುಗಳು ಮಾತ್ರ ತಪ್ಪದೆ ತೆಗೆದುಕೊಳ್ಳಿ… ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಸಾಮಗ್ರಿಗಳನ್ನೆಲ್ಲ ಏನೆಲ್ಲಾ ಶಾಪಿಂಗ್ ಮಾಡಬೇಕು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎನ್ನುವಂತದನ್ನ ಈಗ ತಿಳಿಯುತ್ತಾ ಹೋಗೋಣ.
ಹೆಚ್ಚಿಗೆ ಖರ್ಚಿಲ್ಲದೆ ಅತಿ ಮುಖ್ಯವಾಗಿ ಏನೇನು ಬೇಕು ಅಷ್ಟನ್ನು ಮಾತ್ರ ನಾನು ತಿಳಿಸುತ್ತಾ ಇದ್ದೇನೆ. ಈಗಾಗಲೇ ಸುಮಾರು ವರ್ಷಗಳಿಂದ ಹಬ್ಬ ಮಾಡಿಕೊಂಡು ಬಂದಿರುವವರಿಗೆ ಗೊತ್ತಿರುತ್ತದೆ ನೀವೆಲ್ಲರೂ ಕೂಡ ಏನನ್ನು ತೆಗೆದುಕೊಳ್ಳಬೇಕು ಎಂದು ತಿಳಿದುಕೊಂಡಿರುತ್ತೀರಾ ಈಗಾಗಲೇ ತಂದು ಕೂಡ ಇಟ್ಟುಕೊಂಡಿರುತ್ತೀರಾ.
ಈ ವರ್ಷದಿಂದ ಇದೆ ಮೊದಲ ಬಾರಿ ವ್ರತವನ್ನ ಶುರು ಮಾಡುತ್ತಿರುವವರಿಗೆ ಖಂಡಿತವಾಗಿಯೂ ಉಪಯೋಗವಾಗುತ್ತದೆ ಗಂದಿಗೆ ಅಂಗಡಿ ಸಾಮಗ್ರಿಗಳೇ ಬೇರೆ ಮತ್ತು ಮಾರುಕಟ್ಟೆಯಿಂದ ತರುವಂತಹ ಸಾಮಗ್ರಿಗಳೇ ಬೇರೆ ಇವೆರಡನ್ನು ಕೂಡ ನಾನು ಬೇರೆ ಬೇರೆಯಾಗಿಯೇ ತಿಳಿಸಿ ಕೊಡುತ್ತಾ ಇದ್ದೇನೆ ಈಗಾಗಲೇ ರಥವನ್ನು ಶುರು ಮಾಡಿದವರು.
ಕೂಡ ನಿಮ್ಮ ಬಳಿ ಏನು ಇದೆ ಅದನ್ನ ಬಿಟ್ಟು ಬೇರೆ ಇನ್ನು ಯಾವುದಾದರೂ ತೆಗೆದುಕೊಳ್ಳಬೇಕು ಎಂದರೆ ಮಾತ್ರ ತೆಗೆದುಕೊಳ್ಳಿ ಈಗಾಗಲೇ ನಮ್ಮ ಬಳಿ ಇದೆ ಮತ್ತೆ ತೆಗೆದುಕೊಳ್ಳಬೇಕಾ ಎಂದು ಕೇಳಬೇಡಿ ನಿಮ್ಮ ಬಳಿ ಇದ್ದರೆ ಮಾತ್ರ ಅದನ್ನು ಬಿಟ್ಟು ನಿಮಗೆ ಏನು ಬೇಕು ಅನಿಸುತ್ತದೆಯೋ ನಿಮ್ಮ ಜಾಗದಲ್ಲಿ ಅದು ಇದೆ ಎಂದರೆ ಮಾತ್ರ ಅದನ್ನು ತೆಗೆದುಕೊಳ್ಳಿ.
ಇಲ್ಲ ಎಂದರೆ ಇಷ್ಟು ವರ್ಷ ನೀವು ಹೇಗೆ ಪೂಜೆಯನ್ನು ಮಾಡಿಕೊಂಡು ಬಂದಿದ್ದೀರಾ ಅದೇ ರೀತಿ ಮಾಡಿಕೊಳ್ಳಬಹುದು ಮತ್ತು ನೀವು ಎಲ್ಲಿಯಾದರೂ ಹೋದಾಗ ದೇವಸ್ಥಾನ ಇರಬಹುದು ಅಥವಾ ಬೇರೆ ಬೇರೆ ಕಡೆ ಹೋದಾಗ ನಿಮಗೆ ಅಂತಹ ವಸ್ತುಗಳು ಕಣ್ಣಿಗೆ ಬಿದ್ದಾಗ ನೀವು ತಂದು ಇಟ್ಟುಕೊಳ್ಳಿ ಪರವಾಗಿಲ್ಲ.
ಇಷ್ಟೆಲ್ಲಾ ವಸ್ತುಗಳನ್ನ ಮೊದಲ ಬಾರಿಗೆ ತೆಗೆದುಕೊಳ್ಳಬೇಕು ಇಷ್ಟೆಲ್ಲಾ ವಸ್ತುವನ್ನು ಮೊದಲನೇ ಬಾರಿ ಪೂಜೆ ಮಾಡುವವರು ಇಟ್ಟು ಪೂಜೆ ಮಾಡಬೇಕು ಎಂದು ಏನು ಕೂಡ ಇಲ್ಲ ನಿಮಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ತೆಗೆದುಕೊಂಡು ನೀವು ಪೂಜೆ ಮಾಡಿ ವರ್ಷದಿಂದ ವರ್ಷಕ್ಕೆ ನಿಮಗೆ ಐಡಿಯಾ ಬರುತ್ತಾ ಇರುತ್ತದೆ.
ಇದನ್ನು ತೆಗೆದುಕೊಳ್ಳಬೇಕು ಇದು ನಮಗೆ ಅವಶ್ಯಕತೆ ಇದೆ ಎಂದು ನೀವು ದುಡ್ಡು ಸಿಕ್ಕಾಗ ಅದನ್ನು ತೆಗೆದುಕೊಂಡು ಬಂದು ಇಡಬಹುದು. ಹಬ್ಬದ ಸಮಯದಲ್ಲಿ ನಾವು ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಹೋದರೆ ಅದು ತುಂಬಾ ಹೆಚ್ಚಿನ ಬೆಲೆ ಇರುತ್ತದೆ ಹಾಗಾಗಿ ಹಬ್ಬ ಎಲ್ಲ ಮುಗಿದ ಮೇಲೆ ಅಥವಾ ಬೇರೆ ಸಮಯದಲ್ಲಿ ನಾವು ಎಲ್ಲಿಯಾದರೂ ಹೊರಗೆ ಹೋದಾಗ.
ಟ್ರಿಪ್ ಗೆ ಹೋದಾಗ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅನಿಸಿದಾಗ ತಂದು ಇಟ್ಟುಕೊಳ್ಳಬೇಕು. ಈ ವರ್ಷದಿಂದ ನೀವು ಮೊದಲನೇ ಬಾರಿ ವ್ರತವನ್ನು ಶುರು ಮಾಡುತ್ತಾ ಇದ್ದೀರಾ ಎಂದರೆ ಅತಿ ಮುಖ್ಯವಾಗಿ ಮೊದಲಿಗೆ ನೀವು ತೆಗೆದುಕೊಳ್ಳಬೇಕಾಗಿರುವ ವಸ್ತು ಎಂದರೆ ಈ ಒಂದು ವ್ರತದ ಬುಕ್ಕು ಎಲ್ಲಾ ಗಂದಿಗೆ ಅಂಗಡಿಗಳಲ್ಲಿಯೂ ಸಿಗುತ್ತದೆ.
ಆನ್ಲೈನ್ ನಲ್ಲಿಯೂ ಕೂಡ ಸಿಗುತ್ತದೆ ಶ್ರೀ ವರಮಹಾಲಕ್ಷ್ಮಿ ವ್ರತದ ಬುಕ್ಕು ಈ ಒಂದು ಬುಕ್ಕು ಇದ್ದರೆ ಸಾಕು ಪೂಜೆಯ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಗೊತ್ತಾಗುಬಿಡುತ್ತದೆ ಅದರ ಜೊತೆಗೆ ಕನಕಧಾರ ಸ್ತೋತ್ರ ಇದು ಕೂಡ ಬೇಕೇ ಬೇಕು ಪೂಜೆ ಆದ ನಂತರ ಬೆಳಿಗ್ಗೆ ಸಮಯ ಸಿಕ್ಕರೆ ಬೆಳಗ್ಗೆ ಓದಿ ಬೆಳಿಗ್ಗೆ ಸಮಯ ಇಲ್ಲ ಎಂದರೆ ಸಂಜೆಯಾದರೂ ಓದಲೇಬೇಕು ತುಂಬಾ ಒಳ್ಳೆಯದು.
ಲಕ್ಷ್ಮಿ ಪೂಜೆಯಲ್ಲಿ ನಾವು ಅಷ್ಟೋತ್ತರವಾಗಿರಲಿ ಸೋತ್ರಗಳಾಗಲಿ ಓದುವುದು ಎಷ್ಟು ಮುಖ್ಯವೋ ಅಷ್ಟು ಕನಕದರ ಸ್ತೋತ್ರವನ್ನು ಓದುವುದು ಕೂಡ ತುಂಬಾ ಮುಖ್ಯ ಮನೆಯಲ್ಲಿರುವಂತಹ ಆರ್ಥಿಕ ಪರಿಸ್ಥಿತಿ ಬೇಗ ಸುಧಾರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.