ಶಂಕ ಪುಷ್ಪ ಗಿಡವನ್ನು ಮನೆಯಲ್ಲಿಯೇ ಬೆಳೆಸಿ ತಲೆನೋವು ಮತ್ತು ಅರ್ಧ ತಲೆನೋವು ಈ ರೀತಿ ಅನೇಕ ದೇಹದ ತೊಂದರೆಗಳಿಗೆ ಇದು ರಾಮಬಾಣ:
ದೇವರ ಅಲಂಕಾರಕ್ಕಾಗಿ ಬಳಸುವ ಈ ಶಂಕ ಪುಷ್ಪ ಹೂವಲ್ಲಿ ಎಷ್ಟು ಔಷಧೀಯ ಗುಣಗಳಿವೆ ಎಂದು ತಿಳಿದರೆ ನೀವೇ ಆಶ್ಚರ್ಯ ಪಡುತ್ತೀರಾ ನಮ್ಮ ಪ್ರಕೃತಿಯಲ್ಲಿಯೇ ನಮ್ಮ ದೇಹದ ಅನೇಕ ತೊಂದರೆಗಳಿಗೆ ಪರಿಹಾರ ಸಿಗುವಂತಹ ಎಷ್ಟು ಗಿಡಮೂಲಿಕೆಗಳಿವೆ.ಅದರಲ್ಲಿ ಒಂದು ಈ ಶಂಕಪುಷ್ವ ಹೂ ಇದರ ಬಗ್ಗೆ ತಿಳಿಯದೆ ಇದನ್ನು ಕೇವಲ ದೇವರ ಅಲಂಕಾರಕ್ಕೆ ಮಾತ್ರ ಸೀಮಿತವಾಗಿ ಅನೇಕರು ಪೂಜೆ ಮಾಡುತ್ತಿದ್ದಾರೆ, ಸಾಮಾನ್ಯವಾಗಿ ನೋಡುವುದಾದರೆ ಈ ಶಂಕಪುಷ್ಪ ಹೂವು ಶಂಕದ ಆಕಾರದಲ್ಲಿಯೇ ಇರುತ್ತದೆ ಇದನ್ನು ಅಪರಂಜಿತ ಎಂಬ ಇನ್ನೂ ಒಂದು ಹೆಸರಿನಿಂದ ಕೂಡ ಕರೆಯುತ್ತಾರೆ ಸಾಮಾನ್ಯವಾಗಿ ಕಂಡುಬರುವ ತಲೆನೋವು ಮತ್ತು ಅರ್ಧ ತಲೆನೋವು ಹಾಗೂ ಕೂದಲು ಉದುರುವ ಸಮಸ್ಯೆ ಈ ರೀತಿ ಸಮಸ್ಯೆಗಳಿಗೆ ಇದು ಪ್ರಮುಖ ಔಷಧಿಯಾಗಿದೆ ಇದು ಪ್ರಮುಖವಾಗಿ ನೀಲಿ ಬಣ್ಣ ಮತ್ತು ಬಿಳಿ ಬಣ್ಣದಲ್ಲಿ ನಿಮಗೆ ಕಾಣಲು ಸಿಗುತ್ತದೆ ಇನ್ನು ಅನೇಕ ಬಣ್ಣಗಳಲ್ಲಿ ಈ ಹೂಗಳು ಇರುತ್ತವೆ, ಆದರೆ ಅದು ಹೆಚ್ಚಾಗಿ ಭಾರತೀಯರಿಗೆ ಕಾಣಲು ಸಿಗುವುದಿಲ್ಲ, ಆಯುರ್ವೇದದಲ್ಲಿ ಬಿಳಿ ಬಣ್ಣದ ಶಂಕ ಪುಷ್ಪ ಹೂವಿಗೆ ಹೆಚ್ಚು ಪ್ರಾಮುಖ್ಯತೆ ಇದೆ.
ಇದರಿಂದ ಆಗುವ ಒಳ್ಳೆಯ ಪರಿಣಾಮಗಳು ಯಾವುವು ಎಂದರೆ ಶಂಕ ಪುಷ್ಪ ಹೂವನ್ನು ಮೆಮೊರಿ ಪವರ್ ಹಾಗೂ ಬ್ರೈನ್ ಟಾನಿಕ್ ಎಂದು ಕರೆಯುತ್ತಾರೆ ಹಾಗೂ ಈ ಹೂವಿನಿಂದ ಮಾಡಿರುವ ಟೀಯನ್ನು ಕುಡಿದರೆ ಉತ್ತಮ ಆರೋಗ್ಯ ಸಿಗುತ್ತದೆ, ನೆಮ್ಮದಿಯ ನಿದ್ದೆ ಹಾಗೂ ಆಯಾಸವನ್ನು ಕಳೆಯಬಲ್ಲ ಒಂದು ಮಹತ್ವಕಾರಿ ಅಂಶ ಈ ಹೂವಿಗೆ ಇದೆ.ಈ ಶಂಕ ಪುಷ್ಪ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಜಜ್ಜಿ ಸ್ವಲ್ಪ ಒಣಗಲು ಬಿಟ್ಟು ನಂತರ ಅದನ್ನು ಸ್ವಲ್ಪ ಪ್ರಮಾಣದಲ್ಲಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡರೆ ನಂತರ ಅದನ್ನು ಕಾಡಿಗೆ ರೀತಿಯಲ್ಲಿ ಕಣ್ಣಿನ ಕೆಳಭಾಗ ಹಚ್ಚುತ್ತಾ ಬಂದರೆ ತಲೆನೋವು ಎಂಬುವುದು ಮಾಯವಾಗುತ್ತದೆ,ಕೂದಲು ಉದುರುವಿಕೆಯ ಸಮಸ್ಯೆಯಂತೂ ಈಗ ಪ್ರತಿಯೊಬ್ಬರಿಗೂ ಹೆಚ್ಚಾಗಿ ಕಾಣಲು ಸಿಗುತ್ತದೆ ಹಾಗಾಗಿ ಈ ಶಂಕ ಪುಷ್ಪ ಹೂ ಮತ್ತು ಅದರ ಬೇರನ್ನು ಒಳ್ಳೆಯ ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ನೆನೆಸಿ ನಂತರ ಆ ಎಣ್ಣೆಯನ್ನು ಪ್ರತಿದಿನ ತಲೆಗೆ ಅಚ್ಚುತ ಬಂದರೆ ಈ ಕೂದಲು ಉದುರುವ ಸಮಸ್ಯೆ ದೂರವಾಗಿ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ.
ಆಯುರ್ವೇದದಲ್ಲಿ ರಕ್ತದ ಒತ್ತಡ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಈ ಹೂ ಮತ್ತು ಬೇರಿಂದ ಔಷಧಿಯನ್ನು ತಯಾರಿಸಿ ಅದರ ಮೂಲಕ ಈ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತಾರೆ ಹಾಗೂ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಪಾತ್ರವನ್ನು ಇದು ವಹಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಿ ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇರಿಸಲು ಈ ಹೂ ಸಹಾಯ ಮಾಡುತ್ತದೆ, ರಕ್ತದ ನಿಯಂತ್ರಣವನ್ನು ಕಡಿಮೆ ಮಾಡುವ ಡಯಾಬಿಟಿಸ್ ನಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ಇದು ಸಹಾಯ ಮಾಡುತ್ತದೆ ಹಾಗೂ ನಮ್ಮ ಮುಖದ ಹೊಳಪು ಕಡಿಮೆಯಾಗಲಿ ಮತ್ತು ಕಪ್ಪುಕರೆಗಳು ಇದ್ದಾಗ ಈ ಹೂವನ್ನು ಪೇಷ್ಟ್ ರೀತಿಯಲ್ಲಿ ಮಾಡಿಕೊಂಡು ಅದನ್ನು ರೋಜ್ ವಾಟರ್ ನಲ್ಲಿ ಪ್ರತಿದಿನ ಅದನ್ನು ನಿಮ್ಮ ಮುಖಕ್ಕೆ ಹಚ್ಚುತ್ತಾ ಬಂದರೆ ನಿಮ್ಮ ಮುಖವು ತುಂಬಾ ಹೊಳೆಯುವಂತೆ ಕಾಣುತ್ತದೆ ಈ ರೀತಿ ಈ ಹೂವಿನಿಂದ ಅನೇಕ ಲಾಭಗಳು ನಿಮಗೆ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ