ಮಕರ ಸಂಕ್ರಾಂತಿಯ ದಿನ ಇದೊಂದು ಕೆಲಸವನ್ನು ಮಾಡಿ.

WhatsApp Group Join Now
Telegram Group Join Now

ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿ ಸಾಕು. ಸಾಡೆಸಾತಿ ಸಮಸ್ಯೆ ಗೆ ಪರಿಹಾರ ಸಿಗುತ್ತೆ. ಈ ಬಾರಿ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ವಿಶೇಷ ಕೆಲಸಗಳನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಲ್ಲದೆ ಕೆಲ ಪರಿಹಾರಗಳನ್ನು ಮಾಡುವುದರಿಂದ ಪ್ರಯೋಜನಗಳು ಸಹ ಸಿಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಸಂಕ್ರಾಂತಿಯ ದಿನ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ನೋಡೋಣ ಬನ್ನಿ. ಮಕರ ಸಂಕ್ರಾಂತಿಯ ಹಬ್ಬದ ದಿನ ಬೆಳಗ್ಗೆ ಶಿವಲಿಂಗಕ್ಕೆ ನೀರನ್ನು ಅರ್ಪಣೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ. ಹಾಗಾಗಿ ತಪ್ಪದೇ ಈ ಕೆಲಸ ಮಾಡಿ ಸಂತೋಷದಿಂದಿರಿ.

ಹಬ್ಬದ ದಿನ ಎಳ್ಳಿನ ನೀರಿನ ಸ್ನಾನ ಮಾಡುವುದು ಶುಭ ಎನ್ನ ಲಾಗುತ್ತದೆ. ಎಳ್ಳು ಶನಿ ದೇವರ ಪ್ರೀತಿಯ ವಸ್ತು ಹಾಗಾಗಿ ಶನಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಸ್ನಾನದ ನೀರಿಗೆ ಎಳ್ಳನ್ನು ಹಾಕಿ ಸ್ನಾನ ಮಾಡಿ. ಹಬ್ಬದ ದಿನ ಮರಗಳಿಗೆ ಹಾಗು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ ಪೂಜೆಯನ್ನು ಮಾಡುವುದರಿಂದ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಅಲ್ಲದೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಲು ಸಹ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಆರೋಗ್ಯ ಸಮಸ್ಯೆ ಸಾಮಾನ್ಯ ಆದರೆ ಪದೇ ಪದೇ ಕಾಡುತ್ತಿದ್ದರೆ ಸಂಕ್ರಾಂತಿ ಹಬ್ಬದ ದಿನ ಎಳ್ಳಿನ ಪೇಸ್ಟ್ ಹಚ್ಚಬೇಕು. ಸ್ವಲ್ಪ ಎಳ್ಳನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ದೇಹಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಿ. ಈ ದಿನ ಬೆಲ್ಲ ಮತ್ತು ಹಾಲಿನ ಮಿಶ್ರಣದಿಂದ ಮಾಡಿದ ಅನ್ನ ವನ್ನು ಸೇವನೆ ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗುತ್ತೀರಾ ಹಾಗೂ ಜಾತಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.


ಇನ್ನು ಮಕರ ಸಂಕ್ರಾಂತಿಯ ದಿನ ದಾನ ಮಾಡುವ ಪರಂಪರೆ ರೂಢಿಯಲ್ಲಿದೆ. ಸಂಕ್ರಾಂತಿ ದಿನ ದಾನ ಮಾಡುವುದರಿಂದ ಶನಿ ದೇವ ಸಂತುಷ್ಟನಾಗುತ್ತಾನೆ ಎಂಬುವ ಧಾರ್ಮಿಕ ನಂಬಿಕೆ ಇದೆ. ಶನಿದೇವ ತನ್ನ ಆಶೀರ್ವಾದ ನಿಮಗೆ ನೀಡಿದರೆ ನಿಮ್ಮ ಅದೃಷ್ಟ ಬದಲಾಗಲು ಹೆಚ್ಚು ಸಮಯವಕಾಶ ಬೇಕಾಗುವುದಿಲ್ಲ. ಶನಿಯ ಸಾಡೆ ಸಾತಿ ಅಥವಾ ಎರಡೂವರೆ ವರ್ಷ ಎದುರಿಸುತ್ತಿರುವವರು ವಿಶೇಷವಾಗಿ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಶನಿ ದೇವ ಸಂತುಷ್ಟ ನಾಗುತ್ತಾನೆ. ಈ ದಿನ ಮಾಡಿದ ದಾನವು ಜೀವನದಲ್ಲಿ ಸಾಕಷ್ಟು ಸುಖ ಸಮೃದ್ಧಿಯನ್ನು ತರುತ್ತದೆ. ಮಕರ ಸಂಕ್ರಾಂತಿಯ ದಿನ ದಾನ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳಿದ್ದು, ಸಮಸ್ಯೆಗಳಿಂದ ಮುಕ್ತಿ ಸಹ ನೀಡುತ್ತದೆ.

ಹಾಗಾಗಿ ಈ ದಿನ ಬಡವರಿಗೆ ಆಹಾರ ಅಥವಾ ಕಂಬಳಿ ದಾನ ಮಾಡಿ ಇನ್ನು ಮಕರ ಸಂಕ್ರಾಂತಿಯ ದಿನ ಶನಿಯನ್ನು ಆರಾಧನೆ ಮಾಡಬೇಕು. ಈ ದಿನ ಕಪ್ಪು ಎಳ್ಳನ್ನು ಹಾಗೂ ಎಳ್ಳಿನ ಎಣ್ಣೆಯನ್ನು ದಾನ ಮಾಡುವುದು ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಎನ್ನುವ ನಂಬಿಕೆಯಿದೆ. ಈ ವಸ್ತು ಗಳನ್ನು ದಾನ ಮಾಡಿದರೆ ಸೂರ್ಯ ಪ್ರಸನ್ನನಾಗುತ್ತಾನೆ. ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳು ಉದ್ದಿನ ಬೇಳೆ ಇದೆಲ್ಲ ಹೊಸ ಅಕ್ಕಿಯನ್ನು ದಾನ ಮಾಡುವುದರಿಂದ ಶನಿ ದೇವನು ಪ್ರಸನ್ನನಾಗುತ್ತಾನೆ. ಶನಿಯ ಸಾಡೇಸಾತಿಯಿಂದ ಬಳಲುತ್ತಿರುವವರು ಕಪ್ಪು ಎಳ್ಳನ್ನು ದಾನ ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god