ಸಿಂಹ ರಾಶಿ ವಿವಾಹ ವಿಚಾರ |ಸಿಂಹ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದರೆ ಜೀವನ ಹಾಲು – ಜೇನಿನಂತಿರುತ್ತದೆ?ವಧು ಮತ್ತು ವರನ ಅನ್ವೇಷಣೆಯಲ್ಲಿ ಕಳೆದ ನಾಲ್ಕು ಸಂಚಿಕೆಗಳಲ್ಲಿ ಹೇಳಿದ ಹಾಗೆ ಯಾವ ಯಾವ ರಾಶಿಯವರಿಗೆ ಯಾವ ಯಾವ ರಾಶಿಯವರು ಮಿತ್ರರಾಗಿ ವರನ ಅನ್ವೇಷಣೆಯನ್ನ ಹಾಗೂ ವಧು ಅನ್ವೇಷಣೆಯನ್ನು ಮಾಡಬಹುದಾಗಿ ತಿಳಿಸುತ್ತಾ ಇದ್ದೇನೆ. ಈ ದಿನ ಪ್ರಮುಖವಾಗಿ ಸಿಂಹ ರಾಶಿಯ ಬಗ್ಗೆ ಸಿಂಹ ರಾಶಿಯ ಜಾತಸ್ಯರಿಗೆ ಯಾವ ಯಾವ ರಾಶಿಯವರು ಯಾವ ಯಾವ ರೀತಿಯಾಗಿ ಹೊಂದಾಣಿಕೆ ಆಗುತ್ತದೆ ಎಂದು ಈ ದಿನ ತಿಳಿಸುವಂತಹ ಪ್ರಯತ್ನ ಮಾಡುತ್ತೇನೆ. ಸಿಂಹ ರಾಶಿಯಲ್ಲಿ ಪ್ರಮುಖವಾಗಿ ಮಖಾ ನಕ್ಷತ್ರ ಪುಬಾ ನಕ್ಷತ್ರ ಮತ್ತು ಉತ್ತರ ನಕ್ಷತ್ರ ಒಂದನೇ ಚರಣವನ್ನ ಒಳಗೊಂಡಿರುವಂತಹ ಈ ಸಿಂಹ ರಾಶಿ. ಈ ರಾಶಿಯಾಧಿಪತಿ ಸೂರ್ಯನಿಗೆ ಅದೇ ರಾಶಿಯ ವಧು ಅಥವಾ ವರ ಆದರೆ ಹೇಗೆ ಎಂಬುದನ್ನು ನೋಡುವುದಾದರೆ. ಏಕಾಧಿಪತ್ಯವಾಗುತ್ತದೆ ಅದರಲ್ಲಿ ಹೆಚ್ಚಿನ ಗೊಂದಲವು ಇರುವುದಿಲ್ಲ ಈ ರಾಶಿಯಲ್ಲಿ ಹೊಂದಾಣಿಕೆ ಮಾಡುವಂತಹದು ಅಪಾಯಕಾರಿ ಅಲ್ಲ.
ಅಲ್ಲಿ ಮಖಾ ನಕ್ಷತ್ರ ಅಧಿಪತಿ ನಕ್ಷತ್ರಕ್ಕೆ ಅಧಿಪತಿ ಕೇತುವಾಗಿದ್ದರೂ ಕೂಡ ಸ್ವಲ್ಪ ಅದರ ಬಗ್ಗೆ ಬೇರೆಲ್ಲ ಗಣಕೂಟಗಳ ಅಥವಾ ಗ್ರಹ ಮೈತೃತ್ವವನ್ನು ಗಮನಿಸಿಕೊಂಡು ನೋಡಬೇಕೆಂದು ನಾನು ಎಲ್ಲ ಸಂಚಿಕೆಯಲ್ಲಿ ಹೇಳಿದ್ದೇನೆ. ಏಕಾಧಿಪತಿವಾದರೆ ಈ ಗ್ರಹ ಮೈತೃತ್ವದ ಪ್ರಶ್ನೆ ಬರುವುದಿಲ್ಲ ಏಕೆಂದರೆ ಅದು ಒಂದೇ ರಾಶಿ ಆಗಿರುತ್ತದೆ. ಸಿಂಹ ರಾಶಿಯವದು, ಸಿಂಹ ರಾಶಿಯ ವರ ಅಂಥವರನ್ನು ಮದುವೆ ಮಾಡಬಹುದು ಅದರಲ್ಲಿ ಹೆಚ್ಚಿನ ತೊಂದರೆಗಳು ಕಂಡು ಬರುವುದಿಲ್ಲ. ಸಿಂಹ ರಾಶಿಯವರಿಗೆ ಕನ್ಯಾ ರಾಶಿಯವರಾದರೆ ಹೇಗೆ ಅನ್ನತಕ್ಕಂತಹ ವಿಮರ್ಶೆ ಮಾಡಿದರೆ ಕನ್ಯಾ ರಾಶಿಯವರಿಗೆ ಉತ್ತರ ನಕ್ಷತ್ರದ ಮೂರು ಚರಣಗಳು ಸಿಗುತ್ತವೆ ಹಾಗೂ ಅಲ್ಲಿ ಹಸ್ತ ನಕ್ಷತ್ರ ಸಂಪೂರ್ಣವಾಗಿ ಮತ್ತು ಚಿತ್ತ ನಕ್ಷತ್ರ ಎರಡು ಪಾದಗಳನ್ನು ಒಳಗೊಂಡಿರುವಂತದು ಕನ್ಯಾ ರಾಶಿ ಆಗಿರುತ್ತದೆ. ಈ ಕನ್ಯಾ ರಾಶಿಗೆ ಮತ್ತು ಸಿಂಹ ರಾಶಿಗೂ ಯಾವ ರೀತಿಯಾದ ಹೊಂದಾಣಿಕೆ.ಅಲ್ಲಿ ಕನ್ಯಾ ರಾಶಿ ಅಧಿಪತಿ ಬುಧ ಮತ್ತು ಸಿಂಹ ರಾಶಿ ಅಧಿಪತಿ ಸೂರ್ಯ ಪರಮ ಮಿತ್ರರಾಗಿರುತ್ತಾರೆ.ಬುದ್ಧ ನಿತ್ಯ ಎಂಬ ಒಳ್ಳೆಯ ಯೋಗವನ್ನು ಕೂಟವನ್ನು ಮಾಡುವಂಥವರವರು ಆದ್ದರಿಂದ ಈ ರಾಶಿಯ ಹೊಂದಾಣಿಕೆಯ ಕೂಡ ಬಹಳ ಸೂಕ್ತವೆಂದು ನಾನು ತಿಳಿಸುತ್ತೇನೆ.
ಹಾಗೆಯೇ ಸಿಂಹ ರಾಶಿ ಜಾತಸ್ಯರಿಗೆ ತುಲಾ ರಾಶಿ ಆದರೆ ಹೇಗೆ ಅನ್ನತಕ್ಕದ್ದು ತುಲಾ ರಾಶಿಯ ಅಧಿಪತಿ ಶುಕ್ರ ಆ ತುಲಾ ರಾಶಿಯಲ್ಲಿ ಬರುವಂತಹ ನಕ್ಷತ್ರಗಳು ಚಿತ್ತಾ ನಕ್ಷತ್ರವು ಬರುತ್ತೆ ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಹಾಗೂ ಸ್ವಾತಿ ನಕ್ಷತ್ರ ಪೂರ್ಣವಾಗಿ ಮತ್ತು ವಿಶಾಖ ನಕ್ಷತ್ರದ ಮೂರು ಚರಣಗಳು ಅದು ಅಲ್ಲಿ ಬರುತ್ತದೆ. ಅದಕ್ಕೂ ಮತ್ತು ಈ ಸಿಂಹ ರಾಶಿಯ ಜಾತಸ್ಯರಿಗೂ ಹೊಂದಾಣಿಕೆ ಮಾಡಿದರೆ ಹೇಗೆ ಎಂದು ತಿಳಿಯುವಾಗ ತುಲಾ ರಾಶಿಯ ಅಧಿಕಾರಿ ಶುಕ್ರನಾಗುತ್ತಾನೆ ಆ ರಾಶಿಯಾಧಿಪತಿಯಾದ ಶುಕ್ರನು ಮತ್ತು ಸಿಂಹ ರಾಶಿ ಅಧಿಕಾರಿಯಾಗಿರುವಂತ ಸೂರ್ಯನು ಪರಮ ವೈರಿಗಳಾಗಿರುತ್ತಾರೆ.ಆದ್ದರಿಂದ ಈ ರಾಶಿಯನ್ನು ಆದಷ್ಟು ಬೇಡವೆಂದು ಹೇಳಲಾಗುತ್ತದೆ ಏಕೆಂದರೆ ಸೂರ್ಯನಿಗೆ ತುಲಾ ರಾಶಿಯನ್ನು ಕಂಡರೆ ಅಷ್ಟಾಗಿ ಇಷ್ಟವಾಗುವುದಿಲ್ಲ ಜೊತೆಗೆ ಆ ರಾಶಿಯಲ್ಲಿ ತನ್ನ ನೀಚ ಕ್ಷೇತ್ರವನ್ನು ಕೂಡ ಆಯ್ಕೆ ಮಾಡಿ ಇಟ್ಟಿಕೊಂಡಿರುವಂತಹವನ್ನು ಸೂರ್ಯ ಮಹಾದೇವ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.