ಯಾರಿದು ಮಲ್ಲಿಕಾರ್ಜುನ ಮುತ್ಯಾ…ಇವತ್ತು ನಾನು ಈ ವಿಡಿಯೋದಲ್ಲಿ ಏನು ಹೇಳುವುದಕ್ಕೆ ಬಂದಿದ್ದೇನೆ ಎಂದರೆ ಇತ್ತೀಚಿಗೆ ಇನ್ಸ್ಟಾಗ್ರಾಮ್ ರಿಯಲ್ ತೆಗೆದರೆ ಸಾಕು ಬಹಳ ಬಹಳ ವೈರಲ್ ಕಾಣುವ ವ್ಯಕ್ತಿ ಎಂದರೆ ಮಲ್ಲಿಕಾರ್ಜುನ ಮುತ್ಯ ಅನ್ನುವ ಈ ಒಬ್ಬ ವ್ಯಕ್ತಿ ಈ ವ್ಯಕ್ತಿ ಯಾರು ಏನು ಎಂದು ನನಗೂ ಗೊತ್ತಿರಲಿಲ್ಲ ಒಂದು 20 ರಿಂದ 25 ರ ಒಳಗೆ ಇರುವಂತಹ ವ್ಯಕ್ತಿ.
ಉತ್ತರ ಕರ್ನಾಟಕದ ನಡೆದಾಡುವ ದೇವರು ಆರಾಧ್ಯ ದೈವ ಎಂದು ಬಹಳ ಕಡೆ ಇನ್ಸ್ಟಾಗ್ರಾಮ್ ನಲ್ಲಿ ಹಾಕುತ್ತಿದ್ದರು ಹಾಗಾಗಿ ಇವರು ಯಾರು ಏನು ಎಂದು ತಿಳಿದುಕೊಳ್ಳಬೇಕು ಎಂದು ಹೇಳಿ ನಾನು ಗಾಡಿ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇವೆ ಯಾದಗಿರಿ ಜಿಲ್ಲೆ ಶಾಪೂರು ತಾಲೂಕು ಒಳಗಿನ ಒಂದು ಸಣ್ಣ ಹಳ್ಳಿಯ ಹೆಸರು ಮಹಲ್ ರೋಜಾ ಎಂದು ಹಳ್ಳಿಯೊಳಗೆ ರಾತ್ರಿ ಹೋಗಿ.
ಸೇರಿಕೊಂಡವಿ ಅಲ್ಲಿ ಜಾತ್ರೆ ಚೆನ್ನಾಗಿತ್ತು ಏನು ಮಲ್ಲಿಕಾರ್ಜುನ ಮುತ್ಯ ಎಂದು ಇದ್ದಾರಲ್ಲ ಅವರ ಮೆರವಣಿಗೆ ತುಂಬಾ ಚೆನ್ನಾಗಿತ್ತು ನಾವು ಹೋದಾಗ ಮೆರವಣಿಗೆ ನೋಡಿಕೊಂಡು ರಾತ್ರಿ ಅಲ್ಲಿಯೇ ಅವರ ದಾಸೋಹದಲ್ಲಿ ಊಟ ಮಾಡಿಕೊಂಡು ಅಲ್ಲೇ ಮಲಗಿಕೊಂಡಿದ್ದವು ಮುಂದೆ ಇವರ ಬಗ್ಗೆ ಹೇಳಬೇಕು ಎಂದರೆ ಇವರ ಹಬ್ಬ ಹನುಮಂತರಾಯ ಮುತ್ಯಾ ಎಂದು ಇದ್ದರು.
ಅವರು ಅಲ್ಲಿ ದೇವರು ಹೇಳುತ್ತಿದ್ದರು, ಉತ್ತರ ಕರ್ನಾಟಕದ ಕಡೆ ದೇವರು ಹೇಳುವುದು ಎಂದು ಹೇಳುತ್ತಾರೆ ಯಾರಾದರೂ ಕಷ್ಟ ಎಂದು ಹೇಳಿಕೊಂಡು ಹೋದರೆ ಯಾರಿಗಾದರೂ ಸಮಸ್ಯೆ ಎಂದು ಹೇಳಿಕೊಂಡು ಹೋದರೆ ಆ ಸಮಸ್ಯೆ ಕಷ್ಟಗಳಿಗೆ ಪರಿಹಾರ ಹೇಳುತ್ತಾರೆ ತಮ್ಮನ್ನ ತಾವು ಮೈ ಮೇಲೆ ದೇವರು ಬರೆಸಿಕೊಂಡು ಹೇಳುತ್ತಾರೆ ಇದನ್ನು ಉತ್ತರ ಕರ್ನಾಟಕದ ಕಡೆ ದೇವರು.
ಹೇಳುವುದು ಎಂದು ಹೇಳುತ್ತಾರೆ ನಾವು ಹಳ್ಳಿ ಜನರಿಗೆ ಕೇಳಿದಾಗ ಇವರು ಮುತ್ಯಾ ರು ಏನಾದರೂ ಸಮಸ್ಯೆ ಎಂದು ಹೋದರೆ ದೇವರು ಹೇಳುತ್ತಾರೆ ಇಲ್ಲವಾದರೆ ಏನಾದರೂ ಸಮಸ್ಯೆ ಇದ್ದರೆ ಪರಿಹಾರ ಹೇಳುತ್ತಾರೆ ಅದಕ್ಕೋಸ್ಕರ ಬಂದಿದ್ದೇವೆ ಎಂದು ಹೇಳುತ್ತಾರೆ ಹಾಗಾಗಿ ಎಲ್ಲಕ್ಕಿಂತ ಮೊದಲು ಯಾದಗಿರಿ ಜಿಲ್ಲೆಯ ಬಗ್ಗೆ ಹೇಳಬೇಕೆಂದರೆ ಇಡೀ 31 ಜಿಲ್ಲೆಯ ಒಳಗೆ ಯಾದಗಿರಿ ಜಿಲ್ಲೆ.
ಅತಿ ಹೆಚ್ಚು ಅನಕ್ಷರತೆ ಹೊಂದಿರುವಂತಹ ಜಿಲ್ಲಾ ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ ನೆಗೆಟಿವ್ ಆಗಿ ಏನನ್ನು ಮಾತನಾಡುವುದಿಲ್ಲ ಪ್ರತಿಯೊಂದು ಜಿಲ್ಲೆಗೂ ಅದರದೇ ಆದ ಒಂದು ಸ್ಪೆಷಾಲಿಟಿ ಇರುತ್ತದೆ ಹೀಗೆ ನಮಗೆ ಗೊತ್ತಿರುವುದು ಮುಂದೆ ಹೇಳಬೇಕೆಂದರೆ ಅಲ್ಲಿ ನಾವು ನೋಡಿದ್ದು ಏನೆಂದರೆ ಅಲ್ಲಿ ಬರಿ ದೊಡ್ಡ ದೊಡ್ಡ ಕಾರುಗಳು ದೂರದಿಂದ.
ಬಂದಿರುವಂತವರು ತಮ್ಮ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬಂದಿದ್ದರು ಆದರೆ ಅವರಿಗೂ ಪರಿಹಾರ ಸಿಕ್ಕಿರಬೇಕು ಎಂದು ಅನಿಸುತ್ತಿದೆ ಏಕೆಂದರೆ ಅಷ್ಟು ದೂರದಿಂದ ಬಂದು ಹೋಗುತ್ತಾರೆ ಎಂದರೆ ಜನ ಏನಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿ ಏನಾದರೂ ಚೆನ್ನಾಗಿ ಆಗಿದೆ ಎಂದಾಗ ಜನಗಳು ಬರುತ್ತಾರೆ ಹಾಗೆ ಸುಮ್ಮನೆ ಬರುವುದಕ್ಕೆ ಜನಗಳಿಗೆ ತಲೆಕೆಟ್ಟಿಲ್ಲ.
ನೀನು ಅಲ್ಲಿಯ ತನಕ ಹೋಗಿದ್ದೀಯಲ್ಲ ಅಲ್ಲಿ ಏನಾದರೂ ಸಮಸ್ಯೆಗೆ ಪರಿಹಾರ ಕೇಳಬೇಕಲ್ಲವ ಎಂದು ನನಗೆ ಕೇಳಿದರು ಆದರೆ ನನಗೆ ಯಾವ ಸಮಸ್ಯೆಯೂ ಇಲ್ಲ ನನಗೆ ಯಾವ ಪರಿಹಾರವೂ ಬೇಡ ಏಕೆಂದರೆ ಜೀವನ ಅಂದರೆ ಸ್ವಲ್ಪ ಮೇಲೆ ಕೆಳಗೆ ಕಷ್ಟ ಸುಖ ಎಲ್ಲವನ್ನು ದೇವರು ಕೊಟ್ಟೇರುತ್ತಾನೆ ಕಷ್ಟ ಬಂದಾಗ ಬಹಳ ತೊಂದರೆ ತೆಗೆದುಕೊಂಡು ಬದುಕುವುದು ಬೇಡ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.