ಸ್ಥಾನ ಮಾಡುವ ಮುಂಚೆ ಈ ತಪ್ಪು ಮಾಡಲೇಬೇಡಿ, ರಾತ್ರಿ ಸ್ಥಾನ ಮಾಡ್ತೀರಾ ಹುಷಾರ್ !ಯಾವಾಗ ಸ್ನಾನ ಮಾಡಬೇಕು?
ಸ್ನಾನ ಮಾಡುವುದರಿಂದ ಇರುವ ವಿಜ್ಞಾನ ಯಾವುದು,ಯಾವ ರೀತಿ ಸ್ನಾನ ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುತ್ತದೆ ಎಂದು ನೋಡಿದರೆ,ಮೊದಲಿಗೆ ಮನುಷ್ಯನಿಗೆ ಸ್ನಾನ ಎಂಬುವುದು ಬಹಳ ಮುಖ್ಯ.

WhatsApp Group Join Now
Telegram Group Join Now

ನಾವು ಸ್ವಚ್ಛವಾಗಿರುವುದಕ್ಕೆ ಹಾಗೂ ಆರೋಗ್ಯದಿಂದ ಬದುಕುವುದಕ್ಕೆ,ದೇಹದಲ್ಲಿ ಹೊಸ ಹುರುಪು ಮೂಡುವುದಕ್ಕೆ ಈ ಸ್ನಾನ ತುಂಬಾ ಮುಖ್ಯ ಉತ್ತಮ ಮಾನಸಿಕ ಆರೋಗ್ಯಕ್ಕೆ ಮತ್ತು ಒಳ್ಳೆಯ ರೀತಿಯ ನಿದ್ದೆ ಬರುವುದಕ್ಕೆ ಒಂದು ರೀತಿಯ ಸುಭದ್ರತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಇದು ಒಳ್ಳೆಯದು ನಮ್ಮ ಹಿಂದೂ ಸಂಪ್ರದಾಯದಲ್ಲೂ ಸ್ನಾನಕ್ಕೆ ಮಹತ್ವಪೂರ್ಣವಾದ.

ಅರ್ಥ ಇದೆ ನೀವೆಲ್ಲ ನೋಡುವಂತೆ ದೇವರ ವಿಗ್ರಹಕ್ಕೂ ಕೂಡ ಎಳನೀರು ಹಾಲು ತುಪ್ಪ ವಿವಿಧ ರೀತಿಯ ವಸ್ತುಗಳಿಂದ ಸ್ನಾನ ಮಾಡಿಸುತ್ತಾರೆ ಅದನ್ನು ನಾವು ಅಭಿಷೇಕ ಎಂದು ಕರೆಯುತ್ತೇವೆ.ಕೆಲವರಿಗೆ ಸ್ನಾನ ಎಂದರೆ ತುಂಬಾ ಇಷ್ಟ ಇರುತ್ತದೆ ಗಂಟೆ ಗಟ್ಟಲೆ ಬೇಕಾದರೂ ಸ್ನಾನ ಮಾಡುತ್ತಾರೆ ಇನ್ನೂ ಕೆಲವರಿಗೆ ಸ್ನಾನ ಎಂದರೆ ಒಂದು ರೀತಿ ಅಲರ್ಜಿ ಎಂದು ಅವರು.

ಭಾವಿಸುತ್ತಾ ಇರುತ್ತಾರೆ ಎಷ್ಟು ದಿನ ಆದರೂ ಸ್ನಾನವನ್ನೇ ಮಾಡದೆ ಇರುತ್ತಾರೆ ಆದರೆ ಮನುಷ್ಯನ ಹೊರ ಭಾಗಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಸ್ನಾನ ಒಂದು ಉತ್ತಮ ಮಾರ್ಗ ಸ್ನಾನ ಮಾಡುವುದು ಕೂಡ ಅದಕ್ಕೆ ಆದಂತ ಕೆಲವು ಪದ್ಧತಿಗಳು ಇದೆ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಯಾವ ವಿಧಾನದಲ್ಲಿ ಸ್ನಾನ ಮಾಡಬೇಕು ಎಂದು ಕ್ರಮಗಳು ಇದೆ.

ಹಿಂದಿನ ಕಾಲದಲ್ಲಿ ಊಟ ಆದ ನಂತರ ಸ್ನಾನ ಮಾಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಆಯುರ್ವೇದ ಪದ್ಧತಿಯಲ್ಲೂ ಕೂಡ ಊಟ ಆದ ನಂತರ ಸ್ನಾನ ಮಾಡಬಾರದು ಎಂದು ಹೇಳುತ್ತಾರೆ ಆಹಾರವನ್ನು ಸೇವಿಸಿದ್ದಕ್ಕೂ ಈ ಸ್ನಾನ ಮಾಡುವುದಕ್ಕೂ ಏನು ಸಂಬಂಧ ಇರಬಹುದು ಅದೇ ಬೇರೆ ಇದೇ ಬೇರೆ ಎಂದು ಅನೇಕರು ಭಾವಿಸುತ್ತಾರೆ.

ನಾವು ಊಟ ಮಾಡಿದ ನಂತರ ಸ್ನಾನ ಮಾಡುವ ರೂಢಿಯನ್ನು ಮಾಡಿಕೊಂಡರೆ ಅದು ನಮ್ಮ ದೇಹದಲ್ಲಿರುವ ಜೀರ್ಣಾಂಗ ಕ್ರಿಯೆ ಹಾಗೂ ನಮ್ಮ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ ಏಕೆಂದರೆ ನಮ್ಮ ದೇಹದ ಒಳಗಿರುವ ಎಲ್ಲಾ ಭಾಗಗಳು ಸ್ವತಹ ಒಂದಕ್ಕೊಂದು ಸಂಪರ್ಕ ಹೊಂದಿರುವ ಭಾಗಗಳು ಹಾಗಾಗಿ ಅದರದೇ ಆದಂತ ಕೆಲಸವನ್ನು.

ನಿರ್ವಹಿಸುತ್ತಾ ಇರುತ್ತದೆ ಒಂದು ಭಾಗದಲ್ಲಿ ಏನಾದರೂ ಸಮಸ್ಯೆ ಆದರೆ ಅದು ಇನ್ನೊಂದು ಭಾಗದಲ್ಲಿ ದೊಡ್ಡ ತೊಂದರೆಯನ್ನು ಕೊಡುತ್ತದೆ ಅದಕ್ಕೆ ಊಟ ಮಾಡಿದ ನಂತರ ಸ್ನಾನ ಮಾಡಬಾರದು. ಮೊದಲಿಗೆ ಸ್ನಾನ ಮಾಡುವ ಮುಂಚೆ ಒಂದು ಲೋಟ ನೀರನ್ನು ಕುಡಿಯಬೇಕು ತಜ್ಞರ ಪ್ರಕಾರ ಇದಕ್ಕೆ ಸರಿಯಾದ ಮಾಹಿತಿ ಎಂದರೆ.

ರಕ್ತಸಂಚಲನವನ್ನು ಸರಿಯಾದ ಕ್ರಮದಲ್ಲಿ ನಡೆಸುತ್ತದೆ ಹಾಗೂ ದೇಹದ ಒಳಭಾಗಗಳನ್ನು ತಣ್ಣಗೆ ಇರುವಂತೆ ಮಾಡುತ್ತದೆ ಇದರ ಮೂಲಕ ರಕ್ತಸಂಚಲನಕ್ಕೆ ಯಾವುದೇ ತೊಂದರೆ ಆಗದೆ ಸರಿಯಾದ ಕ್ರಮದಲ್ಲಿ ಅವರ ಅದರ ಕೆಲಸ ಮಾಡುತ್ತದೆ.ಹೊಟ್ಟೆ ತುಂಬಿದ ನಂತರ ಸ್ನಾನ ಮಾಡಬಾರದು ಏಕೆಂದರೆ ಊಟ ಮಾಡಿದ ತಕ್ಷಣವೇ.

ನಮ್ಮ ದೇಹದಲ್ಲಿ ಒಂದು ಬೆಚ್ಚನೆಯ ಶಕ್ತಿ ಉತ್ಪತ್ತಿಯಾಗುತ್ತದೆ ಅದರಿಂದ ಜೀರ್ಣಕ್ರಿಯೆಗೆ ಹಾಗೂ ಆಹಾರದ ಸತ್ವವನ್ನು ಹಿಡಿದಿಟ್ಟುಕೊಳ್ಳಲು ಸಹಾಯಮಾಡುತ್ತದೆ ಒಂದು ವೇಳೆ ಊಟ ಮಾಡಿದ ತಕ್ಷಣವೇ ಸ್ನಾನ ಮಾಡಿದರೆ ರಕ್ತ ಸಂಚಾರಕ್ಕೂ ಕೂಡ ತೊಂದರೆಯಾಗುತ್ತದೆ.

ಹಾಗೂ ತಿಂದಂತಹ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣಕ್ರಿಯೆ ಮಾಡುವುದಿಲ್ಲ ಆದ್ದರಿಂದ ಊಟ ಆದ ಸರಿ ಸುಮಾರು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದು ಉತ್ತಮ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ