ಹೆಂಡತಿ ಮಾಡುವ ಈ ತಪ್ಪುಗಳಿಂದ ಗಂಡನಿಗೆ ಘೋರ ಬಡನತ ಬರುತ್ತೆ..ಎಂದಿಗೂ ಈ ತಪ್ಪು ಮಾಡಬೇಡಿ

WhatsApp Group Join Now
Telegram Group Join Now

ಹೆಂಡತಿ ಮಾಡುವ ಈ ತಪ್ಪುಗಳಿಂದ ಗಂಡನಿಗೆ ಘೋರ ಬಡತನ ಬರುತ್ತೆ…. ನಿಮಗೆ ಗೊತ್ತೇ ಇದೆ ಪತ್ನಿ ಎಂದರೆ ಮನೆಯ ಲಕ್ಷ್ಮಿ ಇದ್ದ ಹಾಗೆ ಇದೇ ಲಕ್ಷ್ಮಿ ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿದರೆ ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಇದರ ನೇರ ಪರಿಣಾಮ ಗಂಡನ ಮೇಲೆ ಬೀಳುತ್ತದೆ.

ಇದರಿಂದ ಗಂಡ ಭಿಕಾರಿಯಾಗುತ್ತಾನೆ ಹೆಂಡತಿ ಮಾಡುವಂತಹ ಈ ಐದು ತಪ್ಪುಗಳು ಗಂಡನನ್ನ ಗತಿಕನಿಂದ ನಿರ್ಗತಿಕನಾಗಿಸುತ್ತದೆ ಜೊತೆಗೆ ಮನೆಯಲ್ಲಿಯೂ ಬಡತನ ಆವರಿಸುವಂತೆ ಮಾಡುತ್ತದೆ ಅಷ್ಟಕ್ಕೂ ಆ ಐದು ತಪ್ಪುಗಳು ಯಾವುವು ಈಗ ನಾವು ನೀಡುತ್ತೇವೆ, ಅದರ ಬಗ್ಗೆ ಮಾಹಿತಿಯನ್ನು.

ಬೆಳಗ್ಗೆ ಬೇಗ ಎದ್ದೇಳುವುದು ಆರೋಗ್ಯಕ್ಕೂ ನಮ್ಮ ಕೆಲಸಕ್ಕೂ ಒಳ್ಳೆಯದು ಇದರಿಂದ ಮನೆಗೆ ಶುಭವಾಗುತ್ತದೆ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು ಅದರಲ್ಲಿಯೂ ಮಹಿಳೆಯರು ಪ್ರತಿ ದಿನ ಬೆಳಗ್ಗೆ ಎದ್ದೇಳಬೇಕು ಸೂರ್ಯೋದಯಕ್ಕೂ ಮುನ್ನ ಎದ್ದು ಮನೆಯ ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಧರ್ಮಶಾಸ್ತ್ರಗಳಲ್ಲಿ ತಿಳಿಸಿರುವ ಅಂತಹ ಪದ್ಧತಿ.

ಯಾವ ಮಹಿಳೆ ಬೆಳಗ್ಗೆ ಬೇಗ ಎದ್ದೇಳುವುದಿಲ್ಲವೋ ತಡವಾಗಿ ಎದ್ದೇಳುತ್ತಾಳೋ ಅಂತಹ ಮಹಿಳೆಯ ಮೇಲೆ ಲಕ್ಷ್ಮಿ ದೇವಿ ಕೋಪ ಮಾಡಿಕೊಳ್ಳುತ್ತಾಳೆ ಇಂತಹ ಮಹಿಳೆಯರ ಗಂಡ ಯಾವತ್ತೂ ಶ್ರೀಮಂತರಾಗುವುದಕ್ಕೆ ಸಾಧ್ಯವೇ ಇಲ್ಲ. ಎರಡನೆಯದಾಗಿ ಸ್ತ್ರೀಯರು ಯಾವಾಗಲೂ ಶಾಂತ ಸ್ವಭಾವದವರಾಗಬೇಕು.

ಇನ್ನೊಬ್ಬರ ಜೊತೆ ಮಾತನಾಡಬೇಕಾದರೆ ತುಂಬಾನೇ ಶಾಂತವಾಗಿ ಮೃದುವಾಗಿ ಮಾತನಾಡುವ ಅಭ್ಯಾಸವನ್ನ ಮಾಡಿಕೊಳ್ಳಬೇಕು ಆದರೆ ಜೋರಾಗಿ ಇನ್ನೊಬ್ಬರ ಮನಸಿಗೆ ನೋವಾಗುವಂತೆ ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಮಾತನಾಡುವಂತಹ ಮಹಿಳೆಯರ ಆ ಮನೆಯಲ್ಲಿ ಪ್ರತಿದಿನ ಜಗಳ ಕಲಹ ತಪ್ಪಿದ್ದಲ್ಲ.

ಇಂತಹ ಮನೆಯಲ್ಲಿ ಧನಲಕ್ಷ್ಮಿ ಯಾವತ್ತೂ ಪ್ರವೇಶಿಸುವುದಿಲ್ಲ ಮಹಿಳೆಯ ಈ ಸ್ವಭಾವದ ಕರ್ಮಫಲವನ್ನ ಇಡೀ ಮನೆ ಜನರು ಅನುಭವಿಸಬೇಕಾಗುತ್ತದೆ ಏಕೆಂದರೆ ಆ ಮನೆಯ ಜನ ಬಡತನದಲ್ಲಿ ಜೀವಿಸಬೇಕಾಗುತ್ತದೆ ಯಾವ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆಯೋ ಸಂತೋಷ ಇರುತ್ತದೆಯೋ ಆ ಮನೆಯಲ್ಲಿ ಮಾತ್ರ ದೇವಾನುದೇವತೆಗಳು ಲಕ್ಷ್ಮಿ ದೇವಿ ವಾಸ ಮಾಡುವುದಕ್ಕೆ ಸಾಧ್ಯ.

ಮನೆಗೆ ದಾರಿದ್ರ ತರುವಂತಹ ಇನ್ನೊಂದು ತಪ್ಪು ಎಂದರೆ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಅಂದರೆ ಹೊಟ್ಟೆ ಬಿರಿಯುವಂತೆ ತಿನ್ನುವುದು ಎಂದು ಹೇಳುತ್ತಾರಲ್ಲ ಅದೇ ರೀತಿ ತುಂಬಾನೇ ಹಸಿವು ಅಥವಾ ನಿಮಗೆ ಇಷ್ಟ ಎಂದು ಅಗತ್ಯಕ್ಕಿಂತ ಹೆಚ್ಚು ತಿಂಡಿ ಊಟ ಮಾಡುವ ಹೆಂಗಸು ನೀವಾಗಿದ್ದರೆ ಇದು ನಿಮ್ಮ ಗಂಡನನ್ನು ಭಿಕಾರಿ ಮಾಡುವ ನಿಮ್ಮ ಮತ್ತೊಂದು ದೊಡ್ಡ ತಪ್ಪಾಗಿದೆ.

ಯಾವ ಮನೆಯಲ್ಲಿ ಹೆಂಡತಿ ಅಗತ್ಯಕ್ಕಿಂತ ಹೆಚ್ಚು ಊಟ ಮಾಡುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ದೇವಿ ಇರುವುದಕ್ಕೆ ಇಷ್ಟಪಡುವುದಿಲ್ಲ ಇದರಿಂದಾಗಿ ಮನೆಯ ಸದಸ್ಯರು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ತಿನ್ನುವುದಕ್ಕೆ ಹೋಗಬೇಡಿ ಇದು ಆರೋಗ್ಯಕ್ಕೂ ಒಳ್ಳೆಯದಲ್ಲ.

ಶ್ರೀಮಂತಿಕೆ ಅನುಭವಿಸುವ ನಿಮ್ಮ ಆಸೆಗೂ ಕೂಡ ಇದು ಒಳ್ಳೆಯದಲ್ಲ ಏಕೆಂದರೆ ಲಕ್ಷ್ಮಿದೇವಿಯೆ ಸಂಪತ್ತಿನ ದೇವರು ಅವರು ಮನೆಗೆ ಬಂದರೆ ಮಾತ್ರ ನಮ್ಮ ಬಳಿ ಹಣವಿರುತ್ತದೆ ಅವರೇ ನಿಮ್ಮ ಮನೆಗೆ ಬಂದಿಲ್ಲ ಎಂದರೆ ಇನ್ನು ಎಲ್ಲಿಂದ ಹಣ ಸಂಪತ್ತು ವೃದ್ಧಿಯಾಗುತ್ತದೆ ಹೇಳಿ ನೀವೇ ಯೋಚನೆ ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god