ಹೆಣ್ಣು ಮಕ್ಕಳು ಅಂದರೆ ಹೀಗಿರಬೇಕು…ಈ ರೀತಿ ಇರುತ್ತೆ ಮಹಿಳೆಯರ ಸ್ವಭಾವ ಒಂದು ದಿನ ಒಬ್ಬ ಮಹಿಳೆ ಬಾವಿಯಿಂದ ನೀರು ತೊಡುತ್ತಾ ಇದ್ದಳು ಆವಾಗ ಅಲ್ಲಿಗೆ ಒಬ್ಬ ಪುರುಷನು ಆ ಮಹಿಳೆಯ ಹತ್ತಿರ ಸ್ವಲ್ಪ ನೀರು ಕೊಡಿ ಅಂತ ಕೇಳಿದನು.ಆವಾಗ ಮಹಿಳೆ ಸಂತೋಷವಾಗಿ ನೀರು ಕುಡಿಯಲು ಕೊಟ್ಟಳು ನೀರು.
ಕುಡಿದ ಆದಮೇಲೆ ಆ ಪುರುಷನು ಮಹಿಳೆಯ ಹತ್ತಿರ ಕೇಳಿದನು ಯಾಕೆ ದೇವರು ಈ ಮಹಿಳೆಯರ ಸ್ವಭಾವ ಮತ್ತು ಚರಿತ್ರೆ ಈ ರೀತಿ ಯಾಕೆ ಕೊಟ್ಟಿದ್ದಾನೆ.ಯಾವಾಗಲೂ ಅರ್ಥವಾಗುವುದಿಲ್ಲ ಅಂತ ಹೇಳುತ್ತಾನೆ ಆವಾಗ ಮಹಿಳೆ ದೊಡ್ಡ ದೊಡ್ಡದಾಗಿ ಜೋರಾಗಿ ಅಯ್ಯೋ ಕಾಪಾಡಿ ಅಯ್ಯೋ ಕಾಪಾಡಿ ಅಂತ ಬೊಬ್ಬೆ ಹಾಕಿದಳು.
ಊರಲ್ಲಿರುವ ಜನರಿಗೆಲ್ಲ ಆ ಶಬ್ದ ಕೇಳಿತು ಎಲ್ಲರೂ ಬಾವಿಯ ಹತ್ತಿರ ಬರತೊಡಗಿದರು ಅವಾಗ ಆ ಪುರುಷ ಮಹಿಳೆಯ ಹತ್ತಿರ ಯಾಕೆ ನೀನು ಈ ರೀತಿ ಜೋರಾಗಿ ಬೊಬ್ಬೆ ಹಾಕಿದ್ದೀಯಾ ಅಂತ ಕೊರಳು ಹಿಡಿದು ಕೇಳುತ್ತಾನೆ ನೀನೆಷ್ಟು ಮರ್ಯಾದೆ ಇರುವ ಹೆಣ್ಣು ಅಂತ ನಾನು ಅನ್ಕೊಂಡಿರಲಿಲ್ಲ ಅದಕ್ಕೆ ಆ ರೀತಿ ಮಾತಾಡ್ದೆ.
ಅಂತ ಅವನು ಮಹಿಳೆಯ ಹತ್ತಿರ ಹೇಳುತ್ತಾನೆ.ತಕ್ಷಣ ಆ ಮಹಿಳೆ ಕೊಡಪಾನದಲ್ಲಿರುವ ನೀರನ್ನು ತನ್ನ ಮೈಗೆ ಹಾಕಿಕೊಳ್ಳುತ್ತಾಳೆ ಅಷ್ಟರಲ್ಲಿ ಊರವರೆಲ್ಲ ಬಂದು ಏನಾಯಿತಮ್ಮ ಅಂತ ಕೇಳುತ್ತಾರೆ ಆಗ ಅವಳು ಹೇಳುತ್ತಾಳೆ ಈ ವ್ಯಕ್ತಿ ಇರಲಿಲ್ಲ ಅಂದ್ರೆ ನಾನೀಗ ಜೀವಂತ ಇರುತ್ತಿರಲಿಲ್ಲ ನಾನು ಬಾವಿಗೆ ಬಿದ್ದಾಗ ನನ್ನನ್ನು.
ಈ ವ್ಯಕ್ತಿ ಕಾಪಾಡಿದರು ಎಂದು ಊರವರ ಹತ್ತಿರ ಹೇಳುತ್ತಾಳೆ ಆ ಮಹಿಳೆ ಆವಾಗ ಊರವರೆಲ್ಲ ಅವನನ್ನು ಹೊಗಳಿ ಗುಣಗಾನ ಮಾಡಿ ಸನ್ಮಾನ ಮಾಡುತ್ತಾರೆ, ಒಳ್ಳೆ ಕೆಲಸ ಮಾಡಿದ್ದೀಯಪ್ಪ ಹೆಣ್ಣು ಮಕ್ಕಳಿಗೆ ಇದೇ ರೀತಿ ಮರ್ಯಾದೆ ಕೊಡಬೇಕಪ್ಪ ನಿನಗೆ ಒಳ್ಳೆ ಬುದ್ಧಿ ಇದೆ ಅಂತ ಹೇಳಿ ಹೇಳುತ್ತಾರೆ.
ಊರವರೆಲ್ಲ ಹೋದ ಮೇಲೆ ಆ ಮಹಿಳೆ ಅವನ ಹತ್ತಿರ ಹೇಳುತ್ತಾಳೆ, ನೋಡಿದಿಯಾ ಹೆಣ್ಣು ಮಕ್ಕಳ ಚರಿತ್ರೆ ಮತ್ತು ಸ್ವಭಾವ ಹೇಗಿರುತ್ತೆ ಅಂತ ಗೊತ್ತಾಯ್ತಾ ಈಗ ಅಂತ ಕೇಳುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.