ಹೆಣ್ಣು ಹೊನ್ನು ಈ ಎರಡರ ಹಿಂದೆ ಹೋದವರಿಗೆ ಏನಾಗುತ್ತೆ ಅನ್ನೋಕೆ ಈ ವಿಡಿಯೋ ತಪ್ಪದೇ ನೋಡಿ

WhatsApp Group Join Now
Telegram Group Join Now

ವೀಕ್ಷಕರಿಗೆ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತಾಳ್ಮೆಯನ್ನು ಕಳೆದುಕೊಂಡರೆ ಏನು ಮಾಡುತ್ತಾನೆ ಮತ್ತು ಅವನ ಮನಸ್ಸಿನಲ್ಲಿ ಕಾಮ ಮತ್ತು ಹಣ ಪ್ರಾಬಲ್ಯವನ್ನು ಸಾಧಿಸಿದಾಗ, ಅವನ ಜೀವನ ಹೇಗೆ ನಾಶವಾಗುತ್ತದೆ ಎನ್ನುವುದಕ್ಕೆ ಇವತ್ತಿನ ಈ ಒಂದು ವಿಡಿಯೋ ಜೀವಂತ ಸಾಕ್ಷಿ.

ಅಷ್ಟಕ್ಕೂ ಏನು ಆಗಿದೆ ಎನ್ನುತ್ತೀರಾ ದೆಹಲಿಯ ಬಾಬಾ ಹರಿದಾಸ ನಗರದಲ್ಲಿ ಒಂದು ಕುಟುಂಬ ವಾಸವಿತ್ತು. ಆ ಒಂದು ಕುಟುಂಬದಲ್ಲಿ ಒಟ್ಟು ಮೂರು ಜನವಿದ್ದರು , ಅವರು ದೀಪಕ್ , ರವಿ ಮತ್ತು ಸೀಮಾ ಈ ಮೂವರು ಇದ್ದಂತಹ ಆ ಮನೆಯಲ್ಲಿ ದೀಪಕ್ ಮತ್ತು ರವಿ ಸಹೋದರರಾಗಿದ್ದರೆ ಸೀಮಾ ದೀಪಕ್ ನ ಹೆಂಡತಿ. ಈ ಕುಟುಂಬ ಚಿಕ್ಕದಾಗಿ ಕೃಷಿ ಮಾಡುತ್ತ ಇರುತ್ತಾರೆ , ಹಾಗೂ ಅಲ್ಲಿ ಬೆಳೆದಂತ ಬೆಳೆಯನ್ನು ದೆಹಲಿಯಲ್ಲಿ ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತಾ ಇರುತ್ತಾರೆ.

ಹೀಗಿದ್ದರೂ ಸಹೋದರರ ಹೆಸರಿನಲ್ಲಿ ಕೆಲವು ಜಮೀನು ಇತ್ತು. ಈ ಅಣ್ಣ-ತಮ್ಮಂದಿರಿಗೆ ಒಬ್ಬ ಸಹೋದರಿಯೂ ಕೂಡ ಇದ್ದಳು ಆಕೆ ಮದುವೆಯಾಗಿ ಅವಳ ಗಂಡನ ಮನೆಯಲ್ಲಿ ಇದ್ದಳು. ಈ ಒಂದು ಮನೆತನದ ಸಂಪ್ರದಾಯದಂತೆ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಮೊದಲ ಹೋಳಿ ಹಬ್ಬವನ್ನು ತಾಯಿಯ ಮನೆಯಲ್ಲಿ ಆಚರಿಸಬೇಕು.

ಹಾಗಾಗಿ ಈಕೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬವನ್ನು ಆಚರಿಸಲು ತಮ್ಮ ತವರು ಮನೆಗೆ ಅಂದರೆ ಈ ಸಹೋದರರು ಹಾಗೂ ಅತ್ತಿಗೆ ಇದ್ದಂತಹ ಮನೆಗೆ ಬಂದಿದ್ದಳು. ಮನೆಯಲ್ಲಿ ಅವಳ ದೊಡ್ಡ ಅಣ್ಣ ದೀಪಕ್ ಹಾಗೂ ಅತ್ತಿಗೆ ಮಾತ್ರ ಸಿಕ್ಕಿದ್ದರು ರವಿ ಮಾತ್ರ ಕಾಣಿಸಲಿಲ್ಲ ! ಆಗ ರವಿಯ ಬಗ್ಗೆ ತನ್ನ ಅಣ್ಣ ದೀಪಕ್ ಹಾಗೂ ಅತ್ತಿಗೆಯ ಹತ್ತಿರ ಕೇಳಿದಾಗ, ಅವರು ಇಲ್ಲೇ ಅವರ ಸ್ನೇಹಿತರ ಜೊತೆಯಲ್ಲಿ ಹೋಳಿ ಹಾಡಲು ಹೋಗಿರಬಹುದು ಎಂದು ಹೇಳುತ್ತಾರೆ.

ರವಿಯ ಫೋನಿಗೆ ಫೋನ್ ಮಾಡಿದರೆ ಅವನು ಸಿಗಲಿಲ್ಲ, ಸರಿ ಮೆಸೇಜ್ ಆದರೂ ಮಾಡೋಣ ಅಂತ ವಾಟ್ಸಪ್ ಅನ್ನು ತೆಗೆದಾಗ ಆಕೆ, ರವಿ ಹಾಗತಾನೆ ಹ್ಯಾಪಿ ಹೋಳಿ! ಎಂದು ಸ್ಟೇಟಸ್ ಹಾಕಿದ್ದನ್ನ ನೋಡಿದ್ದಳು . ಇದೇನಿದು ನಾನು ಕರೆ ಮಾಡಿದರೆ ಸಿಗುತ್ತಿಲ್ಲ ಆದರೆ ಇಲ್ಲಿ ಸ್ಟೇಟಸ್ ಹಾಕಿದ್ದಾನೆ ಅಂತ ಆಶ್ಚರ್ಯ ಆಯಿತು .

ಮುಂದಿನ ಎರಡು ಮೂರು ದಿನ ಆಕೆ ತನ್ನ ತವರು ಮನೆಯಲ್ಲಿ ಇದ್ದರೂ ಕೂಡ ರವಿ ಮನೆಗೆ ಬರಲಿಲ್ಲ .ರವಿಯ ಸೋಶಿಯಲ್ ಮೀಡಿಯಾ ಅಕೌಂಟ್ಗಳು ಮಾತ್ರ ನಿರಂತರವಾಗಿ ಆಕ್ಟಿವ್ ನಲ್ಲಿ ಇದ್ದವು ಸ್ಟೋರೀಸ್ ಗಳು ಶೇರ್ ಆಗುತ್ತಾ ಇದ್ದವು . ಮನೆಯಲ್ಲಿ ಮತ್ತೆ ವಿಚಾರಿಸಿದಾಗ ಎಲ್ಲೋ ತಿರುಗಾಡಲು ಹೋಗಿರಬಹುದು ಅಂತ ಹೇಳಿದ್ದರು ಸ್ಟೋರಿಗಳೆಲ್ಲವೂ ಕೂಡ ರವಿ ಟ್ರಿಪ್ ಗೆ ಹೋದಂತಹ ಫೋಟೋಗಳನ್ನು ಹಾಕುತ್ತಾ ಇದ್ದ. ಹೀಗಾಗಿ ಅವನ ತಂಗಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅವನಿಗೆ ನೆನಪಾದಾಗ ಕಾಲ್ ಮಾಡಲಿ ಎಂದು ಆಕೆ ನನ್ನ ಗಂಡನ ಮನೆಗೆ ವಾಪಸ್ ಹೋಗುತ್ತಾಳೆ.

ಮತ್ತೆ ಸುಮಾರು 8 ರಿಂದ 10 ದಿನಗಳು ಕಳೆದರೂ ಕೂಡ ರವಿ ಇಂದ ಏನು ಪ್ರತಿಕ್ರಿಯೆ ಬರುವುದಿಲ್ಲ ಮತ್ತೆ ಕಾಲ್ ಹಾಗೂ ಮೆಸೇಜನ್ನು ಮಾಡಿದರು ಕೂಡ ಏನು ರಿಪ್ಲೇ ಬರಲಿಲ್ಲ ಹಾಗೆ ಅವನ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು, ಹಾಗೆ ಅವನ ಸೋಶಿಯಲ್ ಮೀಡಿಯಾ ಅಕೌಂಟನ್ನು ತೆಗೆದು ನೋಡಿದರೆ ಅಲ್ಲಿಯೂ ಸಹ ಸ್ಟೋರಿಗಳು ನಿಂತು ಹೋಗಿದ್ದವು .

ಮತ್ತೆ ತವರು ಮನೆಗೆ ಬಂದಂತಹ ಆಕೆ ಈ ಸಲ ರವಿ ಎಲ್ಲಿದ್ದಾನೆ ಯಾಕೆ ಮನೆಗೆ ಬಂದಿಲ್ಲ ನಿಜ ಹೇಳಿ?ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god