93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ.ಸುಮಾರು ಒಂದು ವರ್ಷದ ಹಿಂದೆ ಈ ಅಜ್ಜಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟ ಮಾಡಲಾಗಿತ್ತು.ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಈ ಅಜ್ಜಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುತ್ತಾರೆ‌.ಇದೆ ಜೈಲಿಗೆ ಉಪ ಲೋಕಾಯುಕ್ತರಾದಂತಹ ಬಿ ವೀರಪ್ಪನವರು ಬಂದು ಜೈಲಿನ ಪರಿಸ್ಥಿತಿಯನ್ನು ಪರೀಶಿಲನೆ ಮಾಡುವಾಗ ಅವರ ಕಣ್ಣಿಗೆ ಈ ಅಜ್ಜಿ ಕಾಣಿಸಿಕೊಳ್ಳುತ್ತಾರೆ.ಅಜ್ಜಿಯನ್ನು ನೋಡಿ ಶಾಕ್ ಗೆ ಒಳಗಾದ ಅವರು ಅವರ ಕೇಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ.

WhatsApp Group Join Now
Telegram Group Join Now

ನಂತರ ಈ ಅಜ್ಜಿಯನ್ನು ಜೈಲಿನಿಂದ ಬಿಡುಗಡೆ ಮಾಡಲು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಲ್ಲವನ್ನು ಮಾಡಿ ಎಂದು ಅಲ್ಲಿನ ಅಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ.ಅಂತಿಮವಾಗಿ ಈ ದಿನ ಅಜ್ಜಿಯನ್ನು ಮೂರು ತಿಂಗಳ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.ಈಗ ಈ 93 ವರ್ಷದ ಅಜ್ಜಿ ಮಾಡಿದ ತಪ್ಪಾದರು ಏನು ಯಾವ ಕಾರಣಕ್ಕಾಗಿ ಈ ಅಜ್ಜಿಗೆ ಜೀವಾವಾಧಿ ಶಿಕ್ಷೆ ಪ್ರಕಟ ಆಗಿತ್ತು ಎಂಬುದನ್ನು ಈಗ ತಿಳಿಯೋಣ.

ಈ ಅಜ್ಜಿಯ ಮೇಲೆ ಆರೋಪ ಬಂದಿದ್ದು 1995 ರಲ್ಲಿ.ಆದರೆ ಶಿಕ್ಷೆ ಪ್ರಕಟ ಆಗಿದ್ದು ಒಂದು ವರ್ಷದ ಹಿಂದೆ ಅಷ್ಟೇ.ಅಜ್ಜಿ ವಿರುದ್ದ ಕೇಳಿ ಬಂದ ಆರೋಪ ಏನೆಂದರೆ ಅದು ವರದಕ್ಷಿಣೆ ಕಿರುಕುಳದ ಆರೋಪ.ಅಜ್ಜಿಯ ಸೊಸೆ ಅಜ್ಜಿ ಹಾಗೂ ಅವರ ಮಗನ ವಿರುದ್ದ 1995 ರಲ್ಲಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿರುತ್ತಾರೆ.ದೂರನ್ನು ನೀಡಿರುತ್ತಾರೆ.

ದೂರು ಕೊಟ್ಟ ಸೊಸೆಯ ಗಂಡ ಅಂದರೆ ಅಜ್ಜಿಯ ಮಗ ಈ ಕೇಸ್ ನಿಂದ ಖುಲಾಸೆಯಾಗುತ್ತಾನೆ ಇದು ಆಶ್ಚರ್ಯಕರ ಸಂಗತಿ.ಆತನ ತಪ್ಪಿಲ್ಲ ಎಂದು ಈ ಕೇಸ್ ನಿಂದ ಬಿಡಲಾಗುತ್ತದೆ.ಆದರೆ ಈ ಅಜ್ಜಿಗೆ ಮಾತ್ರ ಶಿಕ್ಷೆ ಪ್ರಕಟವಾಗುತ್ತದೆ.ಅಜ್ಜಿಯ ಕುಟುಂಬದವರು ಹೈಕೋರ್ಟ್ ಮೆಟ್ಟಿಲು ಏರಿದರು ಕೂಡ ಹೈಕೋರ್ಟ್ ಕೂಡ ಈ ಜೀವಾವಧಿ ಶಿಕ್ಷೆಯನ್ನೆ ಸರಿ ಅನ್ನುತ್ತದೆ.ಇವರನ್ನು ಬಿಡುಗಡೆ ಮಾಡಲು ಏನೆಲ್ಲಾ ಹರಸಾಹಸ ಪಡಬೇಕಾಯಿತು ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ..

By god