ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ
ಮನೆಯಲ್ಲಿ ಸುಲಭವಾಗಿ ಮಾಡಬಹುದಾದಂತಹ ಕೆಲವು ಉಪಯುಕ್ತ ಮಾಹಿತಿಗಳು ಹಾಗೂ ಮನೆಗೆ ತಂದ ಮಣ್ಣಿನ ದೀಪಗಳನ್ನು ಹೇಗೆ ಶುದ್ಧ ಮಾಡಿ ಇಟ್ಟುಕೊಳ್ಳಬೇಕು ಅದರಿಂದ ಹೇಗೆ ಎಣ್ಣೆ ಬರಬಾರದು ಈ ರೀತಿ ಅಡುಗೆ ಮನೆಯ ಬಗ್ಗೆ ಕೆಲವೊಂದು ಸಣ್ಣ ಸಣ್ಣ ಉಪಯುಕ್ತ ವಿಷಯಗಳನ್ನು ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ದೀಪಾವಳಿ ಹಬ್ಬ ಶುರುವಾಗುತಿದೆ ಎಲ್ಲರೂ ಸಹ ಮಣ್ಣಿನ ದೀಪವನ್ನು ತರುತ್ತಾರೆ. ಮಣ್ಣಿನ ದೀಪವನ್ನು ತಂದ ಕೂಡಲೇ ಅದನ್ನು ಹಾಗೆಯೇ ಬಳಸಬಾರದು ಒಂದು ಭಟ್ಟಲಿನಲ್ಲಿ ನೀರನ್ನು ಹಾಕಿ ಆ ಬಟ್ಟಲಿಗೆ ಮಣ್ಣಿನ ದೀಪವನ್ನು ಹಾಕಿ ಅದು ಮುಳುಗುವಷ್ಟು ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಬೇಕು ನಂತರ ಅದನ್ನು ಒಂದು ಬಟ್ಟೆಯಲ್ಲಿ ಒರೆಸಿ, ಅದರ ಕೆಳಭಾಗಕ್ಕೆ ನೈಲ್ ಪೋಲಿಷ್ ಅನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಮಣ್ಣಿನ ದೀಪ ಎಣ್ಣೆಯನ್ನು ಎಳೆದುಕೊಳ್ಳುವುದಿಲ್ಲ ಜೊತೆಗೆ ನೈಲ್ ಪೋಲಿಷ್ ಹಚ್ಚುವುದರಿಂದ ಎಣ್ಣೆ ಕೆಳಗೆ ಸೋರುವುದಿಲ್ಲ.

ರಂಗೋಲಿ ಬರುವುದಿಲ್ಲ ಎನ್ನುವವರು ಸೊಪ್ಪು ಸೂಸುವ ಬೂಸಿಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ರಂಗೋಲಿಯನ್ನು ಸುತ್ತಾ ಚೆಲ್ಲಬೇಕು ನಂತರ ಆ ಪಾತ್ರೆಯನ್ನು ತೆಗೆದಾಗ ಚುಕ್ಕಿಯ ರೀತಿಯಲ್ಲಿ ವೃತ್ತಾಕಾರವಾಗಿ ಒಳ್ಳೆಯ ರಂಗೋಲಿ ಇರುತ್ತದೆ ಅದರ ಮೇಲೆ ದೀಪ ಇಟ್ಟು ಸುತ್ತ ಅರಿಶಿನ ಕುಂಕುಮ ಇಟ್ಟು ಹೂವನ್ನು ಇಟ್ಟರೆ ಬಹು ಸುಂದರವಾಗಿ ಕಾಣಿಸುತ್ತದೆ.

ರೇಷನ್ ಅಂಗಡಿ ಇಂದ ತಂದಂತಹ ಅಕ್ಕಿಯನ್ನು ಎರಡು ಲೋಟ ತೊಳೆದು ಅಕ್ಕಿ ಮುಳುಗುವಷ್ಟು ನೀರನ್ನು ಹಾಕಿ ಇಡಬೇಕು ಈ ರೀತಿ ಎರಡು ದಿನ ಮಾಡಬೇಕು ಪ್ರತಿದಿನ ರಾತ್ರಿ ಮಲಗುವ ಮುನ್ನ ಅಕ್ಕಿಯನ್ನು ತೊಳೆದು ಮತ್ತು ಹೊಸ ನೀರಿನಲ್ಲಿ ಆಕೆಯನ್ನು ನೆನೆಸಬೇಕು ಎರಡು ದಿನದ ನಂತರ ಮತ್ತೆ ಅಕ್ಕಿಯನ್ನು ತೊಳೆದು ಒಂದು ಕಾಟನ್ ಬಟ್ಟೆಯಲ್ಲಿ ಅಕ್ಕಿಯನ್ನ ಹರಡಬೇಕು 10 ನಿಮಿಷಗಳ ಕಾಲ ಬಿಟ್ಟು ದೊಡ್ದು ಮಿಕ್ಸಿ ಜಾರಿಗೆ ಹಾಕಿಕೊಂಡು ನೈಸ್ ಆಗಿ ಪುಡಿ ಮಾಡಿ ನಂತರ ಅದನ್ನು ಜರಡಿ ಹಿಡಿಯಬೇಕು

ನಂತರ ಒಂದು ತಳ ದಪ್ಪ ಇರುವಂತಹ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಕಪ್ ಅಷ್ಟು ಬೆಲ್ಲ ದ ಪುಡಿ ಸೇರಿಸಿ ಕಾಲು ಲೋಟದಷ್ಟು ನೀರನ್ನು ಹಾಕಿ ನೊರೆ ಬರುವವರೆಗೂ ಚೆನ್ನಾಗಿ ಕಾಯಿಸಿ ಮತ್ತೊಂದು ಕಡೆ ಪ್ಯಾನಿನಲ್ಲಿ ಎರಡು ಸ್ಪೂನ್ ಬಿಳಿ ಎಳ್ಳ ಮತ್ತು ಎರಡು ಸ್ಪೂನ್ ಗಸಗಸೆ ಹಾಕಿಕೊಂಡು ಸ್ವಲ್ಪ ಉರಿದ ನಂತರ ಬೆಲ್ಲದ ಪಾಕದೊಳಗೆ ಸೇರಿಸಬೇಕು ಪಾಕ ಬಂದ ನಂತರ ಅದಕ್ಕೆ ಜರಡಿ ಹಿಡಿದಂತಹ ಅಕ್ಕಿ ಇಟ್ಟನ್ನು ಸ್ವಲ್ಪ ಸೇರಿಸಿಕೊಳ್ಳಬೇಕು ಅದನ್ನು ಚೆನ್ನಾಗಿ ತಿರುಗಿಸಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಬೇಕು ನೋಡಿ ನಂತರ ಗ್ಯಾಸ್ ಸ್ಟವ್ ಆಫ್ ಮಾಡಿ ಎರಡು ಗಂಟೆ ಅಥವಾ ಮೂರು ಗಂಟೆಗಳ ಕಾಲ ಅದನ್ನು ಬಿಡಬೇಕು ನಂತರ ಒಂದು ಸ್ಟೀಲ್ ಅಥವಾ ಪ್ಲಾಸ್ಟಿಕ್ ಪ್ಲೇಟಿನ ಮೇಲೆ ಒಂದೇ ಸಮವಾಗಿ ಕಟ್ಟಿಕೊಂಡು ಎಣ್ಣೆಯಲ್ಲಿ ಹದವಾಗಿ ಬೇಯಿಸಬೇಕು ಮನೆಯಲ್ಲಿ ಸುಲಭವಾಗಿ ಕಜ್ಜಾಯವನ್ನು ಮಾಡಬಹುದು. ಮತ್ತಷ್ಟು ಮಾಹಿತಿಯನ್ನ ತಿಳಿಸುತ್ತೇವೆ.

By god