ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಿನಿಮಾ ಧಾರವಾಹಿ ನೋಡುತ್ತಿದ್ದ ಪ್ರತಿಯೊಬ್ಬರು ಈಗ ನ್ಯೂಸ್ ಚಾನೆಲ್ ನ ಮುಂದೆ ಕುಳಿತಿರುತ್ತಾರೆ ಪ್ರತಿಯೊಬ್ಬರ ಮೊಬೈಲ್, ಟಿವಿ ಎಲ್ಲಾದರಲ್ಲೂ ದರ್ಶನ್ ರವರ ಸುದ್ದಿ ಹರಡುತ್ತಿದೆ ಇಲ್ಲಿ ಜನರು ದರ್ಶನ್ ನಡೆಯುವಾಗ ಕುಂಟುಕೊಂಡು ನಡೆದರ ಅಥವಾ ಪೊಲೀಸರು ಕಾಲಿಗೆ ಹೊಡೆದಿದ್ದಾರಾ? ಪವಿತ್ರ ಗೌಡ ನಗುತಿದ್ದಾರೆ ಇಂತಹ ಕೇಸಿನಲ್ಲೂ ಕೂಡ ಅವರು ನಗುತ್ತಾ ಹೋಗುತ್ತಿದ್ದಾರೆ ಅವರಿಗೆ ಲಿಪ್ಸ್ಟಿಕ್ ಎಲ್ಲಿಂದ ಸಿಕ್ತು. ನಾನಾ ರಿತಿಯಾಗಿ ಚರ್ಚೆಗಳು ನಡೆಯುತ್ತಾ ಇದೆ.

WhatsApp Group Join Now
Telegram Group Join Now

ದರ್ಶನ್ ಹಾಗೂ ಅವರ ಗ್ಯಾಂಗಿನ ಕ್ರೂರತ್ವದ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ದರ್ಶನ್ ರವರಿಗೆ ಉಸಿರು ಕಟ್ಟಿಸುವ ಮಟ್ಟಕ್ಕೆ ಸಾಕ್ಷಿಗಳು ಸಿಗುತ್ತಿದೆ ಮಾಧ್ಯಮಗಳ ಮೇಲು ಕೂಡ ನಾನಾ ರೀತಿಯ ಭಾಷಾ ವರ್ಣಗಳು ನಡೆಯುತ್ತಾ ಇದೆ ಅದರಲ್ಲೂ ಕೆಲವೊಂದು ಮಾಧ್ಯಮಗಳು ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದಾರೆ ಕಾರಣ ದರ್ಶನ್ ರವರು ಮಾಧ್ಯಮದವರನ್ನ ಹೀನಾಯವಾಗಿ ನಡೆಸಿಕೊಂಡಿದ್ದರು. ನಿಮ್ಮನ್ನ ಮಳೆಯಲ್ಲಿ ನೆನೆಸುತ್ತೇವೆ ನಿಮ್ಮ ಯೋಗ್ಯತೆನೆ ಇಷ್ಟು ಎಂದು ಅವಾಚ್ಯ ಶಬ್ದಗಳಿಂದ ಮಾಧ್ಯಮದವರನ್ನು ನಿಂದಿಸಿದ್ದರು ಆದರೆ ಇವಾಗ ದರ್ಶನ ಕಥೆ ತಿಂಗಳಿಗೆ ಶಿಸ್ತು ಬದ್ಧವಾಗಿ ಬಡ್ಡಿ ಕಟ್ಟುತ್ತಿದ್ದೆ ಈಗ ಬಡ್ಡಿ ಸಮೇತ ವಾಪಸ್ ತೆಗೆದುಕೊಳ್ಳುವ ಸಮಯ ಬಂದಿದೆ ಈ ಮಾತು ಎಷ್ಟು ಅರ್ಥಪೂರ್ಣವಾಗಿ ದರ್ಶನ್ ರವರಿಗೆ ಒಪ್ಪುತ್ತದೆ .

ಆದರೆ ಈ ಒಂದು ಘಟನೆಯಿಂದ ಸಮಾಜದ ಮೇಲೆ ಸಮಾಜದ ಸ್ವಾಸ್ತ್ಯದ ಮೇಲೆ ಆರೋಗ್ಯದ ಮೇಲೆ ಮನುಷ್ಯನ ನೈತಿಕ ನೆಲೆಗಟ್ಟಿನ ಮೇಲೆ ಅನೈತಿಕ ಗಂಭೀರ ಪರಿಣಾಮಗಳು ಬೀರುತ್ತಿರುವುದು ಸುಳ್ಳಲ್ಲ ಕಾರಣ ವಿಡಿಯೋ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆಯ ಆರೋಪ, ಮೋರಿಗೆ ಬಿದ್ದು ದರ್ಶನ ಅಭಿಮಾನಿಯೋಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಪೊಲೀಸ್ ಠಾಣೆಯ ಮುಂದೆ ದರ್ಶನ್ ಅಭಿಮಾನಿಗಳು ಜಮಾಮಣಿಯಾಗಿ ಅವರಿಗೆ ಲಾಠಿ ಪ್ರಹಾರ ಮಾಡಿದ್ದಾರೆ ಸಮಾಜಕ್ಕೆ ಇದ್ಯಾವುದು ಸಹ ಒಳ್ಳೆಯ ಸಂಕೇತವಲ್ಲ ಈ ಎಲ್ಲಾ ಘಟನೆಗಳಿಗೆ ಕಾರಣ ಹುಚ್ಚು ಅಭಿಮಾನ ಇದಕ್ಕೆ ‘ಸೆಲೆಬ್ರಿಟಿ ವರ್ಶಪ್ ಸಿಂಡ್ರೋಮ್’ ಎಂದು ಕರೆಯುತ್ತಾರೆ ಇದು ಒಬ್ಬ ಅಭಿಮಾನಿಯ ವಿಚಾರ ಮಾತ್ರವಲ್ಲದೆ ಹಲವಾರು ಸೆಲೆಬ್ರೇಟಿಗಳ ಅಭಿಮಾನಿಗಳು ಅವರ ಅಭಿಮಾನ ಅತಿರೇಕಕ್ಕೆ ಹೋಗಿ ಈ ರೀತಿಯ ಅನಾಹುತಗಳು ನಡೆಯುತ್ತಿದೆ.

See also  ವಯಸ್ಸಾದ 65 ವರ್ಷದ ಈ ಅಜ್ಜಿಯ ಅನಿಷ್ಠ ಚಟಕ್ಕೆ ಹುಡುಗನೇ ಬೇಕಿತ್ತು..ಅಜ್ಜಿಯ ಈ ಆಟ ಕೇಳಿ ಪೋಲಿಸರೆ ಬೆಚ್ಚಿಬಿದ್ದಿದ್ರು..

ಕೆಲವೇ ದಿನಗಳ ಹಿಂದೆ ಯಶ್ ಅಭಿಮಾನಿ ಕಟ್ ಔಟ್ ನಿಲ್ಲಿಸುವುದಕ್ಕೆ ಹೋಗಿ ಮೂರು ಯುವಕರು ಜೀವವನ್ನು ಕಳೆದುಕೊಂಡಿದ್ದಾರೆ. ಪುನೀತ್ ಅವರು ಪ್ರಾಣವನ್ನ ಕಳೆದುಕೊಂಡಾಗ ಅನೇಕರು ಶಾಖ್ ಗೆ ಒಳಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇನ್ನು ತಮಿಳುನಾಡು ಆಂಧ್ರದಂತ ರಾಜ್ಯಗಳಲ್ಲಿ ಜೈಲಲಿತಾ ಮೃತಪಟ್ಟಾಗ ವೈಎಸ್ ರಾಜಶೇಖರ್ ರೆಡ್ಡಿ ಪ್ರಾಣವನ್ನ ಕಳೆದುಕೊಂಡಿದ್ದರು ಇಂತಹ ವಿಕೃತ ಮಾನಸಿಕ ಅಸ್ವಸ್ತೆಯು ನಮ್ಮ ಸಮಾಜದಲ್ಲಿ ಬೆಳೆಯುತ್ತಿದೆ ಇದು ಅತಿರೇಕಕ್ಕೆ ಹೋಗಿ ಅವರು ಸಮಾಜಘಾತಕರಾಗಿ ಕೂಡ ಬೆಳೆಯುತ್ತಾರೆ.

ಇತ್ತೀಚಿಗೆ ದರ್ಶನ್ ಅಭಿಮಾನಿ ಎಂದೆನಿಸಿಕೊಂಡ ಇಬ್ಬರು ಬೇರೆಯವರಿಗೆ ಹತ್ಯೆಯ ಬೆದರಿಕೆ ಕೂಡ ಹಾಕಿದ್ದಾರೆ ದರ್ಶನ್ ಬಾಸ್ ನಮ್ಮ ಬಾಸ್ ವಿರುದ್ಧ ಯಾರು ಮಾತನಾಡಬಾರದು ಮಾತನಾಡಿದರೆ ಯಾರನ್ನು ಬಿಡುವುದಿಲ್ಲ ಎಂದು ಒಂದಿಬ್ಬರು ಬೆದರಿಕೆಯನ್ನ ಹಾಕಿದ್ದಾರೆ ಇವರ ಅಂದಾಭೀಮಾನ ಜನರಿಗೆ ಭಯವನ್ನ ಹುಟ್ಟಿಸುತ್ತದೆ ಇದೆಲ್ಲದಕ್ಕೆ ಕಾರಣ ಸೆಲೆಬ್ರಿಟಿ ವರ್ಷಿಪ್ ಸಿಂಡ್ರೋಮ್ ಹಾಗಂದ್ರೆ ಏನು ಅಂತ ಇವಾಗ ನಾವು ನಿಮಗೆ ತಿಳಿಸಿಕೊಡುತ್ತೇವೆ

ಸೆಲೆಬ್ರಿಟಿ ವರ್ಷಿಪ್ ಸಿಂಡ್ರೋಮ್ ಹಾಗೆಂದರೆ ಪ್ಯಾರಾ ಸೋಶಿಯಲ್ ರಿಲೇಶನ್ ಶಿಪ್ ನಲ್ಲಿ ಬರುವ ಒಂದು ವಿಧಾನ ಇದು ಒಂದು ಕಡೆಯ ಕನೆಕ್ಷನ್ ಇರುತ್ತದೆ ಸಾಮಾನ್ಯವಾಗಿ ಮೂರನೇ ಒಂದರಷ್ಟು ಜನ ಅವರದೇ ಆದ ಪ್ಯಾಥೊಲಾಜಿಕ್ ಲೆವೆಲ್ ನಲ್ಲಿ ಇದನ್ನು ಅನುಭವಿಸಿರುತ್ತಾರೆ ಇದಕ್ಕೆ ಒಂದಷ್ಟು ಲಕ್ಷಣಗಳು ಸಹ ಇವೆ ಸೆಲೆಬ್ರೆಟಿಗಳ ಮೇಲೆ ಅತಿಯಾದ ಅಭಿಮಾನ ಇಟ್ಟುಕೊಳ್ಳುವುದು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಅವರನ್ನು ಬಿಟ್ಟು ಬಿಡದೆ ಫಾಲೋ ಮಾಡುವುದು, ದಿನಬೆಳಗಾದರೆ ಎದ್ದು ಅವರ ಮೇಲೆ ಸ್ಟೇಟಸ್ ಹಾಕೋದು.

See also  ವಯಸ್ಸಾದ 65 ವರ್ಷದ ಈ ಅಜ್ಜಿಯ ಅನಿಷ್ಠ ಚಟಕ್ಕೆ ಹುಡುಗನೇ ಬೇಕಿತ್ತು..ಅಜ್ಜಿಯ ಈ ಆಟ ಕೇಳಿ ಪೋಲಿಸರೆ ಬೆಚ್ಚಿಬಿದ್ದಿದ್ರು..

ನಮ್ಮ ಸೆಲೆಬ್ರಿಟಿ ಏನ್ ಮಾಡ್ತಿದ್ದಾರೆ ಅವರು ನಕ್ಕುದ್ರು ಸುದ್ದಿ ಅತ್ರು ಸುದ್ದಿ ದೂರ ಪ್ರಯಾಣ ಮಾಡಿದರು ಸುದ್ದಿ ಎನ್ನುವಂತೆ ಅವರನ್ನು ಫಾಲೋ ಮಾಡುವುದು ಮನಸೆಲ್ಲಾ ಅವರ ಹಿಂದೇನೆ ಸುತ್ತಾಡುತ್ತಿರುವುದು ಯಾವ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ ಮನೆ ಸಮಾಜ ಕೊನೆಗೆ ತಮ್ಮ ಬಗ್ಗೆಯೂ ಸಹ ಯೋಚನೆ ಮಾಡುವುದಿಲ್ಲ ಈ ರೀತಿಯಾದಾಗಲೇ ಭಯಂಕರವಾದ ಘಟನೆಗಳು ನಡೆದುಹೋಗುತ್ತವೆ ಇದರಿಂದ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ ಕೊನೆಯದಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿ ಬಿಡುತ್ತಾರೆ ಇನ್ನು ದರ್ಶನ್ ಪ್ರಕರಣದಲ್ಲಿ ಆದಂತೆಯೇ ತಮ್ಮ ನಟನ ಮೇಲೆ ಎಂತದ್ದೇ ದೊಡ್ಡ ಆರೋಪ ಬಂದರೂ ಕೂಡ ಅದನ್ನು ಒಪ್ಪಿಕೊಳ್ಳುವುದಿಲ್ಲ.

ಸಮಾಜ ಆ ವ್ಯಕ್ತಿಯನ್ನ ಕೆಟ್ಟವನೆಂದು ದೂಷಿಸಲು ಶುರು ಮಾಡಿದಾಗ ಈ ಸೆಲೆಬ್ರಿಟಿ ವಾರ್ಷಿಕ ಸಿಂಡ್ರೋಮ್ ಸ್ಫೋಟಗೊಳ್ಳುತ್ತೆ ಇಂತಹ ದುರಾಭಿಮಾನಿಗಳು ಸಮಾಜವನ್ನು ಎದುರಿ ಹಾಕಿಕೊಳ್ಳಲು ಹೋಗುತ್ತಾರೆ ಕಾನೂನು ನೀತಿ ನಿಯಮ ಯಾವುದು ಸಹ ಇವರ ಅರಿವಿಗೆ ಬರುವುದಿಲ್ಲ ಅಲ್ಲಿ ನಡೆಯುತ್ತಿರುವ ಘಟನೆ ಏನು ಸರಿ ಯಾವುದು ತಪ್ಪು ಯಾವುದು ಎಂದು ಸಹ ಅವರ ಅರಿವಿಗೆ ಬರುವುದೇ ಇಲ್ಲ ಕಾರಣ ಇದೊಂದು ಮಾನಸಿಕ ಕಾಯಿಲೆ ಮನಸಿನ ಸಮಸ್ಯೆ ಇದು ದರ್ಶನ್ ಪ್ರಕರಣದಲ್ಲೂ ಕೂಡ ಇದೇ ಆಗುತ್ತಿದೆ ಕೆಲವೊಂದು ಸಲ ಇದು ಗಂಭೀರವಾಗಿ ಬಿಟ್ಟರೆ ಅವರ ಆರೋಗ್ಯ ಅದಗೆಡುತ್ತದೆ.

See also  ವಯಸ್ಸಾದ 65 ವರ್ಷದ ಈ ಅಜ್ಜಿಯ ಅನಿಷ್ಠ ಚಟಕ್ಕೆ ಹುಡುಗನೇ ಬೇಕಿತ್ತು..ಅಜ್ಜಿಯ ಈ ಆಟ ಕೇಳಿ ಪೋಲಿಸರೆ ಬೆಚ್ಚಿಬಿದ್ದಿದ್ರು..

ಇದರಿಂದ ನರರೋಗ ಒಂಟಿತನ ಕಾಡುವುದು ಡಿಪ್ರೆಶನ್ ಗೆ ಒಳಗಾಗುವುದು ಕೋಪ ನಶೆಯ ಜಗತ್ತಿಗೆ ಪ್ರವೇಶ ಮಾಡುವುದು ಕೆಟ್ಟ ಆಲೋಚನೆ ಅತಿಯಾದ ಒತ್ತಡ ಇವೆಲ್ಲವೂ ಕೂಡ ಒಬ್ಬ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಇವರು ಸಾಮಾಜಿಕವಾಗಿ ಕೌಟುಂಬಿಕವಾಗಿ ಈ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಈ ಸೆಲೆಬ್ರಿಟಿ ವರ್ಷಿಪ್ ಸಿಂಡ್ರೋಮ್ ಓಕೆ ಬಿಟ್ಟರೆ ಮನೆಯವರ್ಯಾರು ಸ್ನೇಹಿತರ್ಯಾರು ಎಂದು ವ್ಯತ್ಯಾಸವೇ ತಿಳಿಯುವುದಿಲ್ಲ ತಮಗೆ ಅರಿವಿಲ್ಲದೆ ಜಗಳ ಹೊಡೆದಾಟ ನಡೆದು ಹೋಗುತ್ತದೆ ಅವರ ಹುಚ್ಚು ಅಭಿಮಾನದ ನಟ ಬಿಟ್ಟು ಬೇರೆ ಯಾರು ಅವರ ಕಣ್ಣಿಗೆ ಕಾಣಿಸುವುದಿಲ್ಲ‌

ಕಳೆದ ವರ್ಷ ಆಂಧ್ರದಲ್ಲಿ ಪವನ್ ಕಲ್ಯಾಣ್ ಪ್ರಭಾಸ್ ಅಭಿಮಾನಿಗಳು ಹೊಡೆದಾಡಿಕೊಂಡು ಒಬ್ಬ ಮೃತಪಟ್ಟಿದ್ದಾನೆ ಇದು ಜನರ ಜೀವನ ಶೈಲಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ದುರಂತವೆಂದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಜಾಸ್ತಿ ಆಗುತ್ತಿದೆ ಅವರು ಎಷ್ಟೇ ದೊಡ್ಡ ನಟ ಅಥವಾ ನಟಿಯಾಗಿರಲಿ ಸೀರಿಯಲ್ ಸೆಲೆಬ್ರಿಟಿಗಳೆ ಆಗಿರಲಿ ಅವರ ಜೊತೆ ಒಂದು ಸೆಲ್ಫಿ ತಗೋಳೋದಕ್ಕೆ ಕಾಯ್ತಾ ಇರ್ತಾರೆ ಅವರು ಯಾವುದೇ ಜಾಗದಲ್ಲಿ ಸಿಕ್ಕರು ಅವರೊಂದಿಗೆ ಸೆಲ್ಫಿ ತಗೋಳಲು ಮುಂದಾಗುತ್ತಾರೆ ಕೆಲವೊಮ್ಮೆ ಅವರ ಮುಖ ಒಮ್ಮೆ ನೋಡಿದರೆ ಸಾಕು ಎಂದು ಘಂಟೆ ಗಟ್ಟಲೆ ಕಾಯುತ್ತಾರೆ. ಸ್ಟೇಜ್ ಮುರಿದುಹೋಗುವ ಹಾಗೆ ಕಿರುಚಿ ಕುಗಾಡುತ್ತಾರೆ ಇದೆಲ್ಲದಕ್ಕೂ ಕಾರಣ ಜನರ ದುರಾಭಿಮಾನ ಒಬ್ಬ ಸೆಲೆಬ್ರೆಟಿ ಮೇಲೆ ಅವರಿಟ್ಟಿರುವ ಕೆಟ್ಟ ಅಭಿಮಾನ ಎಂದೇ ಹೇಳಬಹುದು ಇದು ಸಮಾಜಕ್ಕೂ ಕಂಟಕ ಅವರ ಕುಟುಂಬಕ್ಕೂ ಕಂಟಕ ಕೊನೆಗೆ ಅವರ ಜೀವನವೇ ಸರ್ವನಾಶವಾಗುತ್ತದೆ ಪ್ರೀತಿ ಅಭಿಮಾನ ಇರಬೇಕು ಆದರೆ ಕಣ್ಣು ಕಾಣದ ಪ್ರೀತಿಯ ಆಗಿರಬಾರದು

By god