ಉದ್ಯೋಗಸ್ಥ ಮಹಿಳೆಯರ ಬಾಳು..ಬೆಳಗ್ಗೆ ಎದ್ದು ಚಿಕ್ಕ ಪುಟ್ಟ ಕೆಲಸ ಮಾಡಿ ಆಫೀಸ್ಗೆ ಹೋದರೆ ಆಯ್ತು ಅವಳದು, ಆರಾಮದಾಯಕ ಜೀವನ ಪಟ್ಟಣ ಸೇರಿದ ಮೇಲೆ ಮನೆ ಕೆಲಸವೂ ಅಷ್ಟೇನೂ ಇರುವುದಿಲ್ಲ ತಿಂಗಳು ತಿಂಗಳು ಸಂಬಳ ಬರುತ್ತದೆ ಅವಳಿಗೆ ಏನು, ಇದೇ ಮಾತುಗಳು ಕೇಳು ಬರುತ್ತೆ ಆದರೆ ಅವಳು ಪಡುವ ಕಷ್ಟ ಒಂದೆರಡು ಅಲ್ಲ ಹೌದು ಎಲ್ಲಾ.
ಸಂಭ್ರಮಗಳಿಂದಲೂ ದೂರ ಉಳಿದು, ಸ್ವಂತ ಊರನ್ನು ತೊರೆದು ಅವಳು ಬದುಕುವ ಕಷ್ಟ ಯಾರಿಗೂ ಕಾಣುವುದಿಲ್ಲ, ಮದುವೆಯಾದ ನಂತರ ಎಲ್ಲರಂತೆ ಪ್ರಯಾಣ ಮಾಡಬೇಕು ಗಂಡನೊಂದಿಗೆ ಸ್ವಲ್ಪ ಸಮಯ ಕಳೆಯಬೇಕು ಅನಿಸಿದರು ರಜೆ ಸಿಗದ ಕಾರಣ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ, ಅದರಲ್ಲೂ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಕೆಲಸ.
ಅತ್ಯವಶ್ಯಕ ಆಗಿರುತ್ತದೆ.ಮೊದಲಾದರೆ ಒಂದು ದಿನ ರಜೆ ಸಿಕ್ಕರೆ ಅಮ್ಮನ ಮನೆಗೆ ಹೋಗಬಹುದಿತ್ತು ಆದರೆ ಈಗ ಒಂದು ದಿನದಲ್ಲಿ ಹೋಗಿಬರಲು ಸಾಧ್ಯವೇ ಇಲ್ಲ ಬೇಸರ ಆದರೂ ಸಹಿಸಿಕೊಳ್ಳಲೇಬೇಕು. ಮದುವೆಯಾದ ನಂತರ ಖರ್ಚು ವೆಚ್ಚಗಳು ಏರುತ್ತಲೇ ಹೋಗುತ್ತದೆ ಹಾಗಾಗಿ ನಮಗೆ ಇಷ್ಟವಾದ ಎಲ್ಲಾ ವಸ್ತುಗಳನ್ನು ತ್ಯಾಗ ಮಾಡಲೇಬೇಕು, ದುಡಿಯುತ್ತೇವೆ.
ಅಂತ ಮನಸ್ಸಿನ ಇಚ್ಛೆ ಪ್ರಕಾರ ಖರ್ಚು ಮಾಡಲು ಸಾಧ್ಯವಿಲ್ಲ, ಅದು ಬಿಡಿ ಸಾಮಾನ್ಯ ಗರ್ಭಿಣಿ ಸ್ತ್ರೀಯರು ಬಹಳ ಸೂಕ್ಷ್ಮ ಮತ್ತು ಜೋಪಾನವಾಗಿ 9 ತಿಂಗಳು ಕಳೆದರೆ ದುಡಿಯುವ ಹೆಣ್ಣು ಮಕ್ಕಳ ಪಾಡು ಬೇರೆಯೇ.ತಾಳಲಾರದ ಸಂಕಟ ತೀರಾ ಸುಸ್ತು ಇದೆಲ್ಲದರ ನಡುವೆ ಕೆಲಸದ ಒತ್ತಡ ಕೆಲಸ ಬೇಡ ಅಂತ ಹೇಳೋಕೆ ಕೂಡ ಸಾಧ್ಯವಿಲ್ಲ, ಏಕೆಂದರೆ ನಮ್ಮ ಮುಂದಿನ ಬದುಕು ಇವತ್ತಿನ.
ದುಡಿಮೆಯಿಂದಲೇ ಸಾಗಬೇಕು ಮನೆಗೆ ಬಂದು ಸ್ವಲ್ಪ ಆರಾಮ ಮಾಡೋಣ ಅಂದರೆ ಮುಂಜಾನೆಯಿಂದ ಬಾಕಿ ಉಳಿದ ಕೆಲಸಗಳು ಕೈಬೀಸಿ ಕರೆಯುತ್ತಿರುತ್ತವೆ.ಮನೆಯವರೊಂದಿಗೆ ಫೋನ್ ಮಾಡಿ ಮಾತನಾಡಿ ಬೇಗ ಬೇಗ ಮನೆ ಕೆಲಸ ಮುಗಿಸುವಷ್ಟರಲ್ಲಿ ಬರುವ ಪತಿಯನ್ನು ಸ್ವಾಗತಿಸಿ ಊಟ ಮುಗಿಸಿ ಎಲ್ಲರೂ ಮಲಗಿದ ನಂತರ ಎಲ್ಲವೂ ಸ್ವಚ್ಛ ಮಾಡಿ ಮಲಗಿದರೆ.
ನಾಳೆಯ ತಿಂಡಿಯ ಚಿಂತೆ. ಬೆಳ್ಳಂಬೆಳಗ್ಗೆ ಹೊಡೆದುಕೊಳ್ಳುವ ಅಲಾರಾಂ ಸದ್ದಿಗೆ ಕಣ್ಣು ಬಿಡುವುದೇ ಕಷ್ಟ ಮಕ್ಕಳನ್ನು ತಯಾರಿಸಿ ಶಾಲೆಗೆ ಕಳುಹಿಸಿ ಪತಿಗೆ ತಿಂಡಿ ಮಧ್ಯಾಹ್ನದ ಲಂಚ್ ಬಾಕ್ಸ್ ತಯಾರಿಸಿ ತಾನು ಆಫೀಸಿಗೆ ಹೋಗುವ ಅವರ ಕಷ್ಟ ಯಾರಿಗೂ ಕಾಣುವುದಿಲ್ಲ, ಇನ್ನು ಮಗುವನ್ನು ಎತ್ತು ಆರು ತಿಂಗಳ ರಜೆಯ ನಂತರ ಆ ಪುಟ್ಟ ಮಗುವನ್ನು ಯಾರದೋ ಹಾರೈಕೆಯಲ್ಲಿ ಬಿಟ್ಟು.
ತಾನು ಆಫೀಸಿಗೆ ಹೋಗುವಾಗ ಅದೆಷ್ಟು ಸಂಕಟವಾಗುತ್ತೆ ಆ ತಾಯಿ ಹೃದಯಕ್ಕೆ, ಅದು ಅವಳಿಗೂ ಅನಿವಾರ್ಯವೇ ಆದರೆ ಯಾರಿಗೂ ಅರ್ಥವಾಗಲ್ಲ ಆ ಕಂದನ ಬಿಟ್ಟು ಹೋಗುವಾಗ ಎಲ್ಲರ ದೃಷ್ಟಿಯಲ್ಲಿ ಹೃದಯ ಹೀನ ತಾಯಿ ಅನಿಸಿಕೊಳ್ಳುವ ಆ ಮಹಿಳೆಯ ಹೃದಯ ಹೃದಯಕ್ಕೆ ಅದೆಷ್ಟು ಭಾರವಾಗುತ್ತದೆ ಗೊತ್ತಾ? ಪ್ರತಿ ಹಂತದಲ್ಲೂ ಮಗುವಿನ ಬೆಳವಣಿಗೆ ನೋಡಲು.
ಬಯಸುವ ಆ ತಾಯಿ ಅದೆಷ್ಟು ಬೇಸರ ಪಡುತ್ತಾಳೆ ಗೊತ್ತಾ, ಮಾತನಾಡಲು ತುಂಬಾ ಸುಲಭ ಆದರೆ ಅನುಭವಿಸುವವರಿಗೆ ಮಾತ್ರ ಗೊತ್ತು ನಿಜವಾದ ಕಷ್ಟ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.