ಉಪ್ಪಿನ ಡಬ್ಬಿಯಲ್ಲಿ ಈ ವಸ್ತುವನ್ನು ಬಚ್ಚಿಡಿ ಅದರಿಂದ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ:..ಮನೆಯಲ್ಲಿರುವ ಉಪ್ಪಿನ ಡಬ್ಬಿಗೆ ಈ ಒಂದು ವಸ್ತುವನ್ನು ಹಾಕಿದರೆ ನಂತರ ನಡೆಯುವುದೆಲ್ಲ ನಿಮಗೆ ಆಶ್ಚರ್ಯಕರ ಸಂತೋಷದ ವಿಷಯಗಳೆ ತಿನ್ನುವ ಆಹಾರದಲ್ಲಿ ಉಪ್ಪು ಇಲ್ಲದಿದ್ದರೆ ಅದು ಎಂತಹ ಮೃಷ್ಟಾನ ಭೋಜನರಾಗಿದ್ದರು ಅದು ನಮಗೆ ರುಚಿ ಇರೋದಿಲ್ಲ, ಉಪ್ಪು ಇದ್ದರೆ ಅದು ಎಂಥದ್ದೇ ರೀತಿಯ ಆಹಾರವಾದರೂ ಅದನ್ನು ರುಚಿಕರವಾಗಿ ಮಾಡಿಕೊಳ್ಳಬಹುದು ಉಪ್ಪಿನ ವೈಜ್ಞಾನಿಕ ಹಾಗೂ ಆರೋಗ್ಯಕರ ಮಹತ್ವವು ನಮ್ಮೆಲ್ಲರಿಗೂ ತಿಳಿದೇ ಇದೆ, ಇದನ್ನು ಹೊರತುಪಡಿಸಿ ಜ್ಯೋತಿಷ್ಯದಲ್ಲೂ ಉಪ್ಪಿಗೆ ಮಹತ್ವವಾದ ಸ್ಥಾನ ಇದೆ ಎಂದು ಹೇಳಲಾಗುತ್ತದೆ ನಮ್ಮ ಜೀವನದಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ಜ್ಯೋತಿಷ್ಯದಲ್ಲಿ ಒಂದೊಂದು ಸ್ಥಾನವಿದೆ ಸಾಮಾನ್ಯವಾಗಿ ನಿಂಬೆಹಣ್ಣು ಮತ್ತು ಉಪ್ಪು ಹೀಗೆ ಅನೇಕ ವಸ್ತುಗಳು ಚಮತ್ಕಾರಿಕವಾಗಿ ಉಪಯೋಗಕ್ಕೆ ಬರುತ್ತದೆ ಉಪ್ಪು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡಿ ನಮ್ಮ ಸುತ್ತಮುತ್ತಲಿನ ನಕಾರಾತ್ಮಕ ಅಂಶಗಳು ಹಾಗೂ ಶಕ್ತಿಯನ್ನು ದೂರ ಮಾಡುತ್ತದೆ.
ಹೀಗಾಗಿ ಉಪ್ಪಿನ ಮುಖಾಂತರ ನಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದರೆ ಉಪ್ಪಿಗೆ ವಾಸ್ತುದೋಷ ಮತ್ತು ಅಶುಭ ಕಾರ್ಯಗಳನ್ನು ದೂರ ಮಾಡುವ ಶಕ್ತಿ ಇದೆ ಪುರಾಣದಲ್ಲಿ ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ ಉಪ್ಪು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಸಾಧನ ಆಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದಾದರು ವಾಸ್ತುದೋಷ ಇದೆ ಎಂದರೆ ಒಂದು ಗಾಜಿನ ಲೋಟಕ್ಕೆ ಉಪ್ಪನ್ನು ತುಂಬಿ ಅದನ್ನು ಮನೆಯ ಮುಖ್ಯದ್ವಾರದಲ್ಲಿ ಇಡಬೇಕು ಹಾಗೂ ವಾರಕ್ಕೆ ಒಮ್ಮೆ ಈ ಉಪ್ಪನ್ನು ಬದಲಾಯಿಸುತ್ತಿರಬೇಕು ಗುರುವಾರ ಒಂದು ದಿನ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿಯೂ ಉಪ್ಪನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ಮಿಶ್ರಣ ಮಾಡಿ ಮನೆ ಒರಿಸಲು ಉಪಯೋಗಿಸಬೇಕು ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿರುವ ವಾಸ್ತುದೋಷ ದೂರವಾಗುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ನಿಮಗೆ ಅನಿಸಿದರೆ ಒಂದು ಗಾಜಿನ ಲೋಟದಲ್ಲಿ ಇಲ್ಲವಾದರೆ ಒಂದು ಗಾಜಿನ ಬೌಲ್ ನಲ್ಲಿ ಉಪ್ಪನ್ನು ತುಂಬಿ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು ಮುಂಚೆ ಹೇಳಿದಾಗೆ ಗಾಜು ಮತ್ತು ಉಪ್ಪು ರಾಹುವಿನ ಸಂಕೇತವಾಗಿದೆ ಒಂದು ವೇಳೆ ನಿಮಗೆ ರಾಹು ದೋಷ ಏನಾದರೂ ಇದ್ದರೆ ಇದೇ ರೀತಿ ಒಂದು ತಟ್ಟೆಯಲ್ಲಿ ಉಪ್ಪನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಆ ರಾಹು ದೋಷ ಕೂಡ ನಿಮ್ಮಿಂದ ದೂರವಾಗುತ್ತದೆ.
ನಿಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಒಂದು ಹಿಡಿಯಷ್ಟು ಉಪ್ಪನ್ನು ತೆಗೆದುಕೊಂಡು ಅದರಿಂದ ಇಳಿಯನ್ನು ಅವರಿಗೆ ತೆಗೆದು ಅದನ್ನು ಯಾರೂ ಓಡಾಡದೇ ಇರುವ ಜಾಗದಲ್ಲಿ ಇಟ್ಟು ತಿರುಗಿ ನೋಡದೆ ಬಂದುಬಿಡಬೇಕು ಆ ರೀತಿ ಮಾಡಿದರೆ ಅವರ ರೋಗ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಆದಷ್ಟು ಬೇಗ ಅದು ದೂರವಾಗುತ್ತದೆ, ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಟ್ಟರೆ ಅದು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಅದನ್ನು ಪ್ಲಾಸ್ಟಿಕ್ ರೀತಿಯ ಡಬ್ಬಗಳಲ್ಲಿ ಹಾಕಬಾರದು ಹಾಗೂ ಆ ಗಾಜಿನಲ್ಲಿ ತುಂಬಿರುವ ಉಪ್ಪಿಗೆ ಒಂದೆರಡು ಲವಂಗವನ್ನು ಇಟ್ಟರೆ, ಅದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಹತ್ತಿರ ಕೂಡ ಬರುವುದಿಲ್ಲ ಹೀಗಾಗಿ ಉಪ್ಪಿನ ಮಹತ್ವ ಅತ್ಯಮೂಲ್ಯವಾದದ್ದು ಹಾಗೂ ಪುರಾಣದಿಂದಲೂ ಇಲ್ಲಿಯವರೆಗೂ ಇದರಿಂದ ವೈಜ್ಞಾನಿಕವಾಗಿ ಹಾಗೂ ದೈವಿಕವಾಗಿ ಇದಕ್ಕೆ ಒಂದು ಮಹತ್ವಪೂರ್ಣ ಶಕ್ತಿ ಇದೆ ಎಂದು ನಂಬಿಕೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ