ಎರಡು ಈರುಳ್ಳಿಯಲ್ಲಿ ದಿಡೀರ್ ಆಗಿ ಗರಿಗರಿಯಾದ ಚಾಟ್ಸ್, ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ….ಇವತ್ತಿನ ವಿಡಿಯೋದಲ್ಲಿ ನಾನ್ನು ದಿಢೀರ್ ಆಗಿ ಎರಡು ಈರುಳ್ಳಿಯಲ್ಲಿ ಗರಿಗರಿಯಾದ ಚಾಟ್ಸ್ ಮಾಡುವುದು ಹೇಗೆ ಎಂದು ತೋರಿಸಿ ಕೊಡುತ್ತೇನೆ. ತುಂಬಾ ಸುಲಭವಾಗಿ ಮಾಡಬಹುದು ಹಾಗೆ ಮಕ್ಕಳಿಗೆ ಇದು ತುಂಬಾನೇ ಇಷ್ಟವಾಗುತ್ತದೆ, ಒಂದು ಸರಿ ಮಾಡಿ ನೋಡಿ ಮತ್ತೆ ಮತ್ತೆ ಮಾಡುತ್ತಿರಾ ಅಷ್ಟು ರುಚಿಯಾಗಿರುತ್ತದೆ. ಮೊದಲಿಗೆ ನಾನು ಇಲ್ಲಿ ಮೀಡಿಯಂ ಸೈಜು ಎರಡು ಈರುಳ್ಳಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ತೊಳೆದು ತೆಗೆದುಕೊಂಡಿದ್ದೇನೆ, ಹಾಗೆ ಈರುಳ್ಳಿಯ ಮಧ್ಯಭಾಗಕ್ಕೆ ಕತ್ತರಿಸಿ ಇಟ್ಟುಕೊಳ್ಳಿ ನಂತರ ಈರುಳ್ಳಿಯಲ್ಲಿರುವ ಒಂದು ಒಂದೇ ಎಳೆಗಳನ್ನ ಬಿಡಿಸಿಡಿ ಇಡಿ ಈರುಳ್ಳಿಯನ್ನು ಕತ್ತರಿಸುವ ಅವಶ್ಯಕತೆ ಇಲ್ಲ ಈ ರೀತಿಯಾಗಿ ಒಂದೊಂದೇ ಎಳೆಗಳನ್ನು ಬಿಡಿಸಿ ನೀಟಾಗಿ ಇಟ್ಟುಕೊಳ್ಳಿ. ಆದಷ್ಟು ಈ ಚಾಟ್ಸ್ ಮಾಡಲು ಮೀಡಿಯಂ ಸೈಜಿನ ಈರುಳ್ಳಿಯನ್ನು ತೆಗೆದುಕೊಂಡರೆ ಸಾಕು. ಇದನ್ನು ಮಾಡಲು ಜಾಸ್ತಿ ಪ್ರಮಾಣದ ಈರುಳ್ಳಿಯನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ ಎರಡು ಈರುಳ್ಳಿಯಲ್ಲಿಯೇ ಜಾಸ್ತಿ ಪ್ರಮಾಣದ ಚಾಟ್ಸ್ ಅನ್ನು ಮಾಡಿಕೊಳ್ಳಬಹುದು.ಈಗ ಈರುಳ್ಳಿಯಲ್ಲಿರುವ ಎಲ್ಲಾ ಎಳೆಗಳನ್ನು ಬಿಡಿಸಿ ಇಟ್ಟುಕೊಂಡಿದ್ದೇನೆ,

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಹಾಗೆ ಈ ಈರುಳ್ಳಿಯಲ್ಲಿ ಸಣ್ಣ ಪೀಸ್ ಗಳು ಉಳಿದಿರುತ್ತವಲ್ಲ ಅದನ್ನ ಬಿಸಾಕಬೇಡಿ ಅದನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ ನಂತರ ಈ ಹೆಚ್ಚಿರುವಂತಹ ಈರುಳ್ಳಿಯನ್ನು ಉಪಯೋಗಿಸಬಹುದೆಂದು ನಿಮಗೆ ತುಂಬಾ ಪ್ರಮಾಣದಲ್ಲಿ ಚಾಟ್ಸ್ ಬೇಕು ಎಂದರೆ ಜಾಸ್ತಿ ಈರುಳ್ಳಿಯನ್ನು ಉಪಯೋಗಿಸಬಹುದು ಇಷ್ಟೇ ಉಪಯೋಗಿಸಬೇಕೆಂದು ಏನಿಲ್ಲ.ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಒಂದು ಬಟ್ಟಲಿಗೆ ಎತ್ತಿಕೊಳ್ಳೋಣ ಕತ್ತರಿಸಿದ ಈರುಳ್ಳಿಯನ್ನು ಇನ್ನೊಂದು ಬಟ್ಟಲಿಗೆ ಎತ್ತಿಟ್ಟುಕೊಂಡು ಅದಕ್ಕೆ ಒಂದು ಮೀಡಿಯಂ ಸೈಜ್ ಟೊಮೇಟೊವನ್ನು ಸಣ್ಣದಾಗಿ ಹೆಚ್ಚಿ ಹಾಕಿದ್ದೇನೆ ಹಾಗೆ ಎರಡು ಸಣ್ಣ ಸೈಜಿನ ಆಲೂಗೆಡ್ಡೆಯನ್ನು ನೀರಿನಲ್ಲಿ ಬೇಯಿಸಿ ಸಿಪ್ಪೆ ತೆಗೆದು ಕತ್ತರಿಸಿ ಹಾಕಿಕೊಂಡಿದ್ದೇನೆ ನಂತರ ಅರ್ಧ ಟೀ ಸ್ಪೂನ್ ನಷ್ಟು ಕಾಳು ಮೆಣಸಿನ ಪುಡಿ ಕಾಲು ಟೀ ಸ್ಪೂನ್ ನಷ್ಟು ಜೀರಿಗೆ ಪುಡಿ ನಂತರ ಅರ್ಧ ಚಮಚದಷ್ಟು ಚಾಟ್ ಮಸಾಲವನ್ನು ಹಾಕಿಕೊಳ್ಳುತ್ತಿದ್ದೇನೆ. ಚಾಟ್ ಮಸಾಲ ಪುಡಿ ಇದ್ದರೆ ಉಪಯೋಗಿಸಿ ಇಲ್ಲವೆಂದರೂ ನಡೆಯುತ್ತದೆ.

WhatsApp Group Join Now
Telegram Group Join Now

ಇದಕ್ಕೆ ಈಗ ರುಚಿಯನ್ನು ಹಾಕುತ್ತಿದ್ದೇನೆ ನಂತರ ಸಣ್ಣದಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಹಾಕಿಕೊಂಡಿದ್ದೇನೆ ಹಾಗೆ ನಾನಿಲ್ಲಿ ಅರ್ಧ ಹೋಳಿನಷ್ಟು ನಿಂಬೆ ರಸವನ್ನು ಹಾಕಿಕೊಳ್ಳುತ್ತಿದ್ದೇನೆ ಹುಳಿಗೆ ಎಷ್ಟು ಬೇಕಾಗುತ್ತದೆ ಅಷ್ಟು ಪ್ರಮಾಣದಲ್ಲಿ ನಿಂಬೆಹಣ್ಣಿನ ರಸವನ್ನು ಉಪಯೋಗಿಸಿಕೊಳ್ಳಿ ಹಾಗೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಿಮಗೆ ಕಾರ ಜಾಸ್ತಿ ಬೇಕು ಎಂದರೆ ಈ ಸಮಯದಲ್ಲಿ ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನ
ಕಾಯಿಯನ್ನು ಹಾಕಿಕೊಳ್ಳಿ ಕಾರ ಸ್ವಲ್ಪ ಕಡಿಮೆ ಇರಲಿ ಎಂದರೆ ಮೊದಲೇ ಮೆಣಸಿನ ಪುಡಿ ಹಾಕಿರುವುದು ಸಾಕಾಗುತ್ತದೆ. ನಂತರ ಮತ್ತೊಂದು ಬೌಲ್ ಗೆ ಅರ್ಧ ಕಪ್ ನಷ್ಟು ಕಡಲೆ ಹಿಟ್ಟನ್ನು ಹಾಕಿಕೊಳ್ಳಿ ಕಾಲ್ ಟಿ ಸ್ಪೂನ್ನಷ್ಟು ಗರಂ ಮಸಾಲ ಪುಡಿ ಹಾಗೆ ಕಾಲ್ ಟೀ ಸ್ಪೂನ್ ನಷ್ಟು ಜೀರಿಗೆ ಪುಡಿಯನ್ನು ಹಾಕಿದ್ದೇನೆ ನಂತರ ಅರ್ಧ ಟೀ ಸ್ಪೂನ್ ನಷ್ಟು ಅಚ್ಚಕಾರದ ಪುಡಿ ಹಾಕಿದರೆ ಕಾಲು ಟೀ ಸ್ಪೂನ್ ನಷ್ಟು ಅರಿಶಿನಪುಡಿ ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಈಗ ಎರಡು ಟೀ ಸ್ಪೂನ್ ನಷ್ಟು ಅಕ್ಕಿ ಹಿಟ್ಟನ್ನು ಹಾಕಿಕೊಳ್ಳುತ್ತಿದ್ದೇನೆ ನಂತರ ಎರಡು ಟೀ ಸ್ಪೂನ್ ನಷ್ಟು ಸಣ್ಣ ರವೆ ಅಥವಾ ಚಿರೋಟಿ ರವೆಯನ್ನು ಹಾಕಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.