ಒಂದೇ ವರ್ಷದಲ್ಲಿ ಅಣ್ಣ,ತಾಯಿ ತಂದೆಯನ್ನು ಕಳೆದುಕೊಂಡ ನಟ ಮಹೇಶ್ ಬಾಬು… ಟಾಲಿವುಡ್ ನ ಅತ್ಯಂತ ಸಂಭಾವಕ ನಟರಲ್ಲಿ ಮೊದಲ ಸ್ಥಾನದಲ್ಲಿರುವವರೆಂದರೆ ಮಹೇಶ್ ಬಾಬು. ಇಲ್ಲಿಯವರೆಗೆ ಯಾವುದೇ ಜಗಳಗಳಿಲ್ಲದೆ, ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಯಾರ ಸುದ್ದಿಗೂ ಸಹ ಓದಂತ ನಟರಲ್ಲ ಸಾರ್ವಜನಿಕವಾಗಿ ಜನರಿಗೆ ಯಾವ ರೀತಿಯಾದಂತಹ ಸಂದೇಶವನ್ನು ಸಾರಬೇಕು ಅದೇ ರೀತಿಯಾಗಿ ಬದುಕುತ್ತಿರುವಂತಹ ನಟ ಈಗಲೂ ಕೂಡ ಅದೇ ರೀತಿಯಾಗಿ ಬದುಕುತ್ತಿದ್ದಾರೆ. ತನ್ನನ್ನು ಅನುಸರಿಸುತ್ತಿರುವ ಜನಗಳಿಗೆ ಅದ್ಭುತವಾದ ಸಂದೇಶಗಳನ್ನು ಸಾರುತ್ತಿರುತ್ತಾರೆ. ಬದುಕಿನಲ್ಲಿ ಹೇಗೆ ಇರಬೇಕೆಂದು ಅವರ ದಾಂಪತ್ಯ ಜೀವನದ ವಿಚಾರಕ್ಕೆ ಬರುವುದಾದರೆ ಸಾಕಷ್ಟು ನಟ ನಟಿಯರ ವಿಚಾರವನ್ನು ನೋಡುತ್ತಾ ಇರುತ್ತೇವೆ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ, ಬೇರೆ ಬೇರೆ ರೀತಿಯಾದಂತಹ ಸಮಸ್ಯೆ,ಸಾರ್ವಜನಿಕವಾಗಿ ಗೊಂದಲಗ ರಗಳೆ ಉಂಟು ಮಾಡಿಕೊಳ್ಳುತ್ತಿರುತ್ತಾರೆ.ಆದರೆ ಮಹೇಶ್ ಬಾಬು ರವರು ದಾಂಪತ್ಯ ಜೀವನವನ್ನು ಕೂಡ ಅಷ್ಟೇ ಅಚ್ಚು ಕಟ್ಟಿನಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇನ್ನು ಅವರ ಮಗಳ ಜೊತೆಗಿನ ಮುದ್ದು ಮುದ್ದಾದ ವಿಡಿಯೋಗಳನ್ನು ನೀವು ಗಮನಿಸಿರುತ್ತೀರಿ.

ಮಕ್ಕಳ ಜೊತೆಯಲ್ಲಿಯೂ ಸಹ ಸಮಯವನ್ನು ಕಳೆಯುವುದರ ಮೂಲಕ ಒಂದು ಕಡೆಯಿಂದ ಸಿನಿಮಾದಲ್ಲಿ ಅದ್ಭುತ ನಟನೆಂದು ಕರೆಸಿಕೊಂಡಿದ್ದರು ಮತ್ತೊಂದು ಕಡೆಯಿಂದ ಫ್ಯಾಮಿಲಿ ವಿಚಾರಕ್ಕೆ ಬರುವುದಾದರೆ ಅದ್ಭುತವಾದ ಫ್ಯಾಮಿಲಿ ಪ್ಲಾನ್ ಎಂದು ಕರೆಸಿಕೊಂಡವರು ಮಹೇಶ್ ಬಾಬು. ನಾನು ಆರಂಭದಲ್ಲೇ ಹೇಳಿದ ಹಾಗೆ ಅತ್ಯಂತ ಸಂಭಾವಿತ ನಟ ಹಾಗೆಯೇ ಸಾರ್ವಜನಿಕವಾಗಿಯೂ ಕೂಡ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲಿ ವೇದಿಕೆಗಳಲ್ಲಿ ಆಗಿರಬಹುದು ಅಥವಾ ಬೇರೆ ಬೇರೆ ಕಾರ್ಯಕ್ರಮಗಳಲ್ಲಾಗಿರ ಬಹುದು ತುಂಬಾ ಸರಳವಾಗಿ ಎಲ್ಲರ ಜೊತೆಯಲ್ಲಿಯೂ ಬೆರೆಯುವಂತಹ ವ್ಯಕ್ತಿತ್ವವೆಂದರೆ ಅದು ಮಹೇಶ್ ಬಾಬು.ಇಂತಹ ಮಹೇಶ್ ಬಾಬು ಸಾಲು ಸಾಲು ಶಾಕ್ ಗಳನ್ನು ಕಾಣುವಂತಾಗಿದೆ.ಸಾಲು ಸಾಲು ಜನರನ್ನ ಕಳೆದುಕೊಳ್ಳುವಂತಹ ಪರಿಸ್ಥಿತಿ ಮಹೇಶ್ ಬಾಬುರವರಿಗೆ ಎದುರಾಗಿದೆ. ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ 2019ರಲ್ಲಿ ಅವರ ಮಲತಾಯಿ ಆಗಿರುವಂತಹ ವಿಜಯ ನಿರ್ಮಲ ಅವರನ್ನು ಮಹೇಶ್ ಬಾಬು ಕಳೆದುಕೊಳ್ಳುತ್ತಾರೆ. ವಿಜಯ ನಿರ್ಮಲ ಮಲತಾಯಿ ಆಗಿದ್ದರು ಕೂಡ ಯಾವತ್ತೂ ಕೂಡ ಮಹೇಶ್ ಬಾಬು ಮಲತಾಯಿ ಎನ್ನುವ ರೀತಿಯಾಗಿ ನೋಡಿದವರಲ್ಲ ಮತ್ತೊಂದು ಕಡೆಯಿಂದ ವಿಜಯ ನಿರ್ಮಲ ಅವರು ಕೂಡ ಮಹೇಶ್ ಬಾಬು ವನ್ನ ನನ್ನ ಮಗ ಅಲ್ಲ ಎನ್ನುವ ರೀತಿಯಲ್ಲಿ ಯಾವತ್ತೂ ನೋಡಿರಲಿಲ್ಲ.

WhatsApp Group Join Now
Telegram Group Join Now
See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅವರಿಬ್ಬರ ನಡುವೆಯಲ್ಲೂ ಅದ್ಭುತವಾದ ಬಾಂಧವ್ಯವಿತ್ತು.ಒಳ್ಳೆಯ ಸಂಬಂಧ ಎಲ್ಲವೂ ಕೂಡ ಇತ್ತು ಇಂತಹ ಮಲತಾಯಿಯನ್ನು 2019ರಲ್ಲಿ ಕಳೆದುಕೊಳ್ಳುತ್ತಾರೆ ಮಹೇಶ್ ಬಾಬು. ಅದಾದ ನಂತರ ಈ ವರ್ಷವೇ 2022 ರಲ್ಲಿ ಮಹೇಶ್ ಬಾಬು ರವರಿಗೆ ಅತ್ಯಂತ ಕರಾಳ ವರ್ಷ ಎಂದರು ಕೂಡ ತಪ್ಪಾಗಲಾರದು ತನ್ನ ಸಹೋದರನನ್ನು ಕಳೆದುಕೊಳ್ಳುತ್ತಾರೆ. ಅದಾದ ನಂತರ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾರೆ ಇದೀಗ ತಮ್ಮ ತಂದೆಯನ್ನು ಸಹ ಕಳೆದುಕೊಂಡಿದ್ದಾರೆ. ರಮೇಶ್ ಬಾಬು ಎನ್ನುವವರು ಮಹೇಶ್ ಬಾಬುರವರ ಸಹೋದರ. ಜನವರಿ 8ನೇ ತಾರೀಖಿನಲ್ಲಿ ಲಿವರ್ ಸಂಬಂಧಿ ಸಮಸ್ಯೆಯಿಂದ ಅವರು ವಿಧಿವಶವಾಗುತ್ತಾರೆ. ರಮೇಶ್ ಬಾಬು ಪ್ರೊಡ್ಯೂಸರ್ ಆಗಿ ಕೆಲಸವನ್ನು ಮಾಡುತ್ತಿದ್ದರು ಜೊತೆಯಲ್ಲೇ ಆಕ್ಟಿಂಗ್ ಸಹ ಮಾಡುತ್ತಿದ್ದರು ಒಂದಷ್ಟು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಒಂದಷ್ಟು ದಿನಗಳಿಂದ ಲಿವರ್ಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.