ಮಲಬದ್ಧತೆಗೆ ಮನೆಮದ್ದು…….||
ನಮ್ಮಲ್ಲಿ ಹೆಚ್ಚಿನ ಜನಕ್ಕೆ ಮಲಬದ್ಧತೆಯ ಸಮಸ್ಯೆ ಇದ್ದು ಇದರಿಂದ ಅವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದು ಹೇಳಬಹುದು. ಹಾಗಾದರೆ ಈ ಒಂದು ಸಮಸ್ಯೆ ಕಾಣಿಸಿಕೊಳ್ಳು ವುದಕ್ಕೆ ಮೂಲ ಕಾರಣ ಏನು ಹಾಗೂ ಇದನ್ನು ಹೇಗೆ ಸರಿಪಡಿಸಿಕೊಳ್ಳು ವುದು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗೇನಾದರೂ ಯಾರಲ್ಲಿ ಮಲಬದ್ಧತೆಯ ಸಮಸ್ಯೆ ಇದೆಯೆಂದರೆ ಅವರಿಗೆ ತಮ್ಮ ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆ ಇಲ್ಲ ಅವರು ಆರೋಗ್ಯವಾಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಸದಾಕಾಲ ಕಾಣಿಸಿಕೊಳ್ಳು ತ್ತಿರುತ್ತದೆ ಎಂದು ಹೇಳಬಹುದು. ಅದರಲ್ಲೂ ಶೀತ ಕೆಮ್ಮು ನೆಗಡಿ ಜ್ವರ ಸಣ್ಣ ಪುಟ್ಟ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗಳು ಸಹ ಬರುವುದಕ್ಕೆ ಈ ಒಂದು ಮಲಬದ್ಧತೆ ಬಹಳ ಪ್ರಮುಖವಾದಂತಹ ಕಾರಣವಾಗಿದೆ.
ಅದರಲ್ಲೂ ಈ ಒಂದು ಮಲಬದ್ಧತೆಯ ಸಮಸ್ಯೆಯಿಂದ ಥೈರಾಯಿಡ್ ಬರುವುದು ಕ್ಯಾನ್ಸರ್ ಸಮಸ್ಯೆ ಬರುವುದು ದೇಹದಲ್ಲಿ ನಿಶಕ್ತಿ ಕಾಣಿಸಿ ಕೊಳ್ಳುವುದು ಶಕ್ತಿ ಇಲ್ಲದೆ ಇರುವುದು ನರಗಳಲ್ಲಿ ದೌರ್ಬಲ್ಯ ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳು ಇದರಿಂದ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ಮಲಭದ್ದತೆಯ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ತಡವಾಗಿ ಮಲಗುವುದು, ಹೆಚ್ಚಾಗಿ ಮೈದಾ ಹಿಟ್ಟಿನ ಪದಾರ್ಥ ಸೇವನೆ ಮಾಡುವುದು, ಎಣ್ಣೆಯಲ್ಲಿ ಕರೆದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು, ಬೀದಿ ಬದಿಯಲ್ಲಿ ಮಾರುವಂತ ಜಂಕ್ ಫುಡ್ ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದು, ಹೆಚ್ಚಾಗಿ ಕಾಫಿ ಟೀ ಸೇವನೆ ಮಾಡುವುದು.
ಇವೆಲ್ಲವೂ ಕೂಡ ಈ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ಕೆಲವು ಮನೆ ಮದ್ದುಗಳನ್ನು ಮಾಡಿ ಉಪಯೋಗಿಸಬೇಕಾಗುತ್ತದೆ ಎಂದು ನೋಡುವುದಾದರೆ. ಬೆಟ್ಟದ ನೆಲ್ಲಿಕಾಯಿ ಜ್ಯೂಸನ್ನು ಸೇವನೆ ಮಾಡುವುದು ಅಥವಾ ರಾತ್ರಿ ಸಮಯ ಜೀರಿಗೆ ಕಷಾಯವನ್ನು ಮಾಡಿ ಸೇವನೆ ಮಾಡಿ ಮಲಗುವುದು.
ಮೊದಲೇ ಹೇಳಿದಂತೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಕುಡಿದು, ಮಧ್ಯಾಹ್ನದಲ್ಲಿ ಬೂದುಗುಂಬಳ ಕಾಯಿ ಜ್ಯೂಸ್, ಹಾಗೆ ಏಳನೀರನ್ನು ಸಹ ಸೇವನೆ ಮಾಡುವುದರಿಂದ ನಿಮ್ಮ ಮಲಬದ್ಧತೆಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಜೊತೆಗೆ ಹೆಚ್ಚಿನ ನಾರಿನಂಶ ಪದಾರ್ಥಗಳನ್ನು ಸೇವನೆ ಮಾಡುವುದು ಕೂಡ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.