ಕೊಲೆ ಮಾಡಿದವರನ್ನು ಟೆಕ್ನಾಲಜಿ ಬಳಸಿಕೊಂಡು ಹೇಗೆ ಪತ್ತೆ ಹಚ್ಚಲಾಗುತ್ತದೆ ಗೊತ್ತಾ ? ವಿವಿಧ ತನಿಖೆಗಳು ಹೇಗಿರುತ್ತೆ ನೋಡಿ
ಕೊಲೆ ಮಾಡಿದವರನ್ನು ಹೇಗೆ ಕಂಡುಹಿಡಿಯುತ್ತಾರೆ ಫೋರೆನ್ಸಿಕ್ ವಿಭಾಗದ ತನಿಖೆ ಹೇಗೆ ಮಾಡ್ತಾರೆ ನೋಡಿ… ಈ ಪ್ರಪಂಚದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಾ ಇರುವಂತಹ ಸುಮಾರು 80% ನಷ್ಟು ಅಪರಾಧಿಗಳು ಅವರು ಮಾಡಿದಂತಹ ಅಪರಾಧಗಳನ್ನು ಕೇವಲ ಮುಂಗೋಪದಿಂದ ಅಂದರೆ ಆಕಸ್ಮಿಕವಾಗಿ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಅಪರಾಧ ಯಾವುದೇ ಆಗಿದ್ದರು ಮನುಷ್ಯ ತಾನು ಮಾಡಿದಂತಹ ತಪ್ಪನ್ನು ಯಾರಿಗೂ ತಿಳಿಯದೆ ಇರುವ ರೀತಿ ಅಥವಾ ತಪ್ಪನ್ನು ಬೇರೆಯವರ ಮೇಲೆ ಹಾಕುವ ರೀತಿ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುತ್ತಾನೆ ಅದಕ್ಕೆ ತುಂಬಾನೇ ಪ್ಲಾನ್ ಗಳನ್ನು ಮಾಡುತ್ತಾನೆ ಆದರೂ ಕೂಡ ನಮ್ಮ ಪೊಲೀಸರು ಆ ಅಪರಾಧಿಗಳನ್ನು ಕಂಡುಹಿಡಿದು ಅವರಿಗೆ ಶಿಕ್ಷೆಯನ್ನು ಕೊಡಿಸುತ್ತಾರೆ.
ಆದರೆ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ವಿಭಾಗ ಅತ್ಯಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಖಚಿತವಾದ ಆಧಾರದಿಂದ ಅಪರಾಧಿಯನ್ನು ಕಂಡುಹಿಡಿಯುತ್ತಾರೆ ಆವಿಭಾಗವೇ ಫಾರೆನ್ಸಿಕ್ ವಿಭಾಗ ಈ ಫಾರೆನ್ಸಿಕ್ ವಿಭಾಗ ಯಾವ ಆಧಾರದಿಂದ ಅಪರಾಧಿಗಳನ್ನು ಕಂಡುಹಿಡಿಯುತ್ತಾರೆ ಎಂದು ಈಗ ನಾವು ತಿಳಿಯುತ್ತಾ ಹೋಗೋಣ. ಫಾರೆನ್ಸಿಕ್ ವಿಭಾಗ ಕೆಲವು ಮುಖ್ಯವಾದ ಅಂಶಗಳನ್ನು ಪರಿಗಣೆಗೆ ತೆಗೆದುಕೊಂಡು ಕೆಲಸ ಮಾಡುತ್ತದೆ.
ಅದರಲ್ಲಿ ಮೊದಲನೆಯದು ಕ್ರೈಂ ಸೀನ್ ಇನ್ವೆಸ್ಟಿಗೇಷನ್ ಕೊಲೆ ಅಥವಾ ಯಾವುದಾದರೂ ಅಪರಾಧ ನಡೆದಾಗ ಸಮಾಚಾರವನ್ನು ತಿಳಿದುಕೊಂಡ ಪೊಲೀಸರು ತಕ್ಷಣ ಫಾರೆನ್ಸಿಕ್ ವಿಭಾಗಕ್ಕೆ ಆ ವಿಚಾರವನ್ನು ತಿಳಿಸುತ್ತಾರೆ ಕೊಲೆ ಅಥವಾ ಅಪರಾಧ ನಡೆದ ಪ್ರದೇಶವನ್ನು ಕ್ರೈಂ ಸೀನ್ ಎಂದು ಕರೆಯುತ್ತಾರೆ ಇಲ್ಲಿ ನಡೆಯುವ ಇನ್ವೆಸ್ಟಿಗೇಷನ್ ಅನ್ನು ಕ್ರೈಂ ಸೀನ್ ಇನ್ವೆಸ್ಟಿಗೇಷನ್ ಎಂದು ಕರೆಯುತ್ತಾರೆ.
ಈ ಕ್ರೈಂ ಸೀನ್ ಇನ್ವೆಸ್ಟಿಗೇಷನ್ ಎನ್ನುವುದು ಲೋಕಾರ್ಡ್ಸ್ ಎಕ್ಸ್ಚೇಂಜ್ ಪ್ರಿನ್ಸಿಪಲ್ ಆದರದ ಮೇಲೆ ಮಾಡಲಾಗುತ್ತದೆ ಡಾಕ್ಟರ್ ಹೆಡ್ಮನ್ ಲೋಕಾರ್ಡನ್ ವಿಜ್ಞಾನ ಹೇಳಿದ ಪ್ರಿನ್ಸಿಪಲ್ ಪ್ರಕಾರ ಯಾವ ಕ್ರೈಂ ಸೀನಲ್ಲಿಯಾದರೂ ಎಕ್ಸ್ಚೇಂಜ್ ಆಫ್ ಮೆಟೀರಿಯಲ್ ಎನ್ನುವುದು ಖಚಿತವಾಗಿ ನಡೆಯುತ್ತದೆ ಅಂದರೆ ಅಪರಾಧಿ ತನಗೆ ಸಂಬಂಧಪಟ್ಟ ವಸ್ತುಗಳನಾಗಲಿ ಸಾಕ್ಷಿಗಳನಾಗಲಿ ಕ್ರೈಂ ಸೀನಲ್ಲಿ ಬಿಟ್ಟು ಹೋಗುವುದು ಅಥವಾ ಕ್ರೈಂ ಸೀನ್ ನಿಂದ ಯಾವುದಾದರೂ ವಸ್ತುವನ್ನು ತನ್ನ ಜೊತೆ ತೆಗೆದುಕೊಂಡು ಹೋಗುವುದು ನಡೆಯುತ್ತದೆ.
ಇನ್ನು ಎರಡನೇ ಮುಖ್ಯವಾದ ಅಂಶ ಸೀನ್ ರಿ ಕ್ರಿಯೇಶನ್ ಕೊಲೆಯಾದ ಪ್ರದೇಶದಲ್ಲಿ ಮೊದಲು ಆ ಪ್ರದೇಶಕ್ಕೆ ಯಾರು ಹೋಗದಂತೆ ಟೇಪನ್ನು ಹಾಕುತ್ತಾರೆ ಈ ರೀತಿ ಮಾಡುವುದರಿಂದ ಅಪರಾಧಿ ಬಿಟ್ಟ ಸಾಕ್ಷಿಗಳನ್ನು ಸುಲಭವಾಗಿ ಗುರುತಿಸಬಹುದು ಉದಾಹರಣೆಗೆ ಫುಡ್ ಪ್ರಿಂಟ್ ಫಿಂಗರ್ ಪ್ರಿಂಟ್ ಹೇರ್ ಬ್ಲಡ್ ಇನ್ನು ಮುಂತಾದವು ನಂತರ ಸತ್ತ ವ್ಯಕ್ತಿಯ ದೇಹದ ಸುತ್ತ ಮಾರ್ಕಿಂಗ್ ಅನ್ನು ಮಾಡುತ್ತಾರೆ ಆನಂತರ ಮೃತಾನ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ.
ಈ ರೀತಿ ಮಾಡುವುದರಿಂದ ಸೀನ್ ರೀಕ್ರಿಯೆಶನ್ಗೆ ಸುಲಭವಾಗುತ್ತದೆ ಕೊಲೆಯಾದ ಪ್ರದೇಶದಲ್ಲಿ ಸತ್ತ ವ್ಯಕ್ತಿ ಹೇಗೆ ಬಿದ್ದಿದ್ದಾನೆ ಅದೇ ರೀತಿಯಲ್ಲಿ ಯಾವ ವಸ್ತುಗಳು ಸಿಕ್ಕಿವೆ ಎನ್ನುವ ಆಧಾರದ ಮೇಲೆ ಅಲ್ಲಿ ಎಂತಹ ಘಟನೆ ನಡೆದಿದೆ ಎಂದು ಅಂದಾಜು ಮಾಡುತ್ತಾರೆ.ಅಂದರೆ ಬೇಕು ಎಂದೇ ಕೊಲೆ ಮಾಡಿದ್ದಾರಾ ಅಥವಾ ಘರ್ಷಣೆ ಏನಾದರೂ ನಡೆದಿದೆಯಾ ಕಿಡ್ನಾಪ್ ಮಾಡಿ ಕಟ್ಟು ಹಾಕಿದ್ದಾರೆ ಎಂದು ಅಂದಾಜನ್ನು ಮಾಡುತ್ತಾರೆ.
ನಂತರ ಕ್ಲೂಸ್ ಟೀಮ್ ಎಂಟ್ರಿ ಆಗುತ್ತದೆ ಇವರು ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದೇ ಇರುವ ಆಧಾರಗಳನ್ನು ಶೇಖರಣೆ ಮಾಡುತ್ತಾರೆ ಅಪರಾಧ ನಡೆದ ಪ್ರದೇಶದಲ್ಲಿ ಕ್ಲೂಸ್ ಅನ್ನು ಐದು ವಿಧಾನವಾಗಿ ಶೇಖರಣೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.