ಗಂಡನಿಗೆ ಸರ್ಕಾರಿ ಉದ್ಯೋಗ ಅಂತ ಮದುವೆ ಮಾಡಿಸಿದ್ರು ..ಒಂದಿನ ಗಂಡನ ಹಿಂಬಾಲಿಸಿದಾಗ ಆದ ಶಾಕ್…

WhatsApp Group Join Now
Telegram Group Join Now

ನನ್ನ ಗಂಡನಿಗೆ ಗೌರ್ನಮೆಂಟ್ ಕೆಲಸ ಅಂತ ಹೇಳಿ ನನ್ನ ಮದುವೆ ಮಾಡಿದ್ರು ನನ್ನ ತಂದೆ ನನ್ನ ಗಂಡ ಪ್ರತಿದಿನ ರಾತ್ರಿ ಪಾಳಿ ಇದೆ ಅಂತ ಹೇಳಿ ಕೆಲಸಕ್ಕೆ ಹೋಗ್ತಾ ಇದ್ರು. ಒಂದು ದಿನ ನಮ್ಮ ಮನೆಗೆ ಬಂದ ನನ್ನ ಗೆಳತಿ ನಮ್ಮ ಮದುವೆ ಫೋಟೋ ನೋಡಿ ಒಂದು ಆಘಾತಕಾರಿ ಸತ್ಯ ಹೇಳಿದ್ರು.

ನನಗೆ ಅನುಮಾನ ಬಂದು ಒಂದು ದಿನ ನಾನು ನನ್ನ ಗಂಡನನ್ನ ಹಿಂಬಾಲಿಸಿ ಹೋದಾಗ ಅಲ್ಲಿ ನನ್ನ ಗಂಡ ಮಾಡ್ತಾ ಇದ್ದ ಕೆಲಸವನ್ನು ನೋಡಿ ನಾನು ದಂಗಾಗಿ ಹೋಗಿದ್ದೆ.


ನನ್ನ ಹೆಪಸರು ಅನುಪಮ ನೋಡೋಕೆ ಚೆನ್ನಾಗಿ ಇದ್ದೀನಿ ನನ್ನ ಅಪ್ಪ ವೆಂಕಟೇಶ್. ನನ್ನ ಅಮ್ಮ ಅನುಸೂಯ. ನನ್ನ ಅಪ್ಪ ಅಮ್ಮನಿಗೆ ನಾನು ಒಬ್ಬಳೇ ಹೆಣ್ಣುಮಗಳು ನನಗೆ ಒಬ್ಬ ಅಣ್ಣ ಕೂಡ ಇದ್ದಾನೆ. ಅವನ ಹೆಸರು ಅಮರ್. ನಮ್ದು ಸುಖಿ ಸಂಸಾರ ಅಂತ ಹೇಳಿದ್ರು ತಪ್ಪಾಗಲ್ಲ.

ನಮ್ದು ಸಿರಿವಂತ ಕುಟುಂಬವೇ ಆದ್ರೆ ನಾನೇನು ಅಷ್ಟೊಂದು ಚೆನ್ನಾಗಿ ಓದ್ತಾ ಇರ್ಲಿಲ್ಲ. ಓದೋದು ಅಂದ್ರೆ ನನಗೆ ಅಷ್ಟು ಆಸಕ್ತಿ ಇರಲಿಲ್ಲ ಎಸ್ಎಸ್ಎಲ್ಸಿ ಯಲ್ಲೇ ಫೇಲ್ ಆದೆ. ನಾನು ಆದರೆ ನನಗೆ ಮನೆಯಲ್ಲಿ ಉಳಿದ ಹಳೆ ಬಟ್ಟೆಗಳಿಂದ ತರ ತರಹದ ಮ್ಯಾಟ್ ಹಾಕೋ ಅವ್ಯಾಸ ಇತ್ತು.

ನಮ್ಮ ಮನೆಯಲ್ಲಿ ಎಲ್ಲಾ ನಾನೇ ಹಾಕಿದ ಮ್ಯಾಟ್ ಕೈನ ಬಳಸ್ತಾ ಇದ್ದಿದ್ದು. ಹಾಗೆ ಪಕ್ಕದ ಮನೆಯವರು ಯಾರಾದ್ರೂ ಹಳೆ ಬಟ್ಟೆ ತಂದು ಕೊಟ್ಟು ಇದರಿಂದ ಮ್ಯಾಟ್ ಹಾಕಿ ಕೊಡು ಅಂತ ಕೇಳಿದ್ರು ಹಾಕಿ ಕೊಡ್ತಾ ಇದ್ದೆ.

ನಾನು ಎಸ್ಎಸ್ಎಲ್ಸಿ ಫೇಲ್ ಆದ್ಮೇಲೆ ಮನೆಯಲ್ಲೇ ಇದ್ನಲ್ಲ ಹಾಗಾಗಿ ಮನೆ ಕೆಲಸದ ಜೊತೆಗೆ ಇದನ್ನು ಕೂಡ ಮಾಡ್ತಾ ಇದ್ದೆ. ಹೀಗೆ ದಿನಗಳು ಸಾಗುವಾಗ ನನಗೆ ಮದುವೆ ಮಾಡಬೇಕು ಅಂತ ಮನೆಯಲ್ಲಿ ಮಾತಾಡೋಕೆ ಶುರು ಮಾಡಿದ್ರು.

ಕೆಲವು ಒಂದಷ್ಟು ಸಂಬಂಧಗಳನ್ನು ಕೂಡ ನೋಡಿದ್ರು ಆದರೆ ಅದ್ಯಾವು ನಮಗೆ ಅಷ್ಟು ಒಪ್ಪಿಗೆ ಆಗ್ಲಿಲ್ಲ ನನಗೆ ಸಂಬಂಧ ನೋಡ್ತಾ ಇರೋ ವಿಷಯ ನಮ್ಮ ಅತ್ತೆ ಅಂದ್ರೆ ನಮ್ಮ ತಂದೆಯ ಅಕ್ಕನಿಗೆ ಗೊತ್ತಾಯ್ತು.

ಆಗ ಅವರು ಒಂದು ದಿನ ನಮ್ಮ ಮನೆಗೆ ಬಂದು ನನ್ನ ಮಗನೇ ಇರುವಾಗ ನೀವು ಯಾಕೆ ಯಾವುದು ಯಾವುದೋ ಹುಡುಗನ್ನ ಹುಡುಕ್ತಾ ಇದ್ದೀರಾ. ನನ್ನ ಮಗನಿಗೆ ಏನು ಕಡಿಮೆಯಾಗಿದೆ, ಅದು ಅಲ್ಲದೆ ನನ್ನ ಮಗನಿಗೆ ನಮ್ಮ ಅನುಪಮ ಅಂದ್ರೆ ತುಂಬಾನೇ ಇಷ್ಟ ಅವಳನ್ನೇ ಮದುವೆ ಆಗ್ಬೇಕು ಅಂತ ಕನಸು ಕಟ್ಟಿಕೊಂಡಿದ್ದಾನೆ.

ನಮ್ದೇ ಮನೆ ಗದ್ದೆ ಹೊಲ ಎಲ್ಲ ಇಲ್ವಾ ಅದಕ್ಕಿಂತ ಇನ್ನೇನು ಬೇಕು ಸುಮ್ನೆ ನಿನ್ನ ಮಗಳನ್ನು ಕೊಟ್ಟು ನನ್ನ ಮಗನಿಗೆ ಮದುವೆ ಮಾಡು ಅಂತ ಹೇಳಿದ್ರು, ನನ್ನ ಅತ್ತೆ. ಅದಕ್ಕೆ ನನ್ನ ತಂದೆ ಒಪ್ಪಲಿಲ್ಲ ಯಾಕೆ ಅಂದ್ರೆ ಗೌರ್ನಮೆಂಟ್ ಕೆಲಸದಲ್ಲಿ ಇರೋ ಹುಡುಗನಿಗೆ ನನ್ನನ್ನು ಮದುವೆ ಮಾಡಬೇಕು ಅಂತ ನನ್ನ ತಂದೆ ಆಸೆ ಪಟ್ಟಿದ್ರು.

ಅದು ಅಲ್ಲದೆ ಹಳೆ ಸಂಬಂಧದಲ್ಲೇ ಮದುವೆ ಮಾಡೋಕೆ ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ನಾನು ಮದುವೆ ಮಾಡಲ್ಲ ಅಂತ ಹೇಳಿ ಕಳಿಸಿಬಿಟ್ರು ಆಗ ನನ್ನ ಅತ್ತೆ ಅದು ಯಾವ ಊರ ರಾಜಕುಮಾರನಿಗೆ ನಿನ್ನ ಮಗಳು ಮದುವೆ ಮಾಡ್ತೀಯಾ ನಾನು ನೋಡ್ತೀನಿ ಅಂತ ನಮ್ಮ ಮನೆಯಿಂದ ಎದ್ದು ಹೋಗಿದ್ರು.

ಇದೆಲ್ಲ ಆಗಿ ಒಂದು ತಿಂಗಳ ನಂತರ ಒಬ್ಬರು ಬ್ರೋಕರ್ ಕಡೆಯಿಂದ ಒಂದು ಸಂಬಂಧ ಬಂತು ಹುಡುಗ ಬೆಂಗಳೂರಿನಲ್ಲಿ ಗೌರ್ನಮೆಂಟ್ ಕೆಲಸದಲ್ಲಿ ಇದ್ದಾನೆ. ನೋಡೋಕು ತುಂಬಾ ಲಕ್ಷಣವಾಗಿ ಇದ್ದಾನೆ ತಂದೆ ಇಲ್ಲ ತಾಯಿ ಮಾತ್ರ ಇರೋದು ಅದು ಅವರು ಹಳ್ಳಿಯಲ್ಲಿ ಇರ್ತಾರೆ ಒಬ್ಬನೇ ಮಗ ಅಂತ ಕೂಡ ಹೇಳಿದ್ರು.

ಅಪ್ಪ ಕೂಡ ಸರಿ ಆಯ್ತು ಹುಡುಗನನ್ನ ಬರೋಕೆ ಹೇಳಿ ಅಂತ ಹೇಳಿ ಬ್ರೋಕರ್ ಗೆ ಹೇಳಿ ಕಳಿಸಿದ್ರು. ಒಂದು ದಿನ ಹುಡುಗ ಕೂಡ ನನ್ನನ್ನ ನೋಡೋಕೆ ಅವರ ಅಮ್ಮನ ಜೊತೆಗೆ ಬಂದ್ರು ಅವರ ಹೆಸರು ರಮೇಶ್ ನೋಡೋಕು ತುಂಬಾ ಲಕ್ಷಣವಾಗಿ ಇದ್ರು.

ನಮ್ಮ ಮನೇಲಿ ಎಲ್ಲರಿಗೂ ಹುಡುಗ ತುಂಬಾನೇ ಇಷ್ಟ ಆದ್ರೂ ಹುಡುಗನ ಅಮ್ಮ ಎಲ್ಲರ ಜೊತೆನೂ ತುಂಬಾ ಚೆನ್ನಾಗಿ ಮಾತಾಡಿ ನಮಗೂ ಹುಡುಗಿ ತುಂಬಾನೇ ಹಿಡಿಸಿದ್ದಾಳೆ ಮುಂದಿನ ಮಾತುಕಥೆ ಮಾತಾಡೋಣ ಅಂತ ಹೇಳಿದ್ರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god