ದಿನ ನಿತ್ಯದ ಪೂಜೆಗೆ ಹೂವು ಬೇಂಕಂತೇನು ಇಲ್ಲ ಹೂವು ಇಲ್ಲದೆ ಈ ರೀತಿ ಪೂಜೆ ಮಾಡಬಹುದು..ನಿತ್ಯದ ಪೂಜೆ ಹೀಗೆ ಮಾಡಿ ಸಾಕು
ಪ್ರತಿದಿನದ ಪೂಜೆಗೆ ಹೂ ಬೇಕೇ ಬೇಕಾ ಯಾಕೆ ಅಂದ್ರೆ ಕೆಲವರಿಗೆ ಅವರುಗಳು ಇರುವಂತಹ ಜಾಗದಲ್ಲಿ ಹೂ ಸಿಗೋದಿಲ್ಲವಂತೆ ಆ ಕಾರಣದಿಂದ ಕೇಳ್ತಾ ಇದ್ರು.
ಇನ್ನು ಕೆಲವರು ಅಟ್ಲೀಸ್ಟ್ ಪಾಟ್ ಗಳಲ್ಲಾದರೂ ಹೂವಿನ ಗಿಡ ಅವರ ಪೂಜೆಗೆ ಅವಶ್ಯಕತೆ ಇರುವಷ್ಟು ಹೂಗಳನ್ನು ಅವರು ಬೆಳೆಸಿಕೊಳ್ಳುತ್ತಾ ಇರ್ತಾರೆ.
ಕೆಲವರಿಗೆ ಅದು ಕೂಡ ಸಾಧ್ಯ ಆಗೋದಿಲ್ಲ ಅವರು ಇರುವಂತಹ ಜಾಗದಲ್ಲಿ ಸರಿಯಾಗಿ ಬಿಸಿಲು ಬೀಳೋದಿಲ್ಲ ಅಥವಾ ಪಾಟ್ಗಳು ಇಟ್ಟುಕೊಳ್ಳುವುದಕ್ಕೂ ಕೂಡ ಜಾಗ ಬಿಟ್ಟಿರೋದಿಲ್ಲ ಈ ರೀತಿಯಲ್ಲ ಸಮಸ್ಯೆಗಳು ಇದ್ದೆ ಇರುತ್ತೆ.
ಹಾಗೇನೇ ಇನ್ನು ಕೆಲವರು ನಾವು ನೈವೇದ್ಯ ಇಟ್ಟಾಗ ಅದನ್ನ ಏನು ಮಾಡಬೇಕು ಎಷ್ಟು ಸಮಯದ ನಂತರ ನಾವು ಅದನ್ನ ತಗೋಬೇಕು .
ಅಕಸ್ಮಾತ್ ಈ ಪ್ರಸಾದಗಳು ಉಳಿದುಬಿಟ್ರೆ ನಾವು ಯಾರು ಮನೆಯಲ್ಲಿ ಯಾರು ತಿನ್ಲಿಲ್ಲ ಅಂದ್ರೆ ಅದನ್ನ ಏನು ಮಾಡಬೇಕು? ಮತ್ತೆ ದೇವರ ಮನೆಯಲ್ಲಿ ಪೂಜೆ ಆಗಿದ್ ತಕ್ಷಣ ದೇವರ ಮನೆ ಬಾಗಿಲನ್ನ ಹಾಕ್ಬೇಕಾ! ನಾವು ಅಂದ್ರೆ ಹಗಲು ರಾತ್ರಿ ದೇವರ ಮನೆ ಬಾಗಿಲು ಓಪನ್ ಆಗಿ ಇರುತ್ತೆ.
ಇದು ಸರಿನಾ! ತಪ್ಪಾ ?ಹೀಗೆಲ್ಲ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದೀರಾ ಇದರ ಬಗ್ಗೆ ನನಗೆ ಗೊತ್ತಿರುವಂತಹ ಅಷ್ಟು ವಿಚಾರವನ್ನು ತಿಳಿಸಿಕೊಡ್ತಾ ಇದೀನಿ .
ಮೊದಲಿಗೆ ಹೂವಿಲ್ಲದೆ ಪೂಜೆ ಮಾಡೋದು ಹೇಗೆ ಬನ್ನಿ ಅದನ್ನು ತಿಳಿದುಕೊಳ್ಳೋಣ ನಿಜಕ್ಕೂ ಪೂಜೆಗೆ ಹೂವು ಶ್ರೇಷ್ಠನೇ ಕೆಲವರಿಗಂತೂ ಪ್ರತಿದಿನ ಒಂದೊಂದು ರೀತಿ ಹೂವು ಹಾಕಿ ಅಲಂಕಾರ ಮಾಡಿ ಪೂಜೆ ಮಾಡೋದು ತುಂಬಾನೇ ಖುಷಿ ಕೊಡುತ್ತೆ.
ಹಾಗಾಗಿ ನಮ್ಮ ಮನಸ್ಸಿನ ಖುಷಿಗೋಸ್ಕರ ಸಮಾಧಾನಕ್ಕೋಸ್ಕರ ನಾವು ಪ್ರತಿದಿನ ಮನೆಯಲ್ಲಿ ಪೂಜೆ ಮಾಡಲೇಬೇಕು ಪೂಜೆ ಮಾಡಿದಷ್ಟು ಕಷ್ಟ ಜಾಸ್ತಿ ಆಗ್ತಾನೆ ಇದೆ.
ನಮ್ಮನ್ನ ದೇವರು ನೋಡೋದೇ ಇಲ್ಲ ಕೆಲವರು ಏನು ಮಾಡೋದಿಲ್ಲ ಅವರಿಗೆ ಎಲ್ಲಾನು ಕೊಡ್ತಾನೆ ಈ ರೀತಿ ಕೂಡ ಕಮೆಂಟ್ಸ್ ಮಾಡ್ತಾನೆ ಇರ್ತೀರಾ ಆದರೆ ಎಲ್ಲ ಕೂಡ ನಮ್ಮ ನಮ್ಮ ಕರ್ಮದ ಫಲ ಅಂತಾನೆ ತಿಳ್ಕೊಬೇಕು ಅಷ್ಟೇ.
ನಮಗೆ ಏನು ಸಿಕ್ಕಿದೆಯೋ ನಾವು ಅದನ್ನ ಅನುಭವಿಸಲೇಬೇಕು ಹಾಗಾಗಿ ಪ್ರತಿದಿನ ಮನೆಯಲ್ಲಿ ಪೂಜೆ ಮಾಡೋದ್ರಿಂದನು ಕೂಡ ಒಂದು ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತೆ.
ನಮ್ಮ ಮನಸ್ಸು ಸಮಾಧಾನವಾಗಿರುತ್ತೆ ಏನೇ ಅಂದುಕೊಂಡ್ರು ಕೂಡ ನಾವು ಪೂಜೆ ಮಾಡೋದನ್ನ ಬಿಡೋಕೆ ಆಗುತ್ತಾ ಆಗೋದೇ ಇಲ್ಲ ಅಲ್ವಾ ಒಂದು ದಿನ ಮನೇಲಿ ದೀಪ ಹಚ್ಚಲಿಲ್ಲ ಅಂದ್ರು ಏನೋ ಕಳ್ಕೊಂಡಿದ್ದೀವಿ ಅನ್ನೋ ರೀತಿ ಇರುತ್ತೆ.
ತುಂಬಾನೇ ಅಸಮಾಧಾನ ಇರುತ್ತೆ ಎಲ್ಲಾದರೂ ಹೊರಗಡೆ ಎರಡು ಮೂರು ದಿನ ನಾವು ಊರುಗಳಿಗೆ ಹೋಗಿ ಬಂದ್ಬಿಟ್ರೆ ಎರಡು ಮೂರು ದಿನ ಮನೇಲಿ ದೀಪ ಹಚ್ಚಲಿಲ್ಲ ಅಂದ್ರೆ ಮನೆ ಒಳಗಡೆ ಕಾಲು ಇಡ್ತಿದ್ದಾಗೆ ಮನೆಯೆಲ್ಲ ಒಂದು ರೀತಿ ಏನೋ ಒಂತರ ತುಂಬಾ ಡಲ್ ಆಗಿ ಕಾಣಿಸ್ತಾ ಇರುತ್ತೆ.
ಮನೆಗೆ ಬಂದ ತಕ್ಷಣ ಮೊದಲು ಫ್ರೆಶ್ ಅಪ್ ಆಗಿ ಮನೆಯಲ್ಲೇ ಕ್ಲೀನ್ ಮಾಡಿ ಸ್ನಾನ ಮಾಡಿ ದೇವರ ಮನೆ ಕ್ಲೀನ್ ಮಾಡಿ ದೀಪ ಹಚ್ಚಿ ನಾವು ಕೂತ್ಕೊಂಡಾಗ ಎಷ್ಟು ಸಮಾಧಾನ ಅನ್ಸುತ್ತೆ ನೋಡಿ.
ಅದೇ ಒಂದು ಪಾಸಿಟಿವ್ ಎನರ್ಜಿ ಅಷ್ಟೇನೆ ಹಾಗಾಗಿ ಏನೇ ಅಂದುಕೊಂಡ್ರು ಕೂಡ ಪ್ರತಿದಿನ ನಮ್ಮ ಕರ್ತವ್ಯ ನಮ್ಮ ಕೆಲಸ ಏನಿದೆ ನಾವು ಅದನ್ನ ಮಾಡಲೇಬೇಕು.
ಪ್ರತಿದಿನ ಮನೇಲಿ ಎರಡು ಹೊತ್ತು ಕೂಡ ದೀಪ ಹಚ್ಚಲೇಬೇಕು ನಾವು ಇರುವಂತಹ ಜಾಗದಲ್ಲಿ ನಮಗೆ ಯಾವ ರೀತಿಯ ಹೂಗಳು ಸಿಗುತ್ತೋ ಅದೆಲ್ಲ ಕೂಡ ಪೂಜೆಗೆ ಶ್ರೇಷ್ಠನೇ ಆಗಿರುತ್ತೆ.
ಆದಷ್ಟು ಕಡಿಮೆ ಹೂಗಳನ್ನು ಪ್ರತಿದಿನ ಬಳಸೋದು ಕೂಡ ಒಳ್ಳೆಯದು ಯಾಕಂದ್ರೆ ಇವತ್ತು ಹಾಕಿರುವಂತಹ ಹೂವನ್ನ ನಾಳೆ ತೆಗೆದು ಬೇರೆ ಹೊಸ ಹೂಗಳನ್ನು ಇಟ್ಟು ಪೂಜೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ