ದೂರಾದ ಸಂಬಂಧಗಳ ಬಗ್ಗೆ ಚಿಂತಿಸಬೇಡಿ…. ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೋ ಅವನು ಇಡೀ ಜಗದ ಮೇಲೆ ವಿಜಯ ಸಾಧಿಸುತ್ತಾನೆ,ತಾಳ್ಮೆಯೇ ಮನುಷ್ಯನ ದೊಡ್ಡ ಅಸ್ತ ಬದುಕಿನಲ್ಲಿ ತುಂಬಾ ದೂರ ಸಾಗಿದ ಮೇಲೆ ನಮಗೆ ನಮ್ಮ ಹತ್ತಿರ ಇರುವವರು ಯಾರು ಎಂದು ಅರ್ಥವಾಗುತ್ತದೆ ಯಾರು ಎಷ್ಟೇ ಸುಂದರವಾದ ಮುಖವಾಡ.
ಹಾಕಿದರು ಪರಿಸ್ಥಿತಿಗಳು ಮತ್ತು ಕಾಲ ಅವರವರ ನಿಜ ಸ್ವರೂಪ ಗುಣಗಳನ್ನ ಎಂದಾದರೂ ಒಂದು ದಿನ ಪರಿಚಯ ಮಾಡೇ ಮಾಡುತ್ತದೆ ಇದೇ ಸತ್ಯ. ನೀವು ಯಾರ ಬಳಿ ಹೋಗುತ್ತೀರಿ ಎಂದು ಜಾಗರೂಕತೆಯಾಗಿರಿ ಕೇಳುವ ಕಿವಿಯ ಬಳಿ ಓಡುವ ಬಾಯಿಯು ಇರುತ್ತದೆ ಹೊಟ್ಟೆಯಲ್ಲಿ ಹೋದ ವಿಷ ಒಬ್ಬನನ್ನು ಹಾಳು ಮಾಡಿದರೆ ಕಿವಿಯಲ್ಲಿ ಹೋದ ವಿಷ ಬಾಯಿಂದ ಬಾಯಿಗೆ.
ಹೋಗಿ ಕೆಲವು ಸಂಬಂಧಗಳನ್ನು ಹಾಳು ಮಾಡುತ್ತದೆ ನಮ್ಮವರು ಯಾವಾಗಲೂ ನಮ್ಮವರೇ ಆಗಿರುವುದಿಲ್ಲ ಕೆಲವೊಮ್ಮೆ ನಮ್ಮವರಿಂದಲೇ ಎಷ್ಟೋ ಸಂಬಂಧಗಳು ಕಳೆದು ಹೋಗಿರುತ್ತವೆ ಕಾಲ ಮೂಕವಾಗಿಲ್ಲ ಮೌನವಾಗಿದೆ ಅಷ್ಟೇ.ಸರಿಯಾದ ಸಮಯ ಬಂದಾಗ ಯಾರು ನಮ್ಮವರು ಎಂದು ಹೇಳಿಬಿಡುತ್ತದೆ ಕಾಯಬೇಕಷ್ಟೆ ಎಲ್ಲರ ಬಳಿಯೂ ದುಃಖವನ್ನು ಮತ್ತು ನಿಮ್ಮ.
ಮನಸ್ಸಿಗಾದ ಗಾಯವನ್ನ ಹೇಳಿಕೊಳ್ಳಬೇಡಿ ಏಕೆಂದರೆ ಎಲ್ಲರ ಬಳಿಯೂ ಔಷಧಿ ಇರುವುದಿಲ್ಲ ಆದರೆ ಉಪ್ಪಂತು ಖಂಡಿತ ಇರುತ್ತದೆ ನಿಮ್ಮ ಮನಸ್ಸಿಗೆ ಇಳಿಯುವವರ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮ ಮನಸ್ಸಿನಿಂದ ಕೆಳಗೆ ಇಳಿಯುವವರ ಬಗ್ಗೆ ಜಾಗೃತಿ ವಹಿಸಿ ಕೆಲವು ಸಂಬಂಧಗಳನ್ನು ದೇವರೆ ಹಾಳು ಮಾಡುತ್ತಾನೆ ಏಕೆಂದರೆ ಮುಂದೆ ನಮ್ಮ ಜೀವನ ಹಾಳಾಗಬಾರದು ಎಂದು.
ಎಷ್ಟು ಸಂಬಂಧಗಳಿವೆ ಎನ್ನುವುದಕ್ಕಿಂತ ಎಷ್ಟು ಸಂಬಂಧಗಳಿಗೆ ಜೀವ ಇದೆ ಎನ್ನುವುದು ಮುಖ್ಯ ನಿಮ್ಮಿಂದ ಕಳೆದು ಹೋದ ಸಂಬಂಧದಿಂದ ನಿಮಗಾಗುವ ನಷ್ಟವೇನಿಲ್ಲ ಅದು ಕೆಲವೊಮ್ಮೆ ನಮ್ಮ ಜೀವನದ ಉನ್ನತಿಗಾಗಿ ಭಗವಂತನ ದಾರಿಯಾಗಿರುತ್ತದೆ.. ದೂರಾದ ಸಂಬಂಧಕ್ಕೆ ಎಂದು ಕೊರಗಬೇಡಿ ಭಗವಂತ ನೀವು ನೋಡಿರದ ವಿಷಯಗಳನ್ನು ನೋಡಿರುತ್ತಾನೆ ನೀವು ಕೇಳಲು.
ಸಾಧ್ಯವಾಗದ ಸಂಭಾಷಣೆಗಳನ್ನು ಕೇಳಿರುತ್ತಾನೆ ಮತ್ತು ನೀವು ಮಾಡದಿರುವ ಕೆಲಸವನ್ನು ಅವನೇ ಮಾಡಿರುತ್ತಾನೆ ಭಗವಂತನನ್ನು ಬಿಟ್ಟು ಬೇರೆ ಯಾರು ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಸಿಗಲು ಸಾಧ್ಯವಿಲ್ಲ,ಯಾರಾದರೂ ಸಿಕ್ಕಿದರು ಅವರು ನಮಗೆ ಅರ್ಥ ಮಾಡಿಸಿ ಹೋಗುತ್ತಾರೆ.
ವಿನಹ ಅರ್ಥ ಮಾಡಿಕೊಳ್ಳುವುದಿಲ್ಲ ಜೀವನದಲ್ಲಿ ಆದಷ್ಟು ಸಂತೋಷವಾಗಿರಲು ಪ್ರಯತ್ನಿಸಿ ಇನ್ನು ಎಷ್ಟು ಸಮಯ ಉಳಿದಿದೆ ಎಂದು ಯಾರಿಗೂ ಗೊತ್ತಿಲ್ಲ ಎಲ್ಲರೂ ಕಾಲದ ಕೈ ಗೊಂಬೆಗಳು ಅಷ್ಟೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ