ನಿಮಗೂ ಪಾದದಲ್ಲಿ ಆಣಿ ನೋವು ಇದೆಯಾ ? ಏನು ಮಾಡಬೇಕು ಮನೆ ಮದ್ದು ಏನು ಆಣಿ ನೋವಿಗೆ ಶಾಶ್ವತ ಪರಿಹಾರ..

WhatsApp Group Join Now
Telegram Group Join Now

ಕಾಲಿನ ಪಾದದಲ್ಲಿ ಆಣಿ ಆಗಿ ಚುಚ್ಚುವುದು ಹಾಗೂ ನಡೆದಾಗ ಅಥವಾ ಕೂತಾಗ ಬಹಳ ನೋವಾಗುವುದು ಇದಕ್ಕೆ ಪರಿಹಾರ ಏನು? ಮನೆಮದ್ದಿನಲ್ಲಿ ಹೇಗೆ ಇದನ್ನ ನಿವಾರಣೆ ಮಾಡಿಕೊಳ್ಳಬಹುದು ಇನ್ನು ಯಾವ ಕಾರಣಕ್ಕಾಗಿ ನಮಗೆ ಬರುತ್ತದೆ ಇಂದು ತಿಳಿಯೋಣ ಬಹಳಷ್ಟು ಜನ ನಡೆಯಲು ಬಹಳ ಕಷ್ಟ ಪಡುತ್ತಾರೆ ಆಣಿ ಇದನ್ನ ಇಂಗ್ಲಿಷ್ನಲ್ಲಿ ಕಾರ್ನ್ ಎಂದು ಕರೆಯುತ್ತಾರೆ ಇದರ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.

ನಾವು ನಡೆಯುವಾಗ ನಮ್ಮ ದೇಹದ ಸಂಪೂರ್ಣ ಭಾರ ಕಾಲಿನ ಮೇಲೆ ಬೀಳುತ್ತದೆ ಪಾದಗಳನ್ನು ದೇವರು ಎಷ್ಟು ಚೆನ್ನಾಗಿ ರಚನೆ ಮಾಡಿಕೊಟ್ಟಿದರೆ ಅದರ ರಚನೆ ಎಸ್ಟ್ ಚೆನ್ನಾಗಿದೆ ಅಂತ ಅಂದ್ರೆ ನಮ್ಮ ದೇಹದ ಬೇರೆ ಕಡೆ ಚರ್ಮಕ್ಕೂ ಕಾಲಿನ ಚರ್ಮಕ್ಕೂ ವ್ಯತ್ಯಾಸವಿರುತ್ತದೆ ನಮ್ಮ ಇಡೀ ದೇಹದ ತೂಕವನ್ನು ನಮ್ಮ ಕಾಲಿನ ಚರ್ಮ ಹಾಗೂ ಹಂಗಾಲು ಭಾರವನ್ನು ತಡೆದುಕೊಳ್ಳುತ್ತದೆ ಈ ಚರ್ಮ ಬಹಳ ದಪ್ಪ ವಾಗಿಯೂ ಹಾಗೂ ಬಹಳ ಮೃದುವಾಗಿಯೂ ಇರುತ್ತದೆ.


ಆಣಿ ಇದು ಯಾವಾಗ ಬರುತ್ತದೆ ಎಂದರೆ ಇದರಲ್ಲಿ ಎರಡು ವಿಧ ಒಂದು ಕಾರ್ನ್ ಮತ್ತೊಂದು ಕ್ಯಾಲೊಸಿಟಿ ಕಾರ್ನ್ ಎಂಬುದು ಚಿಕ್ಕದಾಗಿ ವೃತ್ತಾಕಾರದಲ್ಲಿ ಗಟ್ಟಿಯಾಗಿ ಇರುತ್ತದೆ ಹೆಚ್ಚು ಸಲ ಒಂದೇ ಜಾಗದಲ್ಲಿ ಬಾರ ಬೀಳುತ್ತಿದ್ದರೆ ಈ ಒಂದು ಆಣಿ ಆಗುತ್ತದೆ, ಇದು ಬೆರಳಿನ ಭಾಗದಲ್ಲಿ ಬೆರಳಿನ ಕೆಳಗಡೆ ಅಥವಾ ಇಮ್ಮಡಿಯಲ್ಲಿ ಯಾವ ಜಾಗದಲ್ಲಿ ಒತ್ತಡ ಹೆಚ್ಚಾಗಿ ಇರುತ್ತದೆ ಅಂತಹ ಜಾಗದಲ್ಲಿ ಆಣಿ ಆಗಿಬಿಡುತ್ತದೆ ಈ ಆಣೆಯು ಬಹಳ ನೋವನ್ನು ಉಂಟುಮಾಡುತ್ತದೆ ಮಧ್ಯದಲ್ಲಿ ಗಟ್ಟಿಯಾಗಿದ್ದು ಸುತ್ತ ಕೆಂಪಾಗಿರುತ್ತದೆ ಪಾದವನ್ನು ನೆಲಕ್ಕೆ ಊರಿನಡಿಯಲು ಬಹಳ ಕಷ್ಟವಾಗಿರುತ್ತದೆ ಪಾದ ಊರಿದರೆ ಚುಚ್ಚಿದಂತೆ ಅನುಭವವಾಗುತ್ತದೆ.

ಇನ್ನು ಎರಡನೆಯದಾಗಿ ಕೆಲಾಸಿಟಿ ನಾವು ನಿಂತುಕೊಂಡಾಗ ನಮ್ಮ ಸಂಪೂರ್ಣ ದೇಹದ ಬಾರ ಪಾದಕ್ಕೆ ಬೀಳುತ್ತದೆ ಅದರಲ್ಲಿ ಹೆಚ್ಚಾಗಿ ಹಿಮ್ಮಡಿ ಹಾಗೂ ಬೆರಳುಗಳ ಕೆಳಭಾಗದಲ್ಲಿರುವ ಜಾಗದಲ್ಲಿ ಮುಂಗಾಲು ಮತ್ತು ಹಂಗಾಲಿನ ಜಾಗದಲ್ಲಿ ಒತ್ತಡ ಬಿದ್ದಾಗ ಆ ಚರ್ಮ ದಪ್ಪವಾಗುತ್ತಾ ಹೋಗುತ್ತದೆ ಇದನ್ನ ಕ್ಯಾಲೋಸಿಟಿ ಎಂದು ಕರೆಯಲಾಗುತ್ತದೆ ಇದು ಹಳದಿ ಬಣ್ಣ ಅಥವಾ ಹಸಿರು ಬಣ್ಣದಿಂದ ಇರುತ್ತದೆ ಇದು ಹೆಚ್ಚಾಗಿ ನೋವು ಕಾಣಿಸುವುದಿಲ್ಲ.

ಈ ಕಾರ್ನ್ ಹಾಗೂ ಕ್ಯಾಲೋಸಿಟಿ ಯಾವ ಕಾರಣಕ್ಕಾಗಿ ಬರುತ್ತದೆ ಎಂದರೆ ನಮ್ಮ ಚರ್ಮದಲ್ಲಿ ಕ್ಯಾರೋಟಿನ್ ಎಂಬ ಪದರವಿರುತ್ತದೆ ಇದು ನಮ್ಮ ಚರ್ಮದಲ್ಲಿರುವಂತಹ ಒಂದು ಪ್ರೋಟೀನ್ ಇದು ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ ಆದರೆ ನಮ್ಮ ದೇಹದ ಬಾರ ಹೆಚ್ಚಾದಾಗ ಕಾಲಿನ ಪಾದಗಳಿಗೆ ಅತಿಯಾದ ಒತ್ತಡ ಬಿದ್ದಾಗ ಚರ್ಮ ದಪ್ಪವಾಗುತ್ತಾ ಹೋಗುತ್ತದೆ ಆ ಚರ್ಮ ನಮ್ಮ ಪಾದಕ್ಕೆ ನೋವನ್ನು ಉಂಟುಮಾಡುತ್ತದೆ.

ಇದಕ್ಕೆ ಮೂಲ ಕಾರಣ ನಾವು ಪ್ರತಿದಿನ ಬಳಸುವಂತಹ ಶೂ ಚಪ್ಪಲ್ ಇವುಗಳು ನಾವು ಹಾಕುವ ಬಹಳ ಬಿಗಿಯಾಗಿದ್ದಾಗ ನಮ್ಮ ಕಾಲಿನ ಮುಂಬೆರಳುಗಳಿಗೆ ಒತ್ತಡ ಜಾಸ್ತಿಯಾಗಿ ಹಾನಿಯಾಗಬಹುದು ಬೆರಳುಗಳ ಮಧ್ಯೆ ಹಾಗೂ ಇಮ್ಮಡಿ ತುಂಬಾ ಬಿಗಿಯಾಗಿದ್ದ ಶೂ ಧರಿಸಿದರೆ ಇಮ್ಮಡಿಯಲ್ಲಿ ಹಾನಿಯಾಗಬಹುದು ಹಾಗೂ ಬಹಳ ಸಡಿಲವಾದ ಚಪ್ಪಲಿ ಅಥವಾ ಶೂ ಗಳನ್ನು ಧರಿಸಬಾರದು ಇದರಿಂದ ನಮ್ಮ ಪಾದ ಹೆಚ್ಚು ಉಜ್ಜುವುದು ಆಗುವುದಿಲ್ಲ ರೀತಿಯಲ್ಲಿ ನಮ್ಮ ಪಾದಕ್ಕೆ ಅನುಗುಣವಾದ ಶೂ ಅಥವಾ ಚಪ್ಪಲಿಯನ್ನು ಧರಿಸಿದರೆ ಬಹಳ ಒಳ್ಳೆಯದು.

ಗಟ್ಟಿಯಾದ ಜಾಗದಲ್ಲಿ ತುಂಬಾ ಸಮಯ ನಿಂತಾಗ ಆಣಿಯಾಗುತ್ತದೆ ಹಾಗೂ ಮಂದವಾದ ಸಾಕ್ಸ್ ಬಳಸಿದರೆ ಒಳ್ಳೆಯದು ಕೆಲವೊಬ್ಬರು ಸಾಕ್ಸ್ ಹಾಕದೆ ನೇರವಾಗಿ ಶೂ ಹಾಕಿಕೊಳ್ಳುತ್ತಾರೆ ಇದರಿಂದ ಸಹ ಆಣೆಯಾಗುತ್ತದೆ ಕುಶನ್ ಇರುವಂತಹ ಶೂ ಗಳನ್ನು ಹಾಕಿಕೊಳ್ಳುವುದು ಬಹಳ ಒಳ್ಳೆಯದು ಕಾಲಿನ ಚರ್ಮಕ್ಕೆ ಹಾನಿಯಾದಂತೆ ಅದು ನೋಡಿಕೊಳ್ಳುತ್ತದೆ ಇನ್ನು ಸಾಮಾನ್ಯವಾಗಿ ಕಾಲಿನಲ್ಲಿ ಆನೆಯಾಗುವುದು ಸಕ್ಕರೆ ಕಾಯಿಲೆ ಇದ್ದವರಿಗೆ ಹಾಗೂ ಕಾಲಿನ ನರದ ತೊಂದರೆ ಇದ್ದರೆ ಆನೆಯಾಗುತ್ತದೆ ಇಂತಹವರು ಪಾದದ ಕಡೆ ಹಾಗೂ ಅವರು ಧರಿಸುವ ಆದ ರಕ್ಷೆ ಅವರ ಕಾಲಿಗೆ ಅನುಗುಣವಾಗಿ ಧರಿಸಬೇಕು.

ಇನ್ನು ಇದಕ್ಕೆ ಮನೆಮದ್ದು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಲ್ಲುಪ್ಪನ್ನು ಹಾಕಿಕೊಂಡು ಬೆಳಿಗ್ಗೆ ಹಾಗೂ ಸಂಜೆ 10 ರಿಂದ 15 ನಿಮಿಷದವರೆಗೆ ಕಾಲನ್ನು ನೆನೆಸುವುದು ಇದರಿಂದ ಚರ್ಮದ ಕೆರಟಿನ್ ಲೇಯರ್ ಮೃದುವಾಗುತ್ತಾ ಬರುತ್ತದೆ ಹಾಗೂ ಇದನ್ನು 15 ದಿನಗಳವರೆಗೆ ಪ್ರತಿದಿನ ಮಾಡುತ್ತಾ ಬಂದರೆ ಕಾಲಿನಲ್ಲಿ ಆಗಿರುವಂತಹ ಸಣ್ಣ ಸಣ್ಣ ಹಾನಿಗಳು ಕೂಡ ಕಡಿಮೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god

Leave a Reply

Your email address will not be published. Required fields are marked *