ನಿಮ್ಮ ಮುಖವು ಎಷ್ಟೇ ಕಪ್ಪಾಗಿದ್ದರು ಮಲಗುವ ಮುನ್ನ ಈ ಕ್ರೀಮ್ ಹಚ್ಚುತ್ತಾ ಬಂದರೆ ಬೆಳ್ಳಗಿನ ಮುಖ ನಿಮ್ಮದಾಗುತ್ತದೆ…
ಸಾಮಾನ್ಯವಾಗಿ ನೀವು ಕೆಲಸಕ್ಕೆ ಹೋಗುವಾಗ ಹೊರಗಿನ ಬಿಸಿಲು ಹಾಗೂ ಧೋಳು ಇದರಿಂದ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳು ಆಗುತ್ತವೆ ಅದು ಹಾಗೆಯೇ ಉಳಿದುಬಿಡುತ್ತವೆ ಮೊಡವೆಗಳು ಮತ್ತು ಮುಖವು ತುಂಬಾ ಡ್ರೈ ಆಗಿ ಇರುವುದು ಈ ರೀತಿ ತೊಂದರೆ ಪ್ರತಿ ಹುಡುಗ ಮತ್ತು ಹುಡುಗಿಯರಿಗೂ ಇದ್ದೇ ಇರುತ್ತದೆ ಹಾಗಾಗಿ ಇದಕ್ಕಾಗಿ ಹೊರಗಡೆ ನಾವುಗಳು ತುಂಬಾ ಕ್ರೀಮ್ಗಳನ್ನು ಬಳಸುತ್ತೇವೆ ಆದರೆ ಈ ರೀತಿ ಬಳಸುವುದು ತಪ್ಪಲ್ಲ ಇದು ಕೆಲವರಿಗೆ ಹಿಡಿಯುವುದು ಇನ್ನು ಕೆಲವರಿಗೆ ಹಿಡಿಯುವುದಿಲ್ಲ ಸಾಮಾನ್ಯವಾಗಿ ಜಾಹಿರಾತಿನಲ್ಲಿ ಬರುವ ಕ್ರೀಮ್ ಅನ್ನು ನೋಡಿ ಅದನ್ನು ಹಚ್ಚಲು ಶುರು ಮಾಡಿಬಿಡುತ್ತೇವೆ ಆದರೆ ನಮ್ಮ ಸ್ಕಿನ್ ಯಾವ ರೀತಿ ಎಂದು ತಿಳಿದು ನಂತರ ಅದಕ್ಕೆ ಸರಿ ಹೋಗುವ ಕ್ರೀಮ್ ಅನ್ನು ಹಚ್ಚಬೇಕು. ಹಾಗಾಗಿ ಈ ಒಂದು ಕ್ರೀಮನ್ನು ನೀವು ಅಚ್ಚುತ ಬಂದರೆ, ನಿಮ್ಮ ಮುಖದಲ್ಲಿರುವ ಮೊಡವೆಗಳು ಮತ್ತು ಕಪ್ಪು ಕಲೆಗಳು ಹಾಗೂ ಡ್ರೈ ತ್ವಚೆ ಇರುವವರು ಹೀಗೆ ಮುಂತಾದ ಮುಖದ ತೊಂದರೆಯಿಂದ ದೂರವಾಗಿ ನಿಮ್ಮ ಮುಖವು ಸಂಪೂರ್ಣ ಹೊಳಪನ್ನು ಬೀರುವ ಸುಂದರ ಮುಖವಾಗಿ ಕಾಣುತ್ತದೆ.
ಮೊದಲಿಗೆ ಆಲುವೆರಾ ಜೆಲ್ ಅನ್ನು ತೆಗೆದುಕೊಳ್ಳಬೇಕು ಅದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಇದು ತ್ವಚೆಯ ಕಾಂತಿ ಮತ್ತು ಅದರ ತೊಂದರೆಗಳಿಗೆ ಒಂದು ಸೂಕ್ತವಾದ ಔಷಧ.ಅಲೋವೆರಾ ಜೆಲ್ ಒಂದು ಬೌಲಿಗೆ ಹಾಕಿದ ನಂತರ ಅದಕ್ಕೆ ಒಂದು ಸ್ಪೂನ್ ನಷ್ಟು ನಿಂಬೆ ರಸವನ್ನು ಹಾಕಿಕೊಳ್ಳಬೇಕು ಸ್ವಲ್ಪ ಪ್ರಮಾಣದಲ್ಲಿ ಅಂದರೆ ಒಂದು ಚಿಟಿಕೆಯಷ್ಟು ಕೇಸರಿಯನ್ನು ಇದಕ್ಕೆ ಮಿಶ್ರಣ ಮಾಡಬೇಕು ನಂತರ ಕಸ್ತೂರಿ ಹಳದಿಯನ್ನು ಕೂಡ ಸ್ವಲ್ಪ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು ಇದು ಒಂದು ಔಷಧಿ ಗುಣವುಳ್ಳ ಹಾಗೂ ಪ್ರತಿಯೊಬ್ಬರು ಎಲ್ಲಾದಕ್ಕೂ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ ಏಕೆಂದರೆ ಇದರಲ್ಲೂ ಕೂಡ ಆಂಟಿ ಆಕ್ಸಿಡೆಂಟ್ ಗುಣ ಹೆಚ್ಚಾಗಿರುತ್ತದೆ ಹಾಗೂ ನಿಮ್ಮ ಮುಖದ ಕರೆಗಳು ಮತ್ತು ತುಂಬಾ ಡ್ರೈಯಾಗಿ ಕಾಣುವುದನ್ನು ಕಡಿಮೆ ಮಾಡುತ್ತದೆ. ನಂತರ ಬಾದಾಮಿ ಎಣ್ಣೆ ಇದು ಕೂಡ ನಿಮ್ಮ ಕಪ್ಪನೆಯ ಕಲೆಗಳು ಮತ್ತು ಅಲ್ಲಲ್ಲಿ ಸ್ವಲ್ಪ ಬಿಳಿಯ ಮಚ್ಚೆಗಳು ಈ ರೀತಿ ಇದ್ದರೆ ಇದನ್ನು ಕೂಡ ಕಡಿಮೆ ಮಾಡುತ್ತದೆ ಇದು ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಇದನ್ನು ಕೂಡ ಸ್ವಲ್ಪ ಪ್ರಮಾಣದಲ್ಲೇ ಮಿಶ್ರಣ ಮಾಡಿಕೊಳ್ಳಬೇಕು.
ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡ ನಂತರ ಇದನ್ನು ಪ್ರತಿದಿನ ರಾತ್ರಿಯ ಸಮಯ ಮಲಗುವ ಮುನ್ನ ಹಚ್ಚಿ ಮುಂಜಾನೆ ಮುಖವನ್ನು ತಣ್ಣೀರಿನಲ್ಲಿ ತೊಳೆಯುತ್ತಾ ಬಂದರೆ ನಿಮ್ಮ ಮುಖದ ಎಲ್ಲ ಸಮಸ್ಯೆಗಳು ದೂರವಾಗುತ್ತದೆ ಮತ್ತು ತುಂಬಾ ಹೊಳಪುಬಿರುವ ಸುಂದರ ತ್ವಚೆ ನಿಮ್ಮದಾಗುತ್ತದೆ.ಈ ರೀತಿ ಮನೆಯಿಂದಲೇ ತಯಾರಿಸಿಕೊಳ್ಳಬಹುದಾದ ಈ ಕ್ರೀಮನ್ನು ನೀವು ಮಾಡಿ ಇದನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಸಂಪೂರ್ಣವಾಗಿ ಅದರಿಂದಾಗುವ ಅನುಭವವನ್ನು ನೀವೇ ಕಂಡುಕೊಳ್ಳುತ್ತೀರಾ ಈಗಿರುವ ಕಾಲಘಟ್ಟದಲ್ಲಿ ಅಧಿಕವಾಗಿ ಮುಖದಲ್ಲಿ ಕರೆಗಳು ಮತ್ತು ಕಪ್ಪನೆ ಕಲೆಗಳು ಹಾಗೂ ಡ್ರೈ ಆಗಿ ಮುಖ ಒಣಗುವುದು ಮತ್ತು ತಾಪಮಾನ ಸರಿ ಹೊಂದದೆ ಮುಖವು ಕಪ್ಪಾಗುವುದು ಈ ರೀತಿ ಅನೇಕ ಕಾರಣಗಳು ಈಗ ಕಾಣಲು ಸಿಗುತ್ತದೆ ಹಾಗಾಗಿ ನಮ್ಮ ಮುಖಕ್ಕೆ ಸರಿಹೊಂದದ ಅನೇಕ ಕ್ರೀಂ ಗಳನ್ನು ಬಳಸಿ ಅದರಿಂದ ಮುಖವನ್ನು ಇನ್ನೂ ಹೆಚ್ಚಾಗಿ ಹಾಳು ಮಾಡಿಕೊಳ್ಳದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ