ಬೆಂಗಳೂರಿನಲ್ಲೊಂದು ಬೆಚ್ಚಿಬೀಳಿಸುವ ಘಟನೆ..ಕಗ್ಗತ್ತಲಲ್ಲಿ ಒಂಟಿ ಮಹಿಳೆಗೆ ಆಗಿದ್ದೇನು ?
ವಿಕ್ಷಕರೇ ಒಂದು ಘಟನೆ ಒಂದು ಸಿಸಿ ಟಿವಿ ದೃಶ್ಯ ಬೆಂಗಳೂರಿಗರನ್ನ ಬೆಚ್ಚಿಬೀಳುವಂತೆ ಮಾಡಿದೆ. ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಬೆಂಗಳೂರು ಅಭಿವೃದ್ಧಿ ಆಗ್ತಾ ಇದ್ದ ಹಾಗೆ ಇಂತಹ ಚಟುವಟಿಕೆಗಳ ಸಂಖ್ಯೆ ಜಾಸ್ತಿ ಆಗ್ತಿರೋದು ಸಹಜವಾಗಿ ಎಲ್ಲರಲ್ಲೂ ಕೂಡ ಭಯ ಮೂಡಿಸುವ ರೀತಿಯಲ್ಲಿದೆ.
ಒಂದಷ್ಟು ಮಂದಿ ಹೆಚ್ಚೆತ್ತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ವಿಡಿಯೋವನ್ನ ನಿಮ್ಮ ಮುಂದೆ ಇಡ್ತಾ ಇದ್ದೇನೆ. ಪ್ರತಿಯೊಬ್ಬರು ನೋಡೋದು ಮಾತ್ರ ಅಲ್ಲ ಅದಾದ ಬಳಿಕ ಎಚ್ಚರಿಕೆಯಿಂದ ಇರಲೇಬೇಕು. ಅದರಲ್ಲೂ ಕೂಡ ಮಹಿಳೆಯರು ಅದೆಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ಸಾಲದು.
ಇತ್ತೀಚಿನ ದಿನಗಳಲ್ಲಿ ಇಂತಹ ಕೀಚಕರು ಇಂತಹ ರಾಕ್ಷಸ ಮನಸ್ಥಿತಿಯವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಾ ಇದೆ. ಏನಿದು ಘಟನೆ ಅಂತ ಗಮನಿಸುತ್ತಾ ಹೋಗೋದಾದ್ರೆ ನೀವು ದೃಶ್ಯ ಒಂದನ್ನ ಗಮನಿಸುತ್ತಾ ಇದ್ದೀರಿ! ಓರ್ವ ವ್ಯಕ್ತಿ ಆತ ನೋಡೋದಕ್ಕೆ ಮಾನಸಿಕ ಅಸ್ವಸ್ಥನ ರೀತಿಯಲ್ಲಿ ಇಲ್ಲ ಅಥವಾ ಇನ್ಯಾವುದೋ ರೀತಿಯಲ್ಲೂ ಇಲ್ಲ.
ಆತ ನೋಡೋದಕ್ಕೆ ಟಿಪ್ ಟಾಪ್ ಆಗಿ ನೀಟಾಗಿ ಕಾಣಿಸ್ತಾ ಇದ್ದಾನೆ. ಮಹಿಳೆಯೊಬ್ಬರು ಮನೆ ಮುಂದೆ ನಿಂತು ಕೊಂಡಿರುವ ಸಂದರ್ಭದಲ್ಲಿ ಅವರನ್ನ ಫಾಲೋ ಮಾಡಿಕೊಂಡು ಬರ್ತಾನೆ. ಅದಾದ ಬಳಿಕ ಅಟ್ಟಿಸಿಕೊಂಡು ಬರ್ತಾನೆ ಅದಾದ ನಂತರ ಅವರನ್ನ ಹಿಂದುಗಡೆಯಿಂದ ತಬ್ಬಿಕೊಂಡು ಒತ್ತಾಯ ಪೂರ್ವಕವಾಗಿ ಮುತ್ತಿಕ್ಕುವಂತ ಕೆಲಸವನ್ನ ಮಾಡ್ತಾನೆ. ಬೀದಿ ನಾಯಿಗಳು ಅಲ್ಲಿಗೆ ಬರ್ತಾ ಇದ್ದ ಹಾಗೆ ಆತ ಅಲ್ಲಿಂದ ಎಸ್ಕೇಪ್ ಆಗ್ತಾನೆ.
ಆತನ ಉದ್ದೇಶ ಏನಿತ್ತು? ಆತ ಮುಂದೆ ಏನು ಮಾಡೋದಕ್ಕೆ ಹೊರಟಿದ್ದ ಅನ್ನೋದು ಯಾರಿಗೂ ಕೂಡ ಗೊತ್ತಿಲ್ಲ. ಆದರೆ ಈ ದೃಶ್ಯ ಅಂತೂ ಪ್ರತಿಯೊಬ್ಬರನ್ನು ಕೂಡ ಬೆಚ್ಚಿ ಬೀಳಿಸುವ ರೀತಿಯಲ್ಲಿದೆ ದಯವಿಟ್ಟು ಕ್ಷಮಿಸಿ ಅದು ತೀರಾ ಆತಂಕಕಾರಿಯಾಗಿರುವಂತಹ ಕಾರಣಕ್ಕಾಗಿ ಅಥವಾ ನಮ್ಮನ್ನ ಶಾಕ್ ಗೆ ಒಳಗಾಗುವಂತೆ ಮಾಡುವ ರೀತಿಯಲ್ಲಿ ಇರುವಂತಹ ಕಾರಣಕ್ಕಾಗಿ ವಿಡಿಯೋ ನಾನು ಬ್ಲರ್ ಮಾಡಿ ನಿಮಗೆ ತೋರಿಸಬೇಕಾಗಿದೆ.
ಅನಿವಾರ್ಯವಾಗಿ ನಿಮಗೆ ಬೇರೆ ಬೇರೆ ಕಡೆಗಳಲ್ಲಿ ಈ ಸಿಸಿ ಟಿವಿ ದೃಶ್ಯ ಕಂಪ್ಲೀಟ್ ಆಗಿ ಸಿಗುತ್ತೆ. ಅದನ್ನ ಗಮನಿಸಿ ಈಗ ಘಟನೆ ಎಲ್ಲಿ ನಡೆದಿದ್ದು? ಏನು ಎತ್ತ ಅಂತ ಗಮನಿಸುತ್ತಾ ಹೋಗೋಣ.
ಬಂಧುಗಳೇ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಮಹಿಳೆಯರು ಬೆಳಿಗ್ಗೆ ಅಂದ್ರೆ ಐದು ಗಂಟೆ ಸುಮಾರಿಗೆ 6:00 ಗಂಟೆ ಸುಮಾರಿಗೆ ವಾಕಿಂಗ್ ಎಲ್ಲವನ್ನು ಕೂಡ ಆರಂಭಿಸುತ್ತಾರೆ. ಈತ ಅದನ್ನೇ ಗುರಿಯನ್ನಾಗಿ ಮಾಡಿಕೊಂಡಿದ್ದ ಅಂತ ಕಾಣಿಸುತ್ತೆ.
ಒಂದಷ್ಟು ದಿನಗಳಿಂದ ಆತ ಗಮನಿಸಿರಬಹುದು ಯಾವ ಸಮಯಕ್ಕೆ ವಾಕಿಂಗ್ ಹೋಗ್ತಾರೆ? ಯಾವ ಸಮಯದಲ್ಲಿ ಒಂಟಿಯಾಗಿರುತ್ತಾರೆ ಯಾವ ಸಮಯದಲ್ಲಿ ನಾನು ಅವರನ್ನ ಹಿಂಬಾಲಿಸಿಕೊಂಡು ಹೋಗಬಹುದು ಇದೆಲ್ಲವನ್ನು ಕೂಡ ಆತ ಗಮನಿಸಿದ್ದ ಅಂತ ಕಾಣುತ್ತೆ.
ಹೆಚ್ಚು ಕಡಿಮೆ ಮುಂಜಾನೆ ಐದು ಗಂಟೆಯ ಸುಮಾರಿಗೆ ಕೋಣನಕುಂಟೆ ಬೆಂಗಳೂರಿನ ಕೋಣನಕುಂಟೆಯ ಕೃಷ್ಣಾನಗರ ಇದೆ ನೋಡಿ. ಕೃಷ್ಣಾನಗರದಲ್ಲಿ ಆ ಮಹಿಳೆ ದೂರ ಎಲ್ಲೋ ಹೋಗಿಲ್ಲ ಅಂದ್ರೆ ಜನ ಇಲ್ಲದಂತಹ ಪ್ರದೇಶ ಅಥವಾ ಇನ್ಯಾವುದೋ ಖಾಲಿ ಇರುವಂತಹ ರಸ್ತೆ ಅಲ್ಲೆಲ್ಲಿಗೂ ಕೂಡ ಹೋಗಿಲ್ಲ.
ಮನೆ ಮುಂದಿರುವಂತಹ ರಸ್ತೆಯಲ್ಲೇ ವಾಕಿಂಗ್ ಮಾಡೋದಕ್ಕೆ ಅಂತ ಮನೆ ಮುಂದಿನ ಒಂದು ರಸ್ತೆಯ ಬದಿಯಲ್ಲಿ ಬಂದು ನಿಂತುಕೊಂಡಿದ್ದಾರೆ. ಎಲ್ಲರೂ ಸ್ನೇಹಿತರು ಒಟ್ಟಾಗಿ ವಾಕಿಂಗ್ ಹೋಗ್ತಾ ಇದ್ರಂತೆ ಈ ಮಹಿಳೆ ಉತ್ತರ ಭಾರತ ಮೂಲದವರು ಇದೀಗ ಕರ್ನಾಟಕದವರೇ ಆಗಿದ್ದಾರೆ ಅಥವಾ ಬೆಂಗಳೂರಿನವರೆ ಆಗ್ಬಿಟ್ಟಿದ್ದಾರೆ.
ಅವರ ಫ್ರೆಂಡ್ಸ್ ಗೋಸ್ಕರ ಕಾಯ್ತಾ ಇರ್ತಾರೆ ಕಾಯುತ್ತಿರುವಂತಹ ಸಂದರ್ಭದಲ್ಲೇ ಓರ್ವ ವ್ಯಕ್ತಿ ಅವರ ಹಿಂದುಗಡೆ ಬರ್ತಾನೆ. ಮಹಿಳೆ ಆರಂಭದಲ್ಲಿ ಆತಂಕಗೊಳ್ಳುವುದಿಲ್ಲ ಯಾಕಂದ್ರೆ ಬೆಳಗ್ಗೆ ಮುಂಚೆ ಐದು ಗಂಟೆ ಆಗಿದೆ ಈ ಸಂದರ್ಭದಲ್ಲಿ ಅಂತದ್ದು ಏನು ನಡೆಯುವುದಿಲ್ಲ ಎನ್ನುವ ಧೈರ್ಯದಲ್ಲಿ ಇರುತ್ತಾರೆ.
ಆದರೆ ಬರ್ತಾ ಬರ್ತಾ ಮಹಿಳೆಗೆ ಆತಂಕ ಗೊಳ್ಳುವ ರೀತಿಯಲ್ಲಿ ಆತ ಫಾಲೋ ಮಾಡೋದಕ್ಕೆ ಶುರು ಮಾಡಿಕೊಳ್ಳುತ್ತಾನೆ. ಆರಂಭದಲ್ಲಿ ಅವರನ್ನ ತಪ್ಪಿಕೊಳ್ಳೋಕೆ ಪ್ರಯತ್ನ ಪಟ್ಟಾಗ ಮಹಿಳೆ ತಪ್ಪಿಸಿಕೊಂಡು ಸ್ವಲ್ಪ ಜೋರ್ ಜೋರಾಗಿ ಮುಂದೆ ನಡ್ಕೊಂಡು ಬರ್ತಾರೆ.
ಅದಾದ ಬಳಿಕ ಓಡೋದಕ್ಕೆ ಶುರು ಮಾಡಿಕೊಳ್ಳುತ್ತಾರೆ ಆದರೆ ಆತ ಅವರನ್ನ ಸುಮ್ನೆ ಬಿಡೋದಿಲ್ಲ ಆತನು ಕೂಡ ಓಡಿ ಬರ್ತಾನೆ ಓಡಿ ಬಂದವನೇ ಆ ಮಹಿಳೆಯನ್ನ ಒತ್ತಾಯ ಪೂರ್ವಕವಾಗಿ ತಪ್ಪಿಕೊಳ್ಳುತ್ತಾನೆ ಅವರ ಬಾಯಿಯನ್ನು ಒತ್ತಿ ಹಿಡಿಯುವಂತಹ ಕೆಲಸವನ್ನ ಮಾಡ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.